ಭಾರತದಲ್ಲಿ ಕೃಷಿ ವಲಯದ ಉತ್ತೇಜನಕ್ಕಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಘೋಷಣೆ ಮಾಡಿದ್ದಾರೆ. ಈಚೆಗಷ್ಟೇ ಸರ್ಕಾರವು ಹೊಸ ಆಲೋಚನೆಯೊಂದನ್ನು ಮುಂದಿಟ್ಟಿದೆ. ಅದರ ಪ್ರಕಾರ, ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜತೆ ವಿಲೀನ ಮಾಡುವ ಆಲೋಚನೆ ಅದು.
ಯಾರೆಲ್ಲ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅನುಕೂಲವನ್ನು ಪಡೆಯುತ್ತಿದ್ದಾರೋ ಅವರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯವೂ ದೊರೆಯಲಿದೆ. ಅದರ ಜತೆಗೆ ಕೃಷಿ ಉದ್ದೇಶಕ್ಕೆ ಬ್ಯಾಂಕ್ ಗಳಿಂದ 4% ಬಡ್ಡಿ ದರದಲ್ಲಿ ಸಾಲ ಕೂಡ ದೊರೆಯಲಿದೆ. ಹೀಗೆ ಮಾಡುವ ಮೂಲಕ ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆಯಬೇಕಾದ ಅವಲಂಬನೆ ರೈತರಿಗೆ ಕೊನೆಯಾಗಲಿದೆ ಎಂಬ ಅಭಿಪ್ರಾಯ ಸರ್ಕಾರಿ ಅಧಿಕಾರಿಗಳದು.
ಸುಲಭವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿಗಳು 1.60 ಲಕ್ಷ ರುಪಾಯಿ ತನಕ ಸಾಲ ಪಡೆಯುವುದಕ್ಕೆ ಯಾವುದೇ ಖಾತ್ರಿ ನೀಡಬೇಕಾದ ಅಗತ್ಯ ಇಲ್ಲ. ಈ ಹಿಂದಿನ ಮಿತಿ 1 ಲಕ್ಷ ರುಪಾಯಿ ಇತ್ತು. ಕಿಸಾನ್ ಕ್ರೆಡಿಟ್ ಕಾರ್ಡ್ ಜತೆಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಜೋಡಣೆ ಮಾಡಲಾಗಿದೆ. ಆದ್ದರಿಂದ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಆಧಾರದ ಮೇಲೆ ಸುಲಭವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ದೊರೆಯಲಿದೆ.
ಎರಡನ್ನೂ ವಿಲೀನ ಮಾಡಲು ಕಾರಣ ಏನು?
ಬ್ಯಾಂಕ್ ಗಳು ಹಣವನ್ನು ಸಾಲದ ರೂಪದಲ್ಲಿ ನೀಡುವಂತಾಗಬಾರದು. ಹಾಗೆ ಸಾಲದ ರೂಪದಲ್ಲಿ ಹಣ ನೀಡುವುದಕ್ಕೆ ದೀರ್ಘವಾದ ಪ್ರಕ್ರಿಯೆ ಇದೆ. ಜತೆಗೆ ಬಹಳ ಸಮಯ ಹೋಗುತ್ತದೆ. ಸರ್ಕಾರ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಷ್ಟೆಲ್ಲ ಹೇಳಿದ ನಂತರವೂ ಬ್ಯಾಂಕ್ ಗಳು ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಲು ಹಳ್ಳಿಗಳಲ್ಲಿ ಕ್ಯಾಂಪ್ ಹಾಕಿಲ್ಲ. ಅಷ್ಟೇ ಅಲ್ಲ, ಬ್ಯಾಂಕ್ ಗೆ ಬರುವ ರೈತರ ಜತೆಗೆ ಸರಿಯಾಗಿ ನಡೆದುಕೊಳ್ಳಲ್ಲ ಎಂಬ ದೂರಿದೆ. ಭಾರತದಲ್ಲಿ ಒಟ್ಟು ರೈತರ ಸಂಖ್ಯೆ 11.87 ಕೋಟಿಯಷ್ಟಿದ್ದರೂ ಈವರೆಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರ ಪ್ರಮಾಣ ಆ ಸಂಖ್ಯೆಯ ಅರ್ಧದಷ್ಟು ಮಾತ್ರ.
ಭೂ ದಾಖಲೆ ಜತೆಗೆ ಆಧಾರ್
ಆರ್ಥಿಕ ತಜ್ಞರು ಹೇಳುವ ಪ್ರಕಾರ, ದೇಶದ 41ರಷ್ಟು ಅತಿ ಸಣ್ಣ ಮತ್ತು ಸಣ್ಣ ರೈತರಿಗೆ ಸರ್ಕಾರದಿಂದ ಸಾಲ ಪಡೆಯಲು ಆಗುತ್ತಿಲ್ಲ. ಅದರರ್ಥ ಸಾಲ ವ್ಯವಸ್ಥೆಯಿಂದಲೇ ಅವರು ಹೊರಗಿದ್ದಾರೆ. ಆದ್ದರಿಂದಲೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಫಲಾನುಭವಿಗಳಾಗಿ ಗುರುತಿಸಲಾದವರನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಜತೆಗೆ ಜೋಡಣೆ ಮಾಡಲಾಗಿದೆ. ಬಜೆಟ್ ನಲ್ಲಿ ನಿರ್ಧಾರ ಮಾಡಿದಂತೆ ಯಾವಾ ರೈತರು ತಮ್ಮ ಭೂ ದಾಖಲೆಯನ್ನು ನೀಡಿ, ಆಧಾರ್ ಸಂಖ್ಯೆಯ ಜತೆಗೆ ಖಾತ್ರಿ ಪಡಿಸುತ್ತಾರೋ ಅವರಿಗೆ ವರ್ಷದಲ್ಲಿ ನಾಲ್ಕು ತಿಂಗಳಿಗೆ ಒಮ್ಮೆ ಎರಡು ಸಾವಿರ ರುಪಾಯಿಯಂತೆ ಮೂರು ಬಾರಿಗೆ 6 ಸಾವಿರ ರುಪಾಯಿ ನೀಡಲಾಗುತ್ತಿದೆ. ಅಂಥ ಸನ್ನಿವೇಶದಲ್ಲಿ ಆ ದಾಖಲೆಗಳ ಆಧಾರದಲ್ಲಿಯೇ ಕ್ರೆಡಿಟ್ ಕಾರ್ಡ್ ಕೂಡ ನೀಡಲಾಗುತ್ತದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಆನ್ ಲೈನ್ ಅರ್ಜಿ ಸಲ್ಲಿಕೆ ಹಂತಗಳು
* ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
* ಲಭ್ಯ ಇರುವ ಕ್ರೆಡಿಟ್ ಕಾರ್ಡ್ ಗಳ ಪೈಕಿ 'ಕಿಸಾನ್ ಕ್ರೆಡಿಟ್ ಕಾರ್ಡ್' ಅನ್ನು ಆಯ್ಕೆ ಮಾಡಿಕೊಳ್ಳಿ.
* 'ಅಪ್ಲೈ' ಬಟನ್ ಮೇಲೆ ಕ್ಲಿಕ್ ಮಾಡಿ.
* ಆ ಮೂಲಕ ನೀವು ಆನ್ ಲೈನ್ ಅರ್ಜಿಯ ಪುಟವನ್ನು ತೆರೆಯಲು ಸಾಧ್ಯವಾಗುತ್ತದೆ.
* ನಿಖರ ಮಾಹಿತಿಯೊಂದಿಗೆ ಎಲ್ಲ ಅಗತ್ಯ ವಿವರಗಳನ್ನು ತುಂಬಿರಿ. ಆ ನಂತರ 'ಸಬ್ ಮಿಟ್' ಬಟನ್ ಮೇಲೆ ಕ್ಲಿಕ್ ಮಾಡಿ.
* ಒಂದು ಬಾರಿ ಅರ್ಜಿ ಸಲ್ಲಿಕೆಯಾದ ನಂತರ ಅರ್ಜಿಯ ರೆಫರೆನ್ಸ್ ಸಂಖ್ಯೆಯು ಜನರೇಟ್ ಆಗುತ್ತದೆ. ಆ ಸಂಖ್ಯೆಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ಆ ನಂತರದ ಎಲ್ಲ ವಿಚಾರಣೆಗೂ ಅದನ್ನು ಬಳಸಿ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications