Gold Investment: ಚಿನ್ನ ಖರೀದಿಸಬೇಕೇ?, ಈ ನಾಲ್ಕು ರೀತಿಯಲ್ಲಿ ಹಳದಿ ಲೋಹ ಉತ್ತಮ, ಯಾವುದು?

ಚಿನ್ನವು ಭಾರತದಲ್ಲಿ ಇಂದಿನವರೆಗೂ ಒಂದು ನಮ್ಮಲ್ಲಿರುವ ಸಂಪತ್ತಿನ ಸಂಕೇತವಾಗಿದೆ. ಚಿನ್ನ ಎಂದರೆ ಒಂದು ಪವಿತ್ರವಾದ ಭಾವನೆಯೂ ಕೂಡಾ ಭಾರತೀಯರಲ್ಲಿದೆ. ಚಿನ್ನದ ಮೇಲೆ ಆಭರಣ ಖರೀದಿ ಮೂಲಕ ಹೂಡಿಕೆ ಮಾಡುವುದು ಮಾತ್ರವಲ್ಲದೆ, ಬೇರೆ ಬೇರೆ ರೀತಿಯಲ್ಲಿಯೂ ಹೂಡಿಕೆ ಮಾಡಬಹುದಾಗಿದೆ.

ಚಿನ್ನದ ಮೋಹವು ಎಂದಿಗೂ ಕಡಿಮೆಯಾಗುವುದಲ್ಲ. ನಮ್ಮ ಆರ್ಥಿಕ ಸುರಕ್ಷತೆಗಾಗಿಯೂ ಚಿನ್ನದ ಮೇಲೆ ಹೂಡಿಕೆ ಮಾಡಲಾಗುತ್ತದೆ. ಚಿನ್ನವು ಎಂದಿಗೂ ತನ್ನ ಮೌಲ್ಯವನ್ನು ಉಳಿಸಿಕೊಂಡಿದೆ, ಯಾವ ಸಂದರ್ಭದಲ್ಲಿ ಚಿನ್ನವು ಸುರಕ್ಷಿತ ಎಂದು ತಜ್ಞರು ಹೇಳುತ್ತಾರೆ. ಅಲಂಕಾರಕ್ಕಾಗಿ ಮತ್ತು ಹೂಡಿಕೆಯಾಗಿ ಚಿನ್ನವನ್ನು ಖರೀದಿಸಲು ಹಲವು ಮಾರ್ಗಗಳಿವೆ. ಚಿನ್ನದ ಹೂಡಿಕೆಯ ಹಲವು ಮಾರ್ಗಗಳ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 ಚಿನ್ನ ಖರೀದಿಸಬೇಕೇ?, ಈ ನಾಲ್ಕು ರೀತಿಯಲ್ಲಿ ಹಳದಿ ಲೋಹ ಉತ್ತಮ

1. ಚಿನ್ನದ ನಾಣ್ಯಗಳನ್ನು ಖರೀದಿಸಿ

ಚಲಾವಣೆಯಾಗದ ಚಿನ್ನದ ನಾಣ್ಯಗಳನ್ನು ಪ್ರಸ್ತುತ ಹಲವಾರು ದೇಶಗಳಲ್ಲಿ ಮುದ್ರಿಸಲಾಗುತ್ತದೆ. ಅವೆಲ್ಲವೂ ಕಾನೂನುಬದ್ಧವಾಗಿದ್ದು, ಭಾರತದಲ್ಲಿಯೂ ಹೀಗೆ ನಾಣ್ಯ ರೂಪದಲ್ಲಿ ಚಿನ್ನ ಮಾರಾಟ ಮಾಡಲಾಗುತ್ತದೆ. ನಾಣ್ಯಗಳು ಇನ್ನೂ ಹೆಚ್ಚಿನ ಮಾರುಕಟ್ಟೆ ಮೌಲ್ಯಗಳನ್ನು ಹೊಂದಿವೆ. ಹೊಸದಾಗಿ ಮುದ್ರಿಸಲಾದ ನಾಣ್ಯಗಳನ್ನು ಖರೀದಿಸುವುದು ಸುಲಭವಾಗಿದೆ.

ಚಿನ್ನದ ನಾಣ್ಯಗಳು ಸಾಮಾನ್ಯವಾಗಿಯೇ ಚಿನ್ನದ ಅತೀ ಶುದ್ಧ ರೂಪವಾಗಿದೆ. ಅಮೇರಿಕನ್ ಈಗಲ್, ಕೆನಡಿಯನ್ ಮ್ಯಾಪಲ್ ಲೀಫ್, ಸೌತ್ ಆಫ್ರಿಕನ್ ಕ್ರುಗೆರಾಂಡ್, ವಿಯೆನ್ನಾ ಫಿಲ್ಹಾರ್ಮೋನಿಕ್, ಮೆಕ್ಸಿಕನ್ ಗೋಲ್ಡ್ 50 ಪೆಸೊಸ್, ಬ್ರಿಟಿಷ್ ಸವರನ್, ಆಸ್ಟ್ರೇಲಿಯನ್ ಕಾಂಗರೂ ಮತ್ತು ಯುಎಸ್ ಮಿಂಟ್ 24K ಗೋಲ್ಡ್ ಬಫಲೋ ನಾಣ್ಯ ಖರೀದಿಗೆ ಉತ್ತಮ ಆಯ್ಕೆಗಳಾಗಿದೆ.

2. ಚಿನ್ನದ ಬಾರ್‌ಗಳಲ್ಲಿ ಹೂಡಿಕೆ ಮಾಡಿ

ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸಿದರೆ ಚಿನ್ನದ ಬಾರ್‌ಗಳನ್ನು ಕೂಡಾ ಖರೀದಿ ಮಾಡಬಹುದಾಗಿದೆ. ಈ ಚಿನ್ನದ ಬಾರ್‌ಗಳು ಬೇರೆ ಬೇರೆ ತೂಕದಲ್ಲಿರುತ್ತದೆ. ಒಂದು ಗ್ರಾಂನ ಬಾರ್ ಕೂಡಾ ಲಭ್ಯವಾಗುತ್ತದೆ. ನೀವು ಬಾರ್‌ಗಳನ್ನು ಖರೀದಿ ಮಾಡಿದಾಗ ಮೇಕಿಂಗ್ ವೆಚ್ಚ ಮೊದಲಾದವುಗಳನ್ನು ಕಡಿಮೆ ಮಾಡಿಕೊಳ್ಳಬಹುದು.

3. ಗೋಲ್ಡ್ ಸ್ಟಾಕ್, ಇಟಿಎಫ್‌, ಬಾಂಡ್‌ಗಳು

ಗೋಲ್ಡ್ ಸ್ಟಾಕ್‌ಗಳು, ಸವರನ್ ಗೋಲ್ಡ್ ಬಾಂಡ್‌ಗಳು ಮತ್ತು ಇಟಿಎಫ್‌ಗಳು ಇತರೆ ಚಿನ್ನದ ರೂಪಗಳಿಗಿಂತ ಭಿನ್ನವಾದುದ್ದು. ಇಲ್ಲಿ ನೀವು ಚಿನ್ನವನ್ನು ಸುರಕ್ಷಿತವಾಗಿ ಸಂಗ್ರಹ ಮಾಡುವ ಹೊರೆಯಿಲ್ಲ. ಉತ್ತಮ ಲಾಭವನ್ನು ಕೂಡಾ ಇದರಲ್ಲಿ ಪಡೆಯಬಹುದು. ಚಿನ್ನದ ಸ್ಟಾಕ್‌ಗಳ ಪ್ರತ್ಯೇಕವಾಗಿ ಹೂಡಿಕೆ ಮಾಡುವ ಮ್ಯೂಚುಯಲ್ ಫಂಡ್‌ಗಳು ಲಭ್ಯವಿದೆ.

ಇಟಿಎಫ್‌ ಚಿನ್ನದ ಡಿಜಿಟಲ್ ರೂಪವಾಗಿದೆ. ಆದರೆ ನಮಗೆ ಗೋಲ್ಡ್ ಸ್ಟಾಕ್‌ಗಳು, ಸವರನ್ ಗೋಲ್ಡ್ ಬಾಂಡ್‌ಗಳು ಮತ್ತು ಇಟಿಎಫ್‌ಗಳ ಪೈಕಿ ಉತ್ತಮ ಆಯ್ಕೆ ಸವರನ್ ಗೋಲ್ಡ್ ಬಾಂಡ್‌ಗಳು ಆಗಿದೆ. ಈ ಬಾಂಡ್‌ಗಳು ಸರ್ಕಾರದ ಯೋಜನೆಯಾಗಿರುವ ಕಾರಣ, ಇದರಲ್ಲಿ ಮಾಡಿದ ಹೂಡಿಕೆ ಸುರಕ್ಷಿತವಾಗಿರುತ್ತದೆ, ಹಾಗೆಯೇ ಉತ್ತಮ ರಿಟರ್ನ್ ಕೂಡಾ ಪಡೆಯಬಹುದಾಗಿದೆ.

4. ಚಿನ್ನದ ಜ್ಯುವೆಲ್ಲರಿಗಳು

ಚಿನ್ನದ ಇತರೆ ಮೂಲಗಳು ಬರೀ ಹೂಡಿಕೆಯ ಸಾಧನವಾದರೆ, ಚಿನ್ನದ ಜ್ಯುವೆಲ್ಲರಿಗಳು ಹೂಡಿಕೆ ಜೊತೆಗೆ ನಮಗೆ ಧರಿಸಲು ಲಭ್ಯವಾಗುವ ಚಿನ್ನದ ರೀತಿಯಾಗಿದೆ. ಚಿನ್ನದ ಮೌಲ್ಯ ಹೆಚ್ಚಿಸಲು ಮತ್ತು ಸುಂದರವಾಗಿಸಲು ಚಿನ್ನದೊಂದಿಗೆ ಇತರೆ ಅಮೂಲ್ಯ ರತ್ನಗಳು ಮತ್ತು ಲೋಹಗಳನ್ನು ಸೇರಿಸಲಾಗುತ್ತದೆ. ಚಿನ್ನದ ಆಭರಣಗಳನ್ನು ಹಬ್ಬ ಹರಿದಿನ ಬಂದರೆ ಸಾಮಾನ್ಯವಾಗಿಯೇ ಭಾರತದಲ್ಲಿ ಖರೀದಿ ಮಾಡಲಾಗುತ್ತದೆ. ಆದರೆ ಹೂಡಿಕೆಯೇ ನಮ್ಮ ಆಲೋಚನೆಯಾಗಿದ್ದರೆ, ಆಭರಣ ಅಥವಾ ಜ್ಯುವೆಲ್ಲರಿ ಉತ್ತಮ ಆಯ್ಕೆಯಲ್ಲ.

ಎಲ್ಲಿ ನಾಲ್ಕು ರೀತಿಯ ಚಿನ್ನ ಖರೀದಿಸುವುದು?

ನೀವು ಖಾಸಗಿ ಚಿನ್ನದ ಡೀಲರ್‌ಗಳು, ಜ್ಯುವೆಲ್ಲರಿ ಸ್ಟೋರ್‌ಗಳು, ಕಾಯಿನ್ ಶಾಪ್ಸ್‌ಗಳು, ಸರ್ಕಾರಿ ಮೂಲಗಳಿಂದ ಈ ಮೇಲೆ ತಿಳಿಸಲಾದ ಚಿನ್ನದ ಮೂಲಗಳನ್ನು ಖರೀದಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+