ಭಾರತದಲ್ಲಿ ಅತೀ ಮುಖ್ಯವಾದ ದಾಖಲೆಗಳಲ್ಲಿ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಆಗಿದೆ. ಯಾವುದೇ ಕಾರ್ಯವನ್ನು ನಾವು ಮಾಡಬೇಕಾದರೂ ಈ ಎರಡು ದಾಖಲೆಗಳು ನಮ್ಮ ಬಳಿ ಇರುವುದು ಮುಖ್ಯವಾಗುತ್ತದೆ. ಡಿಜಿಟಲೈಸೇಷನ್‌ಗೆ ನಾವು ಹೆಚ್ಚಿನ ಒತ್ತನ್ನು ನೀಡುತ್ತಾ ಬರುತ್ತಿದ್ದೇವೆ. ಪ್ರಮುಖವಾಗಿ ಸರ್ಕಾರವೇ ಡಿಜಿಟಲ್ ಭಾರತ ಅಡಿಯಲ್ಲಿ ದೇಶದಲ್ಲಿ ಡಿಜಿಟಲ್ ಪ್ಲಾಟ್‌ಫಾರ್ಮ್ ಬಳಕೆಗೆ ಒತ್ತು ನೀಡುತ್ತಿದೆ. ಆದರೆ ಈ ನಡುವೆ ವಂಚನೆಯು ಹೆಚ್ಚಾಗುತ್ತಿದೆ.
ಹೌದು, ಡಿಜಿಟಲ್ ವ್ಯವಸ್ಥೆಯ ಉಪಯೋಗ ಹೆಚ್ಚಾಗುತ್ತಿದ್ದಂತೆ ಆನ್‌ಲೈನ್ ವಂಚನೆಗಳು ಕೂಡಾ ಹೆಚ್ಚಾಗುತ್ತಾ ಹೋಗುತ್ತಿದೆ. ಅತೀ ಹೆಚ್ಚು ವಿದ್ಯಾಭ್ಯಾಸ ಹೊಂದಿರುವವರು ಕೂಡಾ ಈ ವಂಚನೆಗೆ ಒಳಗಾಗುತ್ತಿರುವ ಹಲವಾರು ಪ್ರಕರಣಗಳು ನಮ್ಮ ಕಣ್ಣ ಮುಂದಿದೆ. ಇತ್ತೀಚೆಗೆ ಸೈಬರ್ ಕ್ರಿಮಿನಲ್‌ಗಳು ಸೆಲೆಬ್ರೆಟಿಗಳ ಪ್ಯಾನ್ ಅನ್ನು ದುರುಪಯೋಗ ಮಾಡಿಕೊಂಡು ಕ್ರೆಡಿಟ್ ಕಾರ್ಡ್ ಅನ್ನು ಪಡೆದುಕೊಂಡಿದ್ದಾರೆ.

ಈ ವಂಚನೆಗೆ ಒಳಗಾದವರ ಪಟ್ಟಿಯಲ್ಲಿ ಎಂ ಎಸ್ ಧೋನಿ, ಶಿಲ್ಪಾ ಶೆಟ್ಟಿ, ಮಾಧುರಿ ದೀಕ್ಷಿತ್ ಸೇರಿದಂತೆ ಹಲವಾರು ಸೆಲೆಬ್ರೆಟಿಗಳ ಹೆಸರು ಕೂಡಾ ಇದೆ. ಹಾಗಾದರೆ ನಿಮ್ಮ ಪ್ಯಾನ್ ಖಾರ್ಡ್ ಆಧಾರ್ ಕಾರ್ಡ್ ಅನ್ನು ಸುರಕ್ಷಿತವಾಗಿರಿಸುವುದು ಹೇಗೆ ತಿಳಿಯಿರಿ.
ಪ್ಯಾನ್- ಆಧಾರ್ ದುರ್ಬಳಕೆ ತಡೆಯುವುದು ಹೇಗೆ?
1. ನೀವು ಎಲ್ಲ ಸೈಟ್‌ಗಳಲ್ಲಿ ಅಥವಾ ಫಾರ್ಮ್‌ಗಳಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸದಿರಿ. ಎಲ್ಲಿ ನಿಮ್ಮ ಗುರುತಿನ ಪುರಾವೆ ಮುಖ್ಯವಾಗಿರುತ್ತದೆಯೋ ಅಲ್ಲಿ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಬದಲಾಗಿ ಬೇರೆ ಕಾರ್ಡ್‌ಗಳನ್ನು ಬಳಕೆ ಮಾಡಿ. ಅಂದರೆ ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಮೊದಲಾದವುಗಳನ್ನು ನಿಮ್ಮ ಗುರುತಿನ ಪುರಾವೆಯಾಗಿ ಬಳಕೆ ಮಾಡಿಕೊಳ್ಳಿ.
2. ಅಧಿಕೃತವಾದ ಅಧಿಕಾರಿಗಳಿಗೆ ಅಥವಾ ಅಧಿಕೃತವಾದ ಸಂಸ್ಥೆಗಳಿಗೆ ಮಾತ್ರ ನೀವು ನಿಮ್ಮ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್‌ನ ಮಾಹಿತಿಯನ್ನು ನೀಡಿ. ಹಾಗೆಯೇ ನೀವು ಈ ದಾಖಲೆಗಳನ್ನು ನೀಡುವ ಸಂದರ್ಭದಲ್ಲಿ ದಾಖಲೆ ನೀಡಿದ ದಿನಾಂಕವನ್ನು ಉಲ್ಲೇಖಿಸಿ ಸಹಿ ಮಾಡಿ .
3. ಸಾಮಾಜಿಕ ಜಾಲತಾಣದಲ್ಲಿ, ಆನ್‌ಲೈನ್ ಪೋರ್ಟಲ್‌ಗಳಲ್ಲಿ ನಿಮ್ಮ ಪೂರ್ಣ ಹೆಸರನ್ನು ಹಾಕುವುದನ್ನು ತಪ್ಪಿಸಿ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್‌ನಲ್ಲಿರುವ ಹೆಸರನ್ನು ಹಾಕದಿರುವುದು ಉತ್ತಮ. ನಿಮ್ಮ ಪ್ಯಾನ್ ಕಾರ್ಡ್ ಅನ್ನು ಟ್ರ್ಯಾಕ್ ಮಾಡಲು ಈ ಹೆಸರನ್ನು ಉಪಯೋಗ ಮಾಡುವ ಸಾಧ್ಯತೆಯಿದೆ.
4. ಸರ್ಕಾರವು ಯಾವುದೇ ಒಂದು ದಾಖಲೆಗೆ ಅಥವಾ ಪೋರ್ಟಲ್‌ಗೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯಗೊಳಿಸಿಲ್ಲವಾದ್ದಲ್ಲಿ, ನೀವಾಗಿಯೇ ಎಲ್ಲಿಯೂ ಲಿಂಕ್ ಮಾಡಿಕೊಳ್ಳಬೇಡಿ ಯಾವುದೇ ಪೋರ್ಟಲ್‌ನಲ್ಲಿ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಲಿಂಕ್ ಆಗಿದ್ದರೆ, ಕೂಡಲೇ ಡಿ-ಲಿಂಕ್ ಮಾಡಿಕೊಳ್ಳಿ.
5. ನಿಮ್ಮ ಹೆಸರಲ್ಲಿ ಯಾವುದೇ ಕ್ರೆಡಿಟ್ ಕಾರ್ಡ್ ಅನ್ನು ನೀಡಲಾಗಿದೆಯೇ ಅಥವಾ ನಿಮ್ಮ ಹೆಸರಲ್ಲಿ ಯಾರಾದರೂ ಸಾಲವನ್ನು ಪಡೆದಿದ್ದಾರೆಯೇ ಎಂದು ತಿಳಿಯಲು ಕ್ರೆಡಿಟ್ ರಿಪೋರ್ಟ್ ಅನ್ನು ಆಗಾಗೆ ಪರಿಶೀಲನೆ ಮಾಡುವುದು ಮುಖ್ಯವಾಗುತ್ತದೆ.
6. ನಿಮ್ಮ ಮೊಬೈಲ್‌ನಲ್ಲಿ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್‌ನ ಫೋಟೋವನ್ನು ಇಟ್ಟುಕೊಳ್ಳುವುದು ಸುರಕ್ಷಿತವಲ್ಲ. ನಿಮ್ಮ ಫೋನ್ ಕಳೆದುಹೋದಲ್ಲಿ ನಿಮ್ಮ ಫೋನ್‌ನಲ್ಲಿರುವ ನಿಮ್ಮ ಪ್ರಮುಖ ದಾಖಲೆಗಳನ್ನು ಸುಲಭವಾಗಿ ದುರ್ಬಳಕೆ ಮಾಡಲು ಸಾಧ್ಯವಾಗಲಿದೆ.
ಪ್ಯಾನ್ ದುರ್ಬಳಕೆಯಾಗಿದೆಯೇ?, ತಿಳಿಯುವುದು ಹೇಗೆ?
ನಿಮ್ಮ ಸಿಬಿಲ್ ಸ್ಕೋರ್ ಅನ್ನು ಚೆಕ್ ಮಾಡುವ ಮೂಲಕ ನಿಮ್ಮ ಪ್ಯಾನ್ ಕಾರ್ಡ್ ದುರ್ಬಳಕೆ ಮಾಡಲಾಗಿದೆಯೇ ಎಂದು ತಿಳಿಯಬಹುದು. ನೀವು ಸಿಬಿಲ್ ರಿಪೋರ್ಟ್ ಚೆಕ್ ಮಾಡುವಾಗ ನಿಮ್ಮ ಹೆಸರಲ್ಲಿ ಯಾವುದೇ ಸಾಲವಿದ್ದರೆ ಅಥವಾ ಕ್ರೆಡಿಟ್ ಕಾರ್ಡ್ ಇದ್ದರೆ, ಅದನ್ನು ನೀವು ಪಡೆದಿಲ್ಲದಿದ್ದರೆ, ತಕ್ಷಣವೇ ಸಂಬಂಧಪಟ್ಟ ಬ್ಯಾಂಕ್‌ಗೆ ಮಾಹಿತಿ ನೀಡಿ. ಇನ್ನು ಪ್ಯಾನ್, ಆಧಾರ್ ದುರ್ಬಳಕೆಯಾಗಿದೆಯೇ ಎಂಬ ಮಾಹಿತಿಯನ್ನು ಕ್ರೆಡಿಟ್ ಇನ್ಫಾರ್ಮೇಷನ್ ಬ್ಯೂರೋ ಮಾತ್ರವಲ್ಲ, ಈಕ್ವಿಫಾಕ್ಸ್, ಎಕ್ಸ್‌ಪೇರಿಯನ್, ಪೇಟಿಎಂ, ಬ್ಯಾಂಕ್ ಬಜಾರ್, ಸಿಆರ್‌ಐಎಫ್ ಹೈ ಮಾರ್ಕ್ ಮೂಲಕವೂ ತಿಳಿದುಕೊಳ್ಳಬಹುದು.
ಪ್ಯಾನ್ ದುರ್ಬಳಕೆಯಾಗಿದ್ದರೆ, ವರದಿ ಮಾಡುವುದು ಹೇಗೆ?
ಹಂತ 1: ಟಿಐಎನ್ ಎನ್‌ಎಸ್‌ಡಿಎಲ್ (TIN NSDL) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2: ಕಸ್ಟಮರ್ ಕೇರ್ ವಿಭಾಗವನ್ನು ಹುಡುಕಿ ಅಲ್ಲಿ ಡ್ರಾಪ್ ಡೌನ್ ಇರಲಿದೆ
ಹಂತ 3: Complaints/ Queries ಅನ್ನು ತೆರೆಯಿರಿ, ಅದಾದ ಬಳಿಕ ದೂರು ಸಲ್ಲಿಕೆಯ ಫಾರ್ಮ್ ತೆರೆಯಲಿದೆ.
ಹಂತ 4: ಫಾರ್ಮ್‌ನಲ್ಲಿ ಮಾಹಿತಿ ಭರ್ತಿ ಮಾಡಿ, ಕ್ಯಾಪ್ಚಾ ಕೋಡ್ ನಮೂದಿಸಿ Submit ಕ್ಲಿಕ್ ಮಾಡಿ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಚಿನ್ನದ ಬೆಲೆ ಇಂದು ಏರಿಕೆ? ಖರೀದಿಸುವ ಮುನ್ನ ಇದನ್ನು ನೋಡಿ



Click it and Unblock the Notifications