ವಿಶ್ವದ ಬಹು ನಿರೀಕ್ಷಿತ ಕ್ರೀಡಾಕೂಟಗಳಲ್ಲಿ ಒಂದಾದ ಐಸಿಸಿ ಒಡಿಐ ವಿಶ್ವಕಪ್ 2023 ಪ್ರಾರಂಭವಾಗಿದೆ. ಅಭಿಮಾನಿಗಳು ತಮ್ಮ ತಮ್ಮ ದೇಶಗಳಿಗೆ ಹುರಿದುಂಬಿಸಲು ಸಿದ್ಧರಾಗಿದ್ದಾರೆ. ಐಸಿಸಿ ವಿಶ್ವ ಕಪ್ 2023 ಅನ್ನು ಈ ವರ್ಷ ಭಾರತ ಆಯೋಜಿಸುತ್ತಿದೆ. ಈ ಮ್ಯಾಚ್ ಅನ್ನು ನೀವು ಮನೆಯಲ್ಲಿ ಕುಳಿತು ನೋಡುವ ಅವಕಾಶವಿದೆ.
ಪಂದ್ಯಗಳನ್ನು ಜನಪ್ರಿಯ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಮಾಡಲಾಗುತ್ತಿದೆ. ಪಂದ್ಯಗಳನ್ನು ವೀಕ್ಷಿಸಲು ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಅಗತ್ಯವಿದೆ. ಅದಕ್ಕಾಗಿ ನೀವು ಈ ಪ್ಲ್ಯಾನ್ ಅನ್ನು ಖರೀದಿಸಬೇಕಾಗುತ್ತದೆ. ನೀವು ಈ ಮ್ಯಾಚ್ ಅನ್ನು ಡಿಸ್ನಿ+ ಹಾಟ್‌ಸ್ಟಾರ್ ಉಚಿತ ಚಂದಾದಾರಿಕೆ ಮೂಲಕ ನೋಡಲು ಬಯಸಿದರೆ, ನಿಮಗಿಲ್ಲಿ ಅವಕಾಶವಿದೆ.

ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಡಿಸ್ನಿ+ಹಾಟ್‌ಸ್ಟಾರ್ ಅನ್ನು ಉಚಿತವಾಗಿ ನೋಡಲು ಅವಕಾಶವನ್ನು ನೀಡುವ ಕೆಲವು ಪ್ಲ್ಯಾನ್‌ಗಳನ್ನು ಆರಂಭ ಮಾಡಿದೆ. ಉಚಿತ ಡಿಸ್ನಿ+ಹಾಟ್‌ಸ್ಟಾರ್ ಚಂದಾದಾರಿಕೆ ನೀಡುವ ಅತ್ಯುತ್ತಮ ಜಿಯೋ ಪ್ರಿಪೇಯ್ಡ್ ಯೋಜನೆಗಳ ವಿವರವನ್ನು ನಾವಿಲ್ಲಿ ನೀಡಿದ್ದೇವೆ, ಮುಂದೆ ಓದಿ...
ಉಚಿತ ಡಿಸ್ನಿ+ಹಾಟ್‌ಸ್ಟಾರ್ ಚಂದಾದಾರಿಕೆ
ಜಿಯೋ 328 ರೂಪಾಯಿ ಪ್ಲ್ಯಾನ್: ಇದು ರಿಲಯನ್ಸ್ ಜಿಯೊದ ಬೇಸಿಕ್ ಪ್ಲ್ಯಾನ್ ಆಗಿದೆ. ಇದು ಮೂರು ತಿಂಗಳವರೆಗೆ ಡಿಸ್ನಿ+ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡುತ್ತದೆ. ಪ್ರತಿ ದಿನಕ್ಕೆ 1.5 ಜಿಬಿ ಹೈ-ಸ್ಪೀಡ್ ಇಂಟರ್ನೆಟ್ ಅನ್ನು ನೀಡುತ್ತದೆ. ಈ ಪ್ಲ್ಯಾನ್ ಒಟ್ಟು 28 ದಿನಗಳ ಕಾಲ ಮಾನ್ಯವಾಗಿರುತ್ತದೆ. ಒಟಿಟಿ ಚಂದಾದಾರಿಕೆಯನ್ನು ಹೊಂದಿರುವ ಜಿಯೋದ ಅತೀ ಅಗ್ಗದ ಯೋಜನೆ ಇದಾಗಿದೆ. ಈ ಪ್ಲ್ಯಾನ್ ಮೂಲಕ ನೀವು ಐಸಿಸಿ ವಿಶ್ವಕಪ್ ಪಂದ್ಯಗಳನ್ನು ಉಚಿತವಾಗಿ ನೋಡಬಹುದು.
ಜಿಯೋ 388 ರೂಪಾಯಿ ಪ್ಲ್ಯಾನ್: ಮೂರು ತಿಂಗಳ ಡಿಸ್ನಿ+ಹಾಟ್‌ಸ್ಟಾರ್ ಚಂದಾದಾರಿಕೆ ಹೊಂದಿರುವ ಈ ಜಿಯೋ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ದಿನಕ್ಕೆ 2 ಜಿಬಿ ಡೇಟಾವನ್ನು ನೀಡುತ್ತದೆ. 400 ರೂಪಾಯಿಗಿಂತ ಕಡಿಮೆ ಮೊತ್ತದ ಒಟಿಟಿ ಚಂದಾದಾರಿಕೆ ಯೋಜನೆ ಇದಾಗಿದೆ.
ಜಿಯೋ 598 ರೂಪಾಯಿ ಪ್ಲ್ಯಾನ್: ರಿಲಯನ್ಸ್ ಜಿಯೋ ಇತ್ತೀಚೆಗೆ ಪರಿಚಯಿಸಿದ ಮತ್ತೊಂದು ಹೊಸ ಪ್ಲ್ಯಾನ್ ಪ್ರಿಪೇಯ್ಡ್ ಆಗಿದ್ದು, ಇದು ಪ್ರತಿದಿನ 2 ಜಿಬಿ ಹೈ-ಸ್ಪೀಡ್ ಡೇಟಾ, 12 ತಿಂಗಳವರೆಗೆ ಅಂದರೆ ಒಂದು ವರ್ಷದ ಡಿಸ್ನಿ+ಹಾಟ್‌ಸ್ಟಾರ್‌ನ ಚಂದಾದಾರಿಕೆ ನೀಡುತ್ತದೆ. ಒಂದು ತಿಂಗಳ ವ್ಯಾಲಿಡಿಟಿ ಈ ಪ್ಯಾಕೇಜ್‌ಗೆ ಇದೆ.
ಜಿಯೋ 758 ರೂಪಾಯಿ ಪ್ಲ್ಯಾನ್: ಈ ಯೋಜನೆಯು 28 ದಿನಗಳ ಬದಲಿಗೆ 84 ದಿನಗಳ ವ್ಯಾಲಿಡಿಟಿಯನ್ನು ಹೊಮದಿದೆ. ಇದರಲ್ಲಿ 1.5 ಜಿಬಿ ಡೈಲಿ ಡೇಟಾ ಲಭ್ಯವಿದೆ. ಮೂರು ತಿಂಗಳವರೆಗೆ ಉಚಿತ ಡಿಸ್ನಿ+ಹಾಟ್‌ಸ್ಟಾರ್ ಚಂದಾದಾರಿಕೆ ಲಭ್ಯವಿದೆ.
ಜಿಯೋ 808 ರೂಪಾಯಿ ಪ್ಲ್ಯಾನ್: 800 ರೂಪಾಯಿಗಿಂತ ಕೊಂಚ ಹೆಚ್ಚು ಬೆಲೆಯ ಈ ಜಿಯೋ ಪ್ರಿಪೇಯ್ಡ್ ಯೋಜನೆಯು ದಿನಕ್ಕೆ 2 ಜಿಬಿ ಡೇಟಾವನ್ನು ನೀಡುತ್ತದೆ. 84 ದಿನಗಳ ವ್ಯಾಲಿಡಿಟಿಯನ್ನು ಇದು ಹೊಂದಿದೆ. ಮೂರು ತಿಂಗಳವರೆಗೆ ಡಿಸ್ನಿ+ಹಾಟ್‌ಸ್ಟಾರ್‌ನ ಚಂದಾದಾರಿಕೆ ಇದೆ.
ಜಿಯೋ 3,178 ರೂಪಾಯಿ ಪ್ಲ್ಯಾನ್: ಜಿಯೋದಲ್ಲಿ ಅತೀ ದುಬಾರಿ ಪ್ಲ್ಯಾನ್ ಇದಾಗಿದೆ. ಇದು ಡಿಸ್ನಿ+ಹಾಟ್‌ಸ್ಟಾರ್‌ನ ವರ್ಷಪೂರ್ತಿಯ ಉಚಿತ ಚಂದಾದಾರಿಕೆಯಾಗಿದೆ. 2 ಜಿಬಿ ಡೈಲಿ ಡೇಟಾ ಕೂಡಾ ಈ ಪ್ಲ್ಯಾನ್‌ನಲ್ಲಿದೆ. ಇದು ಒಂದು ವರ್ಷ ಅವಧಿಯ ಪ್ಲ್ಯಾನ್ ಆಗಿದೆ. ಅದಕ್ಕಾಗಿಯೇ ಈ ಪ್ಲ್ಯಾನ್ ದುಬಾರಿಯಾಗಿದೆ.
ಮೇಲೆ ತಿಳಿಸಿದ ಪ್ಲ್ಯಾನ್‌ಗಳ ಪೈಕಿ ಜಿಯೋ ಬಳಕೆದಾರರು ಮೂರು ತಿಂಗಳ ಡಿಸ್ನಿ+ಹಾಟ್‌ಸ್ಟಾರ್ ಚಂದಾದಾರಿಕೆ ಪಡೆಯುವಾಗ ಹೆಚ್ಚುವರಿ ಡೇಟಾ ಆಡ್-ಆನ್‌ಗಳನ್ನು ಪಡೆಯಬಹುದು. ಈ ಆಡ್-ಆನ್ ಯೋಜನೆಯು 331 ರೂಪಾಯಿಯದ್ದಾಗಿದೆ. ಇದರಲ್ಲಿ 40 ಜಿಬಿ ಡೇಟಾ ಲಭ್ಯವಿದೆ. 30 ದಿನಗಳ ವ್ಯಾಲಿಡಿಟಿ ಇದಕ್ಕೆ ಲಭ್ಯವಿದೆ.


Click it and Unblock the Notifications