ಖಾಸಗಿ ವಲಯದ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾವು ನವೆಂಬರ್ 1, 2023 ರಿಂದ ಜಾರಿಗೆ ಬರುವಂತೆ ವಿವಿಧ ಅವಧಿಗಳ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಅನ್ನು ಹೆಚ್ಚಳ ಮಾಡುವ ನಿರ್ಧಾರವನ್ನು ಘೋಷಿಸಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ಕಳೆದ ತಿಂಗಳು ಪ್ರಸಕ್ತ ಹಣಕಾಸು ನೀತಿ ವರದಿಯಲ್ಲಿ ರೆಪೋ ದರವನ್ನು ಸ್ಥಿರವಾಗಿರಿಸಿರುವ ಘೋಷಣೆ ಮಾಡಿದ್ದಾರೆ. ಆದರೆ ದರ ಏರಿಕೆ ಮಾಡಲು ಇನ್ನಷ್ಟು ಅವಕಾಶವಿದೆ ಎಂದು ಹೇಳಿದರೆ, ಅದಾದ ಬಳಿಕ ಬ್ಯಾಂಕ್‌ಗಳು ಈ ಕ್ರಮವನ್ನು ಕೈಗೊಂಡಿದೆ.

ಐಸಿಐಸಿಐ ಬ್ಯಾಂಕ್ ಬಡ್ಡಿದರ
ಇತ್ತೀಚೆಗೆ ಎಂಸಿಎಲ್‌ಆರ್ ಹೆಚ್ಚಳದ ನಂತರ, ಐಸಿಐಸಿಐ ಬ್ಯಾಂಕ್‌ನ ಓವರ್‌ನೈಟ್, ಒಂದು ತಿಂಗಳ ಎಂಸಿಎಲ್‌ಆರ್ ಈಗ ಶೇಕಡ 8.50 ರಷ್ಟಿದೆ. ಮೂರು ತಿಂಗಳ ಎಂಸಿಎಲ್‌ಆರ್ ಪ್ರಸ್ತುತ ಶೇಕಡ 8.55 ಮತ್ತು 6 ತಿಂಗಳ ಎಂಸಿಎಲ್‌ಆರ್ ಶೇಕಡ 8.90 ಆಗಿದೆ. ಒಂದು ವರ್ಷದ ಎಂಸಿಎಲ್‌ಆರ್ ಶೇಕಡ 9 ಆಗಿದೆ.
ಬ್ಯಾಂಕ್ ಆಫ್ ಬರೋಡಾ ಬಡ್ಡಿದರ
ಇತ್ತೀಚಿನ ಎಂಸಿಎಲ್‌ಆರ್ ಹೆಚ್ಚಳದ ನಂತರ, ಬ್ಯಾಂಕ್ ಆಫ್ ಇಂಡಿಯಾದ ಓವರ್‌ನೈಟ್ ಮತ್ತು ಒಂದು ತಿಂಗಳ ಎಂಸಿಎಲ್‌ಆರ್ ಕ್ರಮವಾಗಿ ಶೇಕಡ 7.95 ಮತ್ತು ಶೇಕಡ 8.20 ಆಗಿದೆ. ಮೂರು ತಿಂಗಳ ಎಂಸಿಎಲ್‌ಆರ್ ಈಗ ಶೇಕಡ 8.35 ಆಗಿದೆ.
ಆರು ತಿಂಗಳ ಎಂಸಿಎಲ್‌ಆರ್ ಶೇಕಡ 8.55 ರಷ್ಟಿದೆ. ಒಂದು ವರ್ಷದ ಎಂಸಿಎಲ್‌ಆರ್ ಪ್ರಸ್ತುತ ಶೇಕಡ 8.75 ರಷ್ಟಿದ್ದರೆ, ಮೂರು ವರ್ಷಗಳ ಎಂಸಿಎಲ್‌ಆರ್ ಶೇಕಡ 8.95 ರಷ್ಟಿದೆ. ಏಪ್ರಿಲ್ 1, 2016 ರಂದು ಆರ್‌ಬಿಐ ಜಾರಿಗೊಳಿಸಿದ ಎಂಸಿಎಲ್‌ಆರ್ ಕನಿಷ್ಠ ಸಾಲದ ದರವಾಗಿದ್ದು, ಬ್ಯಾಂಕ್‌ಗೆ ಸಾಲ ನೀಡಲು ಅನುಮತಿಸಲಾಗುವುದಿಲ್ಲ.
ಮೇ 2022 ರಿಂದ ಆರ್‌ಬಿಐ ನಿರಂತರವಾಗಿ ರೆಪೋ ದರ ಹೆಚ್ಚಳ ಮಾಡುತ್ತಾ ಬಂದಿದೆ. ಆದಾದ ಬಳಿಕ ಬ್ಯಾಂಕ್‌ಗಳು ಕಳೆದ ವರ್ಷದಿಂದ ಸಾಲ ಮತ್ತು ಡೆಪಾಸಿಟ್‌ಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸುತ್ತಿವೆ. ಕಳೆದ ತಿಂಗಳ ಆರಂಭದಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ರೆಪೋ ದರ ಮತ್ತಷ್ಟು ಹೆಚ್ಚಿಸಲು ಅವಕಾಶವಿದೆ ಎಂದು ಹೇಳಿದರು.


Click it and Unblock the Notifications