ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಆನ್‌ಲೈನ್ ಗೇಮಿಂಗ್ ವಲಯವು ಭಾರೀ ಪ್ರಮಾಣದಲ್ಲಿ ಬೆಳವಣಿಗೆಯನ್ನು ಕಂಡಿದೆ. ಆನ್‌ಲೈನ್ ಗೇಮಿಂಗ್ ಭಾರತದಲ್ಲಿ 2025 ರ ವೇಳೆಗೆ 5 ಬಿಲಿಯನ್ ಡಾಲರ್ ಉದ್ಯಮವಾಗುವ ನಿರೀಕ್ಷೆಯಿದೆ. ಕಾರ್ಡ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು, ಬ್ಯಾಟಲ್ ಗ್ರೌಂಡ್, ಸ್ಪೋರ್ಟಿಂಗ್ ಗೇಮ್ಸ್, ಕ್ವಿಜ್ (ರಸಪ್ರಶ್ನೆ) ಸೇರಿದಂತೆ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ಆಟಗಾರರು ಹಣವನ್ನು ಗಳಿಸುತ್ತಿದ್ದಾರೆ.
ಭಾರತದಲ್ಲಿ ಆನ್‌ಲೈನ್ ಗೇಮಿಂಗ್ ಉದ್ಯಮದ ಮೂರು ಸಂಸ್ಥೆಗಳು ಇದೆ. ಇ- ಗೇಮಿಂಗ್ ಫೆಡರೇಷನ್ (ಇಜಿಎಫ್), ಫೆಡರೇಷನ್ ಆಫ್ ಇಂಡಿಯನ್ ಫ್ಯಾಂಟಸಿ ಸ್ಪೋರ್ಟ್ಸ್ (ಎಫ್‌ಐಎಫ್‌ಎಸ್) ಮತ್ತು ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ (ಎಐಜಿಎಫ್) ಇತ್ತೀಚೆಗೆ ಸಿಬಿಡಿಟಿಯನ್ನು ಸಂಪರ್ಕಿಸಿದೆ.

ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ (ಸಿಬಿಡಿಟಿ) ಏಪ್ರಿಲ್ 1, 2023ರಿಂದ ಜಾರಿಗೆ ಬರುವಂತೆ ಆನ್‌ಲೈನ್ ಗೇಮಿಂಗ್ ಮೇಲೆ ಟಿಡಿಎಸ್ ಅನ್ನು ವಿಧಿಸುತ್ತಿದೆ. ಈ ನಿರ್ಧಾರವನ್ನು ಮರು ಪರಿಗಣನೆ ಮಾಡುವಂತೆ ಇಜಿಎಫ್, ಎಫ್‌ಐಎಫ್‌ಎಸ್, ಎಐಜಿಎಫ್ ಸಿಬಿಡಿಟಿಗೆ ಒತ್ತಾಯವನ್ನು ಮಾಡಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....
ಆನ್‌ಲೈನ್ ಗೇಮ್ ಗೆಲುವಿನ ಮೇಲೆ ತೆರಿಗೆ
ಆನ್‌ಲೈನ್ ಗೇಮಿಂಗ್ ಸಂಸ್ಥೆಗಳು ಪ್ರತಿ ವಹಿವಾಟಿಗೆ 10 ಸಾವಿರ ರೂಪಾಯಿಗಿಂತ ಹೆಚ್ಚಿನ ಗೇಮಿಂಗ್ ಗೆಲುವಿನ ಮೊತ್ತದ ಮೇಲೆ ಶೇಕಡ 30ರಷ್ಟು ಟಿಡಿಎಸ್ ಅನ್ನು ಕಡಿತಗೊಳಿಸುತ್ತದೆ. ಹತ್ತು ಸಾವಿರ ರೂಪಾಯಿಗಳ ಗೆಲುವಿನ ಮೊತ್ತದ ಮಿತಿಯು 1 ಏಪ್ರಿಲ್ 2023 ರಿಂದ ಜಾರಿಗೆ ಬರಲಿದೆ. ಆನ್‌ಲೈನ್ ಗೇಮಿಂಗ್‌ನ ವಾರ್ಷಿಕ ಆದಾಯದ ಮೇಲೆ ಟಿಡಿಎಸ್ ಅನ್ನು ವಿಧಿಸಲಾಗುತ್ತದೆ.
ವಿವಿಧ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಕೆದಾರರ ಗೆಲುವಿನ ಮೊತ್ತದ ಮೇಲೆ ತೆರಿಗೆ ವಿಧಿಸಲು ಸೆಕ್ಷನ್ 115BBJ ಮತ್ತು 194BA ಅನ್ನು ಹಣಕಾಸು ಮಸೂದೆ 2023 ಮೂಲಕ ಪರಿಚಯಿಸಲಾಗಿದೆ. ಸೆಕ್ಷನ್ 115BBJ ಅಡಿಯಲ್ಲಿ, ಹಿಂದಿನ ಹಣಕಾಸು ವರ್ಷದಲ್ಲಿ ಆನ್‌ಲೈನ್ ಗೇಮಿಂಗ್‌ನಿಂದ ಗಳಿಸಿದ ಆದಾಯದ ಮೇಲೆ ಶೇಕಡ 30ರಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ.
ಸೆಕ್ಷನ್ 194BA ಮುಖ್ಯವಾಗಿ ಹಣಕಾಸಿನ ವರ್ಷದ ಕೊನೆಯಲ್ಲಿ ಆನ್‌ಲೈನ್ ಗೇಮಿಂಗ್ ಆಪ್ ಬಳಕೆದಾರರ ಗೇಮಿಂಗ್ ಖಾತೆಯಲ್ಲಿ ನಿವ್ವಳ ಗೆಲುವಿನ ಮೊತ್ತದ ಮೇಲೆ ಅನ್ವಯವಾಗುವ ಟಿಡಿಎಸ್ ಆಗಿದೆ. ಆದ್ದರಿಂದ ಒಂದು ಹಣಕಾಸು ವರ್ಷದ ಅಂತ್ಯದಲ್ಲಿ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ನೀವು ಗಳಿಸುವ ನಿವ್ವಳ ಆದಾಯದ ಮೇಲೆ ಶೇಕಡ 30ರಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ.
ಆನ್‌ಲೈನ್ ಗೇಮಿಂಗ್ ತೆರಿಗೆ - ಉದಾಹರಣೆಯೊಂದಿಗೆ ವಿವರಣೆ
ನೀವು ಆನ್‌ಲೈನ್ ಗೇಮ್‌ನಲ್ಲಿ ನೀವು 1000 ರೂಪಾಯಿಯನ್ನು ಪಾವತಿ ಮಾಡಿದ್ದೀರಿ ಬಳಿಕ ಸುಮಾರು 40 ಸಾವಿರ ರೂಪಾಯಿ ಗೆದ್ದಿದ್ದೀರಿ ಎಂದುಕೊಳ್ಳಿ. ಈ ಗಳಿಕೆಯ ಮೊತ್ತದಿಂದ ಗೇಮಿಂಗ್ ಕಂಪನಿಯು ಸುಮಾರು ಶೇಕಡ 30ರಷ್ಟು ಟಿಡಿಎಸ್ ಅನ್ನು ಕಡಿತಗೊಳಿಸುತ್ತದೆ. ಅಂದರೆ ಒಂದು ಸಾವಿರ ರೂಪಾಯಿ ಕಡಿತಗೊಳಿಸಿ ನಿಮಗೆ 39 ಸಾವಿರ ರೂಪಾಯಿ ನಿಮಗೆ ನೀಡಬೇಕಾಗುತ್ತದೆ.
ಈಗ ನೀವು ಗಳಿಸಿದ 39 ಸಾವಿರ ರೂಪಾಯಿಯು ನಿಮ್ಮ ಆನ್‌ಲೈನ್ ಗೇಮಿಂಗ್ ಆಪ್ ಮೂಲಕ ಪಡೆದ ಆದಾಯವಾಗಿರುತ್ತದೆ. ಈ ಪೈಕಿ ನೀವು 11,700 ರೂಪಾಯಿ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿ ಮಾಡಬೇಕಾಗುತ್ತದೆ, ಅದು ಕಡಿತಗೊಳುತ್ತದೆ. ಉಳಿದ ಮೊತ್ತ 27,300 ರೂಪಾಯಿಯು ನಿಮ್ಮ ಖಾತೆಗೆ ಕ್ರೆಡಿಟ್ ಆಗಲಿದೆ.
ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮಟ್‌ಗಳಲ್ಲಿ ಗೇಮರ್‌ಗಳು 100 ರೂಪಾಯಿಗಿಂತ ಅಧಿಕ ಮೊತ್ತವನ್ನು ಗಳಿಸಿಲ್ಲದಿದ್ದರೆ, ಅದಕ್ಕೆ ಯಾವುದೇ ಟಿಡಿಎಸ್ ಅನ್ವಯ ಮಾಡಲಾಗುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆಯು ಇತ್ತೀಚೆಗೆ ತಿಳಿಸಿದೆ. ಅಂದರೆ ನೀವು 100 ರೂಪಾಯಿಗಿಂತ ಕಡಿಮೆ ಮೊತ್ತವನ್ನು ಆನ್‌ಲೈನ್ ಗೇಮಿಂಗ್‌ನಲ್ಲಿ ಗಳಿಸಿದ್ದರೆ ಯಾವುದೇ ಟಿಡಿಎಸ್ ಅನ್ವಯವಾಗುವುದಿಲ್ಲ.
ಹಣಕಾಸು ಕಾಯಿದೆ 2023 ಆದಾಯ ತೆರಿಗೆ ಕಾಯಿದೆ, 1961 ರಲ್ಲಿ ಹೊಸ ವಿಭಾಗ 194BA ಅನ್ನು ಸೇರಿಸಿದೆ. ಈ ಕಾಯ್ದೆಯ ಪ್ರಕಾರ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಕೆದಾರರ ಖಾತೆಯಲ್ಲಿನ ನಿವ್ವಳ ಗೆಲುವಿನ ಮೇಲೆ ಆದಾಯ ತೆರಿಗೆಯನ್ನು ಕಡಿತಗೊಳಿಸುವುದನ್ನು ಕಡ್ಡಾಯವಾಗಿದೆ. ಇದು ಏಪ್ರಿಲ್ 1, 2023 ರಿಂದ ಜಾರಿಗೆ ಬರುತ್ತದೆ.
ವಿತ್‌ಡ್ರಾ ಮಾಡುವ ಸಮಯದಲ್ಲಿ ಮತ್ತು ಆರ್ಥಿಕ ವರ್ಷದ ಕೊನೆಯಲ್ಲಿ ತೆರಿಗೆಯನ್ನು ಕಡಿತಗೊಳಿಸಬೇಕಾಗುತ್ತದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಟಿಡಿಎಸ್ ಅನ್ನು ಕಡಿತಗೊಳಿಸುವ ವಿಧಾನ ಮತ್ತು ಕಾರ್ಯವಿಧಾನವನ್ನು ವ್ಯಾಖ್ಯಾನಿಸುವ ಐಟಿ ನಿಯಮ 133 ಅನ್ನು ಸೂಚಿಸಿದೆ.


Click it and Unblock the Notifications