For Quick Alerts
ALLOW NOTIFICATIONS  
For Daily Alerts

ಆದಾಯ ತೆರಿಗೆ ಇಲಾಖೆಯ 'Jhatpat Processing' ಬಗ್ಗೆ ನಿಮಗೆಷ್ಟು ಗೊತ್ತು?

By ಅನಿಲ್ ಆಚಾರ್
|

ಅಸೆಸ್ ಮೆಂಟ್ ವರ್ಷ 2019- 20 ಹಾಗೂ ಹಣಕಾಸು ವರ್ಷ 2020- 21ಕ್ಕೆ ಐಟಿಆರ್ ಫೈಲ್ ಮಾಡುವುದಕ್ಕೆ ಗಡುವು ಹತ್ತಿರ ಬರುತ್ತಿದ್ದಂತೆ ಆದಾಯ ತೆರಿಗೆ ಇಲಾಖೆಯು "ಝಟ್ ಪಟ್ ಪ್ರಕ್ರಿಯೆ" ಫೀಚರ್ ನೊಂದಿಗೆ ಮುಂದೆ ಬಂದಿದೆ. ತನ್ನ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಈ ಬಗ್ಗೆ ತಿಳಿಸಲಾಗಿದೆ. ಝಟ್ ಪಟ್ ಪ್ರಕ್ರಿಯೆ ITR- 1 ಹಾಗೂ ITR- 4 ಆರಂಭವಾಗಿದೆ.

 

ಸರ್ಕಾರದ ಇ- ಫೈಲಿಂಗ್ ಪೋರ್ಟಲ್ incometaxindiaefiling.gov.in ಭೇಟಿ ನೀಡಿ, ಹಣಕಾಸು ವರ್ಷ 2020- 21ಕ್ಕೆ ತೆರಿಗೆದಾರರು ಐಟಿ ರಿಟರ್ನ್ ಫೈಲ್ ಮಾಡಬಹುದು. ಐಟಿಆರ್ ಪರಿಶೀಲನೆ ಈಗಾಗಲೇ ಆಗಿದ್ದಲ್ಲಿ, ಬ್ಯಾಂಕ್ ಖಾತೆ ಸರಿ ಹೋಗುತ್ತಿದ್ದಲ್ಲಿ ಮತ್ತು ಆದಾಯದಲ್ಲಿ ಯಾವುದೇ ವ್ಯತ್ಯಯಗಳು ಇಲ್ಲದಿದ್ದಲ್ಲಿ, ಬಾಕಿ ಅಥವಾ ಟಿಡಿಎಸ್ ಅಥವಾ ಚಲನ್ ವ್ಯತ್ಯಾಸ ಇಲ್ಲದಿದ್ದಲ್ಲಿ "ಝಟ್ ಪಟ್ ಪ್ರಕ್ರಿಯೆ" ಆಗುತ್ತದೆ.

 

CIBIL Rank ಪರೀಕ್ಷಿಸಿಕೊಳ್ಳಿ; ಬಿಜಿನೆಸ್ ಸಾಲ ಸಲೀಸು ಮಾಡಿಕೊಳ್ಳಿCIBIL Rank ಪರೀಕ್ಷಿಸಿಕೊಳ್ಳಿ; ಬಿಜಿನೆಸ್ ಸಾಲ ಸಲೀಸು ಮಾಡಿಕೊಳ್ಳಿ

ರಿಟರ್ನ್ಸ್ ನ ಇ ವೆರಿಫಿಕೇಷನ್ ಗೆ ನೋಂದಾಯಿತ ಮೊಬೈಲ್ ಸಂಖ್ಯೆ, ನೆಟ್ ಬ್ಯಾಂಕಿಂಗ್, ಡಿಮ್ಯಾಟ್ ಖಾತೆ ಸಂಖ್ಯೆ, ಬ್ಯಾಂಕ್ ಎಟಿಎಂ, ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಒಟಿಪಿ ಅಥವಾ ಇ- ಮೇಲ್ ಐ.ಡಿ. ಈ ಪೈಕಿ ಒಂದನ್ನು ಬಳಸಿಕೊಳ್ಳಬಹುದು.

ಆದಾಯ ತೆರಿಗೆ ಇಲಾಖೆಯ 'Jhatpat Processing' ಬಗ್ಗೆ ಎಷ್ಟು ಗೊತ್ತು?

ಸಾಮಾನ್ಯವಾಗಿ ಐಟಿಆರ್ ಫೈಲಿಂಗ್ ಗೆ ಜುಲೈ 31 ಗಡುವಾಗಿರುತ್ತದೆ. ಸರ್ಕಾರ ಅವಧಿ ವಿಸ್ತರಣೆ ಆಗದಿದ್ದಲ್ಲಿ ಇದೇ ಇರುತ್ತದೆ. ಆದರೆ ಈ ವರ್ಷ ಕೊರೊನಾದ ಕಾರಣಕ್ಕೆ ಸರ್ಕಾರವು 2019- 20ನೇ ಸಾಲಿಗೆ ಐಟಿಆರ್ ಫೈಲ್ ಮಾಡುವುದಕ್ಕೆ ಸರ್ಕಾರವು ಅವಧಿಯನ್ನು ಡಿಸೆಂಬರ್ 31, 2020ಕ್ಕೆ ವಿಸ್ತರಿಸಲಾಗಿದೆ.

ITR 1, ITR 2, ITR 3, ITR 4, ITR 5, ITR 6 ಮತ್ತು ITR 7 ಅನ್ನು ವಿವಿಧ ತೆರಿಗೆದಾರರು ಫೈಲಿಂಗ್ ಮಾಡಬೇಕು. ವೈಯಕ್ತಿಕ ತೆರಿಗೆದಾರರು ಯಾರ ಆದಾಯ ಐವತ್ತು ಲಕ್ಷದೊಳಗೆ ಇರುತ್ತದೋ ಅಂಥವರು ಹಾಗೂ ವೇತನ, ಮನೆ ಬಾಡಿಗೆ, ಇತರ ಮೂಲ, ಬಡ್ಡಿ ಆದಾಯ ಹಾಗೂ ಕೃಷಿ ಆದಾಯ 5,000 ರುಪಾಯಿ ತನಕ ಇದ್ದಲ್ಲಿ ಅಂಥವರು ITR 1 ಅಥವಾ ಸಹಜ್ ಫೈಲ್ ಮಾಡುತ್ತಾರೆ.

ITR 4 ಅಥವಾ ಸುಗಮ್ ಅನ್ನು ವೈಯಕ್ತಿಕ, ಹಿಂದೂ ಅವಿಭಕ್ತ ಕುಟುಂಬ ಮತ್ತು ಎಲ್ ಎಲ್ ಪಿ ಹೊರತುಪಡಿಸಿದಂತೆ ಇತರ ಸಂಸ್ಥೆಗಳು 50 ಲಕ್ಷ ರುಪಾಯಿಯೊಳಗೆ ಹಾಗೂ ಬಿಜಿನೆಸ್ ಮತ್ತು ಪ್ರೊಫೆಷನ್ ಆದಾಯವನ್ನು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ ಗಳಾದ 44AD, 44ADA ಅಥವಾ 44ADE ಲೆಕ್ಕ ಹಾಕುತ್ತಿದ್ದಲ್ಲಿ ಅವುಗಳಿಗೆ ಮೀಸಲಿಡಲಾಗಿದೆ.

English summary

Income Tax Department Unveils 'Jhatpat Processing'; All You Need To Know

Income tax department unveils 'Jhatapat Processing' for assessment year 2020- 21 and FY 2019-20. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X