ಆದಾಯ ತೆರಿಗೆ ಪಾವತಿ ಎನ್ನುವುದು ನಮ್ಮ ಪ್ರಮುಖ ಜವಾಬ್ದಾರಿಗಳಲ್ಲಿ ಒಂದು. ಪ್ರತಿ ಹಣಕಾಸು ವರ್ಷದಲ್ಲಿ ಈ ಬಗ್ಗೆ ಆದಾಯ ತೆರಿಗೆ ಮತ್ತು ಹಣಕಾಸು ಸಚಿವಾಲಯ ಸೂಚನೆ ನೀಡುತ್ತಲೇ ಇರುತ್ತದೆ. ಜತೆಗೆ ಆದಾಯ ತೆರಿಗೆ ಪಾವತಿ ದಿನಾಂಕ ವಿಸ್ತರಣೆ ಕುರಿತು ಕೂಡ ಮಾಹಿತಿ ನೀಡುತ್ತದೆ. ಆದರೆ, ಆನ್‌ಲೈನ್‌ನಲ್ಲಿ ತೆರಿಗೆ ಪಾವತಿಯಾದ ನಂತರವೂ ಕೆಲವೊಂದು ಗೊಂದಲಗಳು ಉಂಟಾಗುತ್ತವೆ. ಆದ್ದರಿಂದ ನಿಮ್ಮ ತೆರಿಗೆ ಪಾವತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ ಎಂಬ ವಿಧಾನಗಳನ್ನು ಇಲ್ಲಿ ಪರಿಶೀಲಿಸಲಾಗಿದೆ.
ಹೌದು.. ಇನ್ನು ಮುಂದೆ ನಿಮ್ಮ ಆದಾಯ ತೆರಿಗೆ (ಇನ್‌ಕಮ್ ಟ್ಯಾಕ್ಸ್) ಯನ್ನು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಪರಿಶೀಲಿಸಬಹುದಾಗಿದೆ. ಆದಾಯ ತೆರಿಗೆ ಪಾವತಿಸಿದ ನಂತರ ಆದಾಯ ತೆರಿಗೆ ಇ-ಫೈಲಿಂಗ್ ಪ್ರಕ್ರಿಯೆಯು ಮೌಲ್ಯಮಾಪಕರ ಪರಿಶೀಲನೆಯ ನಂತರ ಮಾತ್ರ ಪೂರ್ಣಗೊಳ್ಳುತ್ತದೆ. ಈ ಪರಿಶೀಲನೆಯನ್ನು ಪೋಸ್ಟ್ ಮೂಲಕ (ಅಂಚೆ ದಾಖಲಾತಿಗಳ ಮೂಲಕ) ಅಥವಾ ಇ-ಫೈಲಿಂಗ್ ಪೋರ್ಟಲ್ ಮೂಲಕ ಪರಿಶೀಲಿಸಿಕೊಳ್ಳಬಹುದು... ಅದೇನೆಂಬುದನ್ನು ಇಲ್ಲಿ ಕಾಣಬಹುದು.
1. ಭೌತಿಕ ಪರಿಶೀಲನೆ ಹೇಗೆ?
ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ ತೆರಿಗೆಯನ್ನು ಪಾವತಿಸಿದ ನಂತರ ಐಟಿಆರ್-ವಿ ಅಂದರೆ ಆದಾಯ ತೆರಿಗೆ ಪರಿಶೀಲನೆ(verification) ಅರ್ಜಿಯ ಪ್ರತಿಯನ್ನು ತೆಗೆದುಕೊಳ್ಳಬೇಕು. ದಾಖಲೆಗೆ ಸಹಿ ಮಾಡಿದ ನಂತರ ಅರ್ಜಿಯನ್ನು ಆದಾಯ ತೆರಿಗೆ ಕೇಂದ್ರೀಕೃತ ಪ್ರಕ್ರಿಯೆ ಕೇಂದ್ರಕ್ಕೆ (ಸಿಪಿಸಿ) ಅಂಚೆ ಮೂಲಕ ( ವಿಳಾಸ-: ಸಿಪಿಸಿ, ಪೋಸ್ಟ್ ಬಾಕ್ಸ್ ಸಂಖ್ಯೆ-1, ಎಲೆಕ್ಟ್ರಾನಿಕ್ ಸಿಟಿ ಪೋಸ್ಟ್ ಆಫೀಸ್, ಬೆಂಗಳೂರು - 560100, ಕರ್ನಾಟಕ, ಭಾರತ) ಪೋಸ್ಟ್ (ಅಂಚೆ) ಮೂಲಕ ಕಳುಹಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಿದ 120 ದಿನಗಳ ಒಳಗೆ ಆ ಸಹಿ ಮಾಡಿದ ತೆರಿಗೆ ಪರಿಶೀಲನೆ ಅರ್ಜಿಯನ್ನು ಸಿಪಿಸಿಗೆ ಕಳುಹಿಸಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದ ಸಹಾಯಕ ದಾಖಲೆಗಳ ಅಗತ್ಯ ಇರುವುದಿಲ್ಲ. ಒಂದು ವೇಳೆ ಅರ್ಜಿ ಸಲ್ಲಿಕೆ ವಿಳಂಬವಾದರೆ ಅಂತಹ ಅರ್ಜಿಗಳನ್ನು ಅಮಾನ್ಯಗೊಳಿಸಲಾಗುತ್ತದೆ.
2. ನೆಟ್-ಬ್ಯಾಂಕಿಂಗ್ ಪರಿಶೀಲನೆ
ನೆಟ್ ಬ್ಯಾಂಕಿಂಗ್ ಮೂಲಕ ಆದಾಯ ತೆರಿಗೆ ಪರಿಶೀಲನೆ ಮಾಡುವುದು ಮತ್ತೊಂದು ಆಯ್ಕೆಯಾಗಿದೆ. ಆದಾಯ ತೆರಿಗೆ ಪಾವತಿಸಿದ ನಂತರ ಮೌಲ್ಯಮಾಪನ ಮಾಡುವವರಿಗೆ ಇ-ಫೈಲಿಂಗ್ ಪೋರ್ಟಲ್ ಮೂಲಕ ಪರಿಶೀಲಿಸುವ ಆಯ್ಕೆಯನ್ನೂ ಕಲ್ಪಿಸಿಕೊಡಲಾಗುತ್ತದೆ. ಅದರ ಹಂತಗಳನ್ನು ಇಲ್ಲಿ ಗಮನಿಸಬಹುದು...
1. ಆನ್‌ಲೈನ್ ಬ್ಯಾಂಕಿಂಗ್ ಮೂಲಕ ಇ-ಫೈಲಿಂಗ್ ಪೋರ್ಟಲ್ ಅನ್ನು ನಿಮ್ಮ ಗುರುತಿನ ಸಂಖ್ಯೆಯಿಂದ ತೆರೆಯಬೇಕು.
2. ನಿಮ್ಮ ಖಾತೆ ಮೆನುವಿನಲ್ಲಿ ಎಲೆಕ್ಟ್ರಾನಿಕ್ (ತಾಂತ್ರಿಕ) ಪರಿಶೀಲನಾ ಕೋಡ್ ಸಂಖ್ಯೆಯನ್ನು (ಇವಿಸಿ) ರಚಿಸಿ ಆಯ್ಕೆ ಮಾಡಬೇಕು
3. ರಚಿಸಿದ ಇವಿಸಿ ಸಂಖ್ಯೆಯನ್ನು ನೋಂದಾಯಿತ ಇಮೇಲ್ ಖಾತೆ ಮತ್ತು ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.
4. ಇವಿಸಿ ಬಳಸಿಕೊಂಡು ಆದಾಯ ತೆರಿಗೆ ಪಾವತಿಯನ್ನು ಪರಿಶೀಲಿಸಬಹುದು.
ಅಥವಾ
ವೆಬ್‌ತಾಣಕ್ಕೆ ಭೇಟಿ ನೀಡಿ ಪರಿಶೀಲನೆ
1.https://www.incometaxindiaefiling.gov.in/home ವೆಬ್‌ತಾಣಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಬಹುದು.
2. ಜಾಲತಾಣ ತೆರೆಯುತ್ತಿದ್ದಂತೆ ಎಡಭಾಗದಲ್ಲಿ ಇರುವ ಲಿಂಕ್‌ಗಳಲ್ಲಿ ಇ-ವೆರಿಫೈ ರಿಟರ್ನ್ ಮೇಲೆ ಕ್ಲಿಕ್ ಮಾಡಬೇಕು.
3. ಮುಂದಿನ ಪುಟದಲ್ಲಿ ನೆಟ್ ಬ್ಯಾಂಕಿಂಗ್ ಮೂಲಕ ಇ-ಫೈಲಿಂಗ್ ತೆರೆಯಬೇಕು. ಇದು ಬ್ಯಾಂಕ್‌ಗಳ ಪಟ್ಟಿಯನ್ನು ನೀಡುತ್ತದೆ. ನಂತರ ನಿಮ್ಮ ಬ್ಯಾಂಕ್ ಆಯ್ಕೆಮಾಡಬೇಕು.
4. ನಿಮ್ಮ ಬ್ಯಾಂಕ್‌ನ ವೆಬ್‌ಸೈಟ್ ಖಾತೆಗೆ ಲಾಗಿನ್ ಮಾಡಿದ ನಂತರ ಆದಾಯ ತೆರಿಗೆ ಇ-ಫೈಲಿಂಗ್ ಟ್ಯಾಬ್ ಅನ್ನು ಕ್ಲಿಕ್ ಮಾಡಿ ಪರಿಶೀಲಿಸಬೇಕು.
5. ನಂತರ ತೆರಿಗೆ ಪಾವತಿಯನ್ನು ವೀಕ್ಷಿಸಲು ಅರ್ಜಿಯನ್ನು ಪರಿಶೀಲಿಸಬೇಕು.
6. ಇ-ಪರಿಶೀಲನೆಗಾಗಿ ಬಾಕಿ ಇರುವ ನಿಮ್ಮ ಆದಾಯ ತೆರಿಗೆ ಪಾವತಿಯನ್ನು ವೀಕ್ಷಿಸಲು ಕ್ಲಿಕ್ ಮಾಡಬೇಕು.
7. ಇ-ಪರಿಶೀಲನೆ ಆಯ್ಕೆ ಕಾಣುತ್ತದೆ.
8. ಇಲ್ಲಿ ನೀವು ನೆಟ್-ಬ್ಯಾಂಕಿಂಗ್ ಮೂಲಕ ಒಂದು ಬಾರಿಯ ಪಾಸ್ ವರ್ಡ್ (ಒಟಿಪಿ) ಅಥವಾ ಇವಿಸಿ ಅನ್ನು ರಚಿಸಬೇಕಾಗುತ್ತದೆ.
9. ಒಟಿಪಿ ಅಥವಾ ಇವಿಸಿ ಯನ್ನು ನಮೂದಿಸಿ. ಒಮ್ಮೆ ಯಶಸ್ವಿಯಾದರೆ, ನೀವು ದೃಢೀಕರಣ ಸಂದೇಶವನ್ನು ಪಡೆಯುತ್ತೀರಿ. ನಂತರ ನಿಮ್ಮ ತೆರಿಗೆ ಪಾವತಿ ಬಗ್ಗೆ ಮಾಹಿತಿ ಸಿಗುತ್ತದೆ.
3. ಎಟಿಎಂ ಇ-ಪರಿಶೀಲನೆ
ಆದಾಯ ತೆರಿಗೆ ಇಲಾಖೆಯು ಸಂಬಂಧಪಟ್ಟ ಬ್ಯಾಂಕ್ ಎಟಿಎಂ ಮೂಲಕವೂ ಆದಾಯ ತೆರಿಗೆ ಪಾವತಿಯನ್ನು ಪರಿಶೀಲಿಸಲು ಅವಕಾಶ ನೀಡುತ್ತದೆ. ಇದು ಅತ್ಯಂತ ಸರಳ ಆಯ್ಕೆಯೂ ಆಗಿರುತ್ತದೆ.
ಹಂತಗಳು:- ಎಟಿಎಂ ಯಂತ್ರದಲ್ಲಿ ಡೆಬಿಟ್ ಕಾರ್ಡ್ ಅನ್ನು ಸ್ವೈಪ್ ಮಾಡಿದ ನಂತರ ಇ- ಫೈಲಿಂಗ್‌ಗಾಗಿ ಪಿನ್ ಸಂಖ್ಯೆಯನ್ನು ರಚಿಸುವ ಆಯ್ಕೆ ಲಭ್ಯವಿದೆ. ಆಯ್ಕೆ ನಂತರ ಇವಿಸಿ ರಚಿಸಿ ಬಳಿಕ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಬೇಕು. ಒಬ್ಬರು ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ಗೆ ಲಾಗ್‌ಇನ್ ಮಾಡಬೇಕು ಜೊತೆಗೆ ಇ-ಪರಿಶೀಲನೆ ಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇ-ಪರಿಶೀಲನೆ ಪೂರ್ಣಗೊಳಿಸಲು ಮತ್ತೊಬ್ಬರು ಇವಿಸಿ ನಮೂದಿಸಿ ಪರಿಶೀಲಿಸಬೇಕು.
4. ಬ್ಯಾಂಕ್ ಖಾತೆ ಸಂಖ್ಯೆ ಬಳಸಿ ಪರಿಶೀಲನೆ
ಈ ಆಯ್ಕೆಯ ವಿಧಾನ ಪಡೆಯಬೇಕಾದರೆ, ಆದಾಯ ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿನ ಪ್ರೊಫೈಲ್ ವಿಭಾಗದಲ್ಲಿ ಒಬ್ಬರ ಬ್ಯಾಂಕ್ ಖಾತೆಯನ್ನು ಮೌಲೀಕರಿಸುವ ಅಗತ್ಯವಿದೆ. ನಂತರ ಬ್ಯಾಂಕ್ ಖಾತೆ ಮೂಲಕ ಪರಿಸೀಲಿಸುವ ಆಯ್ಕೆ ಲಭಿಸುತ್ತದೆ. ಬಳಿಕ ಒಬ್ಬರ ಬ್ಯಾಂಕ್ ಖಾತೆಗೆ ನೋಂದಾಯಿಸಿದ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಈ ಒಟಿಪಿ ಅನ್ನು ಈ ಫೈಲಿಂಗ್ ಪೋರ್ಟಲ್‌ನಲ್ಲಿ ಪರಿಶೀಲಿಸಿದ ನಂತರ ಇ- ಪರಿಶೀಲನೆ ಪೂರ್ಣಗೊಳ್ಳುತ್ತದೆ. ಅನಂತರ ಒಬ್ಬರು ಅದೇ ಪೂರ್ವ ಮೌಲ್ಯೀಕರಿಸಿದ ಬ್ಯಾಂಕ್ ಖಾತೆಗೆ ಮರುಪಾವತಿ ಕ್ರೆಡಿಟ್ ಅನ್ನು ಆಯ್ಕೆ ಮಾಡಿದರೆ ಪರಿಶೀಲಿಸಿದ ಮಾಹಿತಿ ದೊರೆಯುತ್ತದೆ.
5. ಡಿಮ್ಯಾಟ್ ಖಾತೆ ಬಳಸಿ ಇ-ಪರಿಶೀಲನೆ
ಈ ವಿಧಾನ ಆಯ್ಕೆ ಮಾಡಿಕೊಳ್ಳಲು ಆದಾಯ ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್‌ನ ಪ್ರೊಫೈಲ್ ವಿಭಾಗದಲ್ಲಿ ಒಬ್ಬರ ಡಿಮ್ಯಾಟ್ ಖಾತೆಯನ್ನು ಮೌಲ್ಯೀಕರಿಸಬೇಕು. ತರುವಾಯ ಡಿ ಮ್ಯಾಟ್ ಖಾತೆಯನ್ನು ಪರಿಶೀಲಿಸುವ ಸಂಖ್ಯೆಯೊಂದಿಗೆ ಪರಿಶೀಲಿಸುವ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಆಗ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಈ ಒಟಿಪಿಯನ್ನು ಬಳಸಿ ಆದಾಯ ತೆರಿಗೆ ಪಾವತಿ ಇ-ಪರಿಶೀಲನೆ ಮಾಡಬಹುದು.
6. ಆಧಾರ್ ಒಟಿಪಿ ಆಯ್ಕೆಯೂ ಇದೆ
ಇದೀಗ ಯಾವುದೇ ದಾಖಲಾತಿಗಳಿಗೂ ಆಧಾರ್ ಕಾರ್ಡ್ ಕಡ್ಡಾಯವಾಗಿರುವಂತೆ ಆದಾಯ ತೆರಿಗೆ ಪಾವತಿಯ ಪರಿಶೀಲನೆಗೂ ಈ ಆಯ್ಕೆ ನೀಡಲಾಗಿದೆ. ಈ ವಿಧಾನ ಆಯ್ಕೆಯಲ್ಲಿ ಒಬ್ಬರ ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್‌ಗೆ ಕಡ್ಡಾಯವಾಗಿ ಲಿಂಕ್ ಮಾಡಲೇಬೇಕಾಗಿರುತ್ತದೆ. ಇ- ಫೈಲಿಂಗ್ ಪೋರ್ಟಲ್‌ನಲ್ಲಿ ಒಬ್ಬರು ಆಧಾರ್ ಒಟಿಪಿ ಅನ್ನು ಬಳಸಿಕೊಂಡು ಇ-ಪರಿಶೀಲನೆ ಆಯ್ಕೆ ಮಾಡಬೇಕಾಗುತ್ತದೆ. ಇವಿಸಿ ಸಲ್ಲಿಸುವ ಮೂಲಕ ಆದಾಯ ತೆರಿಗೆ ಪಾವತಿಯನ್ನು ಪೂರ್ಣಗೊಳಿಸಲು ನೋಂದಾಯಿತ ಮೊಬೈಲ್ ಸಂಖ್ಯೆಗೆ (ಆಧಾರ್‌ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ) ಕಳುಹಿಸಿದ ಒಟಿಪಿ ಬಳಸಬೇಕು.
ಪೋಸ್ಟ್ ಪರಿಶೀಲನೆಯ ಹಂತಗಳು:
ಪೋಸ್ಟ್ ಪರಿಶೀಲನೆಯ ಹಂತಗಳು: ಅರ್ಜಿ ಸಲ್ಲಿಸಿದ ನಂತರ ಒಬ್ಬರು ಸ್ವೀಕೃತಿಯನ್ನು ಡೌನ್‌ಲೋಡ್ ಮಾಡಿಕೊಂಡು ಅದನ್ನು ದಾಖಲೆಯ ಉದ್ದೇಶಗಳಿಗಾಗಿ ಉಳಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಮೌಲ್ಯಮಾಪಕರಿಂದ ಹೆಚ್ಚಿನ ಕ್ರಮ ಅಗತ್ಯವಿರುವುದಿಲ್ಲ.
ಕಾಗದ ಪತ್ರಗಳ ದಾಖಲಾತಿ ಸಲ್ಲಿಸುವ ಹಂತ:
ಪರ್ಯಾಯವಾಗಿ ಕಾಗದ ಪತ್ರಗಳನ್ನು ಸಲ್ಲಿಸಲು ಅನುಮತಿಸಿದ ಸಂದರ್ಭಗಳಲ್ಲಿ (ಅಂದರೆ ಆನ್‌ಲೈನ್ ರಿಟರ್ನ್ ಸಲ್ಲಿಸಲು ಕಡ್ಡಾಯವಲ್ಲದಿದ್ದಾಗ), ಒಬ್ಬರು ತರಿಗೆ ಪಾವತಿ ಪರಿಶೀಲನೆಗಾಗಿ ಸಹಿ ಮಾಡಬಹುದು. ಸಹಿ ಮಾಡಿದ ದಾಖಲೆಯನ್ನು ಆದಾಯ ತೆರಿಗೆ ಕಚೇರಿಗೆ ಸಲ್ಲಿಸುವುದು.
ಅಂತಿಮ ತೀರ್ಮಾನ ಏನು?
ಒಬ್ಬರ ಆದಾಯ ತೆರಿಗೆ ಪಾವತಿಯನ್ನು ಅನ್ನು ಪರಿಶೀಲಿಸಲು ಮೇಲಿನ 6 ಆಯ್ಕೆಗಳಲ್ಲಿ ಯಾವುದಾದರೂ ವಿಧಾನವನ್ನು ಬಳಸಿಕೊಳ್ಳಬಹುದು. ಏಕೆಂದರೆ ಪರಿಶೀಲನೆ ಮಾಡುವುದು ಅತ್ಯವಶ್ಯಕ ಆಗಿದೆ. ಏಕೆಂದರೆ, ತೆರಿಗೆ ಪಾವತಿಸಿದ ನಂತರ ಯಾವುದೇ ಸಮಯದಲ್ಲಿ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಜೊತೆಗೆ ಇ-ಫೈಲಿಂಗ್ ಪೋರ್ಟಲ್ ಪರೀಶಿಲಿಸುವ ಸಂದರ್ಭದಲ್ಲಿ ಆದಾಯ ತೆರಿಗೆ ಪರಿಶೀಲನೆ ಅರ್ಜಿ ಅಂಚೆ ಮೂಲಕ ಕಳುಹಿಸುವ ಅಗತ್ಯವಿಲ್ಲ. ಇತರ ವಿಧಾನಗಳಿಗೆ ಹೋಲಿಸಿದರೆ, ಆದಾಯ ತೆರಿಗೆ ಪಾವತಿ ಪ್ರಾಮಾಣಿಕವಾಗಿರುವುದರಿಂದ ಇ-ಪರಿಶೀಲನೆ ಕೈಗೊಳ್ಳಲು ಶಿಫಾರಸು ಮಾಡಲಾಗಿದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ



Click it and Unblock the Notifications