ನೀವು ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಿದ ನಂತರ ಬೇರೆ ಬದಲಾವಣೆ ಅಥವಾ ಅಪ್‌ಡೇಟ್ ಮಾಡುವ ಬಗ್ಗೆ ಗೊಂದಲಗಳಿದ್ದರೆ ನಾವು ನಿಮಗೆ ಪರಿಹಾರವನ್ನು ಸೂಚಿಸುತ್ತೇವೆ. ಸಾಮಾನ್ಯವಾಗಿ ಐಟಿಆರ್ ಸಲ್ಲಿಸುವ ವೇಳೆ ಆಗುವ ಸಾಮಾನ್ಯ ತಪ್ಪು ಅಂದರೆ ಬ್ಯಾಂಕ್ ಖಾತೆ ವಿವರಗಳನ್ನು ಸರಿಯಾಗಿ ನಮೂದಿಸದೆ ಇರುವುದು. ಆದಾಯ ತೆರಿಗೆ ರಿಟರ್ನ್ಸ್ ಗಡುವು ಸಮೀಪಿಸುತ್ತಿರುವಾಗ ನಿಮ್ಮ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಮಾಡುವ ಒಂದು ಸಣ್ಣ ದೋಷ ಕೂಡ ಮರುಪಾವತಿ ಸ್ವೀಕರಿಸುವಲ್ಲಿ ವಿಳಂಬಕ್ಕೆ ಕಾರಣವಾಗಬಹುದು.
ನಿಮ್ಮ ಐಟಿಆರ್ ಫಾರ್ಮ್‌ನಲ್ಲಿನ ತಪ್ಪು ಬ್ಯಾಂಕ್ ಖಾತೆ ಮಾಹಿತಿಯನ್ನು ಸರಿಪಡಿಸುವುದಕ್ಕೆ ನೀವು ಅನುಸರಿಸಬೇಕಾದ ನೇರವಾದ ಪ್ರಕ್ರಿಯೆ ಕೂಡ ಇದೆ. ಇ-ಫೈಲಿಂಗ್ ಪೋರ್ಟಲ್‌ನ ಅಡಿಯಲ್ಲಿರುವ 'ಐಟಿಆರ್ ಫಾರ್ಮ್ ವಿವರ ಬದಲಾಯಿಸಿ' ಫೀಚರ್ ತೆರಿಗೆದಾರರಿಗೆ ತಮ್ಮ ಬ್ಯಾಂಕ್ ಖಾತೆ, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯಂಥಹ ವಿವರಗಳಲ್ಲಿ ಮಾರ್ಪಾಟು ಮಾಡುವುದಕ್ಕೆ ಅನುಮತಿಸುತ್ತದೆ. ಐಟಿಆರ್ ಪ್ರಕ್ರಿಯೆ ಆಗುವ ಮೊದಲು ಈ ರೀತಿಯ ಕೋರಿಕೆಯನ್ನು ಸಲ್ಲಿಸಬೇಕಾಗುತ್ತದೆ ಎನ್ನುವುದು ಗಮನಾರ್ಹ. ತೆರಿಗೆದಾರರಿಗೆ 2022-23 ಅವಧಿಯ ಐಟಿಆರ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿರುವ ಕಾರಣ ಆದಷ್ಟು ಬೇಗ ಇದನ್ನು ಮಾಡಬೇಕಿದೆ.

ITR ಫೈಲಿಂಗ್ ದೋಷಗಳು: ತಪ್ಪು ಖಾತೆ ವಿವರ ಸರಿಪಡಿಸುವ ಕ್ರಮಗಳು
ಆದಾಯ ತೆರಿಗೆ ರಿಟರ್ನ್ ಅನ್ನು ಪ್ರಕ್ರಿಯೆ ಮಾಡದಿದ್ದರೆ ಖಾತೆ ವಿವರಗಳನ್ನು ಆನ್‌ಲೈನ್‌ನಲ್ಲಿ ಸರಿಪಡಿಸಬಹುದು. ರಿಟರ್ನ್ ಅನ್ನು ಈಗಾಗಲೇ ಪ್ರಕ್ರಿಯೆಗೊಳಿಸಿದ್ದರೆ, ಮರು ಪಾವತಿ ಮರು ಸಲ್ಲಿಕೆಗೆ ವಿನಂತಿಸಬಹುದು.
ಹಂತ 1: incometax.gov.in/iec/foportal/ ನಲ್ಲಿ ಆದಾಯ ತೆರಿಗೆಯ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
ಹಂತ 2: ಪುಟದ ಮೇಲಿನ ಎಡಭಾಗದಲ್ಲಿರುವ 'ನನ್ನ ಖಾತೆ' ಟ್ಯಾಬ್ ಕ್ಲಿಕ್ ಮಾಡಿ.
ಹಂತ 3: 'ನನ್ನ ಖಾತೆ' ಟ್ಯಾಬ್ ಅಡಿಯಲ್ಲಿ, 'ಸೇವಾ ವಿನಂತಿ' ಆಯ್ಕೆಯನ್ನು ಆಯ್ಕೆಗೊಳಿಸಬೇಕು.
ಹಂತ 4: ರಿಕ್ವೆಸ್ಟ್ ಕ್ಯಾಟೆಗರಿ ಅಡಿಯಲ್ಲಿ Request Type ಮತ್ತು Rectification ನಲ್ಲಿ New Request ಆಯ್ಕೆ ಮಾಡಬೇಕು.
ಹಂತ 5: ಅದನ್ನು ಪೋಸ್ಟ್ ಮಾಡಿ, 'Change ITR Form Particulars' ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 6: ನಿಮ್ಮ ಪ್ಯಾನ್ ಅನ್ನು ಸ್ಕ್ರೀನ್ ಮೇಲೆ ತೋರಿಸಲಾಗುತ್ತದೆ.
ಹಂತ 7: ITR ನ 'ಅಕ್ನಾಲೆಡ್ಜ್‌ಮೆಂಟ್ ಸಂಖ್ಯೆ' ನಂತಹ ನಿಮ್ಮ ರುಜುವಾತು ಬಳಸಿಕೊಂಡು ಲಾಗಿನ್ ಮಾಡಿ.
ಹಂತ 8: ನೀವು ಲಾಗಿನ್ ಮಾಡಿದ ನಂತರ, 'ಬ್ಯಾಂಕ್ ಖಾತೆ ವಿವರಗಳನ್ನು ಬದಲಾಯಿಸುವುದು', 'ವಿಳಾಸ ವಿವರಗಳನ್ನು ಬದಲಾಯಿಸಿ' ಮತ್ತು 'ಇ-ಮೇಲ್ ಐಡಿ/ಮೊಬೈಲ್ ಸಂಖ್ಯೆ ವಿವರಗಳನ್ನು ಬದಲಾಯಿಸಿ' ಆಯ್ಕೆಗಳು ಲಭ್ಯವಿರುತ್ತವೆ.
ಹಂತ 9: ಅಗತ್ಯವಿರುವ ಆಯ್ಕೆಯನ್ನು ಆರಿಸಿ, ಅಗತ್ಯ ಮಾಹಿತಿಯನ್ನು ನಮೂದಿಸಿ ನಂತರ submit ಬಟನ್ ಒತ್ತಿರಿ.
ಹಂತ 10: ನಿಮ್ಮ ರಿಕ್ವೆಸ್ಟ್‌ನ್ನು ಸಲ್ಲಿಸಿದ ನಂತರ, transaction ID ಅನ್ನು ಸ್ಕ್ರೀನ್ ಮೇಲೆ ತೋರಿಸಲಾಗುತ್ತದೆ.
ಒಮ್ಮೆ ತೆರಿಗೆದಾರರು ತಮ್ಮ ಬ್ಯಾಂಕ್ ವಿವರಗಳನ್ನು ನವೀಕರಿಸಿದ ನಂತರ, ಅವರು ತಮ್ಮ ITR ಅನ್ನು ಮರು-ಮೌಲ್ಯಮಾಪನ ಮಾಡಬೇಕಾಗುತ್ತದೆ. ಆ ಕುರಿತ ಪ್ರಕ್ರಿಯೆ ಕೂಡ ಇಲ್ಲಿದೆ:
> 'ನನ್ನ ಖಾತೆ' ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು ʻಬ್ಯಾಂಕ್ ಖಾತೆಗಳುʼ ಕಾಲಂ ಆಯ್ಕೆ ಮಾಡಿ.
> ನಂತರ, ನವೀಕರಿಸಿದ ಬ್ಯಾಂಕ್ ಖಾತೆಯ ಪಕ್ಕದಲ್ಲಿರುವ ʻಮರು ಮೌಲ್ಯೀಕರಿಸುʼ ಬಟನ್ ಅನ್ನು ಕ್ಲಿಕ್ ಮಾಡಿ.
> ಮರು ಮೌಲ್ಯಮಾಪನದ ನಂತರ, ITR ಅನ್ನು ಪ್ರಕ್ರಿಯೆಗೊಳಿಸಲಾಗುತ್ತದೆ ಮತ್ತು ಮರುಪಾವತಿಯನ್ನು ನೀಡಲಾಗುತ್ತದೆ.
ITR ಫೈಲಿಂಗ್ ದೋಷ: ಇತರೆ ತಿದ್ದುಪಡಿಗಳು
ತೆರಿಗೆದಾರರು ತಮ್ಮ ಐಟಿಆರ್ ರೂಪದಲ್ಲಿ ತಪ್ಪಾದ ವಿಳಾಸ, ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ಅನ್ನು ಕೂಡ ಸರಿಪಡಿಸಬಹುದು. ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಈ ತಪ್ಪುಗಳನ್ನು ಸರಿಪಡಿಸಬಹುದು. 'ಐಟಿಆರ್ ಫಾರ್ಮ್ ವಿವರಗಳನ್ನು ಬದಲಾಯಿಸಿ' ವಿಭಾಗವು ಈ ಎಲ್ಲ ತಪ್ಪುಗಳನ್ನು ಸರಿಪಡಿಸುವುದಕ್ಕೆ ನಿಮಗೆ ಅವಕಾಶ ನೀಡುತ್ತದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications