ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಖಾತೆ; ಗೊತ್ತಿರಲೇ ಬೇಕಾದ ಮಾಹಿತಿ

ಭಾರತದಲ್ಲಿ ಪೋಸ್ಟ್ ಆಫೀಸ್ ಗಳ ರೀಚ್ ಬಹಳ ಚೆನ್ನಾಗಿದೆ. ಆ ಕಾರಣಕ್ಕೆ ಬೇರೆ ಯಾವುದೇ ಬ್ಯಾಂಕಿಂಗ್ ವ್ಯವಸ್ಥೆಗಿಂತ ಅದ್ಬುತ ಸೇವೆ ಒದಗಿಸಬಲ್ಲ ಸಾಮರ್ಥ್ಯ ಇದಕ್ಕೆ ಇದೆ. ವಿಸ್ತಾರವಾದ ವ್ಯಾಪ್ತಿ ಇರುವ ಕಾರಣಕ್ಕೆ ಸರ್ಕಾರವು ಪೋಸ್ಟ್ ಆಫೀಸ್ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಉತ್ತೇಜಿಸುತ್ತಿದೆ. ಆ ಮೂಲಕ ಉಳಿತಾಯದ ಹವ್ಯಾಸವನ್ನು ಪ್ರೋತ್ಸಾಹಿಸುತ್ತಿದೆ.

ಇಂಡಿಯಾ ಪೋಸ್ಟ್ ಉಳಿತಾಯ ಖಾತೆಯ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ ವಿಚಾರಗಳಿವು:
* ಪೋಸ್ಟ್ ಆಫೀಸ್ ನಲ್ಲಿನ ಖಾತೆಗೆ ವರ್ಷಕ್ಕೆ 4 ಪರ್ಸೆಂಟ್ ಬಡ್ಡಿ ದೊರೆಯುತ್ತದೆ

* ಕನಿಷ್ಠ 20 ರುಪಾಯಿ ಮೊತ್ತದೊಂದಿಗೆ ಖಾತೆ ತೆರೆಯಬಹುದು. ಚೆಕ್ ಬುಕ್ ಪಡೆಯದಿದ್ದರೆ ಕನಿಷ್ಠ ಬ್ಯಾಲೆನ್ಸ್ 50 ರುಪಾಯಿ ಇದ್ದರೆ ಸಾಕು

* ಬ್ಯಾಂಕ್ ಖಾತೆ ಜತೆಗೆ ಚೆಕ್ ಬುಕ್ ಪಡೆಯುವುದಿದ್ದರೆ ಕನಿಷ್ಠ ಬ್ಯಾಲೆನ್ಸ್ 500 ರುಪಾಯಿ ಇರಬೇಕು. ಖಾತೆಯನ್ನು ಸಹ ಕನಿಷ್ಠ 500 ಬ್ಯಾಲೆನ್ಸ್ ಜತೆ ತೆರೆಯಬೇಕು

* ಖಾತೆಯನ್ನು ಒಂದು ಅಂಚೆ ಕಚೇರಿಯಿಂದ ಮತ್ತೊಂದಕ್ಕೆ ವರ್ಗಾವಣೆ ಮಾಡಬಹುದು

* ಅಪ್ರಾಪ್ತರ ಹೆಸರಿನಲ್ಲಿ ಕೂಡ ಖಾತೆ ತೆರೆಯಬಹುದು. ಮತ್ತು ವಯಸ್ಸು 10 ವರ್ಷ ಹಾಗೂ ಮೇಲ್ಪಟ್ಟವರು ಖಾತೆ ತೆರೆಯಬಹುದು ಮತ್ತು ಖಾತೆ ನಿರ್ವಹಿಸಬಹುದು

* ಇಂಡಿಯಾ ಪೋಸ್ಟ್ ಉಳಿತಾಯ ಖಾತೆ ಜತೆಗೆ ಎಟಿಎಂ ಸೇವೆ ಕೂಡ ದೊರೆಯುತ್ತದೆ

ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಖಾತೆ; ಗೊತ್ತಿರಲೇ ಬೇಕಾದ ಮಾಹಿತಿ

ನಿತ್ಯ ಎಟಿಎಂ ನಗದು ವಿಥ್ ಡ್ರಾ ಮಿತಿ
* 25,000

ತಲಾ ಒಂದು ನಗದು ವಿಥ್ ಡ್ರಾ ಮಿತಿ
* 10,000

ಪೋಸ್ಟ್ ಇಲಾಖೆಯ ಎಟಿಎಂಗಳಲ್ಲಿ ನಡೆಸುವ ವ್ಯವಹಾರಕ್ಕೆ ವಿಧಿಸುವ ದರಗಳು
* ಒಂದು ದಿನಕ್ಕೆ 5 ವ್ಯವಹಾರ ಉಚಿತ. ಮೆಟ್ರೋ ನಗರಗಳಲ್ಲಿ ಉಚಿತ ವ್ಯವಹಾರಗಳು (ಆರ್ಥಿಕ ಹಾಗೂ ಆರ್ಥಿಕೇತರ ವ್ಯವಹಾರಗಳು ಸೇರಿ) 3ಕ್ಕೆ ನಿಗದಿ ಪಡಿಸಲಾಗಿದೆ.

ಇತರ ಬ್ಯಾಂಕ್ ಗಳ ಎಟಿಎಂಗಳ ಉಚಿತ ವ್ಯವಹಾರಗಳು
* ಒಂದು ತಿಂಗಳಿಗೆ 3 ಉಚಿತ ವ್ಯವಹಾರಗಳು ಮೆಟ್ರೋ ನಗರಗಳಲ್ಲಿ (ಆರ್ಥಿಕ ಹಾಗೂ ಆರ್ಥಿಕೇತರ ವ್ಯವಹಾರಗಳು ಸೇರಿ)

* ಮೆಟ್ರೋ ನಗರಗಳಲ್ಲಿ ಹೊರತುಪಡಿಸಿ ಒಂದು ತಿಂಗಳಿಗೆ 5 ಉಚಿತ ವ್ಯವಹಾರಗಳು (ಆರ್ಥಿಕ ಹಾಗೂ ಆರ್ಥಿಕೇತರ ವ್ಯವಹಾರಗಳು ಸೇರಿ)

ಇತರ ಬ್ಯಾಂಕ್ ಗಳ ಎಟಿಎಂಗಳಲ್ಲಿ ನಡೆಸುವ ವ್ಯವಹಾರಕ್ಕೆ ಶುಲ್ಕ
* ನಿಗದಿತ ಮಿತಿಯ ಉಚಿತ ಆರ್ಥಿಕ ವ್ಯವಹಾರದ ನಂತರ ರು. 20+ ಜಿಎಸ್ ಟಿ ಮೆಟ್ರೋ ನಗರಗಳಲ್ಲಿ

* ನಿಗದಿತ ಮಿತಿಯ ಉಚಿತ ಆರ್ಥಿಕ ವ್ಯವಹಾರದ ನಂತರ ರು. 8+ ಜಿಎಸ್ ಟಿ ಮೆಟ್ರೋ ನಗರಗಳನ್ನು ಹೊರತುಪಡಿಸಿ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+