ದೇಶದ ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್ ಹಾಗೂ ದೇಶದ ಪ್ರಮುಖ ಸಾವರ್ಜನಿಕ ವಲಯದ ಬ್ಯಾಂಕ್ ಆದ ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಸಾಲದ ಬಡ್ಡಿದರವನ್ನು ಏರಿಕೆ ಮಾಡಿದೆ. ಈ ಪ್ರಮುಖ ಬ್ಯಾಂಕ್‌ಗಳಲ್ಲಿ ಜೂನ್ 2023ರ ಮಾರ್ಜಿನಲ್ ಕಾಸ್ಟ್ ಬೇಸ್ಡ್ ಲೆಂಡಿಂಗ್ ರೇಟ್ ಅಥವಾ ಎಂಸಿಎಲ್‌ಆರ್ ಅನ್ನು ಪರಿಷ್ಕರಣೆ ಮಾಡಲಾಗಿದೆ.
ಈ ಎರಡು ಪ್ರಮುಖ ಬ್ಯಾಂಕುಗಳು ಎಂಸಿಎಲ್‌ಆರ್ ಅನ್ನು ಕೆಲವು ಮೂಲಾಂಕ ಹೆಚ್ಚಳಗೊಳಿಸಿದೆ. ನಿರ್ದಿಷ್ಟ ಅವಧಿಗೆ ಎಂಸಿಎಲ್‌ಆರ್ ಅನ್ನು ಏರಿಕೆ ಮಾಡಿದ್ದರೆ, ಕೆಲವು ಅವಧಿಗೆ ಎಂಸಿಎಲ್‌ಆರ್ ಅನ್ನು ಇಳಿಕೆ ಮಾಡಲಾಗಿದೆ. ಏನೇ ಆದರೂ ಕೂಡಾ ದೇಶದ ಪ್ರಮುಖ ಖಾಸಗಿ ಹಾಗೂ ಸಾರ್ವಜನಿಕ ವಲಯದ ಎರಡು ಬ್ಯಾಂಕ್‌ಗಳಲ್ಲಿ ಆದ ಈ ಬದಲಾವಣೆ ಸಾಲ ಪಡೆದವರ ಮೇಲೆ ಪ್ರಭಾವ ಉಂಟು ಮಾಡಲಾಗಿದೆ.

ಇಎಂಐ ಹೊರೆ ಹೆಚ್ಚಳ
ಐಸಿಐಸಿಐ ಬ್ಯಾಂಕ್ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಮಾರ್ಜಿನಲ್ ಕಾಸ್ಟ್ ಬೇಸ್ಡ್ ಲೆಂಡಿಂಗ್ ರೇಟ್ ಅಥವಾ ಎಂಸಿಎಲ್‌ಆರ್ ಪರಿಷ್ಕರಣೆ ಮಾಡಿರುವುದು ಸಾಲವನ್ನು ಪಡೆದಿರುವ ಗ್ರಾಹಕರ ಮಾಸಿಕ ಇಎಂಐ ಮೇಲೆ ಪ್ರಭಾವ ಉಂಟು ಮಾಡಲಾಗಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ಸಾಲದ ಬಡ್ಡಿದರ ತೀರಾ ಅಧಿಕವಾಗಿದೆ. ಈಗ ಮತ್ತಷ್ಟು ಇಎಂಐ ಹೊರೆ ಹೆಚ್ಚಾಗಲಿದೆ. ಸಾಲದ ಬಡ್ಡಿದರ ಕಡಿಮೆ ಮಾಡಲಾಗಿದ್ದರೆ, ಇಎಂಐ ಹೊರೆ ಕಡಿಮೆಯಾಗಲಿದೆ. ಈ ನೂತನ ಬಡ್ಡಿದರವು ಜೂನ್ 1, 2023ರಿಂದ ಜಾರಿಗೆ ಬರಲಿದೆ. ಬಡ್ಡಿದರ ವಿವರ ಈ ಕೆಳಗಿದೆ.
ಐಸಿಐಸಿಐ ಬ್ಯಾಂಕ್‌ನಲ್ಲಿ ಸಾಲದ ಬಡ್ಡಿದರ ಪರಿಷ್ಕರಣೆ
ದೇಶದ ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್ ಒಂದು ಮತ್ತು ಮೂರು ತಿಂಗಳ ಅವಧಿಯಲ್ಲಿ ಎಂಸಿಎಲ್ಆರ್ ದರಗಳನ್ನು ಕಡಿತಗೊಳಿಸಿದೆ. ಒಂದು ತಿಂಗಳ ಅವಧಿಯ ಎಂಸಿಎಲ್‌ಆರ್ ಅನ್ನು ಶೇಕಡ 8.50ರಿಂದ ಶೇಕಡ 8.35ಕ್ಕೆ ಇಳಿಕೆ ಮಾಡಲಾಗಿದೆ. ಮೂರು ತಿಂಗಳ ಅವಧಿಯ ಎಂಸಿಎಲ್‌ಆರ್ 15 ಮೂಲಾಂಕ ಇಳಿಕೆ ಮಾಡಲಾಗಿದ್ದು ಶೇಕಡ 8.55ರಿಂದ ಶೇಕಡ 8.40ಕ್ಕೆ ತಲುಪಿದೆ.
ಓವರ್‌ನೈಟ್ ಎಂಸಿಎಲ್‌ಆರ್ ಸ್ಥಿರವಾಗಿದೆ. ಆದರೆ ಆರು ತಿಂಗಳ ಹಾಗೂ ಒಂದು ವರ್ಷದ ಎಂಸಿಎಲ್‌ಆರ್ ಅನ್ನು ಹೆಚ್ಚಳ ಮಾಡಲಾಗಿದೆ. ಆರು ತಿಂಗಳ ಎಂಸಿಎಲ್‌ಆರ್ ಅನ್ನು 5 ಮೂಲಾಂಕ ಏರಿಸಲಾಗಿದ್ದು ದರವು ಶೇಕಡ 8.75ಕ್ಕೆ ತಲುಪಿದೆ. 1 ವರ್ಷದ ಎಂಸಿಎಲ್‌ಆರ್ ಅನ್ನು ಕೂಡಾ 5 ಬೇಸಿಸ್ ಪಾಯಿಂಟ್ ಹೆಚ್ಚಿಸಲಾಗಿದ್ದು ದರವು ಶೇಕಡ 8.85ಕ್ಕೆ ಏರಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲದ ಬಡ್ಡಿದರ ಪರಿಷ್ಕರಣೆ
ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡಾ ತನ್ನ ಎಂಸಿಎಲ್‌ಆರ್ ಅನ್ನು ಎಲ್ಲ ಅವಧಿಗೆ ಹತ್ತು ಮೂಲಾಂಕ ಹೆಚ್ಚಳಗೊಳಿಸಿದೆ. ಪರಿಷ್ಕರಣೆಯ ಬಳಿಕ ಬ್ಯಾಂಕ್‌ನಲ್ಲಿ ಓವರ್‌ನೈಟ್ ಎಂಸಿಎಲ್‌ಆರ್ ಶೇಕಡ 8ರಿಂದ ಶೇಕಡ 8.10ಕ್ಕೆ ಏರಿಕೆಯಾಗಿದೆ.
ಒಂದು ತಿಂಗಳು, ಮೂರು ತಿಂಗಳು ಮತ್ತು ಆರು ತಿಂಗಳ ಎಂಸಿಎಲ್‌ಆರ್ ಕೂಡಾ 10 ಮೂಲಾಂಕ ಏರಿಕೆ ಮಾಡಲಾಗಿದ್ದು ಕ್ರಮವಾಗಿ ಶೇಕಡ 8.20, ಶೇಕಡ 8.30, ಶೇಕಡ 8.50 ಆಗಿದೆ. ಒಂದು ವರ್ಷ ಹಾಗೂ ಮೂರು ವರ್ಷದ ಎಂಸಿಎಲ್‌ಆರ್ ಕ್ರಮವಾಗಿ ಶೇಕಡ 8.60 ಮತ್ತು ಶೇಕಡ 8.90 ಇದೆ. ಇನ್ನು ರೆಪೋ ಲಿಂಕ್ಡ್ ಲೆಂಡಿಂಗ್ ರೇಟ್ (ಆರ್‌ಎಲ್‌ಎಲ್‌ಆರ್) ಶೇಕಡ 8.75ರಿಂದ ಶೇಕಡ 9.00ಕ್ಕೆ ಏರಿಕೆಯಾಗಿದೆ.
ಏನಿದು ಎಂಸಿಎಲ್‌ಆರ್?
ಏಪ್ರಿಲ್ 1, 2016ರ ಬಳಿಕ ಎಲ್ಲ ಸಾಲದ ಬಡ್ಡಿದರವು ಮಾರ್ಜಿನಲ್ ಕಾಸ್ಟ್ ಬೇಸ್ಡ್ ಲೆಂಡಿಂಗ್ ರೇಟ್ ಅಥವಾ ಎಂಸಿಎಲ್‌ಆರ್ ಆಧಾರಿತವಾಗಿದೆ. ಹಣಕಾಸು ಸಂಸ್ಥೆಗಳು ವಿಧಿಸಬಹುದಾದ ಕನಿಷ್ಠ ಬಡ್ಡಿದರವೇ ಎಂಸಿಎಲ್‌ಆರ್ ಆಗಿದೆ. ಸಾಲಕ್ಕೆ ಎಷ್ಟು ಕನಿಷ್ಠ ಬಡ್ಡಿದರ ಎಂಬುವುದನ್ನು ಎಂಸಿಎಲ್‌ಆರ್ ಪ್ರತಿನಿಧಿಸುತ್ತದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications