For Quick Alerts
ALLOW NOTIFICATIONS  
For Daily Alerts

ಉದ್ಯೋಗ ನೇಮಕಾತಿ ಶೇ.40 ಏರಿಕೆ: ಫ್ರೆಶರ್‌ಗಳಿಗೆ ಬೇಡಿಕೆ

|

ಭಾರತದಲ್ಲಿ 2022 ರಲ್ಲಿ ಉದ್ಯೋಗ ನೇಮಕಾತಿ ಚಟುವಟಿಕೆಯಲ್ಲಿ ಶೇಕಡಾ 40 ರಷ್ಟು ಬೆಳವಣಿಗೆ ಕಂಡು ಬಂದಿದೆ. ಅದರಲ್ಲೂ ಮುಖ್ಯವಾಗಿ ಫ್ರೆಶರ್‌ಗಳಿಗೆ (ಹೊಸಬರಿಗೆ) ಅಧಿಕ ಬೇಡಿಕೆ ಇದೆ. ಇತ್ತೀಚಿನ ನೌಕ್ರಿ ಜಾಬ್‌ಸ್ಪೀಕ್ ಪ್ರಕಾರ, ಮೇ 2022 ರ ಸೂಚ್ಯಂಕವು 2863 ಉದ್ಯೋಗಗಳನ್ನು ಹೊಂದಿದೆ.

Naukri.com ಸೂಚ್ಯಂಕವು ಶೇಕಡಾ 61 ರಷ್ಟು ಫ್ರೆಶರ್‌ಗಳನ್ನು ಈ ವರ್ಷ ನೇಮಕ ಮಾಡಲಾಗಿದೆ ಎಂದು ತೋರಿಸುತ್ತದೆ. 4-7 ವರ್ಷಗಳ ಅನುಭವ ಹೊಂದಿರುವವರು 37 ಶೇಕಡಾ, 16 ವರ್ಷಗಳ ಅನುಭವ ಇರುವವರು 27 ಶೇಕಡಾ, 13-16 ವರ್ಷಗಳ ಅನುಭವ ಹೊಂದಿರುವವರು 26 ಪ್ರತಿಶತ ಮತ್ತು 8-12 ವರ್ಷಗಳ ಅನುಭವ ಹೊಂದಿರುವವರು 22 ಪ್ರತಿಶತ ನೇಮಕ ಮಾಡಲಾಗಿದೆ.

India Unemployment Rate : ದೇಶದಲ್ಲಿ ಇಳಿಕೆ ಕಾಣುತ್ತಿದೆ ನಿರುದ್ಯೋಗ ಪ್ರಮಾಣIndia Unemployment Rate : ದೇಶದಲ್ಲಿ ಇಳಿಕೆ ಕಾಣುತ್ತಿದೆ ನಿರುದ್ಯೋಗ ಪ್ರಮಾಣ

ವರದಿಯ ಕುರಿತು ಪ್ರತಿಕ್ರಿಯಿಸಿದ Naukri.com ನ ಮುಖ್ಯ ವ್ಯವಹಾರ ಅಧಿಕಾರಿ ಪವನ್ ಗೋಯಲ್, "ನೇಮಕಾತಿ ಮುಂದುವರಿದಿದೆ. 2022 ರ ಆವೇಗವನ್ನು ಉಳಿಸಿಕೊಳ್ಳುತ್ತಿದೆ. ಉದ್ಯೋಗ ಮಾರುಕಟ್ಟೆಯು ಬೆಳವಣಿಗೆ ಕಾಣುತ್ತಿದೆ," ಎಂದು ತಿಳಿಸಿದರು.

ಉದ್ಯೋಗ ನೇಮಕಾತಿ ಶೇ.40 ಏರಿಕೆ: ಫ್ರೆಶರ್‌ಗಳಿಗೆ ಬೇಡಿಕೆ

"ಮುಖ್ಯವಾಗಿ ಮೆಟ್ರೋಯೇತರ ಪ್ರದೇಶ, ಮಹಾನಗರಗಳಿಂದ ಅನುಭವಿ ವೃತ್ತಿಪರರು ಮತ್ತು ಫ್ರೆಷರ್‌ಗಳು ಅಧಿಕವಾಗಿ ಹೊಸ ಉದ್ಯೋಗಕ್ಕೆ ನೇಮಕಾತಿ ಪಡೆಯುತ್ತಿದ್ದಾರೆಂದು ಸೂಚ್ಯಂಕವು ತಿಳಿಸುತ್ತದೆ," ಎಂದು ವಿವರಿಸಿದರು.

ಯಾವ ಉದ್ಯಮದಲ್ಲಿ ನೇಮಕಾತಿ ಹೆಚ್ಚಳ?

ಗಮನಾರ್ಹವಾಗಿ ಆತಿಥ್ಯ ಮತ್ತು ಪ್ರಯಾಣ ಉದ್ಯಮದಲ್ಲಿನ ನೇಮಕಾತಿ ದರವು 357 ಪ್ರತಿಶತದಷ್ಟು ಹೆಚ್ಚಳವಾಗಿದೆ. ಕೊರೊನಾ ವೈರಸ್ ಸಾಂಕ್ರಾಮಿಕವೂ ಪ್ರಯಾಣ ಉದ್ಯಮಕ್ಕೆ ಹೆಚ್ಚಿನ ಹಾನಿಯನ್ನುಂಟುಮಾಡಿದೆ. ಆದರೆ ಈಗ ಈ ವಲಯದಲ್ಲಿ ನೇಮಕಾತಿ ಹೆಚ್ಚಳವಾಗುತ್ತಿದೆ. ಚಿಲ್ಲರೆ ಉದ್ಯಮದಲ್ಲಿ ನೇಮಕಾತಿಯು 175 ಪ್ರತಿಶತದಷ್ಟು ಹೆಚ್ಚಳ ಕಂಡಿದೆ. ರಿಯಲ್ ಎಸ್ಟೇಟ್‌ನಲ್ಲಿ ಶೇಕಡ 141 ಹಾಗೂ ವಿಮೆಯಲ್ಲಿ ಶೇಕಡ 126 ಪ್ರತಿಶತ ಏರಿಕೆ ಕಂಡಿದೆ.

ಭಾರತದಲ್ಲಿ ನೇಮಕಾತಿ ಚಟುವಟಿಕೆ ನವೆಂಬರ್‌ನಲ್ಲಿ ಶೇ. 26 ಏರಿಕೆಭಾರತದಲ್ಲಿ ನೇಮಕಾತಿ ಚಟುವಟಿಕೆ ನವೆಂಬರ್‌ನಲ್ಲಿ ಶೇ. 26 ಏರಿಕೆ

ಕಳೆದ ವರ್ಷಕ್ಕೆ ಹೋಲಿಸಿದರೆ ನೇಮಕಾತಿ ಪ್ರವೃತ್ತಿಯಲ್ಲಿ ಬಿಎಫ್‌ಎಸ್‌ಸಿಯಲ್ಲಿ ಶೇಕಡ 104, ಶಿಕ್ಷಣ ಕ್ಷೇತ್ರದಲ್ಲಿ ಶೇಕಡ 86, ಆಟೋ ಮೊಬೈಲ್ ಕ್ಷೇತ್ರದಲ್ಲಿ ಶೇಕಡ 69, ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ಶೇಕಡ 69, ಎಫ್‌ಎಂಸಿಜಿಯಲ್ಲಿ 51 ಶೇಕಡಾ, ಐಟಿ-ಸಾಫ್ಟ್‌ವೇರ್/ಸಾಫ್ಟ್‌ವೇರ್ ಸೇವೆಗಳಲ್ಲಿ ಶೇಕಡ 7 ಏರಿಕೆ ಕಂಡು ಬಂದಿದೆ.

ಎಲ್ಲಾ ನಗರಗಳು ಮೇ 2022 ರಲ್ಲಿ ಎರಡಂಕಿಯ ಬೆಳವಣಿಗೆಯನ್ನು ಸೂಚಿಸಿರುವುದರಿಂದ ಮೆಟ್ರೋ ಮತ್ತು ಮೇಟ್ರೋಯೇತರ ಪ್ರದೇಶದಲ್ಲಿ ಉದ್ಯೋಗಿಗಳ ಬೇಡಿಕೆಯು ಸ್ಥಿರವಾಗಿದೆ. ಮಹಾನಗರಗಳಲ್ಲಿ ದೆಹಲಿ (63 ಶೇಕಡಾ) ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸಿದೆ. ನಂತರ ಮುಂಬೈ (+61 ಶೇಕಡಾ)ನಲ್ಲಿ ಅಧಿಕ ಬೇಡಿಕೆ ಇದೆ. ಕೋಲ್ಕತ್ತಾ (+59%), ಚೆನ್ನೈ (+35%), ಪುಣೆ (+27%), ಮತ್ತು ಹೈದರಾಬಾದ್ (+23%) ಸಹ ಬೆಳವಣಿಗೆ ಕಂಡು ಬಂದಿದೆ. ಜೈಪುರವು ನೇಮಕಾತಿಯಲ್ಲಿ ಬೆಳವಣಿಗೆಯನ್ನು ಶೇಕಡ 76ರಷ್ಟಿದೆ.

English summary

India witnesses a surge in hiring by 40%, more demand for freshers

India records growth in hiring rate by 40% in May 2022. As per records, the demand for freshers is at the highest. Know more.
Story first published: Saturday, June 4, 2022, 10:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X