ದೇಶಕ್ಕೆ ಆಮದಾಗುತ್ತಿರುವ ತಾಳೆ ಎಣ್ಣೆಯ ಪ್ರಮಾಣ ಏರಿಕೆಯಾಗುತ್ತಿರುವುದು ಒಂದು ಕಡೆಯಾದರೆ, ಪಾಮ್ ಆಯಿಲ್ ದರದಲ್ಲೂ ಇಳಿಕೆಯಾಗಿರುವುದು ಇನ್ನೊಂದು ಕಡೆ. ಹೀಗಾಗಿ, ಇದೆರಡರ ಲಾಭ ಗ್ರಾಹಕರಿಗೆ ಸಿಗುತ್ತಿದೆ. ಪ್ರತೀ ಮನೆಗೂ ಅವಶ್ಯಕವಾಗಿರುವ ಈ ಪದಾರ್ಥಗಳ ಬೆಲೆ ಇಳಿಕೆಯಿಂದ ಗ್ರಾಹಕರು ಖುಷಿಯಾಗಿದ್ದಾರೆ.
ಜೂನ್ ತಿಂಗಳಲ್ಲಿ ದೇಶದ ತಾಳೆ ಎಣ್ಣೆಯ ಆಮದುಗಳು ಹಿಂದಿನ ತಿಂಗಳಿಗಿಂತ 49 ಪ್ರತಿಶತದಷ್ಟು ಏರಿಕೆಯಾಗಿದೆ. ಜೊತೆಗೆ, ಕಳೆದ 28 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಬೆಲೆಯಲ್ಲಿ ಇಳಿಕೆಯಾಗಿರುವುದರಿಂದ ಗ್ರಾಹಕರಿಗೆ ಇದರ ಲಾಭ ಸಿಗುತ್ತಿದೆ.

ಗ್ರಾಹಕರು ಇದರ ಲಾಭವನ್ನು ಪಡೆದುಕೊಳ್ಳುತ್ತಿರುವುದರಿಂದ ಖರೀದಿಯಲ್ಲೂ ಹೆಚ್ಚಳವಾಗಿದೆ ಎಂದು ಆರು ಡೀಲರುಗಳ ಹೇಳಿಕೆಯನ್ನು ಉಲ್ಲೇಖಿಸಿ ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ವಿಶ್ವದಲ್ಲಿ ಅತಿಹೆಚ್ಚು ಬಳಕೆದಾರರನ್ನು ಭಾರತ ಹೊಂದಿರುವುದರಿಂದ ಇದರ ಉತ್ಪಾದಕರಿಗೂ ಇದರಿಂದ ಅನುಕೂಲವಾಗುತ್ತಿದೆ.
ಭಾರತದಲ್ಲಿ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ವಿಶ್ವದ ಪ್ರಮುಖ ಪಾಮ್ ಆಯಿಲ್ ಉತ್ಪಾದಕಾ ದೇಶಗಳಾದ ಮಲೇಷ್ಯಾ ಮತ್ತು ಇಂಡೋನೇಷ್ಯಾ ತಮ್ಮಲ್ಲಿರುವ ದಾಸ್ತಾನುಗಳನ್ನು ಕ್ಲಿಯರ್ ಮಾಡಿಕೊಳ್ಳುತ್ತಿವೆ.
ಡೀಲರುಗಳು ನೀಡುವ ಸರಾಸರಿ ಅಂದಾಜಿನ ಪ್ರಕಾರ, ಭಾರತದ ತಾಳೆ ಎಣ್ಣೆ ಆಮದು ಮೇ ತಿಂಗಳಲ್ಲಿ 439,173 ಮೆಟ್ರಿಕ್ ಟನ್ ನಿಂದ ಜೂನ್‌ನಲ್ಲಿ 655,000 ಮೆಟ್ರಿಕ್ ಟನ್‌ಗಳಿಗೆ ಏರಿಕೆಯಾಗಿದೆ. ಫೆಬ್ರವರಿ 2021ರಿಂದ ಮೊದಲ ಬಾರಿಗೆ ಮೇ 2023ರ ಆಮದು ಅತಿ ಕಡಿಮೆಯಾಗಿದೆ.
ಉತ್ಪಾದಕರು ಸೋಯಾಯಿಲ್ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಪ್ರೀಮಿಯಂನಲ್ಲಿ ಮಾರಾಟ ಮಾಡಲು ಆರಂಭಿಸಿದರು. ಹೀಗಾಗಿ, ಅಗ್ಗದ ಬೆಲೆಯಲ್ಲಿ ಈ ಪದಾರ್ಥಗಳು ಗ್ರಾಹಕರಿಗೆ ಲಭ್ಯವಾಗಲು ಆರಂಭವಾದವು. " ಮೇ ತಿಂಗಳಲ್ಲಿನ ಕಡಿಮೆ ಆಮದು, ಬೆಲೆಯಲ್ಲಿ ಬದಲಾವಣೆಯಿಂದಾಗಿ, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಇದನ್ನು ಖರೀದಿಸಲು ಆರಂಭಿಸಿದರು"ಎಂದು ಮಧ್ಯವರ್ತಿ ಸಂಸ್ಥೆಯಾದ ಸುನ್ವಿನ್ ಗ್ರೂಪಿನ ಸಿಇಒ ಸಂದೀಪ್ ಬಜೋರಿಯಾ ಹೇಳಿದ್ದಾರೆ.
ಪಾಮ್ ಆಯಿಲ್ ಅನ್ನು ಭಾರತ ಪ್ರಮುಖವಾಗಿ ಇಂಡೋನೇಷ್ಯಾ, ಮಲೇಷ್ಯಾ ಮತ್ತು ಥಾಯ್ ಲ್ಯಾಂಡ್ ನಿಂದ ಆಮದು ಮಾಡಿಕೊಳ್ಳುತ್ತದೆ. ಸನ್ ಫ್ಲವರ್ ಆಯಿಲ್ ಅನ್ನು ಉಕ್ರೇನ್, ರಷ್ಯಾ, ಆರ್ಜಂಟೇನಾ ಮತ್ತು ಬ್ರೆಜಿಲ್ ದೇಶದಿಂದ ತರಿಸಿಕೊಳ್ಳುತ್ತದೆ.
ಅದಾನಿ ವಿಲ್ಮಾರ್, ಮದರ್ ಡೈರಿ ಸಂಸ್ಥೆಯು ಕಳೆದ ಮೇ ತಿಂಗಳಿನಲ್ಲಿ ಖಾದ್ಯ ತೈಲದ ದರವನ್ನು ಪ್ರತಿ ಲೀಟರ್‌ಗೆ 20 ರೂಪಾಯಿಯಂತೆ ಇಳಿಕೆ ಮಾಡಲಾಗುವುದು. ಮುಂದಿನ 7-10 ದಿನಗಳಲ್ಲಿ ಈ ನೂತನ ದರ ಇಳಿಕೆಯು ಜಾರಿಗೆ ಬರಲಿದೆ ಎಂದು ಹೇಳಿದ್ದವು.


Click it and Unblock the Notifications