ಕಳೆದ ಕೆಲವೇ ದಿನಗಳಲ್ಲಿ ನಾವೆಲ್ಲರೂ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಣೆ ಮಾಡಲಿದ್ದೇವೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಥವಾ ವಿಶ್ವ ಮಹಿಳೆಯರ ದಿನ ಪ್ರತಿ ವರ್ಷ ಮಾರ್ಚ್ 8ರಂದು ವಿಶ್ವದೆಲ್ಲೆಡೆ ಆಚರಣೆ ಮಾಡಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನ ನೆನಪಿಸಲಾಗುತ್ತದೆ. ಈ ಪೈಕಿ ಪ್ರಸ್ತುತ ಮಹಿಳೆಯರಿಗೆ ಆರ್ಥಿಕ ಸುರಕ್ಷತೆಯು ಅತೀ ಮುಖ್ಯವಾಗಿದೆ.
ಸಾಮಾನ್ಯವಾಗಿ ನಾವು ಯಾವುದೇ ಹಬ್ಬಗಳನ್ನು ಆಚರಣೆ ಮಾಡುವ ಸಂದರ್ಭದಲ್ಲಿ ನಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಯನ್ನು ನೀಡುತ್ತೇವೆ. ರಕ್ಷಾ ಬಂಧನ, ದೀಪಾವಳಿ, ನವರಾತ್ರಿ, ಹೋಳಿ, ಯುಗಾದಿ, ರಂಜಾನ್, ಕ್ರಿಸ್‌ಮಸ್ ಹೀಗೆ ಯಾವುದೇ ಹಬ್ಬ ಬಂದಾಗ ನಾವು ನಮ್ಮ ಪ್ರೀತಿಪಾತ್ರರಿಗೆ ಮೌಲ್ಯಯುತವಾದ ಉಡುಗೊರೆಯನ್ನು ನೀಡುತ್ತೇವೆ. ಪ್ರೇಮಿಗಳ ದಿನದಂದು ಪರಸ್ಪರ ಗಿಫ್ಟ್ ಹಂಚಿಕೊಳ್ಳುತ್ತಾರೆ. ಹಾಗಿರುವಾಗ ಮಹಿಳಾ ದಿನದಂದು ಗಿಫ್ಟ್ ಯಾಕೆ ಹಂಚಬಾರದು?, ಇಲ್ಲಿದೆ ಐಡಿಯಾ..

ಪ್ರೀತಿಪಾತ್ರರಿಗೆ ಈ ಮೌಲ್ಯಯುತ ಗಿಫ್ಟ್ ನೀಡಿ
ಸಾಮಾನ್ಯವಾಗಿ ಚಿನ್ನವನ್ನು ಭಾರತದಲ್ಲಿ ಹೆಚ್ಚು ಮೌಲ್ಯಯುತ, ಶುಭ ವಸ್ತು ಎಂದು ಪರಿಗಣಿಸಲಾಗುತ್ತದೆ. ಭಾರತ ಸರ್ಕಾರದ ವತಿಯಿಂದ ಆರ್‌ಬಿಐ ಸವರನ್ ಗೋಲ್ಡ್ ಬಾಂಡ್ ಅನ್ನು ನೀಡುತ್ತದೆ. ಇದು ಪ್ರಮಾಣಪತ್ರ ರೂಪದಲ್ಲಿ ನಿಜವಾದ ಚಿನ್ನವನ್ನು ಖರೀದಿಸುವುದಕ್ಕೆ ಸಹಾಯಕವಾಗಲಿದೆ. ಪ್ರಮುಖವಾಗಿ ಮಹಿಳೆಯರಿಗೆ ಅತ್ಯಂತ ಲಾಭದಾಯಕ ಚಿನ್ನದ ಹೂಡಿಕೆ ತಂತ್ರಗಳಲ್ಲಿ ಒಂದಾಗಿದೆ. ನೀವು ಕನಿಷ್ಠವಾಗಿ ಒಂದು ಗ್ರಾಂ ಚಿನ್ನದ ಮೇಲೆ ಹೂಡಿಕೆಯನ್ನು ಮಾಡಬೇಕಾಗುತ್ತದೆ.
ಮಹಿಳೆಯರಿಗೆ ಮಹಿಳಾ ದಿನದಂದು ನೀವು ನಿವೃತ್ತಿಗಾಗಿ ಸಹಾಯಕವಾಗುವ ಕಾರ್ಯವನ್ನು ಮಾಡಬಹುದು. ನ್ಯಾಷನಲ್ ಪೆನ್ಶನ್ ಪ್ಲ್ಯಾನ್ (ಪಿಎನ್‌ಬಿ) ಸರ್ಕಾರದ ಯೋಜನೆಯಾಗಿದ್ದು, ಪಿಂಚಣಿಗಾಗಿ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಹಲವಾರು ಹೂಡಿಕೆ ಆಯ್ಕೆಯನ್ನು ಈ ಯೋಜನೆಯು ನೀಡುತ್ತದೆ. ಎನ್‌ಪಿಎಸ್ ಯೋಜನೆಯ ಅಡಿಯಲ್ಲಿ ಜನರು ಟೈರ್ 1 ಮತ್ತು ಟೈರ್ 2 ಖಾತೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
ನಿಮ್ಮ ಹೂಡಿಕೆಯ ಪ್ರಯಾಣವನ್ನು ಪ್ರಾರಂಭಿಸಲು ಮ್ಯೂಚುಯಲ್ ಫಂಡ್‌ಗಳು ಕೂಡಾ ಉತ್ತಮ ಆಯ್ಕೆಯಾಗಿದೆ. 100 ರೂಪಾಯಿಯಿಂದ ಆರಂಭ ಹೂಡಿಕೆ ಮಾಡಬಹುದು. ತಜ್ಞರ ಮಾಹಿತಿಯನ್ನು ಪಡೆದುಕೊಂಡು ನೀವು ಈ ಹೂಡಿಕೆಯನ್ನು ಮಾಡಲು ಸಾಧ್ಯವಾಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಅಲ್ಪ ಅವಧಿಗಿಂತ ದೀರ್ಘ ಅವಧಿಯ ಹೂಡಿಕೆಯನ್ನು ಮಾಡುವುದು ಉತ್ತಮ ಆಯ್ಕೆಯಾಗಿದೆ. ಹಾಗೆಯೇ ಮಾರುಕಟ್ಟೆಯಲ್ಲಿ ಆಗುವ ಬದಲಾವಣೆಗಳ ಬಗ್ಗೆ ನೀವು ತಿಳಿದಿರಬೇಕಾಗುತ್ತದೆ.


Click it and Unblock the Notifications
