ಭಾರತದ ಜೀವ ವಿಮಾ ನಿಗಮವು (ಎಲ್‌ಐಸಿ) ಹೂಡಿಕೆದಾರರಿಗೆ ಖಾತರಿ ಮತ್ತು ಪ್ರಭಾವಶಾಲಿ ಆದಾಯವನ್ನು ಒದಗಿಸುವ ಸುರಕ್ಷಿತ ವಿಮಾ ಯೋಜನೆಗಳನ್ನು ಹೊಂದಿದೆ. ನಾವು ನಮ್ಮ ಭವಿಷ್ಯದ ಸುರಕ್ಷತೆಗಾಗಿ ಹೂಡಿಕೆ ಮಾಡಲು ಬಯಸಿದರೆ ನಮಗೆ ಇರುವ ಪಿ.ಎಫ್ ಯೋಜನೆಯ ಜೊತೆಗೆ ಎಲ್‌ಐಸಿ ಕೂಡಾ ಸುರಕ್ಷಿತವಾಗಿದೆ. ಮಕ್ಕಳ ವಿದ್ಯಾಭ್ಯಾಸ, ಮದುವೆ ಹೀಗೆ ಹಲವಾರು ಕಾರಣಗಳಿಗಾಗಿ ಹಣವನ್ನು ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ನಾವು ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಿ ಹೂಡಿಕೆ ಮಾಡಲು ಮುಂದಾಗುವುದಾದದರೆ ಅದಕ್ಕೆ ಸುರಕ್ಷಿತ ಹೂಡಿಕೆ ನ್ಯೂ ಚಿಲ್ಡ್ರನ್ಸ್ ಮನೀ ಬ್ಯಾಕ್ ಪ್ಲಾನ್ ಆಗಿದೆ.
ನ್ಯೂ ಚಿಲ್ಡ್ರನ್ಸ್ ಮನೀ ಬ್ಯಾಕ್ ಪ್ಲಾನ್ ಎಂಬಂತಹ ಎಲ್‌ಐಸಿ ಯೋಜನೆಯಲ್ಲಿ ಹೂಡಿಕೆದಾರರು ಮಗುವಿನ ಶಿಕ್ಷಣ ಅಥವಾ ವಿವಾಹವನ್ನು ಭದ್ರಪಡಿಸಬಹುದಾಗಿದೆ. ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ನೀವು ಮಗುವಿಗೆ ಉಜ್ವಲ ಭವಿಷ್ಯವನ್ನು ಖಚಿತಪಡಿಸಿಕೊಳ್ಳಬಹುದು. ಎಲ್‌ಐಸಿ ಚಿಲ್ಡ್ರನ್ ಮನಿ ಬ್ಯಾಕ್ ಯೋಜನೆಯು ದಿನಕ್ಕೆ ಕೇವಲ 150 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ಲಕ್ಷಗಟ್ಟಲೆ ರೂಪಾಯಿಗಳನ್ನು ನೀವು ಮಕ್ಕಳ ಭವಿಷ್ಯಕ್ಕೆ ಉಳಿಕೆ ಮಾಡಲು ಸಾಧ್ಯವಾಗುವ ಯೋಜನೆ ಆಗಿದೆ.
ನ್ಯೂ ಚಿಲ್ಡ್ರನ್ಸ್ ಮನೀ ಬ್ಯಾಕ್ ಪ್ಲಾನ್ ಇದೊಂದು ಒಳಗೊಳ್ಳುವ ನಾನ್ ಲಿಂಕ್ಡ್ ಮನೀ ಬ್ಯಾಕ್ ಪ್ಲಾನ್ ಆಗಿದೆ. ಮಗುವಿನ ವಿದ್ಯಾಭ್ಯಾಸ, ವಿವಾಹ ಹಾಗೂ ಜೀವನದ ಸುಭದ್ರತೆ ಹೀಗೆ ಎಲ್ಲದಕ್ಕೂ ಭದ್ರತೆ ನೀಡುವಂತೆ ಈ ಯೋಜನೆಯನ್ನು ರೂಪಿಸಲಾಗಿದೆ. ನ್ಯೂ ಚಿಲ್ಡ್ರನ್ಸ್ ಮನೀ ಬ್ಯಾಕ್ ಪ್ಲಾನ್ 5 ವರ್ಷಗಳ ಮೆಚ್ಯೂರಿಟಿ ಅವಧಿಯನ್ನು ಹೊಂದಿದೆ.
ಮೆಚ್ಯೂರಿಟಿ ಕಂತು ಪಾವತಿ ಯಾವಾಗ?
ಮೆಚ್ಯೂರಿಟಿ ಮೊತ್ತವನ್ನು ಕಂತುಗಳಲ್ಲಿ ಸ್ವೀಕರಿಸಲು ನೀವು ನಿರ್ಧರಿಸಬಹುದು. ನಿಮ್ಮ ಮಗುವಿಗೆ 18 ವರ್ಷ ತುಂಬಿದ ತಕ್ಷಣ ನೀವು ಮೆಚ್ಯೂರಿಟಿ ಕಂತುಗಳನ್ನು ಸ್ವೀಕರಿಸಲು ಪ್ರಾರಂಭಿಸಬಹುದು. ಮಗುವಿಗೆ 20 ವರ್ಷವಾದಾಗ ಎರಡನೇ ಕಂತನ್ನು ಪಾವತಿಸಲಾಗುತ್ತದೆ. ಮಗುವಿಗೆ 22 ವರ್ಷ ತುಂಬಿದಾಗ ಮೂರನೇ ಕಂತನ್ನು ಜಮಾ ಮಾಡಲಾಗುತ್ತದೆ. ಮಗುವಿಗೆ 25 ವರ್ಷವಾದಾಗ ಸಂಪೂರ್ಣ ಮೊತ್ತವನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಅಧಿಕ ಐದು ಲಕ್ಷ ಲಾಭ!
ಆ ಸಮಯದಲ್ಲಿ, ಫಲಾನುಭವಿಯು ಬೋನಸ್‌ನೊಂದಿಗೆ ಮೊತ್ತದ 40 ಪ್ರತಿಶತವನ್ನು ಸಹ ಪಡೆಯುತ್ತಾನೆ. ವಿಮೆಯು ವಿಮಾ ಮೊತ್ತದ ಪ್ರಯೋಜನಗಳನ್ನು ಸಹ ನೀಡುತ್ತದೆ. ಈ ಯೋಜನೆಯಲ್ಲಿ, ನಿಮ್ಮ ಮಗುವಿನ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ನೀವು ವಾರ್ಷಿಕವಾಗಿ ಸುಮಾರು 55,000 ರೂಗಳನ್ನು ಉಳಿತಾಯ ಮಾಡಬಹುದಾಗಿದೆ. ದಿನಕ್ಕೆ ಸರಿಸುಮಾರು 150 ರೂಪಾಯಿ ಹಣ ಉಳಿತಾಯ ಮಾಡುವ ಮೂಲಕ 25 ವರ್ಷಗಳಲ್ಲಿ, ನೀವು ಒಟ್ಟು 14 ಲಕ್ಷ ರೂಪಾಯಿಗಳನ್ನು ಈ ಯೋಜನೆಯಲ್ಲಿ ಡೆಪಾಸಿಟ್ ಮಾಡಬೇಕಾಗುತ್ತದೆ. ಈ ಪಾಲಿಸಿಯು ಮೆಚ್ಯೂರ್ ಹೊಂದಿದ ಬಳಿಕ ಅಂದರೆ ಮಗುವಿಗೆ 25 ವರ್ಷವಾದಾಗ ನೀವು ಮಾಡಿದ 14 ಲಕ್ಷ ರೂಪಾಯಿ ಡೆಪಾಸಿಟ್ ಬದಲಾಗಿ ನೀವು 19 ಲಕ್ಷ ಮೌಲ್ಯದ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗಲಿದೆ.
ಹೂಡಿಕೆಗೆ ವಯಸ್ಸಿನ ಮಿತಿ ಎಷ್ಟಿದೆ?
ಪಾಲಿಸಿಯಲ್ಲಿ ಹೂಡಿಕೆ ಮಾಡಲು ವಯಸ್ಸಿನ ಮಿತಿ ಶೂನ್ಯದಿಂದ 12 ವರ್ಷಗಳವರೆಗೆ ಇರುತ್ತದೆ. ಶೂನ್ಯ ಎಂದರೆ ನಿಮ್ಮ ಮಗುವಿಗೆ ಕೆಲವೇ ತಿಂಗಳುಗಳು ಆಗಿದ್ದರೂ ನೀವು ಯೋಜನೆಯಲ್ಲಿ ಹೂಡಿಕೆ ಆರಂಭ ಮಾಡಬಹುದಾಗಿದೆ. ಹೂಡಿಕೆದಾರರು ಈ ಹೂಡಿಕೆಯ ಶೇಕಡ 60 ಪ್ರತಿಶತವನ್ನು ಕಂತುಗಳಲ್ಲಿ ಮತ್ತು 40 ಪ್ರತಿಶತದಷ್ಟು ಬೋನಸ್‌ನೊಂದಿಗೆ ಮುಕ್ತಾಯದ ಸಮಯದಲ್ಲಿ ತೆಗೆದುಕೊಳ್ಳಬಹುದು.
ಸರ್ವೈವಲ್ ಬೆನೆಫಿಟ್ ಕೂಡಾ ಇದೆ!
ಈ ವಿಮಾ ಯೋಜನೆಯಡಿಯಲ್ಲಿ, ಕನಿಷ್ಠ ವಿಮಾ ಮೊತ್ತವು ರೂ 1,00,000 ಆಗಿದೆ. ಗರಿಷ್ಠ ವಿಮಾ ಮಿತಿ ಇಲ್ಲ. ಪಾವತಿಯನ್ನು ಕಂತುಗಳಲ್ಲಿ ತೆಗೆದುಕೊಳ್ಳದಿದ್ದರೆ, ಮುಕ್ತಾಯದ ಸಮಯದಲ್ಲಿ ಬಡ್ಡಿಯೊಂದಿಗೆ ಒಂದು ದೊಡ್ಡ ಮೊತ್ತವನ್ನು ಒದಗಿಸಲಾಗುತ್ತದೆ. ಡೆತ್ ಬೆನೆಫಿಟ್ ಸೇರಿದಂತೆ ಸರ್ವೈವಲ್ ಬೆನೆಫಿಟ್ ಹಾಗೂ ಮ್ಯಾಚುರಿಟಿ ಬೆನೆಫಿಟ್‌ಗಳನ್ನು ಸಹ ಈ ಯೋಜನೆ ಒಳಗೊಂಡಿದೆ. ಪಾಲಿಸಿಧಾರಕನು ಯಾವುದೇ ಸಮಯದಲ್ಲಿ ಸರ್ವೈವಲ್ ಬೆನೆಫಿಟ್ ಅಥವಾ ಪಾಲಿಸಿ ಮುಗಿದ ನಂತರ ಸರ್ವೈವಲ್ ಬೆನೆಫಿಟ್ ಪಡೆದುಕೊಳ್ಳಬಹುದು.


Click it and Unblock the Notifications