ಹಿರಿಯ ನಾಗರಿಕರಿಗೆ ಬ್ಯಾಂಕುಗಳು ಸ್ಥಿರ ಠೇವಣಿಗಳ (FDs) ಮೇಲೆ ಈಗಲೂ ಆಕರ್ಷಕ ಬಡ್ಡಿ ನೀಡುತ್ತಲೇ ಇದೆ. ಕೆಲವು ಬ್ಯಾಂಕುಗಳು ₹3 ಕೋಟಿವರೆಗಿನ ಠೇವಣಿಗಳಿಗೆ ಮೂರು ವರ್ಷಗಳ ಅವಧಿಗೆ ಶೇ 7.5 ರಷ್ಟು ಬಡ್ಡಿಯನ್ನು ನೀಡುತ್ತಿದೆ. ಸಣ್ಣ ಹಣಕಾಸು ಬ್ಯಾಂಕುಗಳೇ (Small Finance Banks) ಈ ಹೆಚ್ಚಿನ ಬಡ್ಡಿ ದರಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿವೆ. ಅಲ್ಲದೇ ಹೂಡಿಕೆದಾರರು ಈ ಹೂಡಿಕೆ ಮಿತಿ ಬಗ್ಗೆ ತಿಳಿಯುವುದು ಬಹಳ ಮುಖ್ಯ.

ವರದಿಗಳ ಪ್ರಕಾರ, ಜನ್ ಸ್ಮಾಲ್ ಫೈನಾನ್ಸ್, ಸ್ಲೈಸ್ ಸ್ಮಾಲ್ ಫೈನಾನ್ಸ್ ಮತ್ತು ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ ಮೂರು ವರ್ಷಗಳ ಸ್ಥಿರ ಠೇವಣಿಗಳ ಮೇಲೆ ಶೇ 7.5 ಬಡ್ಡಿದರವನ್ನು ನೀಡುತ್ತಿವೆ.
ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮೂರು ವರ್ಷಗಳ FD ಗಳ ಮೇಲೆ ಹಿರಿಯ ನಾಗರಿಕರಿಗೆ ಶೇ 7.25 ಬಡ್ಡಿ ನೀಡುತ್ತಿದ್ದು, ಇದನ್ನು ಮೀರಿ ಉಜ್ಜೀವನ್ ಸ್ಮಾಲ್ ಫೈನಾನ್ಸ್ (ಶೇ 7.20%), ಎಯು ಸ್ಮಾಲ್ ಫೈನಾನ್ಸ್ (ಶೇ 7.10%), ಮತ್ತು ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳು (ಶೇ 7.00%) ಕೂಡ ಆಕರ್ಷಕ ಬಡ್ಡಿದರಗಳನ್ನು ನೀಡುತ್ತಾ ಬಂದಿದೆ.
ಸಣ್ಣ ಹಣಕಾಸು ಬ್ಯಾಂಕುಗಳಲ್ಲಿನ ಠೇವಣಿಗಳಿಗೆ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC) ಮೂಲಕ ₹5 ಲಕ್ಷದವರೆಗೆ ವಿಮೆ ಇರುತ್ತದೆ. ಆದರೆ, ಅವುಗಳ ವಿಶಿಷ್ಟ ವ್ಯವಹಾರ ಮಾದರಿಯಿಂದಾಗಿ, ಹೂಡಿಕೆದಾರರು ಎಚ್ಚರಿಕೆ ವಹಿಸಬೇಕು. ಯಾವುದೇ ಅಪಾಯ ತಗ್ಗಿಸಲು, DICGC ರಕ್ಷಣಾ ಮಿತಿಯೊಳಗೆ ಹೂಡಿಕೆ ಮಾಡಲು ತಜ್ಞರು ಸಲಹೆ ನೀಡುತ್ತಾರೆ.
ತೆರಿಗೆ ಅನ್ವಯ
ಸ್ಥಿರ ಠೇವಣಿಯಿಂದ ಬರುವ ಬಡ್ಡಿ ಒಂದು ಹಣಕಾಸು ವರ್ಷದಲ್ಲಿ ₹1 ಲಕ್ಷ ಮೀರುತ್ತಿದ್ದರೆ, ಬ್ಯಾಂಕುಗಳು ಮೂಲದಲ್ಲಿ ತೆರಿಗೆ ಕಡಿತ (TDS) ಕಡಿತಗೊಳಿಸಬೇಕು. TDS ಹೆಚ್ಚುವರಿ ತೆರಿಗೆಯಲ್ಲ, ಬದಲಾಗಿ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವಾಗ ಮರುಪಾವತಿ ಪಡೆಯಬಹುದು ಅಥವಾ ನಿಮ್ಮ ಒಟ್ಟು ತೆರಿಗೆ ಹೊಣೆಗಾರಿಕೆಗೆ ಹೊಂದಾಣಿಕೆ ಮಾಡಿಕೊಳ್ಳಬಹುದು. ಮರುಪಾವತಿಗೆ ಅರ್ಹರಾಗಿದ್ದರೆ, ಆ ಮರುಪಾವತಿಯ ಮೇಲೆ ಬಡ್ಡಿಯನ್ನು ಸಹ ಪಡೆಯುವ ಅವಕಾಶ ನಿಮಗಿರುತ್ತದೆ.
ಉದಾಹರಣೆಗೆ, ಹಣಕಾಸು ವರ್ಷ 2025-26 ರಲ್ಲಿ ಹೊಸ ತೆರಿಗೆ ಪದ್ಧತಿಯಡಿ, ಹಿರಿಯ ನಾಗರಿಕರ ಆದಾಯ ₹11 ಲಕ್ಷವಾಗಿದ್ದರೂ, ಸೆಕ್ಷನ್ 87A ತೆರಿಗೆ ರಿಯಾಯಿತಿಯಿಂದಾಗಿ ಅವರು ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ. ಹೊಸ ತೆರಿಗೆ ಪದ್ಧತಿಯಲ್ಲಿ, ಸೆಕ್ಷನ್ 87A ರಿಯಾಯಿತಿಯು ₹12 ಲಕ್ಷದವರೆಗಿನ ಆದಾಯಕ್ಕೆ ಅನ್ವಯಿಸುತ್ತದೆ.
ತಮ್ಮ ವಾರ್ಷಿಕ ಆದಾಯ, ಎಲ್ಲಾ ಕಡಿತಗಳು ಮತ್ತು ಸೆಕ್ಷನ್ 87A ರಿಯಾಯಿತಿಯನ್ನು ಕ್ಲೈಮ್ ಮಾಡಿದ ನಂತರ, ತೆರಿಗೆ ರಹಿತ ಮಿತಿಗಿಂತ (ಹೊಸ ಪದ್ಧತಿಯಲ್ಲಿ ₹12 ಲಕ್ಷ ಅಥವಾ ಹಳೆಯ ಪದ್ಧತಿಯಲ್ಲಿ ₹5 ಲಕ್ಷ) ಕಡಿಮೆ ಇದ್ದರೆ, ಹಿರಿಯ ನಾಗರಿಕರು TDS ಕಡಿತವನ್ನು ತಪ್ಪಿಸಲು 'ಫಾರ್ಮ್ 15H' ಅನ್ನು ಸಲ್ಲಿಸಿದರೆ ಸಾಕು.
ವೈಯಕ್ತಿಕ ಆದಾಯ ₹12 ಲಕ್ಷಕ್ಕಿಂತ ಕಡಿಮೆ ಇದ್ದರೂ ಆದಾಯ ತೆರಿಗೆ ವಿಧಿಸದಿದ್ದರೂ, ಬ್ಯಾಂಕುಗಳು ಕಾನೂನುಬದ್ಧವಾಗಿ TDS ಕಡಿತಗೊಳಿಸುತ್ತವೆ. ಬಡ್ಡಿ ₹1 ಲಕ್ಷ ಮೀರಿದರೆ TDS ಕಡ್ಡಾಯವಾಗಿದೆ. ಆದರೆ ಐಟಿ ರಿಟರ್ನ್ ಮೂಲಕ ಇದನ್ನು ಮತ್ತೆ ಪಡೆಯುವ ಅವಕಾಶವೂ ಇದೆ.
(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited ನ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ).


Click it and Unblock the Notifications