ಆಪಲ್‌ನ ಪ್ರೀಮಿಯಂ ಐಫೋನ್ 15 ಸ್ಮಾರ್ಟ್‌ಫೋನ್ ಬಿಡುಗಡೆಯಾದ ಕೆಲವೇ ತಿಂಗಳುಗಳ ನಂತರ, ಅಮೆಜಾನ್‌ನಲ್ಲಿ ಭಾರೀ ಕಡಿಮೆ ಬೆಲೆಗೆ ಲಭ್ಯವಾಗುತ್ತಿದೆ. ಹೌದು ಅಮೆಜಾನ್‌ನಲ್ಲಿ ಗಮನಾರ್ಹ ಬೆಲೆ ಕಡಿತದಲ್ಲಿ ಈ ಮೊಬೈಲ್ ಲಭ್ಯವಾಗುತ್ತಿದೆ.
ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ 75,000 ರೂಪಾಯಿಗಿಂತ ಕಡಿಮೆ ಬೆಲೆಗೆ ಆಪಲ್‌ನ ಪ್ರೀಮಿಯಂ ಐಫೋನ್ 15 ಕಡಿಮೆ ಬೆಲೆಗೆ ಲಭ್ಯವಿರುತ್ತದೆ. ಐಫೋನ್ 15 ಅನ್ನು ಸೆಪ್ಟೆಂಬರ್ 12 ರಂದು ಆಪಲ್‌ನ ವಂಡರ್‌ಲಸ್ಟ್ ಈವೆಂಟ್‌ನಲ್ಲಿ 79,990 ರೂಪಾಯಿ ಬೆಲೆಗೆ ಬಿಡುಗಡೆ ಮಾಡಲಾಗಿದೆ.

ಪ್ರೀಮಿಯಂ ಸ್ಮಾರ್ಟ್‌ಫೋನ್ ಈಗ ಅಮೆಜಾನ್‌ನಲ್ಲಿ 74,990 ರೂಪಾಯಿಗೆ ಲೀಸ್ಟ್ ಮಾಡಲಾಗಿದೆ. ಆದರೆ ಅನ್ವಯವಾಗುವ ಬ್ಯಾಂಕ್ ರಿಯಾಯಿತಿಗಳನ್ನು ಪಡೆಯುವ ಮೂಲಕ ಸ್ಮಾರ್ಟ್‌ಫೋನ್‌ನ ಪರಿಣಾಮಕಾರಿ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡಬಹುದು.
ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕಾರ್ಡ್ ಬಳಕೆದಾರರು ಸ್ಮಾರ್ಟ್‌ಫೋನ್‌ನಲ್ಲಿ 3,745 ರೂಪಾಯಿಯ ಶೇಕಡ 5 ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು. ಇದರಿಂದಾಗಿ ಬೆಲೆಯು 71,245 ರೂಪಾಯಿಗೆ ಇಳಿಕೆಯಾಗುತ್ತದೆ.
ಐಫೋನ್ 15 ಫೀಚರ್ಸ್:
ಐಫೋನ್ 14 ಪ್ರೊ ಮತ್ತು ಹಳೆಯ ಐಫೋನ್ ಮಾದರಿಗಳಲ್ಲಿ ಕಂಡುಬರುವ ಸಾಂಪ್ರದಾಯಿಕ ನಾಚ್ ಅನ್ನು ಬದಲಿಸುವ ಹೊಸ ಡೈನಾಮಿಕ್ ಐಲ್ಯಾಂಡ್ ಟೆಕ್ನಾಲಜಿಯನ್ನು ಐಫೋನ್ 15 ಹೊಂದಿದೆ. ಗಾತ್ರವು 6.1 ಇಂಚು ಇದೆಯಾದರೂ, ಹೊಳಪು ಬೇರೆ ರೀತಿಯಾಗಿದೆ.
ಸ್ಟ್ಯಾಂಡರ್ಡ್ ಐಫೋನ್ 15 ಎನ್‌ಹಾನ್ಸೆಡ್ ಕ್ಯಾಮೆರಾ ಸಿಸ್ಟಮ್ ಅನ್ನು ಹೊಂದಿದೆ. ಕ್ವಾಡ್-ಪಿಕ್ಸೆಲ್ ಸೆನ್ಸರ್‌ನೊಂದಿಗೆ 48 ಎಂಪಿ ಪ್ರಾಥಮಿಕ ಕ್ಯಾಮೆರಾ ಮತ್ತು ರ್ಯಾಪಿಡ್ ಆಟೋಫೋಕಸ್‌ಗಾಗಿ 100 ಪ್ರತಿಶತ ಫೋಕಸ್ ಪಿಕ್ಸೆಲ್‌ಗಳನ್ನು ಒಳಗೊಂಡಿದೆ.
ಇದು 24ಎಂಪಿ ಸೂಪರ್-ಹೈ-ರೆಸಲ್ಯೂಶನ್ ಡೀಫಾಲ್ಟ್ ಸೆಟ್ಟಿಂಗ್ ಅನ್ನು ಬಳಸಿಕೊಳ್ಳುತ್ತದೆ. ಹೆಚ್ಚುವರಿಯಾಗಿ, ಐಫೋನ್ 15 ಬಳಕೆದಾರರು 0.5x, 1x ಮತ್ತು 2x ಜೂಮ್ ಲೆವೆಲ್‌ನಲ್ಲಿ ಫೋಟೋ ತೆಗೆಯಲು 2x ಟೆಲಿಫೋಟೋ ಲೆನ್ಸ್ ಅನ್ನು ಬಳಸಿಕೊಳ್ಳಬಹುದು.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications