ಆಪಲ್ ಐಫೋನ್ ಪ್ರಿಯರೇ, ನಿಮಗಾಗಿ ಇಲ್ಲಿದೆ ಒಂದು ಒಳ್ಳೆಯ ಸುದ್ದಿ. ಆಪಲ್ ಐಫೋನ್ 15 ಗೆ ಅಮೆಜಾನ್ ಮತ್ತು ಫ್ಲಿಫ್‌ಕಾರ್ಟ್‌ನಲ್ಲಿ ಸುಮಾರು 60,000 ರೂಪಾಯಿವರೆಗೆ ಭಾರೀ ರಿಯಾಯಿತಿಯನ್ನು ಘೋಷಣೆ ಮಾಡಲಾಗಿದೆ. ಈ ನಡುವೆ ಆಪಲ್ ಇಂಡಿಯಾವು ಈಗ ಐಫೋನ್ 15 ಸಿರೀಸ್‌ನ ಆರ್ಡರ್‌ಗಳನ್ನು ಪಡೆಯುತ್ತಿದೆ ಎಂದು ಹೇಳಿದೆ.
ಅಧಿಕೃತ ಬಿಡುಗಡೆಯಲ್ಲಿ ದಿನಾಂಕವನ್ನು ಸೆಪ್ಟೆಂಬರ್ 22 ಕ್ಕೆ ನಿಗದಿಪಡಿಸಲಾಗಿದೆ. ಬಳಕೆದಾರರು ಆಪಲ್ ಇಂಡಿಯಾ ವೆಬ್‌ಸೈಟ್‌ನಲ್ಲಿ, ಹಾಗೆಯೇ ದೆಹಲಿ ಮತ್ತು ಮುಂಬೈನಲ್ಲಿರುವ ತಮ್ಮ ರಿಟೇಲ್ ಮಾರಾಟ ಮಳಿಗೆಗಳಲ್ಲಿ ಈ ಆಕರ್ಷಕ ಆಫರ್‌ಗಳನ್ನು ಪಡೆಯಬಹುದಾಗಿದೆ.

ಇದಲ್ಲದೆ, ಆಪಲ್ ಇಂಡಿಯಾ ನೀವು ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಬಳಸಿ ತಮ್ಮ ವೆಬ್‌ಸೈಟ್‌ನಲ್ಲಿ ಐಫೋನ್ 15 ಅನ್ನು ಖರೀದಿ ಮಾಡಿದರೆ ಸುಮಾರು 6000 ರೂಪಾಯಿವರೆಗೆ ತಕ್ಷಣದ ರಿಯಾಯಿತಿಯನ್ನು ನೀಡುತ್ತಿದೆ. ಗಮನಾರ್ಹವಾಗಿ, ಆಪಲ್ ದೇಶದಲ್ಲಿ ತಮ್ಮ ಇತ್ತೀಚಿನ ಉತ್ಪನ್ನಗಳ ಮೇಲೆ ರಿಯಾಯಿತಿಗಳನ್ನು ಘೋಷಣೆ ಮಾಡುತ್ತಾ ಬಂದಿದೆ.
ಐಫೋನ್ 15 ಈಗ 74,900 ರೂಪಾಯಿಗಳ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. ಅದರ ಮೂಲ ಬೆಲೆ 79,900 ರೂಪಾಯಿ ಆಗಿದೆ. ಇದೇ ರೀತಿಯಲ್ಲಿ, ಐಫೋನ್ 15 ಪ್ಲಸ್ ರಿಯಾಯಿತಿ ದರ 84,900 ರೂ ರೂಪಾಯಿಗಳಲ್ಲಿ ಲಭ್ಯವಿದೆ. ಇದರ ಮೂಲ ಬೆಲೆ 89,900 ರೂಪಾಯಿ ಆಗಿದೆ.
ಐಫೋನ್ 15 ಪ್ರೋ 128,900 ರೂಪಾಯಿಗೆ ಲಭ್ಯವಾಗಿದ್ದು, 1,34,900 ರೂಪಾಯಿ ಮೂಲ ಬೆಲೆಯಾಗಿದೆ. ಬಳಕೆದಾರರು ಐಫೋನ್ 15 ಪ್ರೋ ಮ್ಯಾಕ್ಸ್ ಅನ್ನು 153,900 ರೂಪಾಯಿಗೆ ಖರೀದಿಸಬಹುದು. ಇದರ ಮೂಲ ಬೆಲೆ 159,900 ರೂಪಾಯಿ ಆಗಿದೆ.
ಅಮೆಜಾನ್‌ನಲ್ಲಿ ಆಪಲ್ ಐಫೋನ್ 15 ಗೆ ರಿಯಾಯಿತಿ
ಲಭ್ಯವಿರುವ ವರದಿಗಳ ಪ್ರಕಾರ, ಆಪಲ್ 15 ಗಾಗಿ ಪ್ರೀ ಆರ್ಡರ್‌ಗಳು 89,900 ರೂಪಾಯಿಯಿಂದ ಪ್ರಾರಂಭವಾಗುತ್ತದೆ. 1ಟಿಬಿ ಪ್ರೋ 1,84,900 ರೂಪಾಯಿಗೆ ಲಭ್ಯವಿದೆ. ಇದಲ್ಲದೆ, ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮಾಲೀಕರು 5,000 ರೂಪಾಯಿವರೆಗೆ ರಿಯಾಯಿತಿಯನ್ನು ಪಡೆಯಬಹುದು. ಸಾಧನದ ಶಿಪ್ಪಿಂಗ್ ಸೆಪ್ಟೆಂಬರ್ 23 ರಿಂದ ಪ್ರಾರಂಭವಾಗುತ್ತದೆ.
ಫ್ಲಿಫ್‌ಕಾರ್ಟ್‌ನಲ್ಲಿ ಆಪಲ್ ಐಫೋನ್ 15ಗೆ ರಿಯಾಯಿತಿ
ರಿಯಾಯಿತಿಯ ನಂತರ, ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 15 ಬೆಲೆಯು 79,900 ರೂಪಾಯಿಯಿಂದ ಆರಂಭವಾಗುತ್ತದೆ. ಆದರೂ ಈ ಸಮಯದಲ್ಲಿ ವೆಬ್‌ಸೈಟ್‌ನಲ್ಲಿ ಎಲ್ಲ ಸ್ಟಾಕ್‌ಗಳ ಲಭ್ಯವಿಲ್ಲವೆಂದು ತೋರಿಸುತ್ತದೆ. ಆಯ್ದ ಎಚ್‌ಡಿಎಫ್‌ಸಿ ಕಾರ್ಡ್‌ಗಳ ಮೂಲಕ ಬಳಕೆದಾರರು 5,000 ರೂಪಾಯಿವರೆಗೆ ರಿಯಾಯಿತಿಯನ್ನು ಪಡೆಯಬಹುದು.
ಇದಲ್ಲದೇ, ಆಪಲ್ ಐಫೋನ್ 14 ಗೆ 69,900 ರೂಪಾಯಿಯಿಂದ 65,900 ರೂಪಾಯಿಗೆ ರಿಯಾಯಿತಿ ದರವನ್ನು ಘೋಷಿಸಿದೆ. ಐಫೋನ್ 14 ಪ್ಲಸ್ 79,900 ರೂಪಾಯಿಗಳಿಂದ 75,900 ರೂಪಾಯಿಗಳ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. ಇದರ ಹೊರತಾಗಿ, ಐಫೋನ್ 13 ಈಗ ಅದರ ಹಿಂದಿನ ಬೆಲೆ 59,900 ರೂಪಾಯಿಗಳಿಂದ 56,900 ರೂಪಾಯಿಗಳ ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. ಐಫೋನ್ ಎಸ್‌ಇ 49,900 ರೂಪಾಯಿಯಿಂದ 47,990 ರೂಪಾಯಿಗಳ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.
ಅಂತೆಯೇ, ಆಪಲ್ ವ್ಯಾಚ್ ಸಿರೀಸ್ 9 ಈಗ ರಿಯಾಯಿತಿ ಬೆಲೆಯಲ್ಲಿ 39,400 ರೂಪಾಯಿಗಳಿಗೆ ಲಭ್ಯವಿದೆ. ಇದರ ಮೂಲ ಬೆಲೆ 41,900 ರೂಪಾಯಿ ಆಗಿದೆ. ಆಪಲ್ ವ್ಯಾಚ್ ಅಲ್ಟ್ರಾ 2 ಬೆಲೆಯು 89,900 ರೂಪಾಯಿಯಿಂದ 86,900 ರೂಪಾಯಿಗೆ ರಿಯಾಯಿತಿಯಲ್ಲಿ ಲಭ್ಯವಿದೆ.
ಐಫೋನ್ 15 ಸಿರೀಸ್ ಹೊರತಾಗಿ ಆಪಲ್ ಐಪ್ಯಾಡ್‌ಗಳು, ಮ್ಯಾಕ್‌ಬುಕ್ಸ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಹಲವಾರು ಉತ್ಪನ್ನಗಳ ಮೇಲೆ ರಿಯಾಯಿತಿಗಳನ್ನು ಘೋಷಣೆ ಮಾಡಿದೆ. ಐಪ್ಯಾಡ್ ಪ್ರೋ ಮಾಡೆಲ್‌ಗಳು, ಐಪ್ಯಾಡ್ ಏರ್ ಮತ್ತು ವಿವಿಧ ಐಪ್ಯಾಡ್ ವರ್ಜನ್‌ನಿಂದಾಗಿ ಗ್ರಾಹಕರು 4,000 ರೂಪಾಯಿವರೆಗೆ ಉಳಿತಾಯ ಪಡೆಯಬಹುದು.


Click it and Unblock the Notifications