ಪ್ರಸ್ತುತ ಮಾರುಕಟ್ಟೆಯಲ್ಲಿ ಐಪಿಒ ಗಳ ಅಲೆ ಇದೆ. 2021 ರಲ್ಲಿ ಜನರು ಹೆಚ್ಚಾಗಿ ಪ್ರಮುಖ ಸಾರ್ವಜನಿಕ ಕೊಡುಗೆ (ಐಪಿಒ) ಅತ್ತ ಮುಖ ಮಾಡುತ್ತಿದ್ದಾರೆ. ಈ ನಡುವೆ ಇಲ್ಲಿಯವರೆಗೆ ನಾವು 3 ಮುಖ್ಯವಾಹಿನಿಯ ಐಪಿಒಗಳು ಮಾರುಕಟ್ಟೆಗೆ ಪ್ರವೇಶ ಪಡೆದಿದೆ. ಎಜಿಎಸ್ ಟ್ರಾನ್ಸಾಕ್ಟ್, ಅದಾನಿ ವಿಲ್ಮಾರ್, ವೇದಾಂತ್ ಫ್ಯಾಶನ್ಸ್ ಐಪಿಒಗಳು ಇತ್ತೀಚಿನ ಐಪಿಒಗಳು ಆಗಿದೆ. ಈ ನಡುವೆ ಹಲವಾರು ಐಪಿಒಗಳು ಈ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆ ಇದೆ.
ಐಪಿಒ ಎಂದರೆ ಪ್ರಮುಖ ಸಾರ್ವಜನಿಕ ಕೊಡುಗೆ ಆಗಿದೆ. ಖಾಸಗಿ ಸಂಸ್ಥೆಗಳು ಸಾಮಾನ್ಯ ಜನರಿಗೆ ಈ ಸಂಸ್ಥೆಯ ಷೇರುಗಳನ್ನು ಖರೀದಿ ಮಾಡಲು ಆಹ್ವಾನ ನೀಡುವುದೇ ನಾವು ಐಪಿಒ ಎಂದು ಕರೆಯತ್ತೇವೆ. ಸಾಮಾನ್ಯವಾಗಿ ಬಂಡವಾಳ, ಸಂಸ್ಥೆಯ ವಿಸ್ತರಣೆ, ಸಾಲ ಮರುಪಾವತಿ ಹಾಗೂ ಇತರೆ ಉದ್ದೇಶಗಳಿಗಾಗಿ ಹಣವನ್ನು ಸಂಗ್ರಹ ಮಾಡಲು ಮಾಡಲಾಗುತ್ತದೆ.
ಒಂದು ಕಂಪನಿಯ ಐಪಿಒ ಬರುತ್ತಿದೆ ಎಂದರೆ ಅದು ಖಾಸಗಿ ಸಂಸ್ಥೆಯಿಂದ ಸಾರ್ವಜನಿಕ ಉದ್ಯಮವಾಗುತ್ತಿದೆ ಎಂದು ಅರ್ಥ. ಹೀಗಾಗಿ ಸಾಮಾನ್ಯವಾಗಿ ಐಪಿಒ ಅನ್ನು ಖಾಸಗಿ ಸಂಸ್ಥೆಯಿಂದ ಸಾರ್ವಜನಿಕ ಉದ್ಯಮದೆಡೆ ತೆರಳುವ ಹಾದಿ ಎಂದು ಕರೆಯಬಹುದು. ಐಪಿಒ ಅಪ್ಲಿಕೇಷನ್ ಅನ್ನು ಸಲ್ಲಿಸುವ ಮೂಲಕ ನಾವು ಈ ಸಂಸ್ಥೆಗಳ ಷೇರನ್ನು ಖರೀದಿ ಮಾಡಲು ಮುಂದಾಗಬಹುದು. ಹಾಗಾದರೆ ಮುಂಬರುವ ಐಪಿಒಗಳು ಯಾವುದು? ಎಂದು ತಿಳಿಯಲು ಮುಂದೆ ಓದಿ.
ಫಾರ್ಮಾ ಕಂಪನಿಗಳ ಐಪಿಒಗಳು
ಎಂಕ್ಯೂರ್ ಫಾರ್ಮಾ ಐಪಿಒ ಈ ತಿಂಗಳಲ್ಲಿ ಬರುವ ನಿರೀಕ್ಷೆಯಿದೆ. ಈ ಐಪಿಒ 4500 ಕೋಟಿ ಮೌಲ್ಯದ ಐಪಿಒ ಆಗಲಿದೆ. ಎಂಕ್ಯೂರ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಮಹಾರಾಷ್ಟ್ರದ ಪುಣೆಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತೀಯ ಬಹುರಾಷ್ಟ್ರೀಯ ಔಷಧೀಯ ಕಂಪನಿಯಾಗಿದೆ. ಇನ್ನು ಫಾರ್ಮ್ಈಸಿ ಐಪಿಒ ಈ ತಿಂಗಳಲ್ಲಿ ಬರುವ ನಿರೀಕ್ಷೆಯಿದೆ. ಈ ಐಪಿಒ 6250 ಕೋಟಿ ಮೌಲ್ಯದ ಐಪಿಒ ಆಗಲಿದೆ. ಫಾರ್ಮ್ಈಸಿ ಎಂಬುದು ಆನ್‌ಲೈನ್ ಔಷಧಿಗಳು, ಡಯಾಗ್ನೋಸ್ಟಿಕ್ಸ್, ಟೆಲಿಹೆಲ್ತ್, ಆನ್‌ಲೈನ್ ವೈದ್ಯರ ಸಮಾಲೋಚನೆ ಸೇವೆಗಳನ್ನು ನೀಡುವ ಭಾರತೀಯ ಆರೋಗ್ಯ ಅಪ್ಲಿಕೇಶನ್ ಆಗಿದೆ. ಇದರ ಪ್ರಧಾನ ಕಚೇರಿ ಮುಂಬೈನಲ್ಲಿ ಇದೆ.
ಹೊಸ ಯುಗದ ಕಂಪನಿಗಳ ಐಪಿಒ
ಮೊಬಿಕ್ವಿಕ್ (MobiKwik) ಐಪಿಒ ಈ ತಿಂಗಳಲ್ಲಿ ಬರುವ ನಿರೀಕ್ಷೆಯಿದೆ. ಇದು 1,900 ಮೌಲ್ಯದ ಐಪಿಒ ಆಗಲಿದೆ. ಮೊಬಿಕ್ವಿಕ್ 2009 ರಲ್ಲಿ ಸ್ಥಾಪಿಸಲಾದ ಭಾರತೀಯ ಪಾವತಿ ಸೇವಾ ಪೂರೈಕೆದಾರರಾಗಿದ್ದು, ಇದು ಮೊಬೈಲ್ ಫೋನ್ ಆಧಾರಿತ ಪಾವತಿ ವ್ಯವಸ್ಥೆ ಮತ್ತು ಡಿಜಿಟಲ್ ವ್ಯಾಲೆಟ್ ಅನ್ನು ಒದಗಿಸುತ್ತದೆ 2013 ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಂಪನಿಯ MobiKwik ವ್ಯಾಲೆಟ್ ಬಳಕೆಯನ್ನು ಅಧಿಕೃತಗೊಳಿಸಿದೆ. ಓಲಾ ಐಪಿಒ ಕೂಡಾ ಫೆಬ್ರವರಿಯಲ್ಲಿ ಹೊರಬರುವ ನಿರೀಕ್ಷೆ ಇದೆ. 7,300 ಕೋಟಿ ಮೌಲ್ಯದ ಐಪಿಒ ಇದಾಗಲಿದೆ. ಓಲಾ ಕ್ಯಾಬ್ಸ್ ಬೆಂಗಳೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಭಾರತೀಯ ಬಹುರಾಷ್ಟ್ರೀಯ ರೈಡ್‌ಶೇರಿಂಗ್ ಕಂಪನಿಯಾಗಿದೆ. ಇಕ್ಸಿಗೋ ಕೂಡಾ ಈ ತಿಂಗಳಿನಲ್ಲಿ ತನ್ನ ಐಪಿಒ ಆರಂಭ ಮಾಡಲಿದೆ. . 1600 ಕೋಟಿ ರೂಪಾಯಿ ಮೌಲ್ಯದ ಐಪಿಒ ಇದಾಗಲಿದೆ. ಇಕ್ಸಿಗೋ ಭಾರತೀಯ ಮೂಲದ ಆನ್‌ಲೈನ್ ಟ್ರಾವೆಲ್ ಪೋರ್ಟಲ್ ಆಗಿದೆ, ಇದನ್ನು 2007 ರಲ್ಲಿ ಪ್ರಾರಂಭಿಸಲಾಗಿದೆ.ಇದು ಗುರ್‌ಗಾಂವ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಪ್ರಯಾಣದ ಮಾಹಿತಿ, ಬೆಲೆಗಳು ಮತ್ತು ವಿಮಾನಗಳು, ರೈಲುಗಳು, ಬಸ್‌ಗಳು ಮೊದಲಾದ ಮಾಹಿತಿಯನ್ನು ಇದು ಹೊಂದಿರುತ್ತದೆ.
ಹಣಕಾಸು ಕ್ಷೇತ್ರದ ಐಪಿಒಗಳು
ಜನ ಸಣ್ಣ ಹಣಕಾಸು ಬ್ಯಾಂಕ್ ಫೆಬ್ರವರಿಯಲ್ಲಿ ಐಪಿಒ ಆರಂಭ ಮಾಡುವ ನಿರೀಕ್ಷೆ ಇದೆ. ಇದರ ಐಪಿಒ ಮೌಲ್ಯ 2,000 ಕೋಟಿ ರೂಪಾಯಿ ಆಗಿದೆ. ಆರೋಹನ್ ಫೈನಾನ್ಶಿಯಲ್ ಸರ್ವೀಸಸ್ ಕೂಡಾ ಈ ತಿಂಗಳನಲ್ಲೇ ಐಪಿಒ ಆರಂಭ ಮಾಡುವ ಸಾಧ್ಯತೆ ಇದೆ. ಇದರ ಐಪಿಒ ಮೌಲ್ಯ1,800 ಕೋಟಿ ರೂಪಾಯಿ ಆಗಿದೆ. ಫಿನ್ಕೇರ್ ಸಣ್ಣ ಹಣಕಾಸು ಬ್ಯಾಂಕ್ ಕೂಡಾ ಫೆಬ್ರವರಿಯಲ್ಲಿ ಐಪಿಒ ಆರಂಭ ಮಾಡುವ ನಿರೀಕ್ಷೆ ಇದೆ. 1,330 ಕೋಟಿ ರೂಪಾಯಿ ಐಪಿಒ ಇದಾಗಲಿದೆ. ಎಲ್ಐಸಿ ಇಂಡಿಯಾ ಲಿಮಿಟೆಡ್ ಕೂಡಾ ಈ ತಿಂಗಳನಲ್ಲೇ ಐಪಿಒ ಆರಂಭ ಮಾಡುವ ಸಾಧ್ಯತೆ ಇದೆ. ವಿಮಾ ಸಂಸ್ಥೆಯ ಐಪಿಒ ಮೌಲ್ಯ 80,000 ಸಾವಿರ ಕೋಟಿ ರೂಪಾಗಿ ಆಗಿದೆ. ಇಎಸ್‌ಎಎಫ್ ಸ್ಮಾಲ್ ಫಿನಾನ್ಸ್ ಬ್ಯಾಂಕ್ ಲಿಮಿಟೆಡ್ ಫೆಬ್ರವರಿಯಲ್ಲಿ ಐಪಿಒ ಆರಂಭ ಮಾಡುವ ನಿರೀಕ್ಷೆ ಇದೆ. ಇದರ ಐಪಿಒ ಮೌಲ್ಯ 998 ಕೋಟಿ ರೂಪಾಯಿ ಆಗಿದೆ. ಉತ್ಕರ್ಷ್ ಸ್ಮಾಲ್ ಫಿನಾನ್ಸ್ ಬ್ಯಾಂಕ್ ಕೂಡಾ ಈ ತಿಂಗಳನಲ್ಲೇ ಐಪಿಒ ಆರಂಭ ಮಾಡುವ ಸಾಧ್ಯತೆ ಇದೆ. ಇದರ ಐಪಿಒ ಮೌಲ್ಯ 1,350 ಕೋಟಿ ರೂಪಾಯಿ ಆಗಿದೆ.
ಇತರ ಐಪಿಒಗಳು
ಉತ್ತರ ಆರ್ಕ್ ಕ್ಯಾಪಿಟಲ್ ಫೆಬ್ರವರಿಯಲ್ಲಿ ಐಪಿಒ ಆರಂಭ ಮಾಡುವ ನಿರೀಕ್ಷೆ ಇದೆ. ಇದರ ಐಪಿಒ ಮೌಲ್ಯ 1,800 ಕೋಟಿ ರೂಪಾಯಿ ಆಗಿದೆ. ಶ್ರೀ ಬಜರಂಗ್ ಪವರ್ ಎಂಡ್ ಇಸ್ಪತ್ ಕೂಡಾ ಈ ತಿಂಗಳನಲ್ಲೇ ಐಪಿಒ ಆರಂಭ ಮಾಡುವ ಸಾಧ್ಯತೆ ಇದೆ. ಇದರ ಐಪಿಒ ಮೌಲ್ಯ 700 ಕೋಟಿ ರೂಪಾಯಿ ಆಗಿದೆ. ಪೆನ್ನಾ ಸಿಮೆಂಟ್ ಕೂಡಾ ಫೆಬ್ರವರಿಯಲ್ಲಿ ಐಪಿಒ ಆರಂಭ ಮಾಡುವ ನಿರೀಕ್ಷೆ ಇದೆ. ಇದರ ಐಪಿಒ ಮೌಲ್ಯ 1,500 ಕೋಟಿ ರೂಪಾಯಿ ಆಗಿದೆ.
ಐಪಿಒ ಹೂಡಿಕೆ ಮಾಡುವಾಗ ಇದನ್ನು ನೆನಪಿಟ್ಟುಕೊಳ್ಳಿ
ನಿಮ್ಮಲ್ಲಿ ಹಣ ಇದ್ದರೂ ಕೂಡಾ ಲಾಭ ಪಡೆಯಲು ಎಲ್ಲಾ ಐಪಿಒಗಳಿಗೆ ಚಂದಾದಾರಿಕೆಯು ಉತ್ತಮ ಆಯ್ಕೆ ಅಲ್ಲ. ಆದ್ದರಿಂದ ನೀವು ಐಪಿಒ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವುದು ಅತೀ ಮುಖ್ಯ ಆಗಿದೆ. ಕಂಪನಿಯ ವ್ಯವಹಾರ, ಭವಿಷ್ಯದ ಬೆಳವಣಿಗೆಯ ನಿರೀಕ್ಷೆಗಳು, ಪ್ರಮುಖ ವ್ಯಾಪಾರದ ವಿವರ, ಇತ್ಯಾದಿಗಳ ಬಗ್ಗೆ ಸರಿಯಾಗಿ ಪರಿಶೀಲನೆ ಮಾಡಿ.


Click it and Unblock the Notifications