For Quick Alerts
ALLOW NOTIFICATIONS  
For Daily Alerts

ಚಿನ್ನದ ಆಭರಣಗಳ ಅಡಮಾನ ಅಥವಾ ಮಾರಾಟಕ್ಕೆ ಹಾಲ್‌ಮಾರ್ಕ್ ಅಗತ್ಯವಿದೆಯೇ?

|

ಭಾರತೀಯರಿಗೆ ಚಿನ್ನದ ಮೇಲೆ ಎಲ್ಲಿಲ್ಲದ ವ್ಯಾಮೋಹ. ಹೀಗಾಗಿಯೇ ಜಗತ್ತಿನಲ್ಲಿ ಅತಿ ಹೆಚ್ಚಿನ ಚಿನ್ನದ ಆಮದುದಾರ ರಾಷ್ಟ್ರಗಳಲ್ಲಿ ಭಾರತವು ಕೂಡ ಪ್ರಮುಖವಾಗಿದೆ. ಚಿನ್ನವು ಕೇವಲ ಮದುವೆ ಸಮಾರಂಭಗಳಿಗೆ ಅಷ್ಟೇ ಬಳಕೆಯಾಗದೆ, ಹೂಡಿಕೆಯ ಜೊತೆಗೆ ಕಷ್ಟ ಕಾಲದಲ್ಲಿ ನೆರವಾಗುವಂತಹ ಸ್ವತ್ತಾಗಿದೆ.

 

ಹೀಗೆ ಖರೀದಿಸಿದ ಚಿನ್ನದ ಮೇಲೆ ಕಷ್ಟ ಕಾಲದಲ್ಲಿ ಸಾಲ ಕೂಡ ಪಡೆಯಬಹುದು. ಬಹುಪಾಲು ಭಾರತೀಯರಿಗೆ, ವಿಶೇಷವಾಗಿ ಕೃಷಿ ಮತ್ತು ಇತರೆ ಅನೌಪಚಾರಿಕ ವಿಭಾಗಗಳಿಂದ ಆದಾಯ ಗಳಿಸುವ ಕುಟುಂಬಗಳಿಗೆ ಸಾಲ ತೆಗೆದುಕೊಳ್ಳಲು ಚಿನ್ನ ಪ್ರಮುಖ ಮೂಲವಾಗಿದೆ.

ಯಾವುದೇ ಹೆಚ್ಚಿನ ಆದಾಯ ಬರದೆ ಇರುವ ಜನರು, ಸ್ವಂತ ಉದ್ಯೋಗ ಮಾಡುತ್ತಿರುವವರು , ಗೃಹಿಣಿಯರು ನಿರಂತರ ಆದಾಯ ಮೂಲದ ಕೊರತೆಯನ್ನ ಅನುಭವಿಸುತ್ತಿರುತ್ತಾರೆ. ಇವರಿಗೆ ದೊಡ್ಡ ವಾಣಿಜ್ಯ ಬ್ಯಾಂಕುಗಳಿಂದ ಸಾಲ ಪಡೆಯುವುದು ತುಂಬಾ ಕಷ್ಟಸಾಧ್ಯ. ಇದರ ಪರಿಣಾಮ ಇವರು ಬ್ಯಾಂಕುಗಳಲ್ಲಿ ಮನೆಯಲ್ಲಿದ್ದ ಚಿನ್ನವನ್ನಿಟ್ಟು ಸಾಲಗಳನ್ನು ಪಡೆಯುತ್ತಾರೆ.

ಇನ್ನೂ ಕಷ್ಟಕಾಲದಲ್ಲಿ ಚಿನ್ನ ಮಾರಾಟ ಮಾಡಿ ಕೂಡ ಹಣ ಪಡೆಯಲು ಸಾಧ್ಯವಾಗಿದೆ. ಆದರೆ ಜೂನ್ 15, 2021ರಿಂದ ಚಿನ್ನದ ಆಭರಣಗಳಿಗೆ, ಕಲಾಕೃತಿಗಳಿಗೆ ಹಾಲ್‌ಮಾರ್ಕ್ ಕಡ್ಡಾಯವಾಗಿದೆ. ಹೀಗಿರುವಾಗ ಚಿನ್ನದ ಮಾರಾಟ ಅಥವಾ ಅಡಮಾನಕ್ಕೆ ಹಾಲ್‌ಮಾರ್ಕ್ ಅಗತ್ಯವಿದೆಯೇ ಎಂದು ತಿಳಿಯಲು ಈ ಕೆಳಗಿನ ಮಾಹಿತಿ ಓದಿ.

ಹಾಲ್‌ಮಾರ್ಕ್ ಎಂದರೇನು? ಕಡ್ಡಾಯ ಏಕೆ ?

ಹಾಲ್‌ಮಾರ್ಕ್ ಎಂದರೇನು? ಕಡ್ಡಾಯ ಏಕೆ ?

ಚಿನ್ನದ ಹಾಲ್‌ಮಾರ್ಕ್‌ಎನ್ನುವುದು ಅಮೂಲ್ಯವಾದ ಹಳದಿ ಲೋಹದ ಶುದ್ಧತೆಯ ಪ್ರಮಾಣೀಕರಣವಾಗಿದೆ. 2016ರ ಬಿಐಎಸ್ ಕಾಯ್ದೆ ಪ್ರಕಾರ ಆಭರಣ ಮಾರಾಟಗಾರರು 14 ಕ್ಯಾರೆಟ್, 18 ಕ್ಯಾರೆಟ್ ಮತ್ತು 22 ಕ್ಯಾರೆಟ್ ಎಂಬ ಮೂರು ಅಳತೆಗಳ ಅಡಿಯಲ್ಲಿ ಚಿನ್ನವನ್ನು ಗುರುತಿಸಬೇಕಾಗಿದೆ. ಕ್ಯಾರೆಟ್ ಎನ್ನುವುದು ಚಿನ್ನದ ಪ್ರಮಾಣವನ್ನು 24 ಭಾಗಗಳಲ್ಲಿ ಮಿಶ್ರಲೋಹದಲ್ಲಿ ಸೂಚಿಸುವ ಅಳತೆಯಾಗಿದೆ. ಆದ್ದರಿಂದ 18 ಕ್ಯಾರೆಟ್ ಚಿನ್ನವು 18/24 ಭಾಗಗಳ ಚಿನ್ನವಾಗಿದೆ.

ಇನ್ನು ಚಿನ್ನದ ಆಭರಣಗಳನ್ನು ಖರೀದಿಸುವಾಗ ಗ್ರಾಹಕರು ಮೋಸ ಹೋಗದಂತೆ ನೋಡಿಕೊಳ್ಳುವುದು ಈ ಹಾಲ್‌ಮಾರ್ಕಿಂಗ್ ಕಡ್ಡಾಯ ಮಾಡಿರುವ ಉದ್ದೇಶವಾಗಿ

 

ಚಿನ್ನ ಮಾರಾಟಕ್ಕೆ ಹಾಲ್‌ಮಾರ್ಕ್ ಕಡ್ಡಾಯವೇ?

ಚಿನ್ನ ಮಾರಾಟಕ್ಕೆ ಹಾಲ್‌ಮಾರ್ಕ್ ಕಡ್ಡಾಯವೇ?

ಹಾಲ್‌ಮಾರ್ಕ್‌ ಕಾಯ್ದೆಯು ಆಭರಣ ವ್ಯಾಪಾರಿಗಳು ಗ್ರಾಹಕರಿಗೆ ಮಾರಾಟ ಮಾಡುವ ಚಿನ್ನಕ್ಕೆ ಮಾತ್ರ ಅನ್ವಯಿಸುತ್ತದೆ. ಗ್ರಾಹಕರು ತಮ್ಮ ಚಿನ್ನಾಭರಣಗಳು, ನಾಣ್ಯಗಳು ಅಥವಾ ಇನ್ಯಾವುದೇ ಚಿನ್ನದ ವಸ್ತುಗಳನ್ನು ಮಾರಾಟ ಮಾಡುವ ಮೊದಲು ಹಾಲ್‌ಮಾರ್ಕ್‌ ಮಾಡಿಸುವ ಅಗತ್ಯವಿಲ್ಲ. ಹೀಗಾಗಿ ಹಾಲ್‌ಮಾರ್ಕ್ ಇಲ್ಲದ ಆಭರಣಗಳನ್ನು ಸಂಗ್ರಹಿಸುವ ಅಥವಾ ಬಳಸಿಕೊಳ್ಳುವ ವ್ಯಕ್ತಿಗಳಿಗೆ ಇದರಿಂದ ಯಾವುದೇ ಪರಿಣಾಮವಿಲ್ಲ.

ಆದರೆ ಈ ಹಾಲ್‌ಮಾರ್ಕ್ ಇದ್ದರೆ ಗ್ರಾಹಕರು ತಮ್ಮ ಆಭರಣಗಳನ್ನು ಅದರ ಶುದ್ಧತೆಗೆ ಅನುಗುಣವಾಗಿ ಮಾರುಕಟ್ಟೆ ಮೌಲ್ಯಕ್ಕೆ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಒಂದು ವೇಳೆ ಹಾಲ್‌ಮಾರ್ಕ್ ಇಲ್ಲದಿದ್ದರೂ ಮಾರಾಟ ಮಾಡಲು ಸಾಧ್ಯವಿದೆ. ಇನ್ನೊಂದು ವಿಚಾರ ಗಮನಿಸಿ ನಿಮ್ಮ ಚಿನ್ನದಲ್ಲಿ ಹಾಲ್‌ಮಾರ್ಕ್‌ ಇಲ್ಲ ಎಂದು ಆಭರಣ ವ್ಯಾಪಾರಿ ಚಿನ್ನ ವಿನಿಮಯ ಮಾಡಿಕೊಳ್ಳಲು ನಿರಾಕರಿಸಿದರೆ ಗ್ರಾಹಕರು ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬಹುದು.

 

ಹಾಲ್‌ಮಾರ್ಕ್ ಇಲ್ಲದೆ ಚಿನ್ನ ಅಡವಿಡಬಹುದೇ?
 

ಹಾಲ್‌ಮಾರ್ಕ್ ಇಲ್ಲದೆ ಚಿನ್ನ ಅಡವಿಡಬಹುದೇ?

ಚಿನ್ನವನ್ನು ಅಡವಿಡುವಾಗ ಹಾಲ್‌ಮಾರ್ಕ್‌ ಕಡ್ಡಾಯವಿಲ್ಲ. ಹಾಲ್‌ಮಾರ್ಕ್‌ಗೂ ಚಿನ್ನದ ಸಾಲಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಚಿನ್ನದ ಆಭರಣಗಳ ಅಡಮಾನಕ್ಕೆ ಮೊದಲು ವ್ಯಾಪಾರಿಗಳು ಚಿನ್ನದ ಪರಿಶುದ್ಧತೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಿರಿ. ಏಕೆಂದರೆ ಚಿನ್ನದ ಶುದ್ಧತೆ ಆಧರಿಸಿ ಮತ್ತು ಪ್ರಸ್ತುತ ಮಾರುಕಟ್ಟೆ ಬೆಲೆಗೆ ಆಧರಿಸಿ ಚಿನ್ನದ ಸಾಲ ನೀಡಲಾಗುತ್ತದೆ.

ಒಂದು ವೇಳೆ ನಿಮ್ಮ ಆಭರಣಗಳಿಗೆ ಹಾಲ್‌ಮಾರ್ಕ್ ಇದ್ದರೆ ಅದನ್ನು ಹೆಚ್ಚುವರಿ ಗುಣಮಟ್ಟದ ಭರವಸೆ ಎಂದು ವ್ಯಾಪಾರಿಗಳು ಪರಿಗಣಿಸುತ್ತಾರೆ. ಹೀಗಾಗಿ ಚಿನ್ನದ ವಿರುದ್ಧ ಸಾಲ ನೀಡುವ ಮೊದಲು ಅದರ ಗುಣಮಟ್ಟ ಮತ್ತು ಪ್ರಮಾಣವನ್ನು ಮೌಲ್ಯಮಾಪನ ಮಾಡುತ್ತಾರೆ.

 

ಹಾಲ್‌ಮಾರ್ಕ್‌ನಿಂದ ವಿನಾಯಿತಿ ಪಡೆದ ವಸ್ತುಗಳು ಯಾವುವು?

ಹಾಲ್‌ಮಾರ್ಕ್‌ನಿಂದ ವಿನಾಯಿತಿ ಪಡೆದ ವಸ್ತುಗಳು ಯಾವುವು?

ಕೈಗಡಿಯಾರಗಳು, ಫೌಂಟೆನ್ ಪೆನ್ನುಗಳು ಮತ್ತು ಕೆಲವು ರೀತಿಯ ಆಭರಣಗಳು, ಪೋಲ್ಕಿ ಮತ್ತು ಜಾದೌಗಳನ್ನು ಅಗತ್ಯವಾದ ಚಿನ್ನದ ಹಾಲ್‌ಮಾರ್ಕಿಂಗ್‌ನಿಂದ ವಿನಾಯಿತಿ ನೀಡಲಾಗಿದೆ.

ವಿದೇಶಿ ಖರೀದಿದಾರರಿಗೆ ಅಗತ್ಯವಿರುವ ಯಾವುದೇ ನಿರ್ದಿಷ್ಟತೆಗೆ ಅನುಗುಣವಾದ , ಎರಡು ಗ್ರಾಂಗಳಿಗಿಂತ ಕಡಿಮೆ ತೂಕದ ಲೇಖನಗಳು, ವೈದ್ಯಕೀಯ, ದಂತ, ಪಶುವೈದ್ಯಕೀಯ, ವೈಜ್ಞಾನಿಕ ಅಥವಾ ಕೈಗಾರಿಕಾ ಉದ್ದೇಶಗಳಿಗಾಗಿ ಉದ್ದೇಶಿಸಲಾದ ಲೇಖನಗಳು, ಚಿನ್ನದ ದಾರದಿಂದ ಮಾಡಿದ ಲೇಖನಗಳು, ಯಾವುದೇ ಆಕಾರದಲ್ಲಿರುವ ಚಿನ್ನದ ಬೆಳ್ಳಿ , ಪ್ಲೇಟ್, ಶೀಟ್, ಫಾಯಿಲ್, ರಾಡ್, ವೈರ್, ಸ್ಟ್ರಿಪ್, ಟ್ಯೂಬ್ ಅಥವಾ ನಾಣ್ಯವನ್ನು ಅಧಿಸೂಚನೆಯಿಂದ ವಿನಾಯಿತಿ ನೀಡಲಾಗಿದೆ. ಅಪೂರ್ಣವಾದ ಲೇಖನಗಳು, ಹಾಗೆಯೇ ರಫ್ತು ಮಾಡುವ ಲೇಖನಗಳು ಹಾಲ್‌ಮಾರ್ಕ್ ಮಾಡುವ ಅವಶ್ಯಕತೆಯಿಂದ ಮುಕ್ತವಾಗಿವೆ.

 

ಚಿನ್ನದ ಹಾಲ್‌ಮಾರ್ಕ್‌ಗೆ ಎಷ್ಟು ಖರ್ಚಾಗುತ್ತದೆ?

ಚಿನ್ನದ ಹಾಲ್‌ಮಾರ್ಕ್‌ಗೆ ಎಷ್ಟು ಖರ್ಚಾಗುತ್ತದೆ?

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ವೆಬ್‌ಸೈಟ್‌ನ ಪ್ರಕಾರ, ಬಿಐಎಸ್ ಮಾನ್ಯತೆ ಪಡೆದ ಆಭರಣಕಾರರು ಪಾವತಿಸಬೇಕಾದ ಚಿನ್ನಾಭರಣಗಳು / ಕಲಾಕೃತಿಗಳಿಗೆ ಹಾಲ್‌ಮಾರ್ಕಿಂಗ್ ಶುಲ್ಕಗಳು ಪ್ರತಿ ಆಭರಣಕ್ಕೆ 35 ರೂ. ನಷ್ಟಿದ್ದು, ಒಂದು ಸರಕುಗೆ ಕನಿಷ್ಠ ಸೇವೆಗಳ ತೆರಿಗೆ ಮತ್ತು ಅನ್ವಯವಾಗುವ ಇತರ ಸುಂಕಗಳು ಹೆಚ್ಚುವರಿವಾಗಿ 200 ರೂ. ಅನ್ವಯಿಸುತ್ತದೆ.

ಆಭರಣಗಳ ತೂಕ ಏನೇ ಇರಲಿ, ಹಾಲ್‌ಮಾರ್ಕಿಂಗ್ ಬೆಲೆಗಳು ಚಿನ್ನದ ಆಭರಣಗಳಿಗೆ ಪ್ರತಿ ತುಂಡಿಗೆ 35 ಪಾಯಿ ಪ್ಲಸ್‌ ಜಿಎಸ್‌ಟಿ ಮತ್ತು ಬೆಳ್ಳಿ ಆಭರಣಗಳಿಗೆ 25 ರೂಪಾಯಿ ಪ್ಲಸ್‌ ಜಿಎಸ್‌ಟಿ ಆಗಿದೆ.

 

ಚಿನ್ನದ ನಾಣ್ಯಗಳಿಗೆ ಹಾಲ್‌ಮಾರ್ಕ್ ಕಡ್ಡಾಯವೇ?

ಚಿನ್ನದ ನಾಣ್ಯಗಳಿಗೆ ಹಾಲ್‌ಮಾರ್ಕ್ ಕಡ್ಡಾಯವೇ?

ಕೇವಲ 14 ಕ್ಯಾರೆಟ್, 18 ಕ್ಯಾರೆಟ್, ಮತ್ತು 22 ಕ್ಯಾರೆಟ್ ಚಿನ್ನದ ಆಭರಣಗಳ ಮಾರಾಟಕ್ಕೆ ಹಾಲ್‌ಮಾರ್ಕ್ ಕಡ್ಡಾಯವಾಗಿದೆ. ಚಿನ್ನದ ಆಭರಣಗಳು ಮತ್ತು ಆ್ಯಂಟಿಕ್‌ಗಳಿಗೆ ಇದು ಅನ್ವಯಿಸುತ್ತದೆ. ಆದರೆ 999/995 ರ ಉತ್ಕೃಷ್ಟತೆಯೊಂದಿಗೆ ಚಿನ್ನದ ಹಾಗೂ ಬೆಳ್ಳಿಯ ನಾಣ್ಯಗಳನ್ನು ಬಿಐಎಸ್-ಅನುಮೋದಿತ ಸಂಸ್ಕರಣಾಗಾರಗಳು / ಮಿಂಟ್‌ಗಳು ಗುರುತಿಸಲು ಅನುಮತಿಸಲಾಗಿದೆ. ಹೀಗಾಗಿ ಬಿಐಎಸ್ ಪರವಾನಗಿ ಪಡೆದ ಸಂಸ್ಕರಣಾಗಾರಗಳು / ಮಿಂಟ್‌ಗಳ ಪಟ್ಟಿಯನ್ನು ಬಿಐಎಸ್ ವೆಬ್‌ಸೈಟ್‌ನಲ್ಲಿ ಹಾಲ್‌ಮಾರ್ಕಿಂಗ್ ವಿಭಾಗದಲ್ಲಿ ಕಾಣಬಹುದು.

English summary

Is Gold HallMark Required When Pledging Or Selling Of Gold Jewellery

Hallmark is mandatory for gold jewelery and artwork from June 15, 2021. So find out if you need a Hallmark for gold sale or pledge
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X