ಚಿನ್ನದ ಬೆಲೆ 10 ಗ್ರಾಮ್ ಗೆ ಕನಿಷ್ಠ ಬೆಲೆ 50,000 ರುಪಾಯಿ ಎಂಬುದು ಫಿಕ್ಸ್ ಆಗಿ ಹೋಯಿತಾ?

ಇನ್ನೇನು ಅಮೆರಿಕ ಅಧ್ಯಕ್ಷೀಯ ಚುನಾವಣೆ ಎದುರಿಗೆ ಇರುವಂತೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೋವಿಡ್ -19 ಪಾಸಿಟಿವ್ ಎಂಬ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರೊಂದಿಗೆ ಜಾಗತಿಕ ಅನಿಶ್ಚಿತತೆ ಮತ್ತೂ ಹೆಚ್ಚಾಗಿದೆ. ಮತ್ತೊಂದು ಕಡೆ ಚಿನ್ನದ ಬೆಲೆ ಮತ್ತೆ ಏರು ಗತಿಯತ್ತ ಮುಖ ಮಾಡಿದೆ.

ಭಾರತದ ಆಭರಣ ಮಾರಾಟಗಾರರು ಹೇಳುವಂತೆ, ಈಗ ಏರುತ್ತಿರುವ ಚಿನ್ನದ ಬೆಲೆಯು ಅಲ್ಪಾವಧಿಯಲ್ಲಿ ಮಾತ್ರ ಚಿನ್ನದ ಆಭರಣಗಳನ್ನು ಖರೀದಿ ಮಾಡುವುದರಿಂದ ತಡೆಯಲು ಸಾಧ್ಯ. ಆದರೆ ಚಿನ್ನವು ಮುಂಬರುವ ಹಬ್ಬದ ಋತುವಿನಲ್ಲಿ ನಿಜವಾದ ಖರೀದಿದಾರರನ್ನು ಮಾರುಕಟ್ಟೆಗೆ ಕರೆತರುತ್ತದೆ. ಏಕೆಂದರೆ ಬೆಲೆ ಏರಿಕೆಯ ವೇಳೆ ಚಿನ್ನವನ್ನು ಖರೀದಿಸಲು ಆ ನಿಜವಾದ ಖರೀದಿದಾರರು ಮನಸ್ಸು ಮಾಡುತ್ತಾರೆ. ತಾವು ಖರೀದಿಸಿದ ನಂತರ ಕೂಡ ಏರಿಕೆ ಆಗುವ ಆಸ್ತಿ ಅಂತಲೇ ಪರಿಗಣಿಸುತ್ತಾರೆ.

ಭಾರತವು ವಾರ್ಷಿಕ ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಗ್ರಾಹಕ ದೇಶವಾಗಿದೆ. 800ರಿಂದ 850 ಟನ್ ಗಳಷ್ಟು ವಾರ್ಷಿಕ ಬಳಕೆ ಮಾಡುವುದರೊಂದಿಗೆ ಭಾರತವು ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಗ್ರಾಹಕ ದೇಶವಾಗಿದೆ. ಈ ವರ್ಷ, ಚಿನ್ನವು ಗ್ರಾಹಕರಿಗೆ ಮತ್ತು ಹೂಡಿಕೆದಾರರಿಗೆ 25 ಪರ್ಸೆಂಟ್ ಗಿಂತ ಹೆಚ್ಚಿನ ಲಾಭವನ್ನು ನೀಡಿದೆ.

50,000 ರುಪಾಯಿಗಿಂತ ಕೆಳಗೆ ಇಳಿದಿತ್ತು

50,000 ರುಪಾಯಿಗಿಂತ ಕೆಳಗೆ ಇಳಿದಿತ್ತು

ಕಳೆದ ತಿಂಗಳು ಸೆಪ್ಟೆಂಬರ್ ನಲ್ಲಿ ಚಿನ್ನದ ಬೆಲೆ 10 ಗ್ರಾಮ್ ಗೆ 50,000 ರುಪಾಯಿಗಿಂತ ಕೆಳಗೆ ಇಳಿದಿತ್ತು. ಆದರೆ ಗುರುವಾರ (ಅಕ್ಟೋಬರ್ 1, 2020), ಸ್ಪಾಟ್ ಮಾರುಕಟ್ಟೆಯಲ್ಲಿ ಮತ್ತೆ 10 ಗ್ರಾಮ್ ಗೆ 50,413 ರುಪಾಯಿ ಇತ್ತು. "ಎಂಟು ವಾರಗಳ ನಂತರ, ಚಿನ್ನದ ಬೆಲೆಯು ಮತ್ತೆ ವೇಗವನ್ನು ಪಡೆದುಕೊಂಡಿದೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆಯು ಹೆಚ್ಚಾಗಿದ್ದರಿಂದ ಈ ಬಾರಿ ಬೆಲೆ ಏರಿಕೆಯು ಮತ್ತಷ್ಟು ವಿಸ್ತರಣೆ ಆಗಲಿದೆ. ಯುಎಸ್ ಅಧ್ಯಕ್ಷರಿಗೆ ಕೋವಿಡ್ -19 ಪಾಸಿಟಿವ್ ಆದ ಮೇಲೆ ಹೂಡಿಕೆದಾರರು ಅಪಾಯ ಇಲ್ಲದ ಹೂಡಿಕೆ ಯಾವುದು ಎಂಬುದರ ಕಡೆಗೆ ಚಿತ್ತ ಹರಿಸಿದ್ದಾರೆ. ಅಷ್ಟೇ ಅಲ್ಲ, ಯುಎಸ್ ಚುನಾವಣೆಗೆ ಮುಂಚಿತವಾಗಿ ಹಾಗೂ ಇಡೀ ಜಗತ್ತಿನಲ್ಲಿ ಆರ್ಥಿಕ ಅನಿಶ್ಚಿತತೆ ಮಧ್ಯೆ ಚಿನ್ನವು ಉತ್ತಮ ಹೂಡಿಕೆ ಎಂದು ಭಾವಿಸುತ್ತಾರೆ," ಎಂದು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಅಧ್ಯಕ್ಷ ಅಹಮ್ಮದ್ ಎಂ. ಪಿ. ಹೇಳಿದ್ದಾರೆ.

ಆಭರಣ ಮಾರಾಟದ ಮೇಲೆ ಪರಿಣಾಮ

ಆಭರಣ ಮಾರಾಟದ ಮೇಲೆ ಪರಿಣಾಮ

ಕೊರೊನಾ ಬಿಕ್ಕಟ್ಟಿನ ಮಧ್ಯೆ ಹೂಡಿಕೆಗೆ ಚಿನ್ನವೇ ಸುರಕ್ಷಿತ ಎಂಬ ಭಾವನೆ ಹೂಡಿಕೆದಾರರಲ್ಲಿ ಬಲಗೊಂಡಿದೆ. ಇದು ಆಭರಣ ಮಾರಾಟದ ಮೇಲೂ ಪರಿಣಾಮ ಬೀರುತ್ತದೆ. "ಚಿನ್ನದ ಬೆಲೆ ಏರಿಕೆಯು ಆಭರಣಗಳ ಮಾರಾಟದ ಮೇಲೆ ಅಲ್ಪಾವಧಿಯಲ್ಲಿ ಪರಿಣಾಮ ಬೀರಿ, ಖರೀದಿ ಮಾಡುವುದರಿಂದ ತಡೆಯಬಹುದು. ಆದರೆ ಗ್ರಾಹಕರು ಹೊಸ ಬೆಲೆಯ ಮಟ್ಟಕ್ಕೆ ಒಗ್ಗಿಕೊಂಡ ನಂತರ, ಮುಂಬರುವ ಹಬ್ಬ ಮತ್ತು ಮದುವೆ ಋತುವಿನಲ್ಲಿ ಚಿನ್ನದ ಆಭರಣ ಮಾರಾಟವು ಮತ್ತಷ್ಟು ವೇಗವನ್ನು ಪಡೆಯುತ್ತದೆ," ಎಂದು ಅವರು ಅಭಿಪ್ರಾಯ ಪಡುತ್ತಾರೆ. ಇತರ ಆಭರಣ ಮಾರಾಟಗಾರರು ಕೂಡ ಮಲಬಾರ್ ಅಧ್ಯಕ್ಷರ ಅಭಿಪ್ರಾಯವನ್ನೇ ಹೇಳುತ್ತಾರೆ. "ಹಬ್ಬದ ಋತುವಿನ ಆರಂಭದೊಂದಿಗೆ ಬೇಡಿಕೆ ಈಗಾಗಲೇ ಹೆಚ್ಚಾಗಿದೆ. ಚಿನ್ನದ ಬೆಲೆಯಲ್ಲಿನ ಬದಲಾವಣೆಯು ಕೆಲವು ದಿನಗಳವರೆಗೆ ಮಾರಾಟವನ್ನು ನಿಧಾನಗೊಳಿಸಬಹುದು. ಆದರೆ ಈ ಸೀಸನ್ ನಮಗೆ ಉತ್ತಮವಾಗಿ ಕಾಣುತ್ತಿದೆ," ಎಂದು ಮತ್ತೊಬ್ಬರು ಹೇಳಿದ್ದಾರೆ.

10 ಗ್ರಾಮ್ ಗೆ 50,000 ರುಪಾಯಿ ಮೂಲ ಬೆಲೆ

10 ಗ್ರಾಮ್ ಗೆ 50,000 ರುಪಾಯಿ ಮೂಲ ಬೆಲೆ

ಆಭರಣ ಮಾರಾಟಗಾರರು ಹೇಳುವಂತೆ, ಚಿನ್ನದ ಹೊಸ ಮೂಲ ಬೆಲೆಯನ್ನು10 ಗ್ರಾಮ್ ಗೆ 50,000 ರುಪಾಯಿ ಎಂದು ಗ್ರಾಹಕರೇ ನಿಶ್ಚಯಿಸಿದಂತಿದೆ. "ದೀಪಾವಳಿ ಮತ್ತು ಮುಂಬರುವ ವಿವಾಹ ಋತುವಿನಲ್ಲಿ ನಿಜವಾದ ಖರೀದಿದಾರರು ಮಾತ್ರ ಖರೀದಿಸುತ್ತಾರೆ. ಬೆಲೆಗಳು ಏರಿಕೆಯಾಗುವುದರಿಂದ ಚಿನ್ನವನ್ನು ಖರೀದಿಸಲು ಅವರನ್ನು ಇನ್ನಷ್ಟು ಉತ್ತೇಜಿಸುತ್ತದೆ ಏಕೆಂದರೆ ಚಿನ್ನವು ಏರಿಕೆ ಆಗುವ ಆಸ್ತಿಯಾಗಿದೆ. ಆದ್ದರಿಂದ, ಬೆಲೆಗಳು ಹೆಚ್ಚಾಗುವುದರಿಂದ ಮಾರಾಟದಲ್ಲಿ ಕಡಿಮೆ ಆಗಬಹುದು ಎಂದೆನಿಸುವುದಿಲ್ಲ. ಇದು ಕೋವಿಡ್ ಅನಿಶ್ಚಿತತೆಯ ಅವಧಿ. ಇದು ಬೇರೆ ರೀತಿಯಲ್ಲೂ ಕೆಲಸ ಮಾಡಬಹುದು ಮತ್ತು ಮಾರಾಟವನ್ನು ಹೆಚ್ಚಿಸಬಹುದು," ಮತ್ತೊಬ್ಬ ಆಭರಣ ಮಳಿಗೆ ಮಾಲೀಕರು ಹೇಳಿದ್ದಾರೆ. ಆದರೆ ಮಾರುಕಟ್ಟೆ ವಿಶ್ಲೇಷಕರೊಬ್ಬರು ಹೇಳುವಂತೆ, ಈಗಲೂ ಹೂಡಿಕೆದಾರರಿಗೆ ಚಿನ್ನಕ್ಕಿಂತ ಅಮೆರಿಕ ಡಾಲರ್ ಕರೆನ್ಸಿ ಮೇಲೆ ಹೂಡಿಕೆ ಮಾಡುವುದೇ ಫೇವರಿಟ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+