ಹಬ್ಬದ ಸೀಸನ್ ಮತ್ತೆ ಆರಂಭವಾಗುತ್ತಿದೆ. ಹಬ್ಬಕ್ಕಾಗಿ ಎಲ್ಲ ತಯಾರಿಗಾಗಿ ಈಗಾಗಲೇ ಜನರು ಹಣಕಾಸು ಉಳಿತಾಯ ಮಾಡಿಕೊಳ್ಳುತ್ತಿದ್ದಾರೆ. ಹಬ್ಬದ ಸೀಸನ್‌ನಲ್ಲಿ ಸಾಮಾನ್ಯವಾಗಿಯೇ ಚಿನ್ನದ ಬೇಡಿಕೆ ಅಧಿಕವಾಗಿಯೇ ಇರುತ್ತದೆ. ಅದಕ್ಕೆ ಮುಖ್ಯ ಕಾರಣ, ಹಬ್ಬದ ವೇಳೆ ಅಮೂಲ್ಯ ಲೋಹದ ಮೇಲಿನ ಹೂಡಿಕೆ ಸುರಕ್ಷಿತ ಎಂಬ ನಂಬಿಕೆಯಾಗಿದೆ.
ಆದರೆ ಈ ಹಬ್ಬದ ಸೀಸನ್‌ನಲ್ಲಿ ನೀವು ಚಿನ್ನದ ಮೇಲೆ ಹೂಡಿಕೆ ಮಾಡಬಹುದೇ?. ಚಿನ್ನದ ಬೆಲೆಯ ಬೆಳವಣಿಗೆಯನ್ನು ಪರಿಶೀಲನೆ ಮಾಡಿದಾಗ ಸೆಪ್ಟೆಂಬರ್ ಮಧ್ಯದಿಂದ ಚಿನ್ನದ ಬೆಲೆಗಳು 2 ತಿಂಗಳ ಕನಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ. ಈ ಹಬ್ಬದ ಸೀಸನ್‌ನಲ್ಲಿ ನೀವು ಚಿನ್ನದ ಮೇಲೆ ಹೂಡಿಕೆ ಮಾಡಬೇಕೇ ಅಥವಾ ಬೇಡವೇ? ಇಲ್ಲಿದೆ ವಿವರ.... ಮುಂದೆ ಓದಿ..

ತಜ್ಞರು ಏನು ಹೇಳುತ್ತಾರೆ?
"ಹಳದಿ ಲೋಹವನ್ನು ಖರೀದಿದಾರರು ಯಾವ ರೀತಿಯಾಗಿ ನೋಡುತ್ತಾರೆ ಎಂಬುದರಲ್ಲಿ ಬದಲಾವಣೆ ಕಂಡು ಬಂದಿದೆ. ಜನರು ಈಗ ಚಿನ್ನವನ್ನು ಹೂಡಿಕೆಯಿಂದ ದೃಷ್ಟಿಯಿಂದ ಖರೀದಿ ಮಾಡುವ ಬದಲಾಗಿ ಚಿನ್ನದ ಆಭರಣ ಧರಿಸುವುದು ಫ್ಯಾಶನ್ ಎಂದು ಖರೀದಿ ಮಾಡುವ ಮನಸ್ಥಿತಿಗೆ ಬದಲಾಗಿದ್ದಾರೆ," ಎಂದು ಕಾಮಾ ಜ್ಯುವೆಲರಿಯ ಸಂಸ್ಥಾಪಕ ಮತ್ತು ಎಂಡಿ ಕಾಲಿನ್ ಶಾ ಹೇಳುತ್ತಾರೆ.
"ಈ ನಡುವೆ ಹೆಚ್ಚುತ್ತಿರುವ ಆದಾಯದ ಮಟ್ಟ ಮತ್ತು ಖರೀದಿದಾರ ವರ್ಗದಲ್ಲಿ ಕೊಳ್ಳುವ ಶಕ್ತಿಯ ಹೆಚ್ಚಳದ ಜೊತೆಗೆ ಈ ಹಬ್ಬದ ಸೀಸನ್‌ನಲ್ಲಿ ಭರ್ಜರಿಯಾಗಿ ಚಿನ್ನದ ಖರೀದಿ ನಡೆಯಬಹುದು ಎಂಬ ನಿರೀಕ್ಷೆಯನ್ನು ನಾವು ಹೊಂದಿದ್ದೇವೆ," ಎಂದು ಕೂಡಾ ಕಾಮಾ ಜ್ಯುವೆಲರಿಯ ಸಂಸ್ಥಾಪಕ ತಿಳಿಸಿದರು.
ಗಂಗಾನಗರ ಕಮಾಡಿಟಿ ಲಿಮಿಟೆಡ್‌ನ (ಜಿಸಿಎಲ್) ಅಸೋಸಿಯೇಟ್ ವಿಪಿ ಅಮಿತ್ ಖರೆ ಪ್ರಕಾರ ಹಳದಿ ಲೋಹಕ್ಕೆ ನವೆಂಬರ್‌ವರೆಗೆ ಹೆಚ್ಚಿನ ಬೇಡಿಕೆ ಇರುತ್ತದೆ. "ಸಾಮಾನ್ಯವಾಗಿಯೇ ಭಾರತೀಯರು, ಹಬ್ಬಗಳ ಸಮಯದಲ್ಲಿ, ಆಭರಣ ಮಳಿಗೆಗಳಿಗೆ ಹೋಗುತ್ತಾರೆ. ಹಬ್ಬದ ಸೀಸನ್‌ನಲ್ಲಿ ಸಾಮಾನ್ಯವಾಗಿಯೇ ಚಿನ್ನದ ಬೇಡಿಕೆ ಏರಿಕೆಯಾಗುತ್ತದೆ," ಎಂದು ಅಮಿತ್ ಖರೆ ಹೇಳಿದ್ದಾರೆ.
"ಹಿಂದಿನ ಐದು ವರ್ಷಗಳ ಮಾದರಿಯನ್ನು ನಾವು ನೋಡಿದಾಗ, ಚಿನ್ನವು ಸಾಮಾನ್ಯವಾಗಿಯೇ ಆಗಸ್ಟ್- ಸೆಪ್ಟೆಂಬರ್ ಕೆಳಮಟ್ಟದಿಂದ ಮೇಲಕ್ಕೆ ಏರುತ್ತದೆ. ಈ ವರ್ಷವೂ ಕೂಡಾ ನಾವು ಅದೇ ನಿರೀಕ್ಷೆಯನ್ನು ಹೊಂದಿದ್ದೇವೆ," ಎಂದು ಅಮಿತ್ ಖರೆ ಅಭಿಪ್ರಾಯಿಸಿದ್ದಾರೆ.
ಈ ನಡುವೆ ಕ್ಯಾಷ್‌ಇ ಸಿಒಒ, ಸಿಟಿಒ ಯಶೋರಾಜ್ ತ್ಯಾಗಿ, "ಹಬ್ಬಗಳು ಸಾಮಾನ್ಯವಾಗಿಯೇ ಜನರು ಹೆಚ್ಚು ವೆಚ್ಚಗಳನ್ನು ಮಾಡುವ ಸಮಯವಾಗಿದೆ. ಜನರು ತಮ್ಮ ಆರ್ಥಿಕ ಸ್ಥಿರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಚಿನ್ನದಂತಹ ಸ್ವತ್ತುಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ," ಎಂದು ಹೇಳಿದರು.
ಚಿನ್ನದಲ್ಲಿ ಹೂಡಿಕೆ ಮಾಡುವುದು ಹೇಗೆ?
ಚಿನ್ನದ ಮೇಲೆ ಬೇರೆ ಬೇರೆ ರೀತಿಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಆಭರಣಗಳು, ನಾಣ್ಯಗಳು, ಬಾರ್‌ಗಳನ್ನು ಖರೀದಿ ಮಾಡುವ ಮೂಲಕ ಹೂಡಿಕೆ ಮಾಡಬಹುದು. ಇದನ್ನು ಹೊರತುಪಡಿಸಿ ನೀವು ಗೋಲ್ಡ್ ಎಕ್ಸ್‌ಚೇಂಜ್ ಟ್ರೇಡ್ ಫಂಡ್, ಗೋಲ್ಡ್ ಫಂಡ್, ಸವರನ್ ಗೋಲ್ಡ್ ಬಾಂಡ್ ಯೋಜನೆ ಮೊದಲಾದವುಗಳ ರೂಪದಲ್ಲಿ ಹೂಡಿಕೆ ಮಾಡಬಹುದು. ಇನ್ನು ಮಾಧ್ಯಮಗಳ ಪ್ರಕಾರ ದೇಶದಲ್ಲಿ ಅತೀ ಅಧಿಕ ಹೂಡಿಕೆ ವಿಧಾನವೇ ಲೋಹಗಳಾಗಿದೆ.
ದೇಶದಲ್ಲಿ ಚಿನ್ನದ ದರಗಳ ಮೇಲೆ ಪ್ರಭಾವ ಬೀರುವ ಅಂಶಗಳು
ಚಿನ್ನದ ಮೇಲೆ ಪ್ರಭಾವ ಬಿರುವ ಪ್ರಮುಖ ಅಂಶವೆಂದರೆ ಜಾಗತಿಕ ಮಾರುಕಟ್ಟೆಯಲ್ಲಿ ಲೋಹದ ಬೆಲೆ ಆಗಿದೆ. ಅಂತರಾಷ್ಟ್ರೀಯ ದರಗಳು ಬದಲಾದಾಗ ಭಾರತದಲ್ಲಿಯೂ ದರಗಳು ಬದಲಾಗುತ್ತವೆ. ಇನ್ನು ದೇಶದಲ್ಲಿ ಸ್ಥಳೀಯವಾಗಿ ಹಬ್ಬದ ಸೀಸನ್‌ಗಳು ಕೂಡಾ ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುತ್ತದೆ.


Click it and Unblock the Notifications