ಬೆಲೆ ಅಸ್ಥಿರ: ಚಿನ್ನ ಖರೀದಿಗೆ ಇದು ಸಕಾಲವೇ?

ಈಗಾಗಲೇ ಭಾರತದಲ್ಲಿ ಆರ್‌ಬಿಐ ರೆಪೋ ಯುಎಸ್‌ನಲ್ಲಿ ಬಡ್ಡಿದರವನ್ನು ಹೆಚ್ಚಳ ಮಾಡುವ ನಿರೀಕ್ಷೆ ಇದೆ. ಈ ನಡುವೆ ಕಳೆದ ಒಂದು ತಿಂಗಳಲ್ಲಿ ಚಿನ್ನದ ಬೆಲೆಗಳು ಅಸ್ಥಿರವಾಗಿವೆ. ಯುಎಸ್‌ ಫೆಡರಲ್ ರಿಸರ್ವ್ ತನ್ನ ಪ್ರಮುಖ ಬಡ್ಡಿದರವನ್ನು ಮೇ 4 ರಂದು 50 ಮೂಲಾಂಶಗಳಿಂದ ಹೆಚ್ಚಿಸಿದೆ. ನೂರು ಬೇಸಿಸ್ ಪಾಯಿಂಟ್‌ಗಳು ಒಂದು ಶೇಕಡಾ ಪಾಯಿಂಟ್‌ಗೆ ಸಮಾನವಾಗಿರುತ್ತದೆ. ಈ ನಡುವೆ ಚಿನ್ನದ ಖರೀದಿಗೆ ಇದು ಸಕಾಲವೇ ಎಂಬ ಪ್ರಶ್ನೆ ಇದೆ.

ರಷ್ಯಾ-ಉಕ್ರೇನ್ ಸಂಘರ್ಷದ ನಡುವೆಯೂ ಚಿನ್ನದ ಬೆಲೆ ಅಸ್ಥಿರವಾಗಿದೆ. ಆದರೆ ಚಿನ್ನವನ್ನು ಆಸ್ತಿ ವರ್ಗವಾಗಿ ನಿರ್ಲಕ್ಷಿಸಬೇಕೆಂದು ಇದರ ಅರ್ಥವಲ್ಲ. 2018 ರಲ್ಲಿ ಚಿನ್ನದ ಬೆಲೆಗಳು ಏರಲು ಪ್ರಾರಂಭಿಸಿದವು. ಕೊರೊನಾ ಸಾಂಕ್ರಾಮಿಕದ ಬಳಿಕ ಜಾಗತಿಕ ಆರ್ಥಿಕತೆಯು ಲಾಕ್ ಡೌನ್ ಆದ ನಂತರ ಚಿನ್ನದ ಬೆಲೆಯು ಏರಿತು. ಡಿಸೆಂಬರ್ 2019 ರಿಂದ ಆಗಸ್ಟ್ 2020 ರವರೆಗೆ, ಭಾರತದ ಬಹು ಸರಕು ವಿನಿಮಯ ಕೇಂದ್ರದಲ್ಲಿ ಚಿನ್ನದ ಬೆಲೆಗಳು ಶೇಕಡಾ 49 ರಷ್ಟು ಹೆಚ್ಚಾಗಿದೆ.

ರಷ್ಯಾ-ಉಕ್ರೇನ್ ಯುದ್ಧದ ನಂತರ ಚಿನ್ನದ ಬೆಲೆಯಲ್ಲಿ ಉತ್ತಮ ಓಟ ಮುಂದುವರಿಯುತ್ತದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಆದರೆ, ಅದು ಆಗಲಿಲ್ಲ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಚಿನ್ನದ ಬೆಲೆ ಏರಿಳಿತ ಕಂಡಿದೆ. ಯುಎಸ್ ಫೆಡ್ ದರ ಹೆಚ್ಚಳವು ನಿರೀಕ್ಷಿತ ಮಾರ್ಗಗಳಲ್ಲಿ ಬಂದ ನಂತರ ಚಿನ್ನದ ಬೆಲೆಗಳು ಸ್ವಲ್ಪ ಏರಿಕೆ ಕಂಡಿದೆ.

 ಭಾರತದಲ್ಲಿ ಕುಸಿದ ಚಿನ್ನದ ಬೇಡಿಕೆ

ಭಾರತದಲ್ಲಿ ಕುಸಿದ ಚಿನ್ನದ ಬೇಡಿಕೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನಕ್ಕೆ 1,890 ಡಾಲರ್‌ನಂತೆ ವಹಿವಾಟು ನಡೆಸಿದರೆ ಭಾರತದಲ್ಲಿ ಎಂಸಿಎಕ್ಸ್‌ನಲ್ಲಿ 10 ಗ್ರಾಂಗೆ 51,096 ರೂಪಾಯಿ ಆಗಿದೆ. ಆದರೆ ಭಾರತದಲ್ಲೂ ಚಿನ್ನದ ಬೇಡಿಕೆ ಕಡಿಮೆಯಾಗಿದೆ. ಮಾರ್ಚ್ 31 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಭಾರತದ ಚಿನ್ನದ ಆಭರಣಗಳ ಬೇಡಿಕೆಯು 26 ಪ್ರತಿಶತದಷ್ಟು ಕುಸಿದಿದೆ. ಭಾರತದಲ್ಲಿ ಚಿನ್ನದ ಬೇಡಿಕೆ 94 ಟನ್‌ಗಳಿಗೆ ತಲುಪಿದೆ. 2010 ರಿಂದ, ಸಾಂಕ್ರಾಮಿಕ ಅವಧಿಗಳನ್ನು ಹೊರತುಪಡಿಸಿ, ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆಯು 100 ಟನ್‌ಗಳಿಗಿಂತ ಕಡಿಮೆಯಿರುವುದು ಇದು ಮೂರನೇ ಬಾರಿಯಾಗಿದೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್‌ನಲ್ಲಿ ಭಾರತದ ಪ್ರಾದೇಶಿಕ ಸಿಇಒ ಸೋಮಸುಂದರಂ ಪಿಆರ್ ಮಾತನಾಡಿ , "ಭಾರತೀಯ ಗ್ರಾಹಕರ ಕಾರ್ಯತಂತ್ರದ ಸಮಯ ಮೀರಿದೆ," ಎಂದು ಹೇಳಿದ್ದಾರೆ. "ಕಡಿಮೆ ಮಂಗಳಕರ ದಿನಗಳು, ಚಿನ್ನದ ಬೆಲೆಯಲ್ಲಿ ತೀಕ್ಷ್ಣವಾದ ಏರಿಕೆ, ಕಡಿಮೆ ಮದುವೆಗಳು ಮತ್ತು ಚಿಲ್ಲರೆ ಬೇಡಿಕೆಯಲ್ಲಿ ವಿರಾಮವನ್ನು ಈ ಬೇಡಿಕೆ ಕುಸಿತ ಸೂಚಿಸುತ್ತದೆ. ಬೆಲೆ ತಿದ್ದುಪಡಿಯ ನಿರೀಕ್ಷೆಯಲ್ಲಿ ಜನರು ಚಿನ್ನದ ಖರೀದಿಯನ್ನು ಮುಂದೂಡುತ್ತವೆ," ಎಂದು ಹೇಳಿದ್ದಾರೆ.

 ಚಿನ್ನದ ಬೇಡಿಕೆ ಹೆಚ್ಚಾಗುವ ಸಾಧ್ಯತೆ

ಚಿನ್ನದ ಬೇಡಿಕೆ ಹೆಚ್ಚಾಗುವ ಸಾಧ್ಯತೆ

ಮುಂದೆ ಚಿನ್ನದ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಸುದ್ದಿ ವರದಿಗಳ ಪ್ರಕಾರ, ಅಕ್ಷಯ ತೃತೀಯ ದಿನದಂದು ಚಿನ್ನದ ಮಾರಾಟವು ಕೋವಿಡ್ ಪೂರ್ವದ ಸಮಯದಲ್ಲಿ ದಾಖಲಾದ ಮಾರಾಟಕ್ಕಿಂತ ಶೇಕಡ 25ರಷ್ಟು ಅಧಿಕವಾಗಿದೆ. ಹಣದುಬ್ಬರ ಮತ್ತು ಷೇರು ಮಾರುಕಟ್ಟೆಗಳಲ್ಲಿನ ಅಸ್ಥಿರತೆ ಭಯಗಳು ಚಿನ್ನದ ಬೆಲೆಗಳನ್ನು ಬೆಂಬಲಿಸಬಹುದು ಎಂದು ತಜ್ಞರು ಹೇಳಿದ್ದಾರೆ. ನಿರೀಕ್ಷಿತ ವೇಗಕ್ಕಿಂತ ನಿಧಾನಗತಿಯಲ್ಲಿ ಬಡ್ಡಿದರಗಳನ್ನು ಹೆಚ್ಚಿಸಿದರೆ ಅಥವಾ ಬಡ್ಡಿದರ ಹೆಚ್ಚಳದಿಂದ ಆರ್ಥಿಕ ಬೆಳವಣಿಗೆಗೆ ಅಡ್ಡಿಯುಂಟಾದರೆ, ಚಿನ್ನವನ್ನು ಅಧಿಕ ಮಂದಿ ಕೊಂಡುಕೊಳ್ಳಬಹುದು ಎಂದು ತಜ್ಞರು ಹೇಳಿದ್ದಾರೆ. "ಹಣದುಬ್ಬರ ಮತ್ತು ಚಂಚಲತೆಯ ಸಮಯದಲ್ಲಿ, ಚಿನ್ನದ ಮೌಲ್ಯವು ಹೆಚ್ಚಾಗುತ್ತದೆ," ಎಂದು ಟ್ರೇಡ್‌ಸ್ಮಾರ್ಟ್‌ನ ಅಧ್ಯಕ್ಷ ವಿಜಯ್ ಸಿಂಘಾನಿಯಾ ಹೇಳಿದರು.

 ಚಿನ್ನವನ್ನು ಖರೀದಿಸಬಹುದೇ?

ಚಿನ್ನವನ್ನು ಖರೀದಿಸಬಹುದೇ?

ಎಲ್ಲಾ ಸಮಯದಲ್ಲೂ ಸುಮಾರು 5-10 ಪ್ರತಿಶತದಷ್ಟು ಚಿನ್ನದಲ್ಲಿ ಹೂಡಿಕೆ ಮಾಡುವುದು ಉತ್ತಮವಾಗಿದೆ. ಒಂದು ಆಸ್ತಿಯಾಗಿ ನಾವು ಎಲ್ಲಾ ಸಮಯದಲ್ಲೂ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಚಿನ್ನದಿಂದ ದೀರ್ಘಾವಧಿಯ ಆದಾಯ ಇದ್ದರೂ ಜನರು ಅದಕ್ಕೆ ಹೂಡಿಕೆ ಮಾಡುತ್ತಿಲ್ಲ ಎಂದು ಕ್ವಾಂಟಮ್ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಯ ಮುಖ್ಯ ಹೂಡಿಕೆ ಅಧಿಕಾರಿ ಚಿರಾಗ್ ಮೆಹ್ತಾ ಹೇಳಿದ್ದಾರೆ. ಚಿನ್ನದ ಮೇಲೆ ಹೂಡಿಕೆ ಮಾಡಲು ಸಲಹೆ ನೀಡಿದ್ದಾರೆ.

 ಚಿನ್ನದ ಮೇಲೆ ಎಷ್ಟು ಹೂಡಿಕೆ ಮಾಡಬಹುದು?

ಚಿನ್ನದ ಮೇಲೆ ಎಷ್ಟು ಹೂಡಿಕೆ ಮಾಡಬಹುದು?

ಲೋಹವು ಒಟ್ಟಾರೆ ಬಂಡವಾಳದ ಶೇಕಡಾ 5 ಕ್ಕಿಂತ ಕಡಿಮೆಯಿದ್ದರೆ ಚಿನ್ನವನ್ನು ಖರೀದಿಸುವುದು ಒಳ್ಳೆಯದು. 10 ಪ್ರತಿಶತದಷ್ಟು ಬಂಡವಾಳವನ್ನು ಚಿನ್ನಕ್ಕೆ ಹೂಡಿಕೆ ಮಾಡಬಹುದು. ಆದರೆ ಚಿನ್ನದ ಇಟಿಎಫ್, ಚಿನ್ನದ ಉಳಿತಾ ನಿಧಿ, ಚಿನ್ನದ ಫಂಡ್, ಸವರನ್ ಗೋಲ್ಡ್ ಮೊದಲಾದ ಆಯ್ಕೆಗಳು ಹೂಡಿಕೆದಾರರ ಕಣ್ಣ ಮುಂದೆ ಇದೆ. ಜನರು ಈಗ ಹಣವನ್ನು ನೀಡಿ ಭೌತಿಕವಾಗಿ ಚಿನ್ನ ಖರೀದಿ ಮಾಡುವ ಮೂಲಕವೇ ಚಿನ್ನವನ್ನು ಸಂಗ್ರಹ ಮಾಡಬೇಕಾಗಿಲ್ಲ. ಆನ್‌ಲೈನ್‌ ಮೂಲಕವೂ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಇದು ನಿಮಗೆ ಚಿನ್ನವನ್ನು ಸುರಕ್ಷಿತವಾಗಿರಿಸುವ ತಲೆ ನೋವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+