ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡುವುದು ಎಂದರೆ ಒಂದು ಅತೀ ದೀರ್ಘವಾದ ಮತ್ತು ತಲೆ ನೋವು ಉಂಟು ಮಾಡುವ ಪ್ರಕ್ರಿಯೆಯಾಗಿದೆ. ತಮ್ಮ ಐಟಿಆರ್ ಫೈಲ್ ಮಾಡಲು ಜನರು ಸರತಿ ಸಾಲಿನಲ್ಲಿ ನಿಂತು ಕಾಯುವ ಸನ್ನಿವೇಶಗಳನ್ನು ನಾವು ನೋಡಿದ್ದೇವೆ. ಆದರೆ ಆನ್‌ಲೈನ್ ಆಯ್ಕೆಯು ಈಗ ಕಷ್ಟವನ್ನು ದೂರ ಮಾಡಿದೆ. ಇದು ಸರಳ, ಮನೆಯಲ್ಲಿಯೇ ಕೂತು ಮಾಡಬಹುದಾದ ಕಾರ್ಯವಾಗಿದೆ. ಆದರೂ ಆನ್‌ಲೈನ್ ಐಟಿಆರ್ ಫೈಲ್ ಮಾಡುವಾಗಲೂ ಹಲವಾರು ತೊಂದರೆಗಳು ಉಂಟಾಗುವುದನ್ನು ನಾವು ನೋಡಿದ್ದೇವೆ.
ಈ ನಡುವೆ ನೀವು ಆದಾಯ ತೆರಿಗೆ ರಿಟರ್ನ್ 2023 ಅನ್ನು ಅವಧಿಗೂ ಮುನ್ನ ಫೈಲ್ ಮಾಡದಿದ್ದರೆ 5 ಸಾವಿರ ರೂಪಾಯಿ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಜುಲೈ 31ಕ್ಕೂ ಮುನ್ನ ಫೈಲ್ ಮಾಡಬೇಕು. ಏಪ್ರಿಲ್ 1ರಿಂದ ಹೊಸ ಫಾರ್ಮ್ ಲಭ್ಯವಾಗಲಿದೆ. ಕನಿಷ್ಠ ಆದಾಯ 2.5 ಲಕ್ಷ ರೂಪಾಯಿಗಿಂತ ಅಧಿಕ ಆದಾಯ ಹೊಂದಿರುವವರು ಗಡುವಿಗೂ ಮುನ್ನ ಐಟಿಆರ್ ಫೈಲ್ ಮಾಡಬೇಕಾಗುತ್ತದೆ. ಆದರೆ 5 ಲಕ್ಷ ರೂಪಾಯವರೆಗೆ ಆದಾಯ ಇರುವವರಿಗೆ ವಿನಾಯಿತಿ ಇದೆ. ಸಮಯಕ್ಕೆ ಸರಿಯಾಗಿ ಐಟಿಆರ್ ಫೈಲ್ ಮಾಡದಿದ್ದರೆ ಏನಾಗುತ್ತದೆ?, ಐಟಿಆರ್ ಫೈಲ್ ಮಾಡುವುದು ಹೇಗೆ ಎಂದು ತಿಳಿಯೋಣ ಮುಂದೆ ಓದಿ..

ಸಮಯಕ್ಕೆ ಸರಿಯಾಗಿ ಐಟಿಆರ್ ಫೈಲ್ ಮಾಡದಿದ್ದರೆ ಏನಾಗುತ್ತದೆ?
ಲೇಟ್ ಫಿ (ತಡವಾದ ಶುಲ್ಕ): ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234F ಅಡಿಯಲ್ಲಿ 5,000 ರೂಪಾಯಿ ತಡವಾದ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 5 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯವಿದ್ದರೆ 1000 ರೂಪಾಯಿ ದಂಡ ವಿಧಿಸಲಾಗುತ್ತದೆ.
ಬಡ್ಡಿದರ: ಗಡುವು ಮುಗಿದ ಬಳಿಕ ನೀವು ಐಟಿಆರ್ ಫೈಲ್ ಮಾಡಿದರೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234F ಅಡಿಯಲ್ಲಿ ನೀವು ಬಡ್ಡಿದರ ಪಾವತಿಸಬೇಕಾಗುತ್ತದೆ. ಪ್ರತಿ ತಿಂಗಳಿಗೆ ಶೇಕಡ 1ರಷ್ಟು ಬಡ್ಡಿದರ ಪಾವತಿಸಬೇಕಾಗುತ್ತದೆ.
ತಡವಾದ ರಿಟರ್ನ್: ಐಟಿಆರ್ ಫೈಲಿಂಗ್ ಗಡುವು ಮುಗಿದರೆ ನೀವು ತಡವಾದ ರಿಟರ್ನ್ ಅನ್ನು ಫೈಲ್ ಮಾಡುವ ಅವಕಾಶವಿದೆ. ಆದರೆ ನೀವು ದಂಡ ಮತ್ತು ಬಡ್ಡಿದರ ಪಾವತಿಸಬೇಕಾಗುತ್ತದೆ.
ನಷ್ಟ ಹೊಂದಾಣಿಕೆ: ಸ್ಟಾಕ್ ಮಾರುಕಟ್ಟೆ, ಮ್ಯೂಚುವಲ್ ಫಂಡ್, ರಿಯಲ್ ಎಸ್ಟೇಟ್ ಅಥವಾ ಬೇರೆ ಯಾವುದೇ ಉದ್ಯಮದಲ್ಲಿ ನೀವು ಮಾಡಿದ ಹೂಡಿಕೆಯಿಂದ ನಷ್ಟವನ್ನು ಕಂಡಿದ್ದರೆ, ಅದನ್ನು ಮುಂದಿನ ವರ್ಷದ ಆದಾಯದೊಂದಿಗೆ ತುಲನೆ ಮಾಡಿಕೊಳ್ಳಬಹುದು. ಅದರಿಂದಾಗಿ ನಿಮ್ಮ ತೆರಿಗೆ ಕಡಿತವಾಗಲಿದೆ. ಆದರೆ ಅದಕ್ಕಾಗಿ ನೀವು ನಷ್ಟವನ್ನು ಸಾಬೀತುಪಡಿಸಬೇಕು.
ಆನ್‌ಲೈನ್‌ನಲ್ಲಿ ಐಟಿಆರ್ ಫೈಲ್ ಮಾಡಿ
ಹಂತ 1: ಇ-ಫೈಲಿಂಗ್ ವೆಬ್‌ಸೈಟ್ https://www.incometax.gov.in/iec/foportal ಗೆ ಭೇಟಿ ನೀಡಿ
ಹಂತ 2: ನಿಮ್ಮ ರಿಟರ್ನ್ ಫೈಲ್ ಮಾಡಲು ವೆಬ್‌ಸೈಟ್‌ಗೆ ರಿಜಿಸ್ಟಾರ್ ಆಗಿ ಅಥವಾ ಲಾಗಿನ್ ಆಗಿ
ಹಂತ 3: "Taxpayer" ಮೇಲೆ ಕ್ಲಿಕ್ ಮಾಡಿ, ನಿಮ್ಮ ಪ್ಯಾನ್ ಮಾಹಿತಿ ನಮೂದಿಸಿ
ಹಂತ 4: "validate" ಮೇಲೆ ಕ್ಲಿಕ್ ಮಾಡಿ, "Continue" ಆಯ್ಕೆ ಮಾಡಿ
ಹಂತ 5: ನಿಮ್ಮ ಹೆಸರು, ವಿಳಾಸ, ಜನನ ದಿನಾಂಕ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಇತರೆ ಮಾಹಿತಿ ಉಲ್ಲೇಖಿಸಿ Continue ಮೇಲೆ ಕ್ಲಿಕ್ ಮಾಡಿ
ಹಂತ 6: ರಿಜಿಸ್ಟಾರ್ ಮೊಬೈಲ್ ಸಂಖ್ಯೆಗೆ ಬಂದ ಒಟಿಪಿಯನ್ನು ನಮೂದಿಸಿ
ಹಂತ 7: ಕೊನೆಯದಾಗಿ ಪಾಸ್‌ವರ್ಡ್ ಹಾಕಿ, ಲಾಗಿನ್ ಅನ್ನು ಸುರಕ್ಷಿತಗೊಳಿಸಿ
ಹಂತ 8: "Register," ಮೇಲೆ ನೀವು ಕ್ಲಿಕ್ ಮಾಡಿದ ಬಳಿಕ acknowledgement message ನಿಮಗೆ ಲಭ್ಯವಾಗಲಿದೆ. ಆ ಮೆಸೇಜ್ ಬಂದರೆ ಪ್ರಕ್ರಿಯೆ ಯಶಸ್ವಿಯಾಗಿದೆ ಎಂದಾಗಿದೆ.
ಆಫ್‌ಲೈನ್‌ನಲ್ಲಿ ಐಟಿಆರ್ ಫೈಲ್ ಮಾಡಿ
ಹಂತ 1: Form 16 ಗಾಗಿ ಮನವಿ ಮಾಡಬೇಕು.
ಹಂತ 2: ಆದಾಯ ತೆರಿಗೆ ಇಲಾಖೆಗೆ ಎಲ್ಲ ದಾಖಲೆಗಳನ್ನು ಸಲ್ಲಿಸಬೇಕು
ಹಂತ 3: ಅದಾದ ಬಳಿಕ ನಿಮಗೆ acknowledgement slip ಲಭ್ಯವಾಗಲಿದೆ


Click it and Unblock the Notifications