ಡಿಜಿಟಲ್ ಇಂಡಿಯಾ ಪರಿಕಲ್ಪನೆ ಭಾಗವಾಗಿ, ಪ್ರಸ್ತುತ ಭಾರತದಲ್ಲಿ ಬಹುತೇಕ ಎಲ್ಲ ಹಣಕಾಸು ಮೊದಲಾದ ವಹಿವಾಟುಗಳನ್ನು ಡಿಜಿಟಲ್ ಆಗಿಯೇ ಮಾಡಲಾಗುತ್ತಿದೆ. ಇದರಿಂದಾಗಿ ದೇಶದಲ್ಲಿ ಪ್ರಸ್ತುತ ಆದಾಯ ತೆರಿಗೆ ಪಾವತಿಯು ಸರಳ ಹಾಗೂ ಸುಲಭವಾಗಿದೆ. ಈಗ ಆದಾಯ ತೆರಿಗೆ ಇಲಾಖೆಯು ತನ್ನ ಇ-ಪೇಮಂಟ್ ಸೌಲಭ್ಯವನ್ನು 25 ಬ್ಯಾಂಕ್‌ಗಳಿಗೆ ವಿಸ್ತರಣೆ ಮಾಡಿದೆ. ಇದರಿಂದಾಗಿ ತೆರಿಗೆ ಪಾವತಿಯು ನಿಮಗೆ ಸುಲಭವಾಗಲಿದೆ.
ಇ-ಪೇ ತೆರಿಗೆ ಸೇವೆಯನ್ನು ಬಳಸಿಕೊಂಡು ನೀವು ಆನ್‌ಲೈನ್ ಮೂಲಕ ತೆರಿಗೆ ಪಾವತಿಯನ್ನು ಮಾಡಬಹುದಾಗಿದೆ. ಇಂಟರ್‌ನೆಟ್‌ನಲ್ಲಿ ನಿಮ್ಮ ನೆಟ್ ಬ್ಯಾಕಿಂಗ್ ಖಾತೆಯನ್ನು ಬಳಕೆ ಮಾಡಿಕೊಂಡು ನೀವು ಇ-ಪೇ ತೆರಿಗೆ ಸೇವೆ ಮೂಲಕ ಆದಾಯ ತೆರಿಗೆಯನ್ನು ಪಾವತಿ ಮಾಡಬಹುದಾಗಿದೆ. ತೆರಿಗೆ ಪಾವತಿಗೆ ಇ-ಪೇ ತೆರಿಗೆ ಸೇವೆ ನೀಡುವ 25 ಬ್ಯಾಂಕ್‌ಗಳ ಬಗ್ಗೆ ನಾವಿಲ್ಲಿ ವಿವರಣೆ ನೀಡಿದ್ದೇವೆ, ಮುಂದೆ ಓದಿ....

ಇ-ಪೇ ಸೌಲಭ್ಯವನ್ನು ನೀಡುವ 25 ಬ್ಯಾಂಕ್‌ಗಳ ಪಟ್ಟಿ
1. ಆಕ್ಸಿಸ್ ಬ್ಯಾಂಕ್
2. ಬ್ಯಾಂಕ್ ಆಫ್ ಬರೋಡಾ
3. ಬ್ಯಾಂಕ್ ಆಫ್ ಇಂಡಿಯಾ
4. ಬ್ಯಾಂಕ್ ಆಫ್ ಮಹಾರಾಷ್ಟ್ರ
5. ಕೆನರಾ ಬ್ಯಾಂಕ್
6. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
7. ಸಿಟಿ ಯೂನಿಯನ್ ಬ್ಯಾಂಕ್
8. ಡಿಸಿಬಿ ಬ್ಯಾಂಕ್
9. ಫೆಡರಲ್ ಬ್ಯಾಂಕ್
10. ಎಚ್‌ಡಿಎಫ್ ಬ್ಯಾಂಕ್
11. ಐಸಿಐಸಿಐ ಬ್ಯಾಂಕ್
12. ಐಡಿಬಿಐ ಬ್ಯಾಂಕ್
13. ಇಂಡಿಯನ್ ಬ್ಯಾಂಕ್
14. ಇಂಡಿಯನ್ ಓವರ್‌ಸೀಸ್ ಬ್ಯಾಂಕ್
15. ಇಂಡಸ್‌ಇಂಡ್ ಬ್ಯಾಂಕ್, ನ್ಯೂ ಬ್ಯಾಂಕ್
16. ಜಮ್ಮು & ಕಾಶ್ಮೀರ ಬ್ಯಾಂಕ್
17. ಕರೂರ್ ವ್ಯಾಸ ಬ್ಯಾಂಕ್
18. ಕೋಟಕ್ ಮಹೀಂದ್ರಾ ಬ್ಯಾಂಕ್
19. ಪಂಜಾಬ್ ನ್ಯಾಷನಲ್ ಬ್ಯಾಂಕ್
20. ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್
21. ಆರ್‌ಬಿಎಲ್ ಬ್ಯಾಂಕ್
22. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
23. ಸೌತ್ ಇಂಡಿಯನ್ ಬ್ಯಾಂಕ್
24. ಯುಸಿಒ ಬ್ಯಾಂಕ್
25. ಯೂನಿಯನ್ ಬ್ಯಾಂಕ್
ಇ-ಪೇಮೆಂಟ್ ಸೇವೆಯನ್ನು ಯಾರು ಬಳಸಬಹುದಾಗಿದೆ?
ಎ) ನೆಟ್ ಬ್ಯಾಂಕಿಂಗ್ ಸೌಲಭ್ಯದೊಂದಿಗೆ ಬ್ಯಾಂಕ್ ಖಾತೆಯನ್ನು ಹೊಂದಿರುವವರು
ಬಿ) ನಿಮ್ಮ ಬ್ಯಾಂಕ್ ಇ-ಪೇ ಆಯ್ಕೆಯನ್ನು ನೀಡುವ ಹಣಕಾಸು ಸಂಸ್ಥೆಗಳಲ್ಲಿ ಒಂದಾಗಿದ್ದರೆ, ನೀವು ಸೇವೆಯನ್ನು ಬಳಸಲು ಪ್ರಾರಂಭಿಸಬಹುದು.
ಇ-ಟ್ಯಾಕ್ಸ್ ಆನ್‌ಲೈನ್ ಪಾವತಿಗಳನ್ನು ಸ್ವೀಕರಿಸಲು ನಿಮ್ಮ ಬ್ಯಾಂಕ್‌ಗೆ ಅಧಿಕಾರವಿಲ್ಲದಿದ್ದರೆ ನೀವು ಏನು ಮಾಡಬೇಕು?
ನಿಮ್ಮ ಬ್ಯಾಂಕ್ ಆನ್‌ಲೈನ್ ಪಾವತಿಗಳನ್ನು ಸ್ವೀಕರಿಸದಿದ್ದರೆ ಅಥವಾ ಅಧಿಕೃತ ಬ್ಯಾಂಕ್ ಆಗಿಲ್ಲದಿದ್ದರೆ, ಆನ್‌ಲೈನ್ ಪಾವತಿಗಳನ್ನು ಸ್ವೀಕರಿಸುವ ಅಧಿಕೃತ ಬ್ಯಾಂಕ್‌ನೊಂದಿಗೆ ಖಾತೆಯನ್ನು ಹೊಂದಿರುವ ಇನ್ನೊಬ್ಬ ವ್ಯಕ್ತಿಯ ಖಾತೆಯಿಂದ ನಿಮ್ಮ ತೆರಿಗೆಗಳನ್ನು ಡಿಜಿಟಲ್ ಆಗಿ ನೀವು ಪಾವತಿ ಮಾಡಲು ಸಾಧ್ಯವಾಗುತ್ತದೆ. ಈ ಪಾವತಿಯನ್ನು ಮಾಡಲು ಬಳಸಿದ ಚಲನ್‌ನಲ್ಲಿ ನಿಮ್ಮ ಪರ್ಮನೆಂಟ್ ಅಕೌಂಟ್ ನಂಬರ್ (PAN) ಅನ್ನು ಸರಿಯಾಗಿ ನಮೂದಿಸಬೇಕು.
ಐಟಿಆರ್ ಫೈಲಿಂಗ್ ಮಾಡಲು ಕೊನೆಯ ದಿನಾಂಕ
ಹಣಕಾಸು ವರ್ಷ 2022-23ರ ಐಟಿಆರ್ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ತೆರಿಗೆ ನಿಯಮಾವಳಿಗಳನ್ನು ಅನುಸರಿಸಿದರೆ, ದಂಡವನ್ನು ತಪ್ಪಿಸಬಹುದಾಗಿದೆ. ಸಕಾಲಿಕವಾಗಿ ಮರುಪಾವತಿಯನ್ನು ಕ್ಲೈಮ್ ಮಾಡಲು ಸರಿಯಾದ ಹಣಕಾಸು ದಾಖಲೆಗಳನ್ನು ಇಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ಹಾಗೆಯೆ ಸಮಯಕ್ಕೆ ಸರಿಯಾಗಿ ಐಟಿಆರ್ ಫೈಲಿಂಗ್ ಮಾಡಬೇಕಾಗುತ್ತದೆ.
ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವ ಕೊನೆಯ ದಿನಾಂಕ ಸಮೀಪವಾಗುತ್ತಿದೆ. ಗಡುವು ಕೊನೆಯಾಗುವುದಕ್ಕೂ ಮುನ್ನವೇ ಐಟಿ ರಿಟರ್ನ್ ಅನ್ನು ನೀವು ಫೈಲ್ ಮಾಡುವುದು ಮುಖ್ಯವಾಗುತ್ತದೆ. ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ವೇತನ ಪಡೆಯುವ ಯಾವುದೇ ವ್ಯಕ್ತಿ, ಒಂದು ಉದ್ಯಮವನ್ನು ಹೊಂದಿರುವವರು ಐಟಿಆರ್ ಫೈಲ್ ಮಾಡಬೇಕಾಗುತ್ತದೆ.


Click it and Unblock the Notifications