ಸಾಮಾನ್ಯವಾಗಿ ಹೆಚ್ಚಿನ ಜನರು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ತಾವಾಗಿಯೇ ಫೈಲ್ ಮಾಡಲು ಬಯಸುತ್ತಾರೆ. ಆದರೆ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವುದು ಕೊಂಚ ಕಷ್ಟದ ಕೆಲಸವೇ ಹೌದು. ಐಟಿಆರ್ ಅನ್ನು ಫೈಲ್ ಮಾಡುವಲ್ಲಿ ಎಲ್ಲರೂ ಕೂಡಾ ನಿಪುಣತೆಯನ್ನು ಹೊಂದಿರುವುದಿಲ್ಲ.
ಪ್ರಸ್ತುತ ಆನ್‌ಲೈನ್ ಐಟಿಆರ್ ಫೈಲಿಂಗ್ ಆರಂಭವಾಗಿದೆ. ತೆರಿಗೆದಾರರು 2022-23ರ ಆರ್ಥಿಕ ವರ್ಷಕ್ಕೆ ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಅಥವಾ ಐಟಿಆರ್‌ಗಳನ್ನು ಸಲ್ಲಿಸಲು ಪ್ರಾರಂಭಿಸಿದ್ದಾರೆ. ಆದಾಯ ತೆರಿಗೆ ಇಲಾಖೆಯು ಐಟಿಆರ್-1, ಐಟಿಆರ್-2, ಮತ್ತು ಐಟಿಆರ್-4 ಗಾಗಿ ಆನ್‌ಲೈನ್ ಫಾರ್ಮ್‌ಗಳನ್ನು ಆದಾಯ ತೆರಿಗೆ ಇಲಾಖೆಯು ITR-1, ITR-2, ಮತ್ತು ITR-4 ಗಾಗಿ ಆನ್‌ಲೈನ್ ಫಾರ್ಮ್‌ಗಳನ್ನು ಪೂರ್ವ-ಭರ್ತಿ ಮಾಡಿದ ಡೇಟಾದೊಂದಿಗೆ ಸಕ್ರಿಯಗೊಳಿಸಿದೆ. ಐಟಿಆರ್ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ಐಟಿಆರ್ ಫೈಲ್ ಮಾಡುವ ವೇಳೆ ನೀಡು ಈ ತಪ್ಪುಗಳನ್ನು ಎಂದಿಗೂ ಮಾಡಲೇಬಾರದು, ಇಲ್ಲಿದೆ ವಿವರ....

ತಪ್ಪಾದ ಐಟಿಆರ್ ಫಾರ್ಮ್ ಭರ್ತಿ ಮಾಡುವುದು
ತಪ್ಪಾದ ಐಟಿಆರ್ ಫಾರ್ಮ್ ಅನ್ನು ಆಯ್ಕೆ ಮಾಡುವುದು ನೀವು ಮಾಡಬಹುದಾದ ಸಾಮಾನ್ಯ ತಪ್ಪುಗಳಲ್ಲಿ ಒಂದಾಗಿದೆ. ನೀವು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಫೈಲ್ ಮಾಡುತ್ತಿರಲಿ, ಸರಿಯಾದ ಫಾರ್ಮ್ ಬಳಸಿ ವಿವರಗಳನ್ನು ಸಲ್ಲಿಸುವುದು ಅತೀ ಅವಶ್ಯಕವಾಗಿದೆ. ಒಟ್ಟಾಗಿ ಏಳು ಬಗೆಯ ಫಾರ್ಮ್‌ಗಳು ಇದೆ. ಸರಿಯಾದ ಫಾರ್ಮ್ ಅನ್ನು ಭರ್ತಿ ಮಾಡುವುದು ಅಗತ್ಯವಾಗಿದೆ.
ಐಟಿಆರ್-1 ಮತ್ತು ಐಟಿಆರ್-4 ಅತೀ ಸರಳವಾದ ಫಾರ್‌ಮ್ ಆಗಿದೆ. ಸಣ್ಣ ಹಾಗೂ ಮಧ್ಯಮ ವರ್ಗದ ತೆರಿಗೆದಾರರು ಈ ಫಾರ್ಮ್ ಅನ್ನು ಅಧಿಕವಾಗಿ ಬಳಸುತ್ತಾರೆ. 50 ಲಕ್ಷದವರೆಗೆ ಆದಾಯ ಇರುವವರಿಗೆ ಐಟಿಆರ್-1 ಫಾರ್ಮ್ ಅನ್ನು ಫೈಲ್ ಮಾಡುತ್ತಾರೆ. ಐಟಿಆರ್-4 ಫಾರ್ಮ್ ಹಿಂದೂ ಅವಿಭಜಿತ ಕುಟುಂಬ (HUFs) ಅನ್ನು ಫೈಲ್ ಮಾಡುತ್ತಾರೆ.
50 ಲಕ್ಷ ರೂಪಾಯಿವರೆಗೆ ಆದಾಯವಿರುವ ಸಂಸ್ಥೆಗಳು ಮತ್ತು ವ್ಯಾಪಾರ, ವೃತ್ತಿಯಿಂದ ಲಭ್ಯವಾಗುವ ಆದಾಯದ ಮೇಲಿನ ರಿಟರ್ನ್ ಫೈಲ್ ಮಾಡುವ ವೇಳೆಯೂ ಐಟಿಆರ್-4 ಫಾರ್ಮ್ ಅನ್ನು ಬಳಸಲಾಗುತ್ತದೆ. ಇನ್ನು ವಸತಿ ಪ್ರಾಪರ್ಟಿಯಿಂದ ಆದಾಯವನ್ನು ಪಡೆಯುವವರು ಐಟಿಆರ್-2 ಅನ್ನು ಫೈಲ್ ಅನ್ನು ಸಲ್ಲಿಸಬೇಕಾಗುತ್ತದೆ. ಐಟಿಆರ್-3 ಅನ್ನು ವೃತ್ತಿಪರರು ಫೈಲ್ ಮಾಡುತ್ತಾರೆ.
ಐಟಿಆರ್-5 ಮತ್ತು ಐಟಿಆರ್-6 ಅನ್ನು ಎಲ್‌ಎಲ್‌ಪಿ'ಸ್ ಮತ್ತು ಬ್ಯುಜಿನೆಸ್ ಸಂಸ್ಥೆಗಳು ಈ ಫಾರ್ಮ್ ಅನ್ನು ಫೈಲ್ ಮಾಡಬೇಕಾಗುತ್ತದೆ. ಐಟಿಆರ್ - 7 ಎಂಬುದು ಚಾರಿಟಬಲ್ ಅಥವಾ ಧಾರ್ಮಿಕ ಟ್ರಸ್ಟ್, ರಾಜಕೀಯ ಪಕ್ಷ, ಸಂಶೋಧನಾ ಸಂಘ, ಸುದ್ದಿ ಸಂಸ್ಥೆ ಅಥವಾ ಕಾಯಿದೆಯಲ್ಲಿ ನಿರ್ದಿಷ್ಟಪಡಿಸಿದ ಅಂತಹುದೇ ಸಂಸ್ಥೆಗಳು ಐಟಿಆರ್ - 7 ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ.
ಎಲ್ಲ ಆದಾಯವನ್ನು ಭರ್ತಿ ಮಾಡದಿರುವುದು
ಬ್ಯಾಂಕ್ ಖಾತೆಯಲ್ಲಿನ ನಿಮ್ಮ ಡೆಪಾಸಿಟ್‌ಗಳ ಮೇಲೆ ಬಡ್ಡಿ ಲಭ್ಯವಾಗುತ್ತದೆ. ಈ ಬಡ್ಡಿದರವು ತೆರಿಗೆಗೆ ಒಳಪಡುತ್ತದೆ. ಈ ರೀತಿ ಲಭ್ಯವಾಗುವ ಆದಾಯವನ್ನು ಕೂಡಾ ನೀವು ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ವೇಳೆ ನಮೂದಿಸಬೇಕಾಗುತ್ತದೆ. ನಮೂದಿಸದಿದ್ದರೆ ಆದಾಯ ತೆರಿಗೆ ಸಂಸ್ಥೆಯಿಂದ ನೋಟಿಸ್ ಬರುವ ಸಾಧ್ಯತೆಯಿದೆ. ತೆರಿಗೆ ರಹಿತವಾಗಿದ್ದರೂ ಕೂಡಾ ಆ ಆದಾಯವನ್ನು ಉಲ್ಲೇಖಿಸುವುದು ಮುಖ್ಯವಾಗುತ್ತದೆ.
ಹಳೆಯ ಸಂಸ್ಥೆಯ ಆದಾಯ ಘೋಷಿಸಿ
ನಿಮ್ಮ ಕೆಲಸವನ್ನು ನೀವು ಬದಲಾವಣೆ ಮಾಡಿದ್ದರೆ, ಎರಡೂ ಉದ್ಯೋಗದಾತರ ಮೂಲಕ ಗಳಿಸಿದ ಆದಾಯವನ್ನು ನೀವು ವರದಿ ಮಾಡಬೇಕಾಗುತ್ತದೆ. ನಿಮ್ಮ ಮಗುವಿನ ಹೆಸರಿನಲ್ಲಿ ನೀವು ಯಾವುದೇ ಹೂಡಿಕೆಯನ್ನು ಮಾಡಿದ್ದರೆ, ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಅದನ್ನು ನಮೂದಿಸಬೇಕು.


Click it and Unblock the Notifications