ITR filing: 2022-23ರ ಐಟಿಆರ್‌ ಫಾರ್ಮ್ ಬಿಡುಗಡೆ ಮಾಡಿದ ಕೇಂದ್ರ, ಯಾವುದು ಉತ್ತಮ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಆದಾಯ ತೆರಿಗೆ ಹೊಸ ಪದ್ಧತಿಯಡಿಯಲ್ಲಿನ ಸ್ಪ್ಯಾಬ್ ಅನ್ನು ಏರಿಕೆ ಮಾಡಿದೆ. ಕೇಂದ್ರ ಸಚಿವಾಲಯವು ತೆರಿಗೆ ವಿನಾಯಿತಿ ಮಿತಿಯನ್ನು 7 ಲಕ್ಷ ರೂಪಾಯಿಗೆ ಏರಿಸಿದೆ. ಅಂದರೆ 7 ಲಕ್ಷ ರೂಪಾಯಿವರೆಗೆ ಯಾವುದೇ ತೆರಿಗೆಯನ್ನು ಪಾವತಿ ಮಾಡಬೇಕಾಗಿಲ್ಲ.

ಇದಾದ ಬೆನ್ನಲ್ಲೇ ಕೇಂದ್ರ ಸರ್ಕಾರವು ಮತ್ತೊಂದು ಘೋಷಣೆಯನ್ನು ಮಾಡಿದೆ. ಕೇಂದ್ರ ಸರ್ಕಾರವು ಹಣಕಾಸು ವರ್ಷ 2022-23ರ ಆದಾಯ ತೆರಿಗೆ ರಿಟರ್ನ್ ಫೈಲ್ ಅನ್ನು ಬಿಡುಗಡೆ ಮಾಡಿದೆ. ವೈಯಕ್ತಿಕ ಹಾಗೂ ಬ್ಯುಜಿನೆಸ್‌ಗಾಗಿ ಕೇಂದ್ರ ಸರ್ಕಾರವು 2022-23ರ ತೆರಿಗೆ ರಿಟರ್ನ್ ಫೈಲ್ ಅನ್ನು ಜಾರಿ ಮಾಡಿದೆ.

ಆದಾಯ ತೆರಿಗೆ ಡಿಪಾರ್ಟ್‌ಮೆಂಟ್ ಐಟಿಆರ್ ಫಾರ್ಮ್ 1-6, ಐಟಿಆರ್‌-ವಿ (ವೆರಿಫಿಕೇಷನ್ ಫಾರ್ಮ್) ಮತ್ತು ಐಟಿಆರ್‌ ಅಕ್ನಾಲಜಿಮೆಂಟ್ ಫಾರ್ಮ್ ಅನ್ನು ಬಿಡುಗಡೆ ಮಾಡಿದೆ. ಫೆಬ್ರವರಿ 10ರಂದು ಈ ಫಾರ್ಮ್ ನೋಟಿಫಿಕೇಷನ್ ಅನ್ನು ನೀಡಿದೆ. 2022ರಲ್ಲಿ ಈ ಫಾರ್ಮ್ ಅನ್ನು ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ವರ್ಷ ಫೆಬ್ರವರಿಯಲ್ಲೇ ಬಿಡುಗಡೆ ಮಾಡಲಾಗಿದೆ.

 2022-23ರ ಐಟಿಆರ್‌ ಫಾರ್ಮ್ ಬಿಡುಗಡೆ ಮಾಡಿದ ಕೇಂದ್ರ, ಯಾವುದು ಉತ್ತಮ?

ಈ ಬಗ್ಗೆ ಮಾಹಿತಿ ನೀಡಿದ ಎಎಂಆರ್‌ಜಿ ಮತ್ತು ಅಸೋಸಿಯೇಟ್ ಪಾಲುದಾರ ರಜತ್ ಮೋಹನ್, "ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ (ಸಿಬಿಡಿಟಿ) 2023-24 ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ ಫಾರ್ಮ್ ಅನ್ನು ಬಿಡುಗಡೆ ಮಾಡಿದೆ. ಇದು 2022-23ರ ಗಳಿಕೆಯ ರಿಟರ್ನ್ ಇದಾಗಿದೆ. ಇದು ತೆರಿಗೆದಾರರಿಗೆ ಶೀರ್ಘವಾಗಿ ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡಲು ಸಾಧ್ಯವಾಗುತ್ತದೆ," ಎಂದು ತಿಳಿಸಿದ್ದಾರೆ.

ಫೆಬ್ರವರಿ 13ರಂದು ಲೋಕಸಭೆಯಲ್ಲಿ ಮಾಹಿತಿ ನೀಡಿದ ಕೇಂದ್ರವು, ಹಣಕಾಸು ವರ್ಷ 2021-22ರಲ್ಲಿ 5 ಲಕ್ಷ ರೂಪಾಯಿವರೆಗಿನ ಆದಾಯದ ಮೇಲೆ ರಿಟರ್ನ್ ಸಲ್ಲಿಸುವವರ ವೈಯಕ್ತಿಕ ತೆರಿಗೆದಾರರ ಸಂಖ್ಯೆ 4.1 ಕೋಟಿ ಆಗಿದೆ. 5 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿವರೆಗಿನ ಆದಾಯ ಹೊಂದಿರುವ 1.4 ಕೋಟಿ ತೆರಿಗೆ ಪಾವತಿದಾರರು ಇದ್ದಾರೆ.

ಆರು ವಿಧದ ಐಟಿಆರ್ ಫಾರ್ಮ್

ಐಟಿಆರ್-1 ಮತ್ತು ಐಟಿಆರ್-4 ಅತೀ ಸರಳವಾದ ಫಾರ್‌ಮ್ ಆಗಿದೆ. ಸಣ್ಣ ಹಾಗೂ ಮಧ್ಯಮ ವರ್ಗದ ತೆರಿಗೆದಾರರು ಈ ಫಾರ್ಮ್ ಅನ್ನು ಅಧಿಕವಾಗಿ ಬಳಸುತ್ತಾರೆ. 50 ಲಕ್ಷದವರೆಗೆ ಆದಾಯ ಇರುವವರಿಗೆ ಐಟಿಆರ್-1 ಫಾರ್ಮ್ ಅನ್ನು ಫೈಲ್ ಮಾಡುತ್ತಾರೆ. ಐಟಿಆರ್‌-4 ಫಾರ್ಮ್‌ ಹಿಂದೂ ಅವಿಭಜಿತ ಕುಟುಂಬ (HUFs) ಅನ್ನು ಫೈಲ್ ಮಾಡುತ್ತಾರೆ.

50 ಲಕ್ಷ ರೂಪಾಯಿವರೆಗೆ ಆದಾಯವಿರುವ ಸಂಸ್ಥೆಗಳು ಮತ್ತು ವ್ಯಾಪಾರ, ವೃತ್ತಿಯಿಂದ ಲಭ್ಯವಾಗುವ ಆದಾಯದ ಮೇಲಿನ ರಿಟರ್ನ್ ಫೈಲ್ ಮಾಡುವ ವೇಳೆಯೂ ಐಟಿಆರ್‌-4 ಫಾರ್ಮ್‌ ಅನ್ನು ಬಳಸಲಾಗುತ್ತದೆ. ಇನ್ನು ವಸತಿ ಪ್ರಾಪರ್ಟಿಯಿಂದ ಆದಾಯವನ್ನು ಪಡೆಯುವವರು ಐಟಿಆರ್‌-2 ಅನ್ನು ಫೈಲ್ ಅನ್ನು ಸಲ್ಲಿಸಬೇಕಾಗುತ್ತದೆ. ಐಟಿಆರ್‌-3 ಅನ್ನು ವೃತ್ತಿಪರರು ಫೈಲ್ ಮಾಡುತ್ತಾರೆ. ಐಟಿಆರ್‌-5 ಮತ್ತು ಐಟಿಆರ್-6 ಅನ್ನು ಎಲ್‌ಎಲ್‌ಪಿ'ಸ್‌ ಮತ್ತು ಬ್ಯುಜಿನೆಸ್ ಸಂಸ್ಥೆಗಳು ಈ ಫಾರ್ಮ್ ಅನ್ನು ಫೈಲ್ ಮಾಡಬೇಕಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+