ಮೊದಲ ಬಾರಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಜನರಿಗೆ ಈ ಪ್ರಕ್ರಿಯೆಯು ತುಂಬಾ ಕ್ಲಿಷ್ಠಕರ ಎಂದು ತೋರುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸರ್ಕಾರವು ಐಟಿಆರ್ ಸಲ್ಲಿಕೆ ಪ್ರಕ್ರಿಯೆಯನ್ನು ಹೆಚ್ಚು ಸರಳಗೊಳಿಸಿದೆ. ಅಗತ್ಯ ಪೂರಕ ದಾಖಲೆಗಳೊಂದಿಗೆ ಐಟಿಆರ್ ಫೈಲಿಂಗ್ ಅನ್ನು ಕೇವಲ 30 ನಿಮಿಷದೊಳಗೆ ಮಾಡಿ ಮುಗಿಸಬಹುದು.
ಈ ಬಾರಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ಒಂದು ವೇಳೆ ಅಷ್ಟರೊಳಗೆ ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡುವುದು ಸಾಧ್ಯವಾಗದವರು ಆ ಬಳಿಕ 5,000 ರೂಪಾಯಿವರೆಗೆ ದಂಡದೊಂದಿಗೆ ಐಟಿಆರ್ ಸಲ್ಲಿಕೆ ಮಾಡಬಹುದು. ಇನ್ನು ನೀವು ತೆರಿಗೆ ಪಾವತಿ ವ್ಯಾಪ್ತಿಗೆ ಬರುತ್ತೀರೊ, ಇಲ್ಲವೋ ಎನ್ನುವುದಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬರು ಕೂಡ ಐಟಿಆರ್ ಅನ್ನು ಸಲ್ಲಿಕೆ ಮಾಡುವುದರಿಂದ ನಾನಾ ರೀತಿಯ ಅನುಕೂಲತೆ ಪಡೆದುಕೊಳ್ಳಬಹುದು.

ಐಟಿಆರ್ ಸಲ್ಲಿಕೆ 2023: ಸಲ್ಲಿಕೆ ವಿವಿಧ ಹಂತಗಳು
ತೆರಿಗೆದಾರರು ಈಗ ಮನೆಯಲ್ಲಿ ಕುಳಿತುಕೊಂಡೇ ಐಟಿಆರ್ ಅನ್ನು ಸಲ್ಲಿಕೆ ಮಾಡಬಹುದು. 2023-24ರ ಸಾಲಿನ ಐಟಿಆರ್ ಸಲ್ಲಿಸುವ ಹಂತಗಳು ಇಲ್ಲಿವೆ.
ಹಂತ- 1: ಆದಾಯ ತೆರಿಗೆ ಇಲಾಖೆಯ www.incometax.gov.in ಎನ್ನುವ ಅಧಿಕೃತ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ- 2: ನಿಮ್ಮ ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ಮೂಲಕ ಅಕೌಂಟ್‌ಗೆ ಲಾಗಿನ್ ಆಗಬೇಕು. ಒಂದುವೇಳೆ ನೀವು ಮೊದಲ ಬಾರಿಗೆ ತೆರಿಗೆ ಪಾವತಿಸುತ್ತಿದ್ದರೆ ಮೊದಲು ಸೈನ್-ಇನ್ ಆಗುವ ಮೂಲಕ ಲಾಗಿನ್ ಮಾಹಿತಿ ನಮೂದಿಸಿ ಐಡಿಯನ್ನು ಪಡೆದುಕೊಳ್ಳಬೇಕು.
ಹಂತ- 3: ಲಾಗಿನ್ ಆದ ಬಳಿಕ ಹೋಮ್‌ಪೇಜ್‌ನಲ್ಲಿರುವ ಇ-ಫೈಲಿಂಗ್ ಮೆನುವನ್ನು ಕ್ಲಿಕ್ ಮಾಡಬೇಕು.
ಹಂತ- 4: ಆದಾಯ ತೆರಿಗೆ ರಿಟರ್ನ್ಸ್ ಡೈರೆಕ್ಟ್ ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ- 5: ಆಗ ಆನ್‌ಲೈನ್‌ನಲ್ಲಿಯೇ ಒಂದು ಐಟಿಆರ್ ಫಾರಂ ಸ್ಕ್ರೀನ್ ಮೇಲೆ ಕಾಣಿಸುತ್ತದೆ.
ಹಂತ- 6: ಅಲ್ಲಿ ಕೇಳಿರುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ.
ಹಂತ - 7: ಆ ನಂತರ ಟ್ಯಾಕ್ಸ್ ಪಾವತಿ ಅಂಡ್ ವ್ಯಾರಿಫಿಕೇಷನ್ ಸೆಕ್ಷನ್ ಹಾಗೂ ಇ-ವೇರಿಫೈ ಮಾಡುವುದಿದ್ದರೆ ಅದನ್ನು ಆಯ್ಕೆ ಮಾಡಿಕೊಳ್ಳಿ.
ಹಂತ- 8: ಪ್ರಿವ್ಯೂ ಅನ್ನು ಸರಿಯಾಗಿ ಪರಿಶೀಲಿಸಿದ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
ಆದಾಯ ತೆರಿಗೆ ಸ್ಲ್ಯಾಬ್‌ಗಳು
ಆದಾಯ ತೆರಿಗೆ ಸ್ಲ್ಯಾಬ್‌ಗಳನ್ನು ಕೇಂದ್ರ ಸರ್ಕಾರವು ಘೋಷಿಸುವುದರಿಂದ ನಿಮ್ಮ ಆದಾಯ ಬ್ರಾಕೆಟ್‌ಗಳ ಬಗ್ಗೆ ಗೊತ್ತಿರಬೇಕಾಗಿರುವುದು ಅವಶ್ಯಕ. ಪ್ರಸ್ತುತ ಹೊಸ ಹಾಗೂ ಹಳೇಯ ತೆರಿಗೆ ವ್ಯವಸ್ಥೆಗಳೆಂಬ ಎರಡು ಆಯ್ಕೆಗಳಿವೆ.
ಐಟಿಆರ್ ಸಲ್ಲಿಕೆಗೆ ಬೇಕಾಗುವ ದಾಖಲೆಗಳು
ನೀವು ಆದಾಯ ತೆರಿಗೆ ಪೋರ್ಟಲ್‌ಗೆ ಲಾಗ್ ಇನ್ ಮಾಡುವ ಮೊದಲು, ನಿಮ್ಮ ಪಕ್ಕದಲ್ಲಿ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನೀವು ಇಟ್ಟುಕೊಂಡಿರಬೇಕು. ಅವುಗಳಲ್ಲಿ ಕೆಲವು ಇಲ್ಲಿವೆ.
ಫಾರ್ಮ್ 16: ಪ್ರತಿ ವರ್ಷ ಜೂನ್ 15ರೊಳಗೆ ನಿಮ್ಮ ಉದ್ಯೋಗದಾತರಿಂದ ನೀವು ಫಾರ್ಮ್ 16 ಅನ್ನು ಸ್ವೀಕರಿಸುತ್ತೀರಿ. ಇದು ಆ ಹಣಕಾಸು ವರ್ಷದ ನಿಮ್ಮ ತೆರಿಗೆಯ ಆದಾಯದ ದಾಖಲೆಯ ಪುರಾವೆಯಾಗಿದೆ. ಫಾರ್ಮ್ 16 ನಿಮ್ಮ ವಾರ್ಷಿಕ ಆದಾಯ, ತೆರಿಗೆ ಮತ್ತು ವಿನಾಯಿತಿ ಭತ್ಯೆಗಳು, ಕ್ಲೈಮ್ ಮಾಡಿದ ಕಡಿತಗಳು ಮತ್ತು ಹೆಚ್ಚಿನವುಗಳ ಬಗ್ಗೆ ವಿವರಗಳನ್ನು ಒದಗಿಸುತ್ತದೆ.
ಸ್ಯಾಲರಿ ಸ್ಲಿಪ್‌ಗಳು: ಹಣಕಾಸು ವರ್ಷದ ನಿಮ್ಮ ಎಲ್ಲ ಸಂಬಳದ ಸ್ಲಿಪ್‌ಗಳನ್ನು ನಿಮ್ಮ ಪಕ್ಕದಲ್ಲಿ ಇರಿಸಿಕೊಳ್ಳಬೇಕು. ಈ ಸ್ಲಿಪ್‌ಗಳು ನಿಮ್ಮ ಸಂಬಳ, ಕಡಿತಗಳು ಮತ್ತು ಭತ್ಯೆಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿರುತ್ತವೆ.
ಫಾರ್ಮ್ 26AS: ನೀವು ಅಧಿಕೃತ ಇ-ಫೈಲಿಂಗ್ ವೆಬ್‌ಸೈಟ್‌ನಿಂದ ಫಾರ್ಮ್ 26AS ಅನ್ನು ಡೌನ್‌ಲೋಡ್ ಮಾಡಬಹುದು. ಇದು ನಿಮ್ಮ ಆದಾಯದಿಂದ ತೆರಿಗೆ ಸಂಸ್ಥೆಗೆ ಪಾವತಿ ಮಾಡಿರುವ ಅಥವಾ ಕಡಿತಗೊಂಡಿರುವ ಪ್ರತಿ TDS ಪಾವತಿಯ ಅಪ್‌ಡೇಟ್ ವಿವರಣೆಯನ್ನು ನೀಡುತ್ತದೆ. ಫಾರ್ಮ್ 26AS ಒಂದು ಜಂಟಿ ಹೇಳಿಕೆಯಾಗಿದ್ದು ಅದು ಟಿಡಿಎಸ್ ಕಡಿತಗಳನ್ನು ಕ್ಲೈಮ್ ಮಾಡಲು ಮತ್ತು ನಿಮ್ಮ ಒಟ್ಟು ಆದಾಯವನ್ನು ಲೆಕ್ಕಾಚಾರ ಮಾಡಲು ಪ್ರಮುಖ ಮಾಹಿತಿಯಾಗಿರುತ್ತದೆ. ಇದು ನಿಮ್ಮ ಆದಾಯ ಮತ್ತು ನಿಮಗೆ ಮಾಡಿದ ಪಾವತಿಗಳಿಂದ ಆಗಿರುವ TDS ನ ವಿವರಗಳನ್ನು ಸಹ ಒಳಗೊಂಡಿರುತ್ತದೆ.
ಹೂಡಿಕೆಯ ವಿವರ: ನೀವು ಪ್ರಾವಿಡೆಂಟ್ ಫಂಡ್, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಅಥವಾ ವಿಮಾ ಪಾಲಿಸಿಗಳಂತಹ ತೆರಿಗೆ-ಉಳಿತಾಯಕ್ಕೆ ಮಾಡಿರುವ ಹೂಡಿಕೆಗಳ ವಿವರಗಳನ್ನು ಸಂಗ್ರಹಿಸಿಕೊಂಡಿರಬೇಕು. ಐಟಿ ಕಾಯಿದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಈ ಹೂಡಿಕೆಗಳನ್ನು ಬಳಸಿಕೊಂಡು ನೀವು ಕಡಿತಗಳನ್ನು ಕ್ಲೈಮ್ ಮಾಡಬಹುದು.
ಮೊದಲ ಬಾರಿಗೆ ಐಟಿಆರ್ ಸಲ್ಲಿಸುವವರು ಯಾವ ಫಾರ್ಮ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದನ್ನು ಮೊದಲು ನೋಡಿಕೊಳ್ಳಬೇಕು. ಆದಾಯದ ಮೂಲಗಳು ಹಾಗೂ ಹಣಕಾಸಿನ ಪರಿಸ್ಥಿತಿ ಆಧಾರದ ಮೇಲೆ ಸರಿಯಾದ ಫಾರ್ಮ್ ಅನ್ನು ಆಯ್ಕೆ ಮಾಡಿಕೊಂಡು ನಿಖರವಾದ ಫೈಲಿಂಗ್ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಇದರಲ್ಲಿ ಐಟಿಆರ್ ಒಂದರಿಂದ ಹಿಡಿದು ನಾಲ್ಕು ನಮೂನೆಯ ಫಾರ್ಮ್‌ಗಳಿವೆ.


Click it and Unblock the Notifications