ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವ ಕೊನೆಯ ದಿನಾಂಕ ಸಮೀಪವಾಗುತ್ತಿದೆ. ಗಡುವು ಕೊನೆಯಾಗುವುದಕ್ಕೂ ಮುನ್ನವೇ ಐಟಿ ರಿಟರ್ನ್ ಅನ್ನು ನೀವು ಫೈಲ್ ಮಾಡುವುದು ಮುಖ್ಯವಾಗುತ್ತದೆ. ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ವೇತನ ಪಡೆಯುವ ಯಾವುದೇ ವ್ಯಕ್ತಿ, ಒಂದು ಉದ್ಯಮವನ್ನು ಹೊಂದಿರುವವರು ಐಟಿಆರ್ ಫೈಲ್ ಮಾಡಬೇಕಾಗುತ್ತದೆ.
ಸಾಮಾನ್ಯವಾಗಿ ಹೆಚ್ಚಿನ ಜನರು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ತಾವಾಗಿಯೇ ಫೈಲ್ ಮಾಡಲು ಬಯಸುತ್ತಾರೆ. ಆದರೆ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವುದು ಕೊಂಚ ಕಷ್ಟದ ಕೆಲಸವೇ ಹೌದು. ಐಟಿಆರ್ ಅನ್ನು ಫೈಲ್ ಮಾಡುವಲ್ಲಿ ಎಲ್ಲರೂ ಕೂಡಾ ನಿಪುಣತೆಯನ್ನು ಹೊಂದಿರುವುದಿಲ್ಲ. ಈಗ ಐಟಿಆರ್ ಫೈಲ್ ಮಾಡಲು ಕೊನೆಯ ದಿನಾಂಕ ಜುಲೈ 31, 2023 ಆಗಿದೆ. ಐಟಿಆರ್ ಫೈಲ್ ಮಾಡಲು ಬೇಕಾದ ದಾಖಲೆಗಳ ವಿವರ ಇಲ್ಲಿದೆ ಮುಂದೆ ಓದಿ....

ಉದ್ಯಮವನ್ನು ಹೊಂದಿರುವವರಲ್ಲಿ ಇರಬೇಕಾದ ದಾಖಲೆಗಳು
ಉದ್ಯಮದ ಮಾಲೀಕರು ಹಾಗೂ ವೃತ್ತಿಪರರು ತಮ್ಮ ಒಟ್ಟು ರಸೀದಿಗಳು ಅಥವಾ ವಹಿವಾಟಿನ ಆಧಾರದ ಮೇಲೆ ಆದಾಯ ತೆರಿಗೆಗೆ ತಮ್ಮ ಅರ್ಹತೆಯನ್ನು ನಿರ್ಣಯ ಮಾಡಬೇಕಾಗುತ್ತದೆ. ವಹಿವಾಟು ನಿಗದಿತ ಮಿತಿಗಳನ್ನು ಮೀರಿದರೆ, ನೀವು ಎಲ್ಲ ವಹಿವಾಟಿನ ಸಂಪೂರ್ಣ ಲೆಕ್ಕಾಚಾರವನ್ನು ಮಾಡಬೇಕಾಗುತ್ತದೆ. ಆಡಿಟ್ ಮಾಡಬೇಕಾಗುತ್ತದೆ. ಇ ಫೈಲಿಂಗ್ ಪೋರ್ಟಲ್‌ನಲ್ಲಿ ಆಡಿಟ್ ಮಾಡಿದ ವರದಿಯನ್ನು ನಮೂದಿಸಬೇಕಾಗುತ್ತದೆ.
ಟ್ಯಾಕ್ಸ್ ಡಿಡಕ್ಷನ್ ಆಟ್ ಸೋರ್ಸ್ (ಟಿಡಿಎಸ್) ಕ್ಕಾಗಿ ಟಿಡಿಎಸ್‌ನೊಂದಿಗೆ ಇನ್‌ವಾಯ್ಸ್‌ಗಳು ಮತ್ತು ಪಾವತಿಗಳನ್ನು ಸೇರಿಸಿಕೊಳ್ಳಿ. ಆದಾಯ ತೆರಿಗೆ ವೆಬ್‌ಸೈಟ್‌ನಿಂದ ಫಾರ್ಮ್ 26AS ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಅದರಲ್ಲಿಯೇ ವಾರ್ಷಿಕ ಮಾಹಿತಿ ಹೇಳಿಕೆ (Annual Information Statement/ AIS) ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಆ ಟಿಡಿಎಸ್ ಮೊತ್ತವನ್ನು ವೆರಿಫೈ ಮಾಡಿಕೊಳ್ಳಿ. ವ್ಯತ್ಯಾಸಗಳಿದ್ದರೆ, ನಿಮ್ಮ ಕ್ಲೈಂಟ್/ಗ್ರಾಹಕರಿಗೆ ಸ್ಪಷ್ಟತೆ ನೀಡಿರಿ.
ಸಂಬಳ ಪಡೆಯುವ ವ್ಯಕ್ತಿಗಳು
ವೇತನ ಪಡೆಯುವ ವ್ಯಕ್ತಿಗಳು ಫಾರ್ಮ್ 16 ಅನ್ನು ಸಬ್‌ಮಿಟ್ ಮಾಡಬೇಕಾಗುತ್ತದೆ. ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಮತ್ತು ಲೀವ್ ಟ್ರಾವೆಲ್ ಅಸಿಸ್ಟೆನ್ಸ್ (ಎಲ್‌ಟಿಎ) ನಂತಹ ವಿನಾಯಿತಿ ಆದಾಯವನ್ನು ಒಳಗೊಂಡಂತೆ ತೆರಿಗೆ ಕಡಿತದ ಮೇಲಿನ ಫಾರ್ಮ್ 16 ನಲ್ಲಿ ಉಲ್ಲೆಖಿಸಿ. ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿ. ಎಲ್ಲಾ ಕಡಿತಗಳು ಮತ್ತು ಹೂಡಿಕೆಗಳನ್ನು ಸರಿಯಾಗಿ ಪರಿಗಣಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ.
ಫಿಕ್ಸಿಡ್ ಡೆಪಾಸಿಟ್‌ಗಳನ್ನು ಅವಲಂಬಿಸಿರುವ ವ್ಯಕ್ತಿಗಳು
ಫಿಕ್ಸಿಡ್ ಡೆಪಾಸಿಟ್‌ನಿಂದ ಬಡ್ಡಿ ಆದಾಯವನ್ನು ಗಳಿಸುವವರು ಇಡೀ ವರ್ಷದಲ್ಲಿ ಪಡೆದ ಬಡ್ಡಿ ಪ್ರಮಾಣಪತ್ರವನ್ನು ಪಡೆಯಬೇಕು. ಆದಾಯ ಲೆಕ್ಕಾಚಾರಕ್ಕಾಗಿ ವರ್ಷದಲ್ಲಿ ಸಂಪೂರ್ಣವಾಗಿ ಎಷ್ಟು ಬಡ್ಡಿದರವನ್ನು ಗಳಿಸಲಾಗಿದೆ ಎಂಬ ಮಾಹಿತಿಯನ್ನು ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ವೇಳೆ ಸಲ್ಲಿಸಬೇಕಾಗುತ್ತದೆ. ಹೆಚ್ಚುವರಿಯಾಗಿ, ಲೆಕ್ಕಪತ್ರ ನಿರ್ವಹಣೆಯ ನಗದು ಆಧಾರವನ್ನು ಅನುಸರಿಸುವವರು ಯಾವುದೇ ನವೀಕರಣಗಳನ್ನು ಲೆಕ್ಕಿಸದೆಯೇ ವರ್ಷದಲ್ಲಿ ಮೆಚ್ಯೂರಿಟಿ ಹೊಂದುವ ಫಿಕ್ಸಿಡ್ ಡೆಪಾಸಿಟ್‌ಗಳಿಂದ ಪಡೆಯುವ ಪೂರ್ಣ ಬಡ್ಡಿಯನ್ನು ಉಲ್ಲೇಖಿಸಬೇಕು.
ಇನ್ನು ಷೇರು ಹಾಗೂ ಮ್ಯೂಚುವಲ್ ಫಂಡ್ ಹೂಡಿಕೆ ಮಾಡಿದವರು ಕೂಡಾ ಅದರ ಮಾಹಿತಿ, ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಇನ್ನು ತಪ್ಪಾದ ಐಟಿಆರ್ ಫಾರ್ಮ್ ಭರ್ತಿ ಮಾಡದಂತೆ ನಾವು ನೋಡಬೇಕಾಗುತ್ತದೆ. ತಪ್ಪಾದ ಐಟಿಆರ್ ಫಾರ್ಮ್ ಅನ್ನು ಆಯ್ಕೆ ಮಾಡುವುದು ನೀವು ಮಾಡಬಹುದಾದ ಸಾಮಾನ್ಯ ತಪ್ಪುಗಳಲ್ಲಿ ಒಂದಾಗಿದೆ. ನೀವು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಫೈಲ್ ಮಾಡುತ್ತಿರಲಿ, ಸರಿಯಾದ ಫಾರ್ಮ್ ಬಳಸಿ ವಿವರಗಳನ್ನು ಸಲ್ಲಿಸುವುದು ಅತೀ ಅವಶ್ಯಕವಾಗಿದೆ. ಒಟ್ಟಾಗಿ ಏಳು ಬಗೆಯ ಫಾರ್ಮ್‌ಗಳು ಇದೆ. ಸರಿಯಾದ ಫಾರ್ಮ್ ಅನ್ನು ಭರ್ತಿ ಮಾಡುವುದು ಅಗತ್ಯವಾಗಿದೆ.


Click it and Unblock the Notifications