ಅಧಿಕ ಆದಾಯ ಇರುವವರು ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡುವುದು ಕಡ್ಡಾಯವಾಗಿದೆ. ಜೂನ್ 26, 2023ರವರೆಗೆ ಒಟ್ಟಾಗಿ ಒಂದು ಕೋಟಿ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಫೈಲ್ ಮಾಡಲಾಗಿದೆ ಎಂದು ಮಂಗಳವಾರ ಆದಾಯ ತೆರಿಗೆ ಇಲಾಖೆಯು ಮಾಹಿತಿ ನೀಡಿದೆ. ಈ ಮೂಲಕ ಕಳೆದ ವರ್ಷಕ್ಕಿಂತ ಶೀಘ್ರವೇ ಆದಾಯ ತೆರಿಗೆ ಇಲಾಖೆಯು ಮೈಲಿಗಲ್ಲನ್ನು ತಲುಪಿದೆ.
2022-23ನೇ ಹಣಕಾಸು ವರ್ಷದಲ್ಲಿ ಗಳಿಸಿದ ಆದಾಯಕ್ಕೆ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ಸಂಬಳ ಪಡೆಯುವ ತೆರಿಗೆದಾರರು ಮತ್ತು ಆಡಿಟ್ ಅಗತ್ಯವಿಲ್ಲದ ತೆರಿಗೆದಾರರಿಗೆ ಈ ಗಡುವು ಅನ್ವಯವಾಗುತ್ತದೆ. ಐಟಿ ಇಲಾಖೆಯು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ 1 ಕೋಟಿ ಐಟಿಆರ್ ಫೈಲಿಂಗ್ ಮೈಲಿಗಲ್ಲು 12 ದಿನಗಳ ಮುಂಚಿತವಾಗಿ ತಲುಪಿದೆ ಎಂದು ಟ್ವೀಟ್‌ನಲ್ಲಿ ಐಟಿ ಇಲಾಖೆ ತಿಳಿಸಿದೆ.

"ಕಳೆದ ವರ್ಷ ಜುಲೈ 8 ರವರೆಗೆ ಸಲ್ಲಿಸಿದ 1 ಕೋಟಿ ಐಟಿಆರ್‌ಗಳಿಗೆ ಹೋಲಿಸಿದರೆ ಈ ವರ್ಷ ಜೂನ್ 26 ರವರೆಗೆ 1 ಕೋಟಿಗೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ," ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಗಡುವು ಹತ್ತಿರವಾಗುವಾಗ ತೊಂದರೆಗೆ ಒಳಗಾಗುವುದಕ್ಕೂ ಮುನ್ನ ಗಡುವು ಮುಗಿಯುವುದಕ್ಕೂ ಮುನ್ನವೇ ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡಿ ಎಂದು ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ತಿಳಿಸಿದೆ.
ರಿಜಿಸ್ಟ್ರೇಷನ್ ಮಾಡುವುದು ಹೇಗೆ?
ಹಂತ 1: ಇ-ಫೈಲಿಂಗ್ ಪೋರ್ಟಲ್ https://www.incometax.gov.in/iec/foportal/
ಗೆ ಭೇಟಿ ನೀಡಿ
ಹಂತ 2: ಹೋಮ್‌ಪೇಜ್‌ನ ಬಲಭಾಗದಲ್ಲಿರುವ 'Register Yourself' ಮೇಲೆ ಕ್ಲಿಕ್ ಮಾಡಿ
ಹಂತ 3: ಯೂಸರ್ ಟೈಪ್ ಅನ್ನು Individual ಎಂದು ಆಯ್ಕೆ ಮಾಡಿ
ಹಂತ 4: Continue ಕ್ಲಿಕ್ ಮಾಡಿ, ಪ್ಯಾನ್, ಹೆಸರು, ಜನನ ದಿನಾಂಕ, ವಸತಿ ಮೊದಲಾದ ಮಾಹಿತಿ ಉಲ್ಲೇಖಿಸಿ
ಹಂತ 5: ಮತ್ತೆ Continue ಕ್ಲಿಕ್ ಮಾಡಿ
ಹಂತ 6: ಪಾಸ್‌ವರ್ಡ್ ಮಾಹಿತಿ, ಸಂಪರ್ಕ ಮಾಹಿತಿ, ಪ್ರಸ್ತುತ ವಿಳಾಸವನ್ನು ನಮೂದಿಸಿ Submit ಕ್ಲಿಕ್ ಮಾಡಿ
ಹಂತ 7: ರಿಜಿಸ್ಟ್ರೀಷನ್ ಆದ ಬಳಿಕ ಭಾರತೀಯ ನಿವಾಸಿಗಳಿಗೆ ಆರು ಡಿಜಿಟ್‌ನ ಒಟಿಪಿ1 ಮತ್ತು ಒಟಿಪಿ2 ಮೊಬೈಲ್‌ಗೆ ಮತ್ತು ಇಮೇಲ್ ಐಡಿಗೆ ಬರಲಿದೆ.
ರಿಜಿಸ್ಟ್ರೀಷನ್ ಆದ ಬಳಿಕ ಅನಿವಾಸಿ ಭಾರತೀಯರಿಗೆ ಇಮೇಲ್ ಐಡಿ ಮೂಲಕ ಒಟಿಪಿಯನ್ನು ಕಳುಹಿಸಲಾಗುತ್ತದೆ.
ಹಂತ 8: ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರಿಯಾದ ಒಟಿಪಿ ಅನ್ನು ನಮೂದಿಸಿ
ಯಶಸ್ವಿ ಲಾಗಿನ್ ಆದ ಬಳಿಕ, ನಿಮ್ಮ ಇ-ಫೈಲಿಂಗ್ ಡ್ಯಾಶ್‌ಬೋರ್ಡ್‌ಗೆ ನಿಮ್ಮನ್ನು ರಿಡೈರೆಕ್ಟ್ ಮಾಡಲಾಗುತ್ತದೆ. ನೀವು ಆದಾಯ ತೆರಿಗೆ ಇಲಾಖೆಯಿಂದ ಒದಗಿಸಲಾದ ವಿವಿಧ ಸೇವೆಗಳು ಪಡೆಯಬಹುದಾಗಿದೆ.
ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವುದು ಹೇಗೆ?
ಹಂತ 1: ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ (https://www.incometax.gov.in/iec/foportal/) ಗೆ ಭೇಟಿ ನೀಡಿ
ಹಂತ 2: ಇ ಫೈಲಿಂಗ್ ಖಾತೆಗೆ ಲಾಗಿನ್ ಆಗಲು ಹೋಮ್‌ಪೇಜ್‌ನಲ್ಲಿ 'Login' ಮೇಲೆ ಕ್ಲಿಕ್ ಮಾಡಿ
ಹಂತ 3: ನಿಮ್ಮ ಯೂಸರ್ ಐಡಿ ಉಲ್ಲೇಖಿಸಿ (ಪ್ಯಾನ್ ನಂಬರ್) ಹಾಗೂ ಪಾಸ್‌ವರ್ಡ್ ಹಾಕಿ. ಸ್ಕ್ರೀನ್‌ನಲ್ಲಿರುವ ಕ್ಯಾಪ್ಚಾ ಕೋಡ್ ನಮೂದಿಸಿ, 'Login' ಬಟನ್ ಕ್ಲಿಕ್ ಮಾಡಿ.
ಹಂತ 4: ಲಾಗಿನ್ ಆದ ಬಳಿಕ ಇ ಫೈಲಿಂಗ್ ಡ್ಯಾಶ್‌ಬೋರ್ಡ್‌ಗೆ ತಲುಪಲಿದೆ.
ಹಂತ 5: ಡ್ಯಾಶ್‌ಬೋರ್ಡ್‌ನಲ್ಲಿ e-File ಮೇಲೆ ಕ್ಲಿಕ್ ಮಾಡಿ
ಹಂತ 6: ಡ್ರಾಪ್‌ಡೌನ್ ಮೆನ್ಯೂವಿನಲ್ಲಿ Income Tax Return ಆಯ್ಕೆ ಮಾಡಿ
ಹಂತ 7: ಯಾವ ವರ್ಷದ ತೆರಿಗೆ ಫೈಲ್ ಮಾಡಬೇಕು ಎಂದು ಆಯ್ಕೆ ಮಾಡಿಕೊಳ್ಳಿ.
ಹಂತ 8: ಸರಿಯಾದ ಐಟಿಆರ್ (ಆದಾಯ ತೆರಿಗೆ ರಿಟರ್ನ್) ಫಾರ್ಮ್ ಅನ್ನು ಆಯ್ಕೆ ಮಾಡಿಕೊಳ್ಳಿ, ಫೈಲ್ ಮಾಡಿಕೊಳ್ಳಿ.
ಹಂತ 9: ಎಲ್ಲಾ ದಾಖಲೆಗಳ ನಕಲನ್ನು ಇರಿಸಿಕೊಳ್ಳಿ, ಇದು ನಿಮಗೆ ಭವಿಷ್ಯದಲ್ಲಿ ಅಗತ್ಯವಾಗಲಿದೆ.


Click it and Unblock the Notifications