ಆದಾಯ ತೆರಿಗೆ ರಿಟರ್ನ್ (ಐಟಿಆರ್) ಫೈಲಿಂಗ್ ಅನ್ನು ಸಮಯಕ್ಕೆ ಸರಿಯಾಗಿ ಮಾಡಿದರೆ ನಮಗೆ ಲಾಭ. ಸಾಮಾನ್ಯವಾಗಿ ಐಟಿಆರ್ ಫೈಲ್ ಮಾಡುವುದೇ ಅತೀ ಗೊಂದಲಕಾರಿ ಎಂಬುವುದು ಹಲವಾರು ಮಂದಿಯ ಮನಸ್ಸಿನಲ್ಲಿದೆ. ಇದಕ್ಕಾಗಿ ತಜ್ಞರ ಸಹಾಯವನ್ನು ಪಡೆಯುವುದು ಇದೆ. ಅದರಲ್ಲೂ ನೀವು ಮೊದಲ ಬಾರಿಗೆ ಐಟಿಆರ್ ಫೈಲ್ ಮಾಡುವುದಾದರೆ ಅತೀ ಸಂಕಷ್ಟ ಇರಲಿದೆ.
ಆದರೆ ಇತ್ತೀಚೆಗೆ ಮಾಡಿದ ಕೆಲವು ಪರಿಷ್ಕರಣೆಯಿಂದಾಗಿ ಇ- ಫೈಲಿಂಗ್ ಕೊಂಚ ಸರಳವಾಗಿದೆ. ಯಾವುದೇ ತಜ್ಞರ ಸಹಾಯವಿಲ್ಲದೆಯೇ ಮಾಡಬಹುದಾಗಿದೆ. ಪ್ರಮುಖವಾಗಿ ವೇತನ ಬಿಟ್ಟು ಬೇರೆ ಯಾವುದೇ ಮೂಲಗಳಿಂದ ಆದಾಯವನ್ನು ಹೊಂದಿರದ ಜನರಿಗೆ ಈ ಐಟಿಆರ್ ಫೈಲಿಂಗ್ ಪ್ರೋಸೆಸ್ ಅತೀ ಸರಳವಾಗಿದೆ. ಆದರೆ ನೀವು ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಮಾಡುವ ಸಂದರ್ಭದಲ್ಲಿ ಕೆಲವು ಅಂಶಗಳನ್ನು ನೆನಪಿನಲ್ಲಿಡುವುದು ಮುಖ್ಯವಾಗಿದೆ. ಇಲ್ಲಿದೆ ವಿವರ ಮುಂದೆ ಓದಿ...

ಎಲ್ಲ ದಾಖಲೆಗಳು ಇದೆಯೇ ನೋಡಿ
ನೀವು ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡುವಾಗ ಆರಂಭಿಕವಾಗಿ ಎಲ್ಲ ದಾಖಲೆಗಳು ನಿಮ್ಮ ಬಳಿ ಇದೆಯೇ ಎಂದು ನೋಡಿಕೊಳ್ಳಬೇಕಾಗುತ್ತದೆ. ಪ್ರಮುಖವಾಗಿ ಫಾರ್ಮ್ 16, 26AS, ಎಐಎಸ್/ಟಿಐಎಸ್, ಬ್ಯಾಂಕ್‌ನ ಸ್ಟೇಟ್‌ಮೆಂಟ್, ಹೂಡಿಕೆ ದಾಖಲೆಗಳು, ಬಾಡಿಗೆ ರಶೀದಿ ಮೊದಲಾದವುಗಳನ್ನು ನಿಮ್ಮ ಬಳಿ ಇಟ್ಟುಕೊಂಡು ಆ ಬಳಿಕವೇ ಐಟಿಆರ್ ಫೈಲ್ ಮಾಡಿ.
ನಿಮ್ಮ ಆದಾಯ ಮೂಲಗಳ ಬಗ್ಗೆ ಸರಿಯಾಗಿ ತಿಳಿಯಿರಿ
ನಿಮ್ಮ ಆದಾಯದ ಮೂಲಗಳ ಬಗ್ಗೆ ನೀವು ಐಟಿಆರ್ ಫೈಲ್ ಮಾಡುವ ಮುನ್ನವೇ ಸರಿಯಾಗಿ ತಿಳಿದುಕೊಂಡಿರಬೇಕು. ಅಂದರೆ ಇದು ನಿಮಗೆ ಯಾವೆಲ್ಲ ಮೂಲಗಳಿಂದ ಆದಾಯ ಬರುತ್ತದೆ ಎಂಬುವುದು ಆಗಿದೆ. ನಿಮ್ಮ ವೇತನ, ಮನೆ ಬಾಡಿಗೆ, ವಹಿವಾಟಿನಿಂದ ಆದಾಯ, ಬೇರೆ ಮೂಲಗಳಿಂದ ಬರುವ ಆದಾಯದ ಬಗ್ಗೆ ಐಟಿಆರ್ ಫೈಲ್ ಮಾಡುವುದಕ್ಕೂ ಮುನ್ನ ತಿಳಿದಿರಬೇಕು. ಇದರಿಂದಾಗಿ ನೀವು ಸರಿಯಾದ ಫಾರ್ಮ್ ಅನ್ನು ಫಿಲ್ ಮಾಡಲು ಸಾಧ್ಯವಾಗಲಿದೆ.
ಸರಿಯಾದ ಐಟಿಆರ್ ಫಾರ್ಮ್ ಅನ್ನು ಆಯ್ಕೆ ಮಾಡಿ
ನಮ್ಮ ಆದಾಯ, ಉದ್ಯಮಕ್ಕೆ ಅನುಗುಣವಾಗಿ ಐಟಿಆರ್ ಫಾರ್ಮ್ ಇರುತ್ತದೆ. ಅದಕ್ಕಾಗಿ ನಾವು ಯಾವಾಗಲೂ ಐಟಿಆರ್ ಫೈಲ್ ಮಾಡುವಾಗ ಸರಿಯಾದ ಫಾರ್ಮ್ ಅನ್ನು ಆಯ್ಕೆ ಮಾಡುವುದು ಮುಖ್ಯವಾಗುತ್ತದೆ. ನೀವು ತಪ್ಪಾದ ಐಟಿಆರ್ ಫಾರ್ಮ್ ಅನ್ನು ಭರ್ತಿ ಮಾಡುವುದು ನಿಮ್ಮ ಐಟಿಆರ್ ಫೈಲಿಂಗ್ ಅನ್ನೇ ತಪ್ಪು ಆಗಲಿದೆ. ಆದಾಯ ತೆರಿಗೆ ಇಲಾಖೆ ನಿಮ್ಮ ಐಟಿಆರ್ ಅನ್ನು ತಿರಸ್ಕರಿಸಲಿದೆ.
ಆದ್ದರಿಂದಾಗಿ ಸರಿಯಾಗಿ ಫಾರ್ಮ್ ನೋಡಿಕೊಂಡು ಐಟಿಆರ್ ಫೈಲ್ ಮಾಡಿಕೊಳ್ಳಿ. ಐಟಿಆರ್ ಫಾರ್ಮ್ 1 ವೇತನ ಪಡೆಯುವ ವರ್ಗಕ್ಕೆ ಆಗಿದೆ. ಐಟಿಆರ್ ಫಾರ್ಮ್ 2 ಹೂಡಿಕೆಯಿಂದ ಲಾಭವನ್ನು ಪಡೆಯುವ ವೇತನ ಪಡೆಯುವ ವರ್ಗವು ಫೈಲ್ ಮಾಡಬೇಕಾಗಿದೆ. ಐಟಿಆರ್ ಫಾರ್ಮ್ 3 ಯಾರು ಸ್ವ ಉದ್ಯೋಗ ಮಾಡುತ್ತಾರೋ, ಬ್ಯುಜಿನೆಟ್ ಲಾಭದಿಂದ ಆದಾಯವನ್ನು ಪಡೆಯುತ್ತಾರೋ ಅವರು ಫೈಲ್ ಮಾಡಬೇಕಾಗುತ್ತದೆ.
ನಿಮ್ಮ ಆದಾಯವನ್ನು ಲೆಕ್ಕ ಹಾಕಿಕೊಳ್ಳಿ
ಎಂದಿಗೂ ಕೂಡಾ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವ ಮುನ್ನ ನಿಮ್ಮ ತೆರಿಗೆಗೆ ಒಳಪಡುವ ಆದಾಯವನ್ನು ನೀವು ಲೆಕ್ಕ ಹಾಕಿಕೊಳ್ಳಬೇಕಾಗುತ್ತದೆ. ನಮ್ಮ ಆದಾಯ ಒಟ್ಟಾಗಿ ಎಷ್ಟಿದೆ ನಾವು ಪಾವತಿ ಮಾಡುವ ತೆರಿಗೆ ಎಷ್ಟು ಎಂಬ ಬಗ್ಗೆ ನಾವು ಲೆಕ್ಕ ಹಾಕಿಕೊಳ್ಳಬೇಕಾಗುತ್ತದೆ. ನಾವು ಯಾವುದಾದರೂ ಆದಾಯವನ್ನು ಫೈಲಿಂಗ್ ವೇಳೆ ನಮೂದಿಸದಿದ್ದರೆ ಅದರಿಂದಾಗಿ ಆದಾಯ ತೆರಿಗೆ ನೋಟಿಸ್ ಬರಬಹುದು. ಅದಕ್ಕಾಗಿ ನಾವು ಮೊದಲೇ ಎಲ್ಲ ಆದಾಯವನ್ನು ಲೆಕ್ಕ ಹಾಕಿಕೊಳ್ಳುವುದು ಉತ್ತಮ.
ಕಡಿತ, ವಿನಾಯಿತಿಯನ್ನು ಕ್ಲೈಮ್ ಮಾಡಿಕೊಳ್ಳಿ
ಐಟಿಆರ್ ಅನ್ನು ಫೈಲ್ ಮಾಡುವಾಗ ನಾವು ವಿನಾಯಿತಿಯನ್ನು ಮತ್ತು ವಿನಾಯಿತಿಯನ್ನು ಕೂಡಾ ಕ್ಲೈಮ್ ಮಾಡುವುದು ಉತ್ತಮ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C, ಸೆಕ್ಷನ್ 80D ಅಡಿಯಲ್ಲಿ ನಾವು ಆದಾಯ ತೆರಿಗೆ ಕಡಿತ ಅಥವಾ ವಿನಾಯಿತಿಯನ್ನು ಕ್ಲೈಮ್ ಮಾಡಿಕೊಳ್ಳಬಹುದಾಗಿದೆ.


Click it and Unblock the Notifications