ಅಸೆಸ್ ಮೆಂಟ್ ವರ್ಷ 2020- 21 ಅಥವಾ ಹಣಕಾಸು ವರ್ಷ 2019- 20ಕ್ಕೆ ಈಗ ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡುವುದಕ್ಕೆ ಇನ್ ಕಮ್ ಟ್ಯಾಕ್ಸ್ ರಿಟರ್ನ್ಸ್ (ITRs) ಫಾರ್ಮ್ ಗಳು ಲಭ್ಯವಿವೆ. ಅದರಲ್ಲಿ ಬಹಳ ಪ್ರಾಥಮಿಕ ಆದದ್ದು ಐಟಿಆರ್- 1 ಅಥವಾ ಸಹಜ್. ವೇತನ ಪಡೆಯುವಂಥ ತೆರಿಗೆದಾರರು ಈ ಅರ್ಜಿಯನ್ನು ತುಂಬುತ್ತಾರೆ.
ಈ ಬಾರಿ ಅರ್ಜಿಯಲ್ಲಿ ಪ್ರತ್ಯೇಕವಾಗಿ ಕೆಲವು ಮಾಹಿತಿ ಕೇಳಲಾಗಿದೆ. ವಿನಾಯಿತಿ ಇಲ್ಲದ ಭತ್ಯೆಗಳು, ವೇತನದ ಮೇಲಿನ ಲಾಭ ಮತ್ತು ಇತರ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸಬೇಕಾಗುತ್ತದೆ. ಐಟಿಆರ್- 1 ಸಹಜ್ ಫೈಲಿಂಗ್ ಗೆ ಮುಂಚೆ ನಿಮ್ಮ ಬಳಿ ಇರಿಸಿಕೊಳ್ಳಬೇಕಾದ 9 ದಾಖಲಾತಿಗಳ ಮಾಹಿತಿ ಇಲ್ಲಿದೆ.
1 ಸಾಮಾನ್ಯ ಮಾಹಿತಿ
ಪ್ಯಾನ್ ಕಾರ್ಡ್
ಆಧಾರ್ ಕಾರ್ಡ್ ಸಂಖ್ಯೆ
2 ಉದ್ಯೋಗದಾತರಿಂದ ವೇತನ/ಪಿಂಚಣಿಯ ಫಾರ್ಮ್ 16
3 ಮನೆ ಆಸ್ತಿ ಮೂಲಕ ಬರುತ್ತಿರುವ ಆದಾಯ
ಬಾಡಿಗೆ ರಸೀದಿ
ಬಡ್ಡಿ ಕಡಿತ ಆಗುತ್ತಿರುವುದಕ್ಕೆ ಗೃಹ ಸಾಲ ಖಾತೆಯ ಸ್ಟೇಟ್ ಮೆಂಟ್
4 ಇತರ ಮೂಲಗಳು
ಬ್ಯಾಂಕ್ ಸ್ಟೇಟ್ ಮೆಂಟ್/ ಉಳಿತಾಯ ಖಾತೆ ಮತ್ತು ಫಿಕ್ಸೆಡ್ ಡೆಪಾಸಿಟ್ ಮೇಲೆ ಬಂದಿರುವ ಬಡ್ಡಿ.
5 ಚಾಪ್ಟರ್ VI- A ಅಡಿಯಲ್ಲಿ ಬರುವ ವಿನಾಯಿತಿ
ಪಿಎಫ್/ಎನ್ ಪಿಎಸ್ ಗೆ ನಿಮ್ಮ ಕೊಡುಗೆ
ನಿಮ್ಮ ಮಕ್ಕಳ ಶಾಲೆ ಟ್ಯೂಷನ್ ಫೀ
ಲೈಫ್ ಇನ್ಷೂರೆನ್ಸ್ ಪ್ರೀಮಿಯಂ ರಸೀದಿ
ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕ
ಗೃಹಸಾಲ ಅಸಲು ಮರುಪಾವತಿ
ಈಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್/ ಮ್ಯೂಚುವಲ್ ಫಂಡ್ ಹೂಡಿಕೆ
80G ಅಡಿಯಲ್ಲಿ ಬರುವ ದೇಣಿಗೆಗಳಿದ್ದಲ್ಲಿ ಅದರ ರಸೀದಿ
ಸೆಕ್ಷನ್ 80C, 80CCC, 80CCD(1) ಅಡಿ ಕ್ಲೇಮ್ ಮಾಡಬಹುದಾದ ವಿನಾಯಿತಿ ಮತ್ತು ಇದರ ಗರಿಷ್ಠ ಮೊತ್ತ 1.5 ಲಕ್ಷ ರುಪಾಯಿ.

6 ಚಾಪ್ಟರ್ VIA ಪಾರ್ಟ್ B ಅಡಿಯಲ್ಲಿ ವಿನಾಯಿತಿ ಪಡೆಯುವ ಉದ್ದೇಶದಿಂದ ಏಪ್ರಿಲ್ 1, 2020ರಿಂದ ಜುಲೈ 31, 2020ರ ಮಧ್ಯೆ ಹೂಡಿಕೆ/ಡೆಪಾಸಿಟ್/ಪಾವತಿ ಮಾಡಿದ್ದಲ್ಲಿ D1 ಷೆಡ್ಯೂಲ್ ಭರ್ತಿ ಮಾಡಬೇಕು.
7 ತೆರಿಗೆ ಪಾವತಿ ಮಾಹಿತಿ
ಫಾರ್ಮ್ 26ASನಲ್ಲಿ ಲಭ್ಯ ಇರುವ ತೆರಿಗೆ ಪಾವತಿ ಮಾಹಿತಿಯನ್ನು ಪರಿಶೀಲಿಸಿಕೊಳ್ಳಬೇಕು.
8 ಟಿಡಿಎಸ್ ಮಾಹಿತಿ
TAN ಮಾಹಿತಿ ಪರಿಶೀಲನೆ ಮಾಡಬೇಕು ಮತ್ತು ಫಾರ್ಮ್ 16ರಲ್ಲಿ (ವೇತನ), ಫಾರ್ಮ್ 16A (ವೇತನಯೇತರ) ಮತ್ತು 16C (ಬಾಡಿಗೆ) ಲಭ್ಯ ಇರುವ ಕ್ರೆಡಿಟ್ ಮೊತ್ತವನ್ನು ಗಮನಿಸಬೇಕು
ಬಾಡಿಗೆದಾರರ PAN/ಆಧಾರ್
9 ಇತರ ಮಾಹಿತಿ
ವಿನಾಯಿತಿ ಇರುವ ಕೃಷಿ ಆದಾಯ, ಡಿವಿಡೆಂಡ್ (ಮಾಹಿತಿಯನ್ನು ನೀಡುವ ಸಲುವಾಗಿ ಮಾತ್ರ)
ಭಾರತದಲ್ಲಿ ಸದ್ಯಕ್ಕೆ ಚಲಾವಣೆಯಲ್ಲಿ ಇರುವ ಎಲ್ಲ ಬ್ಯಾಂಕ್ ಗಳ ಮಾಹಿತಿ (ರೀಫಂಡ್ ಕ್ರೆಡಿಟ್ ಆಗುವುದಕ್ಕೆ ಕನಿಷ್ಠ ಒಂದು ಖಾತೆಯನ್ನು ಆಯ್ಕೆ ಮಾಡಿಕೊಳ್ಳಬೇಕು)
ಸೆಕ್ಷನ್ 89 ಅಡಿಯಲ್ಲಿ ಪರಿಹಾರ ಬೇಕಿದ್ದಲ್ಲಿ ಫಾರ್ಮ್ 10E


Click it and Unblock the Notifications