ಪ್ರತಿಯೊಬ್ಬ ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ದಾಖಲೆಗಳನ್ನು ಒಟ್ಟುಗೂಡಿಸುವ ಸಮಯ ಬಂದೇ ಬಿಡ್ತು. ಹೌದು, ಆದಾಯ ತೆರಿಗೆ ಇಲಾಖೆಯು 2024-25ನೇ ಹಣಕಾಸು ವರ್ಷಕ್ಕೆ (AY 2025-26) ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕ ಈ ಹಿಂದೆ ಜುಲೈ 31, 2025 ರಂದು ನಿಗದಿ ಮಾಡಿತ್ತು. ಆದರೆ ಆ ದಿನಾಂಕವನ್ನು ಮತ್ತೆ ಜುಲೈ 31 ರಿಂದ ಸೆಪ್ಟೆಂಬರ್ 15, 2025 ರವರೆಗೆ ವಿಸ್ತಣೆಯನ್ನು ಮಾಡಿತ್ತು. ಪ್ರತಿ ವರ್ಷ ಆದಾಯ ತೆರಿಗೆ ರಿಟರ್ನ್ ಗೆ ಅರ್ಜಿ ಸಲ್ಲಿಸಲು ತೆರಿಗೆದಾರಿಗೆ ಒಂದಲ್ಲ ಒಂದು ಪ್ರಶ್ನೆಗಳು ಸಾಮಾನ್ಯವಾಗಿ ಇದ್ದೇ ಇರುತ್ತೇವೆ.
ಹೌದು, ಸಾಮಾನ್ಯವಾಗಿ ತೆರಿಗೆದಾರರ ಮನಸ್ಸಿನಲ್ಲಿ ಮೂಡುವ ಪ್ರಶ್ನೆಯೆಂದರೆ ಟಿಡಿಎಸ್ ಕಟ್ ಆಗಿದ್ರೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಅಗತ್ಯವಿದೆಯೇ? ಎಂದು. ಇದಕ್ಕೆ ಉತ್ತರ ಹೌದು, ನೀವು ಐಟಿಆರ್ ಗೆ ಅರ್ಜಿ ಸಲ್ಲಿಸುವುದು ಅತ್ಯಗತ್ಯ.

ಟಿಡಿಎಸ್ ಎಂದರೆ ಆದಾಯ ಸ್ವೀಕರಿಸುವವರಿಗೆ ಪಾವತಿ ಮಾಡುವ ಮೊದಲು ಕಡಿತಗೊಳಿಸಲಾಗುವ ತೆರಿಗೆ. ಸಂಬಳ, ಬಡ್ಡಿ ಗಳಿಕೆ ಅಥವಾ ಬಾಡಿಗೆ ಪಾವತಿಗಳಂತಹ ವಿವಿಧ ಆದಾಯ ಮೂಲಗಳಿಂದ ನೇರವಾಗಿ ನಿರ್ದಿಷ್ಟ ಶೇಕಡಾವಾರು ತೆರಿಗೆಗಳನ್ನು ಸರ್ಕಾರ ಸಂಗ್ರಹಣೆಯನ್ನು ಮಾಡುತ್ತದೆ. ಸ್ವೀಕರಿಸುವವರು ಪಾವತಿಯನ್ನು ಸ್ವೀಕರಿಸುವ ಮೊದಲು ತೆರಿಗೆ ಮೊತ್ತವನ್ನು ತಡೆಹಿಡಿಯಲಾಗುತ್ತದೆ ಮತ್ತು ಕಡಿತಗೊಳಿಸಿದ ಮೊತ್ತವನ್ನು ನಂತರ ಸರ್ಕಾರಕ್ಕೆ ವರ್ಗಾಯಿಸಲಾಗುತ್ತದೆ.
ಟಿಡಿಎಸ್ ಕಡಿತವಾದ್ದರೆ ನೀವು ತೆರಿಗೆ ರಿಟರ್ನ್ ಸಲ್ಲಿಸುವುದು ಏಕೆ ಮುಖ್ಯ..?
ತೆರಿಗೆಯನ್ನು ಪಾವತಿಸಲು ಅನೇಕ ತೆರಿಗೆದಾರರು ತಮ್ಮ ಆದಾಯದ ಟಿಡಿಎಸ್ ಅನ್ನು ಈಗಾಗಲೇ ಕಟ್ ಮಾಡಿದ್ದರೆ ಅಥವಾ ಅವರ ಉದ್ಯೋಗದಾತರು ಫಾರ್ಮ್ 16 ಅನ್ನು ನೀಡಿ ಎಲವೂ ಪೂರ್ಣಗೊಂಡಿವೆ ಎಂದುಕೊಂಡು ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಅಗತ್ಯವಿಲ್ಲ ಅಂದುಕೊಂಡಿರುತ್ತಾರೆ ಇದು ತಪ್ಪು ಕಲ್ಪನೆ ಎಂದು ತೆರಿಗೆ ಪಾಲುದಾರ ಅಮರ್ಪಾಲ್ ಚಡ್ಡಾ ಹೇಳಿದ್ದಾರೆ
ಐಟಿಆರ್ ಫೈಲ್ ತಡವಾಗಿ ಮಾಡುವುದರಿಂದ ನಷ್ಟವೇನು?
ನಾವು ಗಡುವಿಗೂ ಮುನ್ನ ಐಟಿಆರ್ ಅನ್ನು ಫೈಲ್ ಮಾಡುವುದರಿಂದ ನಮಗೆ ಹೇಗೆ ಹಲವಾರು ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆಯೋ, ಹಾಗೆಯೇ ತಡವಾಗಿ ಐಟಿಆರ್ ಫೈಲ್ ಮಾಡುವುದರಿಂದಾಗಿ ನಮಗೆ ಹಲವಾರು ನಷ್ಟಗಳು ಇರುತ್ತದೆ. ನೀವು ತಡವಾಗಿ ಐಟಿಆರ್ ಫೈಲ್ ಮಾಡುವುದರಿಂದ ಒಂದು ಬಾರಿಗೆ ನಷ್ಟವಾಗುವುದು ಮಾತ್ರವಲ್ಲ, ನಿಮಗೆ ಭವಿಷ್ಯದಲ್ಲಿಯೂ ನಷ್ಟ ಉಂಟಾಗಲು ಇದು ಕಾರಣವಾಗಬಹುದು.
ನೀವು ಸಮಯಕ್ಕೆ ಸರಿಯಾಗಿ ಐಟಿಆರ್ ಅನ್ನು ಫೈಲ್ ಮಾಡಿದ್ದರೆ ಮಾತ್ರವೇ ನಿಮಗೆ ತೆರಿಗೆ ರಿಫಂಡ್ ಪಡೆಯಲು ಸಾಧ್ಯವಾಗುತ್ತದೆ. ನೀವು ತಡವಾಗಿ ಐಟಿಆರ್ ಫೈಲ್ ಮಾಡುವುದರಿಂದಾಗಿ ನಿಮಗೆ ತೆರಿಗೆ ರಿಫಂಡ್‌ನಲ್ಲಿ ನಷ್ಟ ಉಂಟಾಗಬಹುದು. ನೀವು ಅವಧಿಗೂ ಮುನ್ನ ಐಟಿಆರ್ ಫೈಲ್ ಮಾಡಿದ್ದರೂ ಕೂಡಾ ನಿಮಗೆ ಇ-ವೆರಿಫೈ ಮಾಡಿಲ್ಲದಿದ್ದರೆ, 30 ದಿನಗಳ ಒಳಗಾಗಿ ದಂಡ ಪಾವತಿಸದೆಯೇ ಪ್ರಕ್ರಿಯೆ ಪೂರ್ಣಗೊಳಿಸಬಹುದು. ನೀವು ಈ ಅವಧಿಗೂ ಮುನ್ನ ವೆರಿಫೈ ಮಾಡಿಲ್ಲದಿದ್ದರೆ, ನಿಮ್ಮ ಐಟಿಆರ್ ಫೈಲಿಂಗ್ ನಿರಾಕರಿಸಲಾಗುತ್ತದೆ.
ಆನ್‌ಲೈನ್‌ನಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು(ITR) ಅನ್ನು ಸಲ್ಲಿಸುವುದು ಹೇಗೆ..?
- ನೀವು ಮೊದಲು ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಬೇಕಾಗುತ್ತದೆ.
- ತದನಂತರ ನಿಮ್ಮ ಪ್ಯಾನ್, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಬಳಸಿ ಲಾಗ್ ಇನ್ ಮಾಡಿ.
- ನಂತರ 'ಇ-ಫೈಲ್' ಮೆನುಗೆ ಆಯ್ಕೆ ಮಾಡಿ ಮತ್ತು 'ಆದಾಯ ತೆರಿಗೆ ರಿಟರ್ನ್' ಮಾಡಿ.
- ನಿಮ್ಮ ಆದಾಯದ ಆಧಾರದ ಮೇಲೆ ಸೂಕ್ತವಾದ ITR ಫಾರ್ಮ್ ಅನ್ನು ಆಯ್ಕೆಮಾಡಿ (ನೀವು ಫಾರ್ಮ್ 16 ಅನ್ನು ಹೊಂದಿದ್ದರೆ ITR-1 ಅಥವಾ ITR-2). ಮೌಲ್ಯಮಾಪನ ವರ್ಷ (AY) 2023-24 ಆಯ್ಕೆಮಾಡಿ. ಫಾರ್ಮ್‌ನಲ್ಲಿ ನಮೂದಿಸಿದ ಎಲ್ಲಾ ಡೇಟಾವನ್ನು ಮೌಲ್ಯೀಕರಿಸಿ ಮತ್ತು ಸಲ್ಲಿಸಿ.
- ನೀವು ಸಲ್ಲಿಸಿದ ನಂತರ, ಆಧಾರ್ OTP ಅಥವಾ ಲಭ್ಯವಿರುವ ಇತರ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರಿಟರ್ನ್ ಅನ್ನು ಇ-ಪರಿಶೀಲಿಸಿ.
- ನಿಮ್ಮ ರಿಟರ್ನ್ ಅನ್ನು ಅಪ್‌ಲೋಡ್ ಮಾಡಿ ಮತ್ತು ಪರಿಶೀಲಿಸಬೇಕಾಗುತ್ತದೆ.
ಈ ಮೇಲಿನಂತೆ ನೀವು ಆನ್‌ಲೈನ್‌ನಲ್ಲಿ ಆದಾಯ ತೆರಿಗೆ ರಿಟರ್ನ್ ಅರ್ಜಿಯನ್ನು ಆದಾಯ ತೆರಿಗೆ ನೀಡಿರುವ ಕೊನೆಯ ದಿನಾಂಕಕ್ಕೂ ಮೊದಲು ಅರ್ಜಿ ಸಲ್ಲಿಸಬಹುದು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications