ಪ್ರಸ್ತುತ ಹಣಕಾಸು ವರ್ಷ 2022-23ರ ಆದಾಯ ತೆರಿಗೆ ರಿಟರ್ನ್ ಅನ್ನು ಪ್ರಸ್ತುತ ಫೈಲ್ ಮಾಡಲಾಗುತ್ತಿದೆ. ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬಹುದಾಗಿದೆ. ಆದಾಯ ತೆರಿಗೆ ಪಾವತಿದಾರರು ಜುಲೈ 31ರ ಒಳಗಾಗಿ ತಮ್ಮ ಐಟಿಆರ್ ಅನ್ನು ಫೈಲ್ ಮಾಡಬೇಕಾಗುತ್ತದೆ.
ನೀವು ಎಷ್ಟು ಶೀಘ್ರ ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡುತ್ತೀರೋ, ಅಷ್ಟು ಶೀಘ್ರವಾಗಿ ಆದಾಯ ತೆರಿಗೆ ರಿಫಂಡ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. ನೀವು ಎಷ್ಟು ಆದಾಯ ತೆರಿಗೆ ಅನ್ನು ಪಾವತಿಸಬೇಕಾಗಿದೆಯೋ ಅದಕ್ಕಿಂತ ಹೆಚ್ಚಿನ ತೆರಿಗೆಯನ್ನು ಪಾವತಿ ಮಾಡಿದ್ದರೆ, ನಿಮಗೆ ಆದಾಯ ತೆರಿಗೆ ರಿಫಂಡ್ ಲಭ್ಯವಾಗುತ್ತದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

ಆದಾಯ ತೆರಿಗೆ ರಿಫಂಡ್ ಲಭ್ಯವಾಗಲು ಎಷ್ಟು ಸಮಯಬೇಕು?
ಆದಾಯ ತೆರಿಗೆ ರಿಫಂಡ್ ಲಭ್ಯವಾಗಲು ಸಾಮಾನ್ಯವಾಗಿ 20ರಿಂದ 45ರಷ್ಟು ದಿನಗಳು ಬೇಕಾಗುತ್ತದೆ. ನೀವು ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಿ, ಅದನ್ನು ಸಮಯಕ್ಕೆ ಸರಿಯಾಗಿ ಪರಿಶೀಲಿಸುವುದು ಮುಖ್ಯವಾಗುತ್ತದೆ. ಕಳೆದ ವಾರ ಈ ಬಗ್ಗೆ ಮಾತನಾಡಿದ ಸಿಬಿಡಿಟಿ ಚೇರ್‌ಮನ್ ನಿತಿನ್ ಗುಪ್ತಾ, "ಆದಾಯ ತೆರಿಗೆ ರಿಫಂಡ್ ಅವಧಿಯನ್ನು ಆದಾಯ ತೆರಿಗೆ ಇಲಾಖೆಯು ಗಮನಾರ್ಹವಾಗಿ ಕಡಿಮೆ ಮಾಡಿದೆ," ಎಂದು ತಿಳಿಸಿದ್ದಾರೆ.
ಹಣಕಾಸು ವರ್ಷ 2022-23ರಲ್ಲಿ ರಿಟರ್ನ್ಸ್ ಸಲ್ಲಿಸಿದ ಮೊದಲ 30 ದಿನಗಳಲ್ಲಿ ಶೇಕಡ 80ರಷ್ಟು ಮರುಪಾವತಿಯನ್ನು ಮಾಡಲಾಗಿದೆ. "ತೆರಿಗೆ ಇಲಾಖೆಯು ತಂತ್ರಜ್ಞಾನವನ್ನು ಈಗ ಅಧಿಕವಾಗಿ ಬಳಸಿಕೊಳ್ಳುತ್ತಿದೆ. ಸ್ವಯಂಪ್ರೇರಿತವಾಗಿ ಜನರು ಆದಾಯ ತೆರಿಗೆ ರಿಫಂಡ್ ಅನ್ನು ಮಾಡಲೆಂದು ಈ ರಿಫಂಡ್ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗಿದೆ," ಎಂದು ಸಿಬಿಡಿಟಿ ಮುಖ್ಯಸ್ಥರು ಹೇಳಿದ್ದಾರೆ.
ಆದಾಯ ತೆರಿಗೆ ರಿಫಂಡ್ ಸ್ಟೇಟಸ್ ಪರಿಶೀಲಿಸುವುದು ಹೇಗೆ?
ಹಂತ 1: ಆದಾಯ ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್ https://www.incometax.gov.in/iec/foportal/ ಮೂಲಕ ಆದಾಯ ತೆರಿಗೆ ರಿಫಂಡ್ ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು. ಒಟಿಪಿ ಬರುವ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಹೊರತುಪಡಿಸಿ ಅವರ ಪ್ಯಾನ್ ಮತ್ತು ಆಧಾರ್ ವಿವರಗಳು ನಿಮಗೆ ಅಗತ್ಯವಿರುತ್ತದೆ.
ಹಂತ 2: ಒಂದು ಬಾರಿ ಆದಾಯ ತೆರಿಗೆದಾರರು www.incometax.gov.in ಪೋರ್ಟಲ್ ಅನ್ನು ತೆರೆದ ಬಳಿಕ ತಮ್ಮ ಪ್ಯಾನ್ ಮಾಹಿತಿ, ಒಟಿಪಿ ಹಾಗೂ ಕ್ಯಾಪ್ಚಾವನ್ನು ಬಳಸಿ ಲಾಗಿನ್ ಆಗಬೇಕಾಗುತ್ತದೆ.
ಹಂತ 3: ಒಂದು ಬಾರಿ ಲಾಗಿನ್ ಆದ ಬಳಿಕ ತೆರಿಗೆದಾರರು ಇ-ಫೈಲ್ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
ಹಂತ 4: ಬಳಿಕ ಆದಾಯ ತೆರಿಗೆ ರಿಟರ್ನ್ಸ್ ಟ್ಯಾಬ್‌ಗೆ ಹೋಗಿ View Filed Returns ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ.
ಹಂತ 5: ತೆರಿಗೆದಾರರು View Filed Returns ಆಯ್ಕೆಯಲ್ಲಿ ಇತ್ತೀಚಿನ ಐಟಿಆರ್‌ನ ಸ್ಟೇಟಸ್ ಅನ್ನು ಪರಿಶೀಲನೆ ಮಾಡಬಹುದಾಗಿದೆ.
ಹಂತ 6: ನಿಮ್ಮ ಆದಾಯ ತೆರಿಗೆ ಮರುಪಾವತಿಯ ಸ್ಟೇಟಸ್ ಅನ್ನು ನೀವು ಪರಿಶೀಲಿಸಲು ಸಾಧ್ಯವಾಗುವ View Details ಆಯ್ಕೆಗಳ ಮೇಲೆ ಕ್ಲಿಕ್ ಮಾಡಿ.
ಆದಾಯ ತೆರಿಗೆ ಫೈಲ್ ಮಾಡುವ ಫಾರ್ಮ್‌ಗಳು
50 ಲಕ್ಷದವರೆಗೆ ಆದಾಯ ಇರುವವರಿಗೆ ಐಟಿಆರ್-1 ಫಾರ್ಮ್ ಅನ್ನು ಫೈಲ್ ಮಾಡುತ್ತಾರೆ. ಐಟಿಆರ್-4 ಫಾರ್ಮ್ ಹಿಂದೂ ಅವಿಭಜಿತ ಕುಟುಂಬ (HUFs) ಅನ್ನು ಫೈಲ್ ಮಾಡುತ್ತಾರೆ. 50 ಲಕ್ಷ ರೂಪಾಯಿವರೆಗೆ ಆದಾಯವಿರುವ ಸಂಸ್ಥೆಗಳು ಮತ್ತು ವ್ಯಾಪಾರ, ವೃತ್ತಿಯಿಂದ ಲಭ್ಯವಾಗುವ ಆದಾಯದ ಮೇಲಿನ ರಿಟರ್ನ್ ಫೈಲ್ ಮಾಡುವ ವೇಳೆಯೂ ಐಟಿಆರ್-4 ಫಾರ್ಮ್ ಅನ್ನು ಬಳಸಲಾಗುತ್ತದೆ.
ಇನ್ನು ವಸತಿ ಪ್ರಾಪರ್ಟಿಯಿಂದ ಆದಾಯವನ್ನು ಪಡೆಯುವವರು ಐಟಿಆರ್-2 ಅನ್ನು ಫೈಲ್ ಅನ್ನು ಸಲ್ಲಿಸಬೇಕಾಗುತ್ತದೆ. ಐಟಿಆರ್-3 ಅನ್ನು ವೃತ್ತಿಪರರು ಫೈಲ್ ಮಾಡುತ್ತಾರೆ. ಐಟಿಆರ್-5 ಮತ್ತು ಐಟಿಆರ್-6 ಅನ್ನು ಎಲ್‌ಎಲ್‌ಪಿ'ಸ್ ಮತ್ತು ಬ್ಯುಜಿನೆಸ್ ಸಂಸ್ಥೆಗಳು ಈ ಫಾರ್ಮ್ ಅನ್ನು ಫೈಲ್ ಮಾಡಬೇಕಾಗುತ್ತದೆ. ಐಟಿಆರ್ - 7 ಎಂಬುದು ಚಾರಿಟಬಲ್ ಅಥವಾ ಧಾರ್ಮಿಕ ಟ್ರಸ್ಟ್, ರಾಜಕೀಯ ಪಕ್ಷ, ಸಂಶೋಧನಾ ಸಂಘ, ಸುದ್ದಿ ಸಂಸ್ಥೆ ಅಥವಾ ಕಾಯಿದೆಯಲ್ಲಿ ನಿರ್ದಿಷ್ಟಪಡಿಸಿದ ಅಂತಹುದೇ ಸಂಸ್ಥೆಗಳು ಐಟಿಆರ್ - 7 ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ.


Click it and Unblock the Notifications