ಪ್ರತಿ ಹಣಕಾಸು ವರ್ಷದಲ್ಲೂ ಕೂಡಾ ಈ ಹಿಂದಿನ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡಬೇಕಾಗುತ್ತದೆ. ತೆರಿಗೆ ಪಾವತಿದಾರರು ಈಗ ಐಟಿಆರ್ ಫೈಲ್ ಮಾಡಲು ಕೇವಲ ಒಂದು ವಾರಗಳು ಮಾತ್ರ ಉಳಿದಿದೆ. ಜುಲೈ 31 ರಂದೇ ಐಟಿಆರ್ ಫೈಲಿಂಗ್‌ಗೆ ಕೊನೆಯ ದಿನಾಂಕವಾಗಿದೆ. ಅದಾದ ಬಳಿಕ ನೀವು ಐಟಿಆರ್ ಫೈಲ್ ಮಾಡಲು ದಂಡವನ್ನು ವಿಧಿಸಲಾಗುತ್ತದೆ. ಆದರೆ ಸರ್ಕಾರವು ಗಡುವು ವಿಸ್ತರಿಸುತ್ತಾ?.
ಪ್ರಸ್ತುತ ಇರುವ ಮಾಹಿತಿ ಪ್ರಕಾರ ಈ ವರ್ಷ ಸರ್ಕಾರವು ಐಟಿಆರ್ ಫೈಲಿಂಗ್ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡುವುದಿಲ್ಲ. ಕಳೆದ ವರ್ಷವೂ ಕೂಡಾ ಐಟಿಆರ್ ಫೈಲಿಂಗ್ ಗಡುವು ವಿಸ್ತರಣೆ ಮಾಡಿಲ್ಲ. ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿನ ಇತ್ತೀಚಿನ ಮಾಹಿತಿಯ ಪ್ರಕಾರ, ಹಣಕಾಸು ವರ್ಷ 2023-24ರಲ್ಲಿ ಈವರೆಗೆ ಒಟ್ಟು 4 ಕೋಟಿ ಐಟಿಆರ್‌ಗಳನ್ನು ಫೈಲ್ ಮಾಡಲಾಗಿದೆ. ಈ ಪೈಕಿ 3.62 ಕೋಟಿ ಐಟಿಆರ್‌ಗಳನ್ನು ವೆರಿಫೈ ಮಾಡಲಾಗಿದೆ. 2.13 ಕೋಟಿ ವೆರಿಫೈ ಆದ ಐಟಿಆರ್‌ಗಳ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟಾಗಿ 11.39 ಕೋಟಿ ವೈಯಕ್ತಿಕ ನೋಂದಾಯಿತ ಬಳಕೆದಾರರಿದ್ದಾರೆ.

ಕಂದಾಯ ಕಾರ್ಯದರ್ಶಿ ಹೇಳುವುದೇನು?
ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನಾಂಕವಾಗಿದೆ. ಈ ಗಡುವನ್ನು ವಿಸ್ತರಣೆ ಮಾಡುವ ನಿರ್ಧಾರವನ್ನು ಆದಾಯ ತೆರಿಗೆ ಇಲಾಖೆಯು ಈವರೆಗೂ ಕೈಗೊಂಡಿಲ್ಲ. ವಿಸ್ತರಣೆಯ ಆಲೋಚನೆಯು ಕೂಡಾ ಇಲ್ಲ. ಆದ್ದರಿಂದಾಗಿ ತೆರಿಗೆದಾರರು ತಮ್ಮ ರಿಟರ್ನ್ಸ್ ಅನ್ನು ಆದಷ್ಟು ಬೇಗ ಸಲ್ಲಿಸಬೇಕು ಎಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಪಿಟಿಐಗೆ ತಿಳಿಸಿದ್ದಾರೆ. ಹಾಗೆಯೇ ಈ ವರ್ಷ ಐಟಿಆರ್ ಫೈಲಿಂಗ್ ಕಳೆದ ವರ್ಷಕ್ಕಿಂತ ಅಧಿಕವಾಗಿರಬಹುದು ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ಕೊನೆಯ ಕ್ಷಣದಲ್ಲಿ ನಾವು ಗಲಿಬಿಲಿಯಾಗುವುದಕ್ಕಿಂತ ಈಗಲೇ ಐಟಿಆರ್ ಫೈಲಿಂಗ್ ಮಾಡುವುದು ಉತ್ತಮವಲ್ಲವೆ ಎಂದು ಐಟಿ ಇಲಾಖೆಯು ಪದೇ ಪದೇ ತಿಳಿಸುತ್ತದೆ. ಕೊನೆಯ ದಿನಾಂಕ ಹತ್ತಿರವಾಗುತ್ತಿದೆ ಶೀಘ್ರವೇ ಫೈಲಿಂಗ್ ಮಾಡಿಬಿಡಿ ಎಂದು ಇಲಾಖೆ ಹೇಳುತ್ತಿದೆ. ಹಾಗೆಯೇ ಸರಿಯಾದ ಸಮಯಕ್ಕೆ ಐಟಿಆರ್ ಫೈಲ್ ಮಾಡುವುದಿಂದ ಉಂಟಾಗುವ ಲಾಭಗಳ ಬಗ್ಗೆಯೂ ತಿಳಿಸಲಾಗುತ್ತಿದೆ.
ಶೀಘ್ರ ಐಟಿಆರ್ ಫೈಲ್ ಮಾಡುವುದರಿಂದ ತೊಂದರೆ ಇಲ್ಲದೆ ಸಾಲ ಪಡೆಯಬಹುದು ಎಂದು ಇಲಾಖೆ ಹೇಳುತ್ತಿದೆ. ನಾವು ಸಮಯಕ್ಕೆ ಸರಿಯಾಗಿ ಐಟಿಆರ್ ಅನ್ನು ಫೈಲಿಂಗ್ ಮಾಡದಿದ್ದರೆ ಹಲವಾರು ನಷ್ಟಗಳು ಉಂಟಾಗುತ್ತದೆ. ನಾವು ಅಧಿಕ ದಂಡವನ್ನು ತೆರಬೇಕಾಗುತ್ತದೆ. ಬಡ್ಡಿಯು ಕೂಡಾ ಹೇರಲಾಗುತ್ತದೆ. ಇದು ನಮಗಾಗುವ ನಷ್ಟ ಹೌದು.
ಐಟಿಆರ್ ಫೈಲಿಂಗ್ ವೇಳೆ ಈ ತಪ್ಪುಗಳನ್ನು ಮಾಡಬೇಡಿ
ತಪ್ಪಾದ ಐಟಿಆರ್ ಫಾರ್ಮ್ ಭರ್ತಿ ಮಾಡುವುದು, ಎಲ್ಲ ಆದಾಯವನ್ನು ಭರ್ತಿ ಮಾಡದಿರುವುದು, ಹಳೆಯ ಸಂಸ್ಥೆಯ ಆದಾಯ ವಿವರಣೆ ನೀಡದಿರುವುದು ಸಾಮಾನ್ಯವಾಗಿ ಎಲ್ಲರೂ ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಮಾಡುವಾಗ ಮಾಡುವ ತಪ್ಪುಗಳಾಗಿದೆ.
ಐಟಿಆರ್-1 ಮತ್ತು ಐಟಿಆರ್-4 ಅತೀ ಸರಳವಾದ ಫಾರ್‌ಮ್ ಆಗಿದೆ. ಸಣ್ಣ ಹಾಗೂ ಮಧ್ಯಮ ವರ್ಗದ ತೆರಿಗೆದಾರರು ಈ ಫಾರ್ಮ್ ಅನ್ನು ಅಧಿಕವಾಗಿ ಬಳಸುತ್ತಾರೆ. 50 ಲಕ್ಷದವರೆಗೆ ಆದಾಯ ಇರುವವರಿಗೆ ಐಟಿಆರ್-1 ಫಾರ್ಮ್ ಅನ್ನು ಫೈಲ್ ಮಾಡುತ್ತಾರೆ. ಐಟಿಆರ್-4 ಫಾರ್ಮ್ ಹಿಂದೂ ಅವಿಭಜಿತ ಕುಟುಂಬ (HUFs) ಅನ್ನು ಫೈಲ್ ಮಾಡುತ್ತಾರೆ.
50 ಲಕ್ಷ ರೂಪಾಯಿವರೆಗೆ ಆದಾಯವಿರುವ ಸಂಸ್ಥೆಗಳು ಮತ್ತು ವ್ಯಾಪಾರ, ವೃತ್ತಿಯಿಂದ ಲಭ್ಯವಾಗುವ ಆದಾಯದ ಮೇಲಿನ ರಿಟರ್ನ್ ಫೈಲ್ ಮಾಡುವ ವೇಳೆಯೂ ಐಟಿಆರ್-4 ಫಾರ್ಮ್ ಅನ್ನು ಬಳಸಲಾಗುತ್ತದೆ. ಇನ್ನು ವಸತಿ ಪ್ರಾಪರ್ಟಿಯಿಂದ ಆದಾಯವನ್ನು ಪಡೆಯುವವರು ಐಟಿಆರ್-2 ಅನ್ನು ಫೈಲ್ ಅನ್ನು ಸಲ್ಲಿಸಬೇಕಾಗುತ್ತದೆ. ಐಟಿಆರ್-3 ಅನ್ನು ವೃತ್ತಿಪರರು ಫೈಲ್ ಮಾಡುತ್ತಾರೆ.
ಐಟಿಆರ್-5 ಮತ್ತು ಐಟಿಆರ್-6 ಅನ್ನು ಎಲ್‌ಎಲ್‌ಪಿ'ಸ್ ಮತ್ತು ಬ್ಯುಜಿನೆಸ್ ಸಂಸ್ಥೆಗಳು ಈ ಫಾರ್ಮ್ ಅನ್ನು ಫೈಲ್ ಮಾಡಬೇಕಾಗುತ್ತದೆ. ಐಟಿಆರ್ - 7 ಎಂಬುದು ಚಾರಿಟಬಲ್ ಅಥವಾ ಧಾರ್ಮಿಕ ಟ್ರಸ್ಟ್, ರಾಜಕೀಯ ಪಕ್ಷ, ಸಂಶೋಧನಾ ಸಂಘ, ಸುದ್ದಿ ಸಂಸ್ಥೆ ಅಥವಾ ಕಾಯಿದೆಯಲ್ಲಿ ನಿರ್ದಿಷ್ಟಪಡಿಸಿದ ಅಂತಹುದೇ ಸಂಸ್ಥೆಗಳು ಐಟಿಆರ್ - 7 ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ.


Click it and Unblock the Notifications