ITR: ಜು.31 ಐಟಿಆರ್ ಫೈಲಿಂಗ್ ಕೊನೆಯ ದಿನ, ಯಾವ ಫಾರ್ಮ್ ಭರ್ತಿ ಮಾಡುವುದು?

ಹಣಕಾಸು ವರ್ಷ 2022-23 ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ಫೈಲ್ ಮಾಡಲು ಜುಲೈ 31, 2023 ಕೊನೆಯ ದಿನಾಂಕವಾಗಿದೆ. ಅಂದರೆ ಇದು ಯಾವುದೇ ದಂಡವಿಲ್ಲದೆ ಐಟಿಆರ್ ಫೈಲ್ ಮಾಡಲು ಅವಕಾಶ ನೀಡಲಾಗಿರುವ ಕೊನೆಯ ದಿನಾಂಕವಾಗಿದೆ. ದಂಡ ತಪ್ಪಿಸಲು ಅದಕ್ಕೂ ಮುನ್ನವೇ ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವುದು ಉತ್ತಮ. ಸಾಮಾನ್ಯವಾಗಿ ಆದಾಯ ತೆರಿಗೆ ಇಲಾಖೆಯು ಐಟಿಆರ್ ಫೈಲ್ ಮಾಡಲು ಆರು ಫಾರ್ಮ್‌ಗಳನ್ನು ವ್ಯಕ್ತಿಗೆ ಮತ್ತು ಸಂಸ್ಥೆಗಳಿಗಾಗಿ ಜಾರಿ ಮಾಡಿದೆ. ಆದರೆ ನೀವು ಐಟಿಆರ್ ಫೈಲ್ ಮಾಡಲು ಯಾವ ಫಾರ್ಮ್ ಭರ್ತಿ ಮಾಡಬೇಕು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ನಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ನಾವು ಫೈಲ್ ಮಾಡುವ ಸಂದರ್ಭದಲ್ಲಿ ನಮ್ಮ ಆದಾಯದ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಬೇಕಾದರೆ, ತೆರಿಗೆ ವಿನಾಯಿತಿ ಪಡೆಯಬೇಕಾದರೆ ಸರಿಯಾದ ಫಾರ್ಮ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಅತೀ ಮುಖ್ಯವಾಗುತ್ತದೆ. ಒಬ್ಬ ವ್ಯಕ್ತಿಯ ಆದಾಯ ಹಾಗೂ ತೆರಿಗೆ ಪಾವತಿದಾರರ ಕ್ಯಾಟೆಗರಿ ಆಧಾರದಲ್ಲಿ ಫಾರ್ಮ್ ಆಯ್ಕೆ ಮಾಡಲಾಗುತ್ತದೆ. ಆ ಆರು ಫಾರ್ಮ್‌ಗಳು ಯಾವುದು, ಫಾರ್ಮ್‌ನ ವಿಶೇಷತೆಯೇನು, ನಿಮ್ಮ ಆದಾಯಕ್ಕೆ ಯಾವ ಫಾರ್ಮ್ ಉತ್ತಮ ಎಂಬ ಬಗ್ಗೆ ನಾವಿಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ, ಮುಂದೆ ಓದಿ...

 ಫಾರ್ಮ್ 1: ಐಟಿಆರ್‌-1

ಫಾರ್ಮ್ 1: ಐಟಿಆರ್‌-1

ಆದಾಯ ತೆರಿಗೆ ಇಲಾಖೆ ಜಾರಿ ಮಾಡಿರುವ ಆರು ಫಾರ್ಮ್‌ಗಳ ಪೈಕಿ ಐಟಿಆರ್‌-1 ಒಂದು ಫಾರ್ಮ್ ಆಗಿದೆ. ಇದು ಯಾವ ಭಾರತೀಯ ನಾಗರಿಕನ ಆದಾಯವು ವಾರ್ಷಿಕವಾಗಿ 50 ಲಕ್ಷ ರೂಪಾಯಿ ಆಗಿರುತ್ತದೋ ಅವರು ಭರ್ತಿ ಮಾಡಬೇಕಾದ ಫಾರ್ಮ್ ಆಗಿದೆ. ವೇತನ, ಕುಟುಂಬ ಪಿಂಚಣಿ, ವಸತಿ ಆಸ್ತಿ, ಕೃಷಿಯಿಂದ ಲಭ್ಯವಾಗುವ 5 ಸಾವಿರ ರೂಪಾಯಿವರೆಗಿನ ಆದಾಯ ಸೇರಿ 50 ಲಕ್ಷ ರೂಪಾಯಿ ಆದಾಯ ಲೆಕ್ಕಾಚಾರ ಮಾಡಲಾಗುತ್ತದೆ. ಲಾಟರಿ ಅಥವಾ ರೇಸ್‌ನಿಂದ ಪಡೆಯುವ ಆದಾಯವು ಈ ಕ್ಯಾಟೆಗರಿ ಅಡಿಯಲ್ಲಿ ಬರುವುದಿಲ್ಲ. ಇನ್ನು ಒಂದು ಸಂಸ್ಥೆಯ ನಿರ್ದೇಶಕರು ಅಥವಾ ಸಂಸ್ಥೆಯ ಷೇರುಗಳನ್ನು ಹೊಂದಿರುವವರು ಈ ಫಾರ್ಮ್ ಭರ್ತಿ ಮಾಡುವಂತಿಲ್ಲ.

 ಫಾರ್ಮ್ 2: ಐಟಿಆರ್‌-2

ಫಾರ್ಮ್ 2: ಐಟಿಆರ್‌-2

ಐಟಿಆರ್‌-2 ಆದಾಯ ತೆರಿಗೆ ರಿಟರ್ನ್ ಫೈಲಿಂಗ್‌ಗೆ ಇನ್ನೊಂದು ಫಾರ್ಮ್ ಆಗಿದೆ. ವಾರ್ಷಿಕವಾಗಿ 50 ಲಕ್ಷ ರೂಪಾಯಿಗೂ ಅಧಿಕ ಆದಾಯವನ್ನು ಹೊಂದಿರುವ, ಆದರೆ ವಹಿವಾಟಿನಿಂದ ಲಾಭವನ್ನು ಹೊಂದಿಲ್ಲದ ಓರ್ವ ವ್ಯಕ್ತಿ ಅಥವಾ ಹಿಂದೂ ಅವಿಭಜಿತ ಕುಟುಂಬ (ಎಚ್‌ಯುಎಫ್‌) ಐಟಿಆರ್‌-2 ಫೈಲ್ ಭರ್ತಿ ಮಾಡಬೇಕಾಗುತ್ತದೆ. ಈ ಫಾರ್ಮ್‌ನಲ್ಲಿ ಒಂದಕ್ಕಿಂತ ಅಧಿಕ ವಸತಿ ಆಸ್ತಿ, ಹೂಡಿಕೆಯಿಂದ ಉಂಟಾಗುತ್ತಿರುವ ಲಾಭ ಅಥವಾ ನಷ್ಟ, 10 ಲಕ್ಷ ರೂಪಾಯಿಗಿಂತ ಅಧಿಕ ಲಾಭದ ಆದಾಯ, ಕೃಷಿಯಿಂದ ಲಭ್ಯವಾಗುವ 5 ಸಾವಿರ ರೂಪಾಯಿಗೂ ಅಧಿಕ ಆದಾಯ ಉಲ್ಲೇಖಿಸಬೇಕಾಗುತ್ತದೆ. ಪಿಎಫ್‌ನಿಂ ಬಡ್ಡಿದರ ಪಡೆಯುತ್ತಿದ್ದರೂ ಅದನ್ನು ನಮೂದಿಸಬೇಕಾಗುತ್ತದೆ.

 ಫಾರ್ಮ್ 3: ಐಟಿಆರ್‌-3

ಫಾರ್ಮ್ 3: ಐಟಿಆರ್‌-3

ಐಟಿಆರ್‌-3 ಐಟಿಆರ್ ಫೈಲಿಂಗ್‌ನ ಮೂರನೇ ಫಾರ್ಮ್ ಆಗಿದೆ. ಇದು ಉದ್ಯಮ/ ವಹಿವಾಟಿನಿಂದ ಲಾಭವನ್ನು ಪಡೆಯುವ ವ್ಯಕ್ತಿ ಅಥವಾ ಹಿಂದೂ ಅವಿಭಜಿತ ಕುಟುಂಬ (ಎಚ್‌ಯುಎಫ್‌) ಭರ್ತಿ ಮಾಡಬೇಕಾದ ಫಾರ್ಮ್ ಆಗಿದೆ. ಈ ಫಾರ್ಮ್‌ನಲ್ಲಿ ಐಟಿಆರ್‌-1 ಮತ್ತು ಐಟಿಆರ್-2 ಫಾರ್ಮ್‌ನಲ್ಲಿ ಉಲ್ಲೇಖ ಮಾಡುವ ಎಲ್ಲ ಆದಾಯಗಳನ್ನು ಭರ್ತಿ ಮಾಡಬೇಕಾಗುತ್ತದೆ. ವ್ಯಕ್ತಿಯು ಒಂದು ಸಂಸ್ಥೆಯಲ್ಲಿ ಪಾಲುದಾರನಾಗಿದ್ದರೆ, ಅವರು ಪ್ರತ್ಯೇಕವಾಗಿ ಐಟಿಆರ್ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಷೇರು ಅಥವಾ ಆಸ್ತಿ ಮಾರಾಟ ಮಾಡಿ ಲಾಭವನ್ನು ಪಡೆಯುತ್ತಿದ್ದರೆ, ಬಡ್ಡಿದರದಿಂದ ಅಥವಾ ಡಿವಿಡೆಂಟ್‌ನಿಂದ ಆದಾಯ ಪಡೆಯುತ್ತಿದ್ದರೆ ಈ ಫಾರ್ಮ್ ಭರ್ತಿ ಮಾಡಬೇಕಾಗುತ್ತದೆ.

 ಫಾರ್ಮ್ 4: ಐಟಿಆರ್‌-4

ಫಾರ್ಮ್ 4: ಐಟಿಆರ್‌-4

ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವ ಫಾರ್ಮ್ ಆದ ಐಟಿಆರ್‌-4 ಅನ್ನು ಸುಗಮ್ ಎಂದು ಕೂಡಾ ಕರೆಯಲಾಗುತ್ತದೆ. ಲಿಮಿಟೆಡ್ ಲಯೇಬಿಲಿಟಿ ಪಾರ್ಟ್‌ನರ್‌ಶಿಪ್ ಹೊರತಾಗಿ ವಾರ್ಷಿಕ ಆದಾಯ 50 ಲಕ್ಷ ರೂಪಾಯಿಗಿಂತ ಅಧಿಕವಾಗಿರುವ ವ್ಯಕ್ತಿ, ಹಿಂದೂ ಅವಿಭಜಿತ ಕುಟುಂಬ (ಎಚ್‌ಯುಎಫ್‌), ಸಂಸ್ಥೆ ಭರ್ತಿ ಮಾಡಬೇಕಾದ ಫಾರ್ಮ್ ಆಗಿದೆ. ಹಾಗೆಯೇ ಸೆಕ್ಷನ್ 44AD, 44ADA, 44AE ಅಡಿಯಲ್ಲಿ ಆದಾಯ ಇರಬೇಕಾಗುತ್ತದೆ. ಈ ಫಾರ್ಮ್ ಅನ್ನು ಯಾವುದೇ ಸಂಸ್ಥೆಯ ನಿರ್ದೇಶಕರು, ಈಕ್ವಿಟಿ ಷೇರು ಹೂಡಿಕೆ, ಭರ್ತಿ ಮಾಡುವಂತಿಲ್ಲ, ಕೃಷಿಯಿಂದ ಲಭ್ಯವಾಗುವ 5 ಸಾವಿರ ರೂಪಾಯಿಗೂ ಅಧಿಕ ಆದಾಯ ಹೊಂದಿರುವವರಿಗೆ ಅನ್ವಯವಾಗುವುದಿಲ್ಲ.

 ಐಟಿಆರ್-5, ಐಟಿಆರ್-6

ಐಟಿಆರ್-5, ಐಟಿಆರ್-6

ಐಟಿಆರ್-5 ಲಿಮಿಟೆಡ್ ಲಯೇಬಿಲಿಟಿ ಪಾರ್ಟ್‌ನರ್‌ಶಿಪ್ (ಎಲ್‌ಎಲ್‌ಪಿ) ಸಂಸ್ಥೆಗಳು, ಅಸೋಸಿಯೇಷನ್‌ನ ವ್ಯಕ್ತಿಗಳು, ಅದಕ್ಕೆ ಸಂಭಂಧಿಸಿದ ವ್ಯಕ್ತಿಗಳು, ನ್ಯಾಯಾಂಗ ವ್ಯಕ್ತಿಗಳು, ಕೋ ಆಪೇರೆಟಿವ್ ಸೋಸೈಟಿ, ಸ್ಥಳೀಯ ಅಥಾರೆಟಿಗಳು ಭರ್ತಿ ಮಾಡಬೇಕಾದ ಆದಾಯ ತೆರಿಗೆ ರಿಟರ್ನ್ ಫಾರ್ಮ್ ಆಗಿದೆ. ಐಟಿಆರ್-6 ಸೆಕ್ಷನ್ 11ರ ಅಡಿಯಲ್ಲಿ ವಿನಾಯಿತಿಯನ್ನು ಪಡೆಯುವ ಸಂಸ್ಥೆಗಳಿಗಾಗಿ ಇದೆ. ಟ್ರಸ್ಟ್‌ನಿಂದ ಪಡೆಯುವ ಆದಾಯಕ್ಕೆ ತೆರಿಗೆ ವಿನಾಯಿತಿ ಲಭ್ಯವಾಗಲಿದ್ದು, ಅಂತಹ ಸಂಸ್ಥೆಗಳಿಗೆ ಐಟಿಆರ್-6 ಫಾರ್ಮ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+