ಆದಾಯ ತೆರಿಗೆ ರಿಟರ್ನ್ ಫೈಲಿಂಗ್ ಮಾಡಲು ನಿಗದಿತವಾದ ಗಡುವು ಇರುತ್ತದೆ. ಹಣಕಾಸು ವರ್ಷ 2022-23ರ ಐಟಿಆರ್ ಅನ್ನು ಫೈಲ್ ಮಾಡಲು ತೆರಿಗೆದಾರರಿಗೆ ಜುಲೈ 31 ಕೊನೆಯ ದಿನಾಂಕವಾಗಿದೆ. ಅಂದರೆ ಜುಲೈ 31ಕ್ಕೂ ಮುನ್ನ ನೀವು ಐಟಿಆರ್ ಫೈಲ್ ಮಾಡಬೇಕಾಗುತ್ತದೆ. ದಂಡದಿಂದ ತಪ್ಪಿಸಿಕೊಳ್ಳಬೇಕಾದರೆ ಸಾಧ್ಯವಾದಷ್ಟು ಬೇಗೆ ಐಟಿಆರ್ ಅನ್ನು ಫೈಲ್ ಮಾಡಬೇಕಾಗುತ್ತದೆ.
ಎಲ್ಲ ಹಣಕಾಸು ವರ್ಷದಲ್ಲಿಯೂ ಸರ್ಕಾರವು ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಲು, ಎಲ್ಲ ಮಾಹಿತಿಯನ್ನು ಒದಗಿಸಲು ಸುಮಾರು ನಾಲ್ಕು ತಿಂಗಳ ಅವಕಾಶವನ್ನು ನೀಡುತ್ತದೆ. ಏಪ್ರಿಲ್ 1ರಿಂದ ಈ ಅವಧಿಯ ಆರಂಭವಾಗಲಿದ್ದು ಜುಲೈ 31ಕ್ಕೆ ಅವಧಿ ಕೊನೆಯಾಗುತ್ತದೆ. ಎಲ್ಲ ತೆರಿಗೆ ಪಾವತಿದಾರರು ಕೂಡಾ ಕಡ್ಡಾಯವಾಗಿ ಐಟಿಆರ್ ಅನ್ನು ಫೈಲ್ ಮಾಡಬೇಕಾಗುತ್ತದೆ. ಸರಿಯಾದ ಸಮಯಕ್ಕೆ ಫೈಲಿಂಗ್ ಮಾಡದಿದ್ದರೆ ನಿಮಗೆ ದಂಡ ವಿಧಿಸಲಾಗುತ್ತದೆ.

ಸರ್ಕಾರವು ಈ ಹಿಂದೆ ಕೆಲವೊಮ್ಮೆ ತೆರಿಗೆ ಫೈಲಿಂಗ್ ಮಾಡುವ ಗಡುವನ್ನು ವಿಸ್ತರಣೆ ಮಾಡಿರುವುದು ಇದೆ. ಆದರೆ ಈ ಬಾರಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಗಡುವನ್ನು ಈವರೆಗೂ ಸರ್ಕಾರ ವಿಸ್ತರಣೆ ಮಾಡಿಲ್ಲ. ನೀವು ಸರ್ಕಾರ ಅವಧಿ ವಿಸ್ತರಣೆ ಮಾಡಬಹುದು ಎಂದು ಇನ್ನೂ ಕೂಡಾ ರಿಟರ್ನ್ ಫೈಲ್ ಮಾಡದಿದ್ದರೆ, ನೀವು ದಂಡ ಪಾವತಿ ಮಾಡಬೇಕಾಗಬಹುದು. ಆದ್ದರಿಂದ ಕೂಡಲೇ ಐಟಿಆರ್ ಫೈಲ್ ಮಾಡುವುದು ಉತ್ತಮ.
ಆದಾಯ ತೆರಿಗೆ ರಿಟರ್ನ್ ಇಲಾಖೆಯ ಪ್ರಕಾರ ನೀವು ಸಮಯಕ್ಕೆ ಸರಿಯಾಗಿ ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡಿಲ್ಲದಿದ್ದರೆ, ದಂಡವನ್ನು, ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಅಥವಾ ಇತರೆ ಕ್ರಮಕ್ಕೆ ಒಳಗಾಗಬಹುದು. ನೀವು ಆದಾಯ ತೆರಿಗೆ ರಿಟರ್ನ್ ಅನ್ನು ಜುಲೈ 31ಕ್ಕೂ ಮುನ್ನ ಫೈಲ್ ಮಾಡದಿದ್ದರೆ, ಏನಾಗುತ್ತದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಐಟಿಆರ್ ತಡವಾಗಿ ಫೈಲ್ ಮಾಡಿದರೆ ದಂಡ
ಐಟಿಆರ್ ಅನ್ನು ಗಡುವು ಮುಕ್ತಾಯಕ್ಕೂ ಮುನ್ನ ಫೈಲ್ ಮಾಡದಿದ್ದರೆ ತೆರಿಗೆದಾರರಿಗೆ ದಂಡವನ್ನು ವಿಧಿಸಲಾಗುತ್ತದೆ. ತಡವಾಗಿ ಐಟಿಆರ್ ಫೈಲ್ ಮಾಡುವುದಕ್ಕೆ ನೀವು ದಂಡವನ್ನು ತೆರಬೇಕಾಗುತ್ತದೆ. ನೀವು ಜುಲೈ 31ರ ಬಳಿಕ ಡಿಸೆಂಬರ್ 31ರ ಒಳಗೆ ಐಟಿಆರ್ ಫೈಲ್ ಮಾಡಿದರೆ, ಗರಿಷ್ಠ ದಂಡವು 5000 ರೂಪಾಯಿ ಆಗಿರುತ್ತದೆ. ವಾರ್ಷಿಕವಾಗಿ 5 ಲಕ್ಷ ರೂಪಾಯಿ ಆದಾಯವನ್ನು ಹೊಂದಿದ್ದರೆ, 1000 ರೂಪಾಯಿ ದಂಡವನ್ನು ಪಾವತಿ ಮಾಡಬೇಕಾಗುತ್ತದೆ.
ಕೊನೆಯ ದಿನಾಂಕದ ಬಳಿಕ ಐಟಿಆರ್ ಪೈಲಿಂಗ್
ನೀವು ಗಡುವಿನ ಬಳಿಕ ಐಟಿಆರ್ ಫೈಲ್ ಮಾಡುವುದಾದರೆ ಅದಕ್ಕೆ ಅವಕಾಶವಿದೆ. ಅದನ್ನು ಬಿಲೇಟೆಡ್ ರಿಟರ್ನ್ ಎಂದು ಕರೆಯಲಾಗುತ್ತದೆ. ಸೆಕ್ಷನ್ 142(2) ರ ಅಡಿಯಲ್ಲಿ ತೆರಿಗೆದಾರರು ರಿಟರ್ನ್ ಅನ್ನು ಫೈಲ್ ಮಾಡಬಹುದಾಗಿದೆ. ಇದನ್ನು ಒಂದು ಹಣಕಾಸು ವರ್ಷದ ಕೊನೆಯ ಮೂರು ತಿಂಗಳ ಅವಧಿಯಲ್ಲಿ ಈ ಫೈಲಿಂಗ್ ಮಾಡಲಾಗುತ್ತದೆ. ಬಿಲೇಟೆಡ್ ಐಟಿಆರ್ ಸಲ್ಲಿಕೆಗೆ ಡಿಸೆಂಬರ್ 31ಕ್ಕೂ ಮುನ್ನ ಫೈಲಿಂಗ್ ಮಾಡಬಹುದಾಗಿದೆ. ಡಿಸೆಂಬರ್ 31ರ ಬಳಿಕ ಐಟಿಆರ್ ಫೈಲ್ ಮಾಡಿದರೆ ನೀವು 10 ಸಾವಿರ ರೂಪಾಯಿವರೆಗೆ ದಂಡ ಪಾವತಿ ಮಾಡಬೇಕಾಗಬಹುದು.
ಬಡ್ಡಿದರ ವಿಧಿಸಲಾಗುತ್ತೆ ನೆನಪಿರಲಿ
ನೀವು ತಡವಾಗಿ ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡಿದರೆ ನಿಮಗೆ ದಂಡವನ್ನು ವಿಧಿಸುವುದು ಮಾತ್ರವಲ್ಲ ನೀವು ಬಡ್ಡಿಯನ್ನು ಕೂಡಾ ಪಾವತಿ ಮಾಡಬೇಕಾಗುತ್ತದೆ. ಸೆಕ್ಷನ್ 234A ರ ಅಡಿಯಲ್ಲಿ ನೀವು ಐಟಿಆರ್ ಫೈಲ್ ಮಾಡುವವರೆಗೆ ಪ್ರತಿ ತಿಂಗಳಿಗೆ ಶೇಕಡ 1ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತದೆ.
ಕಾನೂನು ಕ್ರಮ
ಒಬ್ಬ ವ್ಯಕ್ತಿಯು ಬೇಕೆಂದೆ ಆದಾಯ ತೆರಿಗೆ ರಿಟರ್ನ್ ಅನ್ನು ಫೈಲ್ ಮಾಡಿಲ್ಲದಿದ್ದರೆ, ನಿಮ್ಮ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಲಾಗುತ್ತದೆ. ಈ ಉದ್ದೇಶಪೂರ್ವಕವಾಗಿ ರಿಟರ್ನ್ ಫೈಲ್ ಮಾಡದ ಆರೋಪದಲ್ಲಿ ಸುಮಾರು ಮೂರು ತಿಂಗಳಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆಗೆ ಒಳಗಾಗಬಹುದು. ನಿಮ್ಮ ತೆರಿಗೆ ವಂಚನೆಯ ಮೊತ್ತವು 25 ಲಕ್ಷ ರೂಪಾಯಿಗಳನ್ನು ಮೀರಿದರೆ, ಆರು ತಿಂಗಳಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.
More From GoodReturns

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Vande Bharat: ಸುಂದರ ನೋಟ, ವೇಗದ ಸೇವೆ; ವಂದೇ ಭಾರತ್ ರೈಲಿನ ವಿಶೇಷ ಮಾರ್ಗಗಳಿವು!

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications