ITR: ಮೋದಿ ಸರ್ಕಾರದ ಹೊಸ ತೆರಿಗೆ ನೀತಿ: ಎಷ್ಟು ಮಂದಿಗೆ ಪ್ರಯೋಜನ?

ದೇಶದಲ್ಲಿ ಹೊಸ ತೆರಿಗೆ ಪಾವತಿ ವ್ಯವಸ್ಥೆಯಡಿ 2024-25ರ ಹಣಕಾಸು ವರ್ಷದಲ್ಲಿ ಸಾಮಾನ್ಯ ಅಥವಾ ವೈಯಕ್ತಿಕ ತೆರಿಗೆದಾರರು ರಿಟರ್ನ್ಸ್‌ ಫೈಲ್‌ ಮಾಡುವಾಗ ವಾರ್ಷಿಕ 7 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆ ಕಟ್ಟಬೇಕಾಗಿಲ್ಲ. 2023ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮೂಲ ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷಕ್ಕೆ ಹಾಗೂ ತೆರಿಗೆ ರಿಯಾಯಿತಿ(ರಿಬೆಟ್)ಯನ್ನು‌ 5ರಿಂದ 7 ಲಕ್ಷಕ್ಕೆ ಏರಿಸಿದ್ದಾರೆ.

ಹೊಸ ತೆರಿಗೆ ವ್ಯವಸ್ಥೆಯಡಿ ವೇತನದಾರರು ಹಾಗೂ ಪಿಂಚಣಿದಾರರ ವರ್ಗದಲ್ಲಿ 50,000 ರೂ. ಪ್ರಮಾಣಿತ ತೆರಿಗೆ ಕಡಿತ ನೀಡಲಾಗಿದ್ದು, 2023-24ರ ಆರ್ಥಿಕ ವರ್ಷದಲ್ಲಿ 7.5 ಲಕ್ಷ ರೂ.ವರೆಗೆ ಆದಾಯ ಗಳಿಸುವ ವ್ಯಕ್ತಿಗಳು 2024-25ನೇ ಸಾಲಿನಲ್ಲಿ ಪಾವತಿಸಬೇಕಾದ ತೆರಿಗೆ ಮೊತ್ತ ಶೂನ್ಯವಾಗಿರುತ್ತದೆ. ಹಾಗಾದರೆ, ನರೇಂದ್ರ ಮೋದಿ ಸರ್ಕಾರ ಘೋಷಿಸಿರುವ ತೆರಿಗೆ ಪರಿಹಾರ ಕ್ರಮಗಳಿಂದ ಎಷ್ಟು ಜನರಿಗೆ ಪ್ರಯೋಜನವಾಗುತ್ತದೆ? ಹಾಗಾದರೆ, ಆ ಕುರಿತ ಅಧಿಕೃತ ಮಾಹಿತಿ ಏನು ತೋರಿಸುತ್ತದೆ ಎಂಬುದನ್ನು ನೋಡೋಣ.

ಸರ್ಕಾರವು ಫೆ13ರಂದು ಲೋಕಸಭೆಯಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ, 2021-22ರ ಆರ್ಥಿಕ ವರ್ಷದಲ್ಲಿ 5 ಲಕ್ಷದವರೆಗೆ ಆದಾಯ ಹೊಂದಿರುವವರು ಸುಮಾರು 4.1 ಕೋಟಿ ಜನರಿದ್ದಾರೆ. ಹಾಗೆಯೇ 5ರಿಂದ 10 ಲಕ್ಷದ ಆದಾಯ ಮಿತಿಯಲ್ಲಿ ಒಟ್ಟು 1.4 ಕೋಟಿ ತೆರಿಗೆ ಪಾವತಿದಾರರು ಇದ್ದು, 2021-22 ಅವಧಿಗೆ ಒಟ್ಟು 6.3 ಕೋಟಿ ಮಂದಿ ರಿಟರ್ನ್ಸ್‌ ಫೈಲ್‌ ಮಾಡಿದ್ದಾರೆ.

 ಮೋದಿ ಸರ್ಕಾರದ ಹೊಸ ತೆರಿಗೆ ನೀತಿ: ಎಷ್ಟು ಮಂದಿಗೆ ಪ್ರಯೋಜನ?

ಆದರೆ, ಸರ್ಕಾರವು ದೇಶದಲ್ಲಿ 0-7 ಲಕ್ಷ ಆದಾಯದ ವ್ಯಾಪ್ತಿಯಲ್ಲಿ ನಿಖರವಾಗಿ ಎಷ್ಟು ಮಂದಿಯಿದ್ದಾರೆ ಎಂಬ ಅಂಕಿ-ಅಂಶವನ್ನು ಹಂಚಿಕೊಂಡಿಲ್ಲ. ಹೀಗಿರುವಾಗ, 2024-25ರಲ್ಲಿ ಸುಮಾರು 4 ಕೋಟಿಗೂ ಅಧಿಕ ತೆರಿಗೆದಾರರು 7 ಲಕ್ಷ ರೂ. ವರೆಗಿನ ಆದಾಯಕ್ಕೆ ಶೂನ್ಯ ತೆರಿಗೆ ನೀತಿಯ ಲಾಭ ಪಡೆಯಲಿದ್ದಾರೆ. ಅಂದರೆ, ಈ ವರ್ಗದ ವ್ಯಾಪ್ತಿಯಲ್ಲಿ 2024-25ಕ್ಕೆ ವಾರ್ಷಿಕ 7 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿಲ್ಲದ ತೆರಿಗೆದಾರರು ಸರ್ಕಾರಕ್ಕೆ ಯಾವುದೇ ತೆರಿಗೆ ಕಟ್ಟಬೇಕಿಲ್ಲ.

2020-21 ಹಾಗೂ 2021-22ರಲ್ಲಿ ಒಟ್ಟು ಇರುವ ಸಾಮಾನ್ಯ ಅಥವಾ ವೈಯಕ್ತಿಕ ತೆರಿಗೆದಾರರು

ವೈಯಕ್ತಿಕ ಆದಾಯ ತೆರಿಗೆ(ರೂ.) 2020-21 2021-22
0-5 ಲಕ್ಷದವರೆಗೆ 46327410 41160543
5-10 ಲಕ್ಷ 11228574 14074602
10ಲಕ್ಷ ಮೇಲ್ಪಟ್ಟು 5411934 8103067

2021-22 ಆರ್ಥಿಕ ವರ್ಷದ ರಿಟರ್ನ್ಸ್‌ ಫೈಲಿಂಗ್‌ ದಿನಾಂಕದ ಗಡುವನ್ನು 2022ರ ಡಿ.31ರವರೆಗೆ ವಿಸ್ತರಿಸಿದ್ದ ಕಾರಣ 2022-23ರ ಅವಧಿಯ ಆದಾಯ ತೆರಿಗೆ ಪಾವತಿದಾರರ ಡೇಟಾವನ್ನು ಇನ್ನೂ ಕ್ರೋಢೀಕರಿಸಲಾಗಿಲ್ಲ. ಆದಾಯ ತೆರಿಗೆ ರಿಟರ್ನ್ಸ್‌ ಫೈಲಿಂಗ್‌ ವೆಬ್‌ಸೈಟ್‌ನಲ್ಲಿ ಲಭ್ಯವಾಗಿರುವ ಇತ್ತೀಚಿನ ಮಾಹಿತಿ ಪ್ರಕಾರ 2022-23ರ ಅವಧಿಗೆ 7,54,79,837 ತೆರಿಗೆದಾರರು ತೆರಿಗೆ ರಿಟರ್ನ್ಸ್‌ ಫೈಲಿಂಗ್‌ ಮಾಡಿದ್ದಾರೆ. 2023ರ ಫೆ.12ರವರೆಗೆ ಒಟ್ಟು 6.96 ಕೋಟಿ ಮಂದಿಯ ಐಟಿಆರ್‌ಎಸ್‌ ಪರಿಶೀಲನೆ ಕಾರ್ಯ ಮಾಡಲಾಗಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+