For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಜ್ಯುವೆಲ್ಲರಿ ಸರಣಿ ಮಳಿಗೆಗಳ ಪ್ರಮಾಣ ಶೇ.35ಕ್ಕೆ ಏರಿಕೆ

|

ಭಾರತೀಯ ಚಿನ್ನದ ಮಾರುಕಟ್ಟೆಯ ವಿಶ್ಲೇಷಣಾ ಸರಣಿಯ ಭಾಗವಾಗಿ ವಿಶ್ವ ಚಿನ್ನದ ಪರಿಷತ್‌ (ವರ್ಲ್ಡ್ ಗೋಲ್ಡ್ ಕೌನ್ಸಿಲ್) ಇಂದು 'ಆಭರಣ ಮಾರುಕಟ್ಟೆ ರಚನೆ' ಶೀರ್ಷಿಕೆಯ ವರದಿಯನ್ನು ಬಿಡುಗಡೆ ಮಾಡಿದೆ. ಕಳೆದ ಕೆಲವು ವರ್ಷಗಳಿಂದ ಭಾರತದ ಚಿನ್ನಾಭರಣ ಮಾರುಕಟ್ಟೆಯಲ್ಲಿನ ಗಮನಾರ್ಹ ಬದಲಾವಣೆಯ ಬಗ್ಗೆ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಹಾಗೆಯೇ ಈ ಬದಲಾವಣೆಗೆ ಗ್ರಾಹಕರ ನಡವಳಿಕೆ ಮತ್ತು ಸರ್ಕಾರದ ನಿಯಮಗಳಲ್ಲಿನ ಬದಲಾವಣೆಗಳು ಕಾರಣ ಎಂದು ವರದಿ ಉಲ್ಲೇಖ ಮಾಡಿದೆ.

 

ವರ್ಲ್ಡ್ ಗೋಲ್ಡ್ ಕೌನ್ಸಿಲ್‌ನ ಭಾರತದ ಪ್ರಾದೇಶಿಕ ಸಿಇಒ ಸೋಮಸುಂದರಂ ಪಿಆರ್, "ಕಳೆದ ದಶಕದಲ್ಲಿ ಭಾರತೀಯ ಚಿಲ್ಲರೆ ಆಭರಣ ಮಾರುಕಟ್ಟೆ ಹಲವಾರು ರಚನಾತ್ಮಕ ಬದಲಾವಣೆಗಳನ್ನು ಕಂಡಿದೆ. ಕಡ್ಡಾಯವಾದ ಹಾಲ್‌ಮಾರ್ಕಿಂಗ್ ನಿಯಮ ಅಳವಡಿಕೆಯಾಗಿದ್ದು, ವ್ಯಾಪಾರಿಗಳಿಗೆ ಸಮನಾದ ವೇದಿಕೆ ಒದಗಿಸಿದೆ. ಪ ರಾಷ್ಟ್ರೀಯ ಮತ್ತು ಪ್ರಾದೇಶಿಕ ಸರಪಳಿ ಅಂಗಡಿಗಳು ತಮ್ಮ ಸಾಲದ ಸೌಲಭ್ಯಗಳು ಮತ್ತು ದೊಡ್ಡ ದಾಸ್ತಾನುಗಳ ಕಾರಣದಿಂದಾಗಿ ಪ್ರಸ್ತುತ ಟ್ರೆಂಡ್‌ನಲ್ಲಿ ಹೆಚ್ಚು ಮಾರುಕಟ್ಟೆ ಪಾಲು ಪಡೆಯಲಿವೆ," ಎಂದು ತಿಳಿಸಿದ್ದಾರೆ.

"ಕ್ರೆಡಿಟ್‌ಗೆ ಸಮಾನ ಪ್ರವೇಶವನ್ನು ಪಡೆಯಬೇಕಾದರೆ ಮತ್ತು ಮಾರುಕಟ್ಟೆ ಪಾಲನ್ನು ರಕ್ಷಿಸಲು ಸಣ್ಣ ವ್ಯಾಪಾರಿಗಳು ಹೆಚ್ಚು ಪಾರದರ್ಶಕವಾಗಬೇಕು ಮತ್ತು ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸಿಕೊಳ್ಳಬೇಕು. ಮತ್ತೊಂದೆಡೆ, ಉತ್ಪಾದನಾ ವಲಯ ಕೂಡ ಪರಿವರ್ತನೆಯ ಹಾದಿಯಲ್ಲಿದೆ. ಈಗಾಗಲೇ ಕೆಲವೆಡೆ ಸ್ಥಾಪನೆಯಾಗಿರುವ ಜ್ಯುವೆಲ್ಲರಿ ಪಾರ್ಕ್‌ಗಳು, ನೈತಿಕ ಮಾನದಂಡಗಳು ಮತ್ತು ಕೆಲಸದ ಪರಿಸ್ಥಿತಿಗಳ ಸವಾಲು ಎದುರಿಸಲು ಸಹಾಯ ಮಾಡುತ್ತದೆ. ಇದು ಉತ್ಪಾದನಾ ಉದ್ಯಮದ ಬೆಳವಣಿಗೆಗೆ ಅಡ್ಡಿಯಾಗುವ ಅಡೆತಡೆಗಳನ್ನು ಕೂಡ ದೂರ ಮಾಡುತ್ತವೆ. ಜೊತೆ, ಬೇಡಿಕೆಯನ್ನು ಕೂಢ ಧನಾತ್ಮಕವಾಗಿ ಬೆಂಬಲಿಸುತ್ತದೆ. ಅಸಲಿಗೆ ವಿಷಯವೆಂದರೆ, ಆಭರಣ ಕ್ಷೇತ್ರವು ಬೆಳೆದಿದೆ," ಎಂದಿದ್ದಾರೆ.

 ಆನ್‌ಲೈನ್ ಆಭರಣ ಮಾರಾಟದಯತ್ತ ಆಸಕ್ತಿ

ಆನ್‌ಲೈನ್ ಆಭರಣ ಮಾರಾಟದಯತ್ತ ಆಸಕ್ತಿ

ಕಳೆದ ಕೆಲವು ವರ್ಷಗಳಿಂದ ಭಾರತೀಯ ಆನ್‌ಲೈನ್ ಆಭರಣ ಮಾರುಕಟ್ಟೆಯು ತ್ವರಿತ ಬೆಳವಣಿಗೆ ಕಂಡಿದೆ. ಮಿಲೇನಿಯಲ್‌ಗಳಿಂದ ಆಭರಣಗಳಿಗೆ ಬೇಡಿಕೆ ಹೆಚ್ಚಿದೆ. ಹೆಚ್ಚುತ್ತಿರುವ ಇಂಟರ್ನೆಟ್ ಲಭ್ಯತೆ ಮತ್ತು ಸ್ಮಾರ್ಟ್‌ಫೋನ್ ಮಾರಾಟದಲ್ಲಿನ ಹೆಚ್ಚಳದಿಂದ ಉದ್ಯಮಕ್ಕೆ ಬೇಡಿಕೆ ಹೆಚ್ಚಿದೆ. ಹೆಚ್ಚಿನ ಮಾರಾಟಗಳನ್ನು 18 ರಿಂದ 45 ವರ್ಷದೊಳಗಿನ ಗ್ರಾಹಕರು ನಡೆಸುತ್ತಾರೆ. ಅಸಕ್ತಿಕರ ವಿಷಯವೆಂದರೆ, ಇತ್ತೀಚೆಗೆ ಆನ್‌ಲೈನ್ ಆಭರಣ ಖರೀದಿ ಏರಿಕೆಯಾಗಿದೆ. ಸರಾಸರಿ ಟಿಕೆಟ್ ಗಾತ್ರವು 5 ಮತ್ತು 10 ಗ್ರಾಂಗಳ ನಡುವೆ ಉಳಿದಿದೆ. ಆನ್‌ಲೈನ್ ಖರೀದಿದಾರರು 18-ಕ್ಯಾರೆಟ್ ಚಿನ್ನದಲ್ಲಿ ಹಗುರವಾದ ದೈನಂದಿನ ಉಡುಗೆ/ಫ್ಯಾಶನ್ ಆಭರಣಗಳನ್ನು ಖರೀದಿಸುತ್ತಾರೆ. ಮುಂದಿನ ಐದು ವರ್ಷಗಳಲ್ಲಿ ಆನ್‌ಲೈನ್ ಆಭರಣಗಳ ಮಾರುಕಟ್ಟೆ ಪಾಲು ಶೇ. 7-10ರಷ್ಟು ಹೆಚ್ಚಾಗಬಹುದು ಎಂದು ವರದಿಯು ಉಲ್ಲೇಖಿಸಿದೆ.

 ಸವಾಲುಗಳು ಕೂಡಾ ಹಲವಿದೆ.

ಸವಾಲುಗಳು ಕೂಡಾ ಹಲವಿದೆ.

ಚಿಲ್ಲರೆ ಮಾರುಕಟ್ಟೆಯು ಹೆಚ್ಚು ದೃಢ ಮತ್ತು ಸಂಘಟಿತ ವ್ಯವಸ್ಥೆಯ ಕಡೆಗೆ ಸಾಗುವ ಭರವಸೆ ಮೂಡಿಸಿದ್ದರೂ, ಅದು ಹಲವಾರು ಸವಾಲುಗಳನ್ನು ಇನ್ನೂ ಎದುರಿಸುತ್ತಿದೆ. ಭಾರತೀಯ ರತ್ನ ಮತ್ತು ಆಭರಣ ಉದ್ಯಮವು ಇನ್ನೂ ಬ್ಯಾಂಕ್ ಸಾಲವನ್ನು ಪಡೆದುಕೊಳ್ಳುವಲ್ಲಿ ಹೆಣಗಾಡುತ್ತಿದೆ. ಈ ವಲಯಕ್ಕೆ ನೀಡಲಾದ ಶೇ.20ಕ್ಕಿಂತ ಹೆಚ್ಚಿನ ಸಾಲಗಳು ಅನುತ್ಪಾದಕ ಆಸ್ತಿಗಳಾಗಿ (ಎನ್‌ಪಿಎ) ಮಾರ್ಪಟ್ಟಿವೆ. ಇದರ ಪರಿಣಾಮವಾಗಿ ರತ್ನ ಮತ್ತು ಆಭರಣ ಉದ್ಯಮವು ಭಾರತದ ಒಟ್ಟು ಸಾಲ ವಿತರಣೆಯ ಕೇವಲ ಶೇ.2.7ರಷ್ಟು ಪಾಲನ್ನು ಮಾತ್ರ ಗಳಿಸಿವೆ. ಧನಸಹಾಯಕ್ಕಾಗಿ ಮಾಸಿಕ ಚಿನ್ನದ ಯೋಜನೆಯನ್ನು ಅವಲಂಬಿಸಿರುವ ಅಥವಾ ಹಣದ ಸಾಲ ಒದಗಿಸುವ ಸಣ್ಣ ಸ್ವತಂತ್ರ ಆಭರಣ ವ್ಯಾಪಾರಿಗಳು ಹಣಕಾಸು ತೊಂದರೆ ಎದುರಿಸುತ್ತಿದ್ದಾರೆ.

 ಉತ್ಪಾದನೆಯ ಮಾಹಿತಿ
 

ಉತ್ಪಾದನೆಯ ಮಾಹಿತಿ

ಚಿನ್ನದ ಆಭರಣಗಳ ಭಾರತ ವಿಶ್ವದ ಅತಿದೊಡ್ಡ ತಯಾರಕರಲ್ಲಿ ಒಂದಾಗಿದ್ದರೂ, ಭಾರತದ ಉತ್ಪಾದನಾ ಉದ್ಯಮವು ಇನ್ನೂ ವಿಭಜಿತವಾಗಿದೆ ಮತ್ತು ಅಸಂಘಟಿತವಾಗಿದೆ. ಕೇವಲ ಶೇ.15-20ರಷ್ಟು ಉತ್ಪಾದನಾ ಘಟಕಗಳು ಸಂಘಟಿತ ಮತ್ತು ದೊಡ್ಡ ಪ್ರಮಾಣದ ಸೌಲಭ್ಯಗಳಾಗಿ ಕಾರ್ಯನಿರ್ವಹಿಸುತ್ತವೆ. ಇದು ಸುಮಾರು ಐದು ವರ್ಷಗಳ ಹಿಂದೆ ಶೇ.10 ಕ್ಕಿಂತ ಕಡಿಮೆ ಇತ್ತು. ವರದಿ ಪ್ರಕಾರ, ಈ ಬೆಳವಣಿಗೆಯನ್ನು ಮೂರು ವಿಭಿನ್ನ ಅಂಶಗಳಿಗೆ ಕಾರಣವಾಗಿದೆ: ಸಂಘಟಿತ ಚಿಲ್ಲರೆ ವ್ಯಾಪಾರದ ವಿಸ್ತರಣೆ, ರಫ್ತು ಬೆಳವಣಿಗೆ ಮತ್ತು ಅಧಿಕಾರಿಗಳ ಹಿಡಿತ. ಉತ್ಪಾದನಾ ಉದ್ಯಮದಲ್ಲಿ ಇನ್ನೂ ಸಣ್ಣ ಆಭರಣ ಕಾರ್ಯಾಗಾರಗಳು ಮತ್ತು ಕುಶಲಕರ್ಮಿಗಳು ಪ್ರಾಬಲ್ಯ ಹೊಂದಿದ್ದಾರೆ. ಭಾರತದಲ್ಲಿ ತಯಾರಕರ ಸಂಖ್ಯೆಯ ಬಗ್ಗೆ ಅಧಿಕೃತ ಅಂದಾಜು ದೊರೆತಿಲ್ಲ. ಮತ್ತು ಅನೇಕರು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಉದ್ಯಮದ ಅಂದಾಜಿನ ಪ್ರಕಾರ ದೇಶಾದ್ಯಂತ 20,000-30,000 ಉತ್ಪಾದನಾ ಘಟಕಗಳಿವೆ. ಆದರೆ 'ಕುಶಲಕರ್ಮಿಗಳು ಭಾರತೀಯ ರತ್ನ ಮತ್ತು ಆಭರಣ ಉದ್ಯಮದ ಬೆನ್ನೆಲುಬು. ಆದರೆ ಅವರಲ್ಲಿ ಅನೇಕರು ಇನ್ನೂ ಅತ್ಯಂತ ಕಳಪೆ ಸ್ಥಿತಿಯಲ್ಲಿ ಕೆಲಸ ಮಾಡುತ್ತಾರೆ ಮತ್ತು ಇತರ ಕೈಗಾರಿಕೆಗಳಿಗೆ ಹೋಲಿಸಿದರೆ ಕಡಿಮೆ ವೇತನವನ್ನು ಪಡೆಯುತ್ತಾರೆ.

 ಚಿಲ್ಲರೆ ಮಾರುಕಟ್ಟೆ ರೂಪುರೇಷೆ

ಚಿಲ್ಲರೆ ಮಾರುಕಟ್ಟೆ ರೂಪುರೇಷೆ

ಭಾರತದಲ್ಲಿನ ಚಿಲ್ಲರೆ ಆಭರಣ ಮಾರುಕಟ್ಟೆಯು ಕಳೆದ ದಶಕದಲ್ಲಿ ಗಮನಾರ್ಹ ಬದಲಾವಣೆಗಳನ್ನು ಕಂಡಿದೆ. ವಿಕಸನಗೊಳ್ಳುತ್ತಿರುವ ಗ್ರಾಹಕರ ಆದ್ಯತೆ ಮತ್ತು ಸರ್ಕಾರದ ನಿಯಂತ್ರಣ ಉದ್ಯಮವನ್ನು ಹೆಚ್ಚು ಸಂಘಟಿತವಾಗಲು ಉತ್ತೇಜಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ನೋಟು ಅಮಾನ್ಯೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನೀತಿಗಳು ಕೂಡ ಉದ್ಯಮವನ್ನು ಹೆಚ್ಚು ಸಂಘಟಿತವಾಗಲು ಸಹಾಯ ಮಾಡಿದೆ. ಈಗ ಇದು ಹೆಚ್ಚು ಪಾರದರ್ಶಕವಾಗಿದೆ. ಅಲ್ಲದೆ, ಗ್ರಾಹಕರು ಉತ್ತಮ ಶಾಪಿಂಗ್ ಅನುಭವಗಳನ್ನು, ಪಾರದರ್ಶಕ ಬೆಲೆಗಳು, ಬೈಬ್ಯಾಕ್ ನೀತಿಗಳು ಮತ್ತು ರಸೀತಿಗಳು ಹಾಗೂ ಆನ್‌ಲೈನ್ ವಹಿವಾಟುಗಳ ಮೂಲಕ ಹೆಚ್ಚು ಖರೀದಿಗೆ ಆದ್ಯತೆ ನೀಡುತ್ತಿರುವುದು ಉದ್ಯಮಕ್ಕೆ ನೆರವು ನೀಡಿದೆ. ಇದರ ಪರಿಣಾಮವಾಗಿ, ಕಳೆದ 10-15 ವರ್ಷಗಳಲ್ಲಿ ಸರಣಿ ಮಳಿಗೆಗಳು ಬೆಳೆದಿವೆ. 2021 ರ ಹೊತ್ತಿಗೆ ಇದು ಶೇ. 35ರಷ್ಟು ಮಾರುಕಟ್ಟೆ ಪಾಲನ್ನು ಗಳಿಸಿವೆ. ಉತ್ತಮ ವಿನ್ಯಾಸಗಳು ಮತ್ತು ಗ್ರಾಹಕರಲ್ಲಿ ಹಾಲ್‌ಮಾರ್ಕಿಂಗ್ ಬಗ್ಗೆ ಹೆಚ್ಚುತ್ತಿರುವ ಅರಿವು, ಉತ್ತಮ ಬೆಲೆ ರಚನೆಗಳು ಮತ್ತು ಸ್ಪರ್ಧಾತ್ಮಕ ರಿಟರ್ನ್ ನೀತಿಗಳು ಮಾರುಕಟ್ಟೆಗೆ ವೇಗ ನೀಡಿವೆ

English summary

Jewellery Shops Increased in India, Here's Details Explained in Kannada

Gold and Silver Jewelery Shops Increased in India by 35 percent, here is reason.
Story first published: Wednesday, September 28, 2022, 16:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X