ಜಿಯೋ ಹೊಸದಾಗಿ 5 ಪ್ರಿಪೇಯ್ಡ್ ಯೋಜನೆಗಳನ್ನು ಆರಂಭ ಮಾಡಿದೆ. ಈ ಯೋಜನೆಗಳಲ್ಲಿ, ಬಳಕೆದಾರರು ಅನಿಯಮಿತ ಅಥವಾ ಅನ್‌ಲಿಮಿಟೆಡ್ ಕರೆ ಮತ್ತು ಡೇಟಾವನ್ನು ಪಡೆಯಬಹುದಾಗಿದೆ. ಸಂಗೀತ ಸ್ಟ್ರೀಮಿಂಗ್ ಅಪ್ಲಿಕೇಶನ್ ಜಿಯೋ ಸಾವನ್ ಪ್ರೋಗೆ ಉಚಿತ ಚಂದಾದಾರಿಕೆಯನ್ನು ಪಡೆಯಲು ಸಾಧ್ಯವಾಗುತ್ತದೆ. ರಿಲಯನ್ಸ್ ಜಿಯೋ ಟ್ವೀಟ್ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದೆ.
ಈ ಹಿಂದೆ ಜಿಯೋ 5G ರಿಚಾರ್ಜ್ ದರ, ವ್ಯಾಲಿಡಿಟಿ ಇತರೆ ಮಾಹಿತಿಯನ್ನು ಹಂಚಿಕೊಂಡಿತ್ತು. ರಿಲಯನ್ಸ್ ಸಂಸ್ಥೆಯು ತನ್ನ 5ಜಿ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಇದರಡಿಯಲ್ಲಿ 61 ರೂಪಾಯಿಯ ಪ್ಲಾನ್ ಇದೆ. ಅದು ಈಗಿನ ಪ್ಲಾನ್‌ನಂತೆಯೇ ವ್ಯಾಲಿಡಿಟಿಯನ್ನು ಹೊಂದಿದೆ. ಹಾಗೆಯೇ 6ಜಿಬಿ ಡೇಟಾವನ್ನು ಹೊಂದಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

269 ರೂಪಾಯಿ ಪ್ಲಾನ್ 28 ದಿನಗಳ ವ್ಯಾಲಿಡಿಟಿ
269 ರೂಪಾಯಿಯ ಪ್ಲಾನ್‌ನ ವ್ಯಾಲಿಡಿಟಿಯು 28 ದಿನಗಳವರೆಗೆ ಇರುತ್ತದೆ. ಇದರಲ್ಲಿ, ಬಳಕೆದಾರರು 1.5 ಜಿಬಿ ಡೈಲಿ ಹೈ-ಸ್ಪೀಡ್ ಡೇಟಾ, ಪ್ರತಿದಿನ 100 ಎಸ್‌ಎಂಎಸ್ ಮತ್ತು ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಕರೆಗಳನ್ನು ಪಡೆಯಬಹುದಾಗಿದೆ. ಇದರೊಂದಿಗೆ, ಜಿಯೋ ಸಾವನ್ ಪ್ರೋ ಚಂದಾದಾರಿಕೆಯೊಂದಿಗೆ ಇತರ ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶ ಲಭ್ಯವಿರುತ್ತದೆ. ಅದೇ ಸಮಯದಲ್ಲಿ, ಅರ್ಹ ಗ್ರಾಹಕರು ಅನಿಯಮಿತ 5ಜಿ ಡೇಟಾವನ್ನು ಸಹ ಪಡೆಯುತ್ತಾರೆ.
589 ರೂಪಾಯಿಗೆ 56 ದಿನಗಳ ವ್ಯಾಲಿಡಿಟಿ ಪ್ಲಾನ್
589 ರೂಪಾಯಿ ಯೋಜನೆಯಲ್ಲಿ 56 ದಿನಗಳ ವ್ಯಾಲಿಡಿಟಿ ಲಭ್ಯವಿರುತ್ತದೆ. ಇದರಲ್ಲಿ, ಬಳಕೆದಾರರು ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಕರೆಯೊಂದಿಗೆ ಹೈ-ಸ್ಪೀಡ್ 2GB ಡೇಟಾವನ್ನು ಮತ್ತು ಪ್ರತಿದಿನ 100 ಎಸ್‌ಎಂಎಸ್ ಅನ್ನು ಪಡೆಯುತ್ತಾರೆ. ಇದರೊಂದಿಗೆ, ಯೋಜನೆಯಲ್ಲಿ ಜಿಯೋ ಸಾವನ್ ಪ್ರೊ ಚಂದಾದಾರಿಕೆಯೊಂದಿಗೆ ಇತರ ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶ ಲಭ್ಯವಿರುತ್ತದೆ. ಅದೇ ಸಮಯದಲ್ಲಿ, ಅರ್ಹ ಗ್ರಾಹಕರು ಇದರಲ್ಲಿ ಅನಿಯಮಿತ 5ಜಿ ಡೇಟಾವನ್ನು ಸಹ ಪಡೆಯುತ್ತಾರೆ.
529 ರೂಪಾಯಿಯ 56 ದಿನಗಳ ವ್ಯಾಲಿಡಿಟಿಯ ಪ್ಲಾನ್
529 ರೂಪಾಯಿಯ ಯೋಜನೆಯಲ್ಲಿ 56 ದಿನಗಳ ವ್ಯಾಲಿಡಿಟಿ ಲಭ್ಯವಿರುತ್ತದೆ. ಇದರಲ್ಲಿ, ಬಳಕೆದಾರರು ಡೈಲಿ ಡೇಟಾ, ಪ್ರತಿದಿನ 100 ಎಸ್‌ಎಂಎಸ್ ಮತ್ತು ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಕರೆಗಳನ್ನು ಪಡೆಯಬಹುದಾಗಿದೆ. ಇದರೊಂದಿಗೆ ಜಿಯೋ ಸಾವನ್ ಪ್ರೋ ಚಂದಾದಾರಿಕೆಯೊಂದಿಗೆ ಇತರ ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶ ಲಭ್ಯವಿರುತ್ತದೆ. ಅದೇ ಸಮಯದಲ್ಲಿ, ಅರ್ಹ ಗ್ರಾಹಕರು ಇದರಲ್ಲಿ ಅನಿಯಮಿತ 5ಜಿ ಡೇಟಾವನ್ನು ಕೂಡಾ ಪಡೆಯಬಹುದಾಗಿದೆ.
789 ರೂಪಾಯಿಯ 84 ದಿನಗಳ ವ್ಯಾಲಿಡಿಟಿಯ ಪ್ಲಾನ್
789 ರೂಪಾಯಿ ಯೋಜನೆಯಲ್ಲಿ 84 ದಿನಗಳ ವ್ಯಾಲಿಡಿಟಿ ಲಭ್ಯವಿರುತ್ತದೆ. ಇದರಲ್ಲಿ, ಬಳಕೆದಾರರು ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಕರೆಯೊಂದಿಗೆ ಹೈ-ಸ್ಪೀಡ್ 2 ಜಿಬಿ ಡೇಟಾವನ್ನು ಮತ್ತು ಪ್ರತಿದಿನ 100 ಎಸ್‌ಎಂಎಸ್ ಅನ್ನು ಪಡೆಯಬಹುದಾಗಿದೆ. ಯೋಜನೆಯಲ್ಲಿ ಜಿಯೋ ಸಾವನ್ ಪ್ರೋ ಚಂದಾದಾರಿಕೆಯೊಂದಿಗೆ ಇತರ ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶ ಲಭ್ಯವಿರುತ್ತದೆ. ಅದೇ ಸಮಯದಲ್ಲಿ, ಅರ್ಹ ಗ್ರಾಹಕರು ಇದರಲ್ಲಿ ಅನಿಯಮಿತ 5ಜಿ ಡೇಟಾವನ್ನು ಸಹ ಪಡೆಯಬಹುದಾಗಿದೆ.
739 ರೂಪಾಯಿಯ 84 ದಿನಗಳ ವ್ಯಾಲಿಡಿಟಿಯ ಪ್ಲಾನ್
739 ರೂಪಾಯಿಯ ಯೋಜನೆಯಲ್ಲಿ 84 ದಿನಗಳ ವ್ಯಾಲಿಡಿಟಿ ಲಭ್ಯವಿರುತ್ತದೆ. ಇದರಲ್ಲಿ, ಬಳಕೆದಾರರು 1.5 ಜಿಬಿ ಡೈಲಿ ಹೈ-ಸ್ಪೀಡ್ ಡೇಟಾ, ಪ್ರತಿದಿನ 100 ಎಸ್‌ಎಂಎಸ್ ಮತ್ತು ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಕರೆಗಳನ್ನು ಪಡೆಯಬಹುದಾಗಿದೆ. ಇದರೊಂದಿಗೆ, ಜಿಯೋ ಸಾವನ್ ಪ್ರೋ ಚಂದಾದಾರಿಕೆಯೊಂದಿಗೆ ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶ ಲಭ್ಯವಿರುತ್ತದೆ. ಅದೇ ಸಮಯದಲ್ಲಿ, ಅರ್ಹ ಗ್ರಾಹಕರು ಇದರಲ್ಲಿ ಅನಿಯಮಿತ 5ಜಿ ಡೇಟಾವನ್ನು ಪಡೆಯಬಹುದಾಗಿದೆ.


Click it and Unblock the Notifications