Netflix Subscription: ನೆಟ್‌ಫ್ಲಿಕ್ಸ್ ಚಂದಾದಾರಿಕೆಯೊಂದಿಗೆ ಜಿಯೋ ಪ್ರಿಪೇಯ್ಡ್ ಪ್ಲ್ಯಾನ್ ಆರಂಭ, ಇಲ್ಲಿದೆ ವಿವರ

ರಿಲಯನ್ಸ್ ಜಿಯೋ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ಒಳಗೊಂಡ ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಅನ್ನು ಪ್ರಾರಂಭ ಮಾಡಿದೆ. ನೆಟ್‌ಫ್ಲಿಕ್ಸ್ ಅನ್ನು ಪ್ರಿಪೇಯ್ಡ್ ಪ್ಲ್ಯಾನ್ ಜೊತೆಯಲ್ಲಿ ನೀಡುತ್ತಿರುವುದು ಇದೇ ಮೊದಲಾಗಿದೆ. ಜಿಯೋದ ಹೊಸ ಪ್ರಿಪೇಯ್ಡ್ ಪ್ಲ್ಯಾನ್‌ನಲ್ಲಿ ಉಚಿತ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಪಡೆಯಲು ಸಾಧ್ಯವಿದೆ. ನೆಟ್‌ಫ್ಲಿಕ್ಸ್ ವೀಕ್ಷಿಸಲು ಬಯಸುವ ಆದರೆ ಅದಕ್ಕಾಗಿ ಪ್ರತ್ಯೇಕ ಚಂದಾದಾರಿಕೆ ಮಾಡಲು ಬಯಸದ ಜನರಿಗೆ ಇದು ಉತ್ತಮ ಆಯ್ಕೆಯಾಗಿದೆ.

ರಿಲಯನ್ಸ್ ಜಿಯೋ ಈಗ ತನ್ನ ಪ್ರಿಪೇಯ್ಡ್ ಪ್ಲ್ಯಾನ್‌ನೊಂದಿಗೆ ನೆಟ್‌ಫ್ಲಿಕ್ಸ್ ಚಂದಾದಾರಿಕೆಗಳನ್ನು ನೀಡುತ್ತಿದೆ. ಇದು ಜಿಯೋದ ಪ್ರಿಪೇಯ್ಡ್ ಪ್ಲ್ಯಾನ್‌ಗಳಿಗೆ ಅಧಿಕ ಗ್ರಾಹಕರನ್ನು ಆಕರ್ಷಿಸುವ ಸಾಧ್ಯತೆಯಿದೆ. ಜಿಯೋದ ಹೊಸ ಪ್ರಿಪೇಯ್ಡ್ ಪ್ಲ್ಯಾನ್‌ಗಳು ನಾವು ಕಡಿಮೆ ಮೊತ್ತದಲ್ಲಿ ರೀಚಾರ್ಜ್‌ ಹಾಗೂ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ಕೂಡಾ ಪಡೆಯಲು ಸಹಕಾರಿಯಾಗಿದೆ. ಅನ್‌ಲಿಮಿಟೆಡ್ ಡೇಟಾ, ಅನ್‌ಲಿಮಿಟೆಡ್ ಕರೆ ಮತ್ತು ಉಚಿತ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಲಭ್ಯವಿದೆ.

ನೆಟ್‌ಫ್ಲಿಕ್ಸ್ ಚಂದಾದಾರಿಕೆ ಜೊತೆ ಜಿಯೋ ಪ್ರಿಪೇಯ್ಡ್ ಪ್ಲ್ಯಾನ್ ಆರಂಭ

ರಿಲಯನ್ಸ್ ಜಿಯೋ ನೆಟ್‌ಫ್ಲಿಕ್ಸ್: ಬೆಲೆ ವಿವರಗಳು

ಮೊಬೈಲ್‌ನಲ್ಲಿ ಮಾತ್ರ ನೆಟ್‌ಫ್ಲಿಕ್ಸ್ ಪಡೆಯಬೇಕಾದರೆ ಅದಕ್ಕೆ ಜಿಯೋದಲ್ಲಿ 1,099 ರೂಪಾಯಿಯ ಪ್ಲ್ಯಾನ್ ಇದೆ. ಆದರೆ 1,499 ರೂಪಾಯಿ ಪ್ಲ್ಯಾನ್‌ನಲ್ಲಿ ನೆಟ್‌ಫ್ಲಿಕ್ಸ್ ಬೇಸಿಕ್‌ ಚಂದಾದಾರಿಕೆ ಲಭ್ಯವಾಗುತ್ತದೆ. ಈ ಎರಡೂ ಪ್ಲ್ಯಾನ್‌ಗಳು 84 ದಿನಗಳ ಪ್ಲ್ಯಾನ್ ಆಗಿದೆ. ಈ ಚಂದಾದಾರಿಕೆಯೊಂದಿಗೆ 400 ಮಿಲಿಯನ್ ಜಿಯೋ ಪ್ರಿಪೇಯ್ಡ್ ಗ್ರಾಹಕರು ಜಿಯೋ ಪ್ರಿಪೇಯ್ಡ್ ಬಂಡಲ್ ಪ್ಲ್ಯಾನ್ ಮೂಲಕ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ಪಡೆಯುವ ಆಯ್ಕೆಯನ್ನು ಹೊಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಸಿಇಒ ಕಿರಣ್ ಥಾಮಸ್, "ನಮ್ಮ ಪ್ರಿಪೇಯ್ಡ್ ಪ್ಲ್ಯಾನ್‌ನೊಂದಿಗೆ ನೆಟ್‌ಫ್ಲಿಕ್ಸ್ ಬಂಡಲ್‌ ಪ್ಲ್ಯಾನ್ ಬಿಡುಗಡೆಯು ನಮ್ಮ ಸಂಕಲ್ಪವನ್ನು ಪ್ರದರ್ಶಿಸುವ ಮತ್ತೊಂದು ಹಂತವಾಗಿದೆ. ನೆಟ್‌ಫ್ಲಿಕ್ಸ್‌ನಂತಹ ಜಾಗತಿಕ ಪಾಲುದಾರರೊಂದಿಗೆ ನಮ್ಮ ಸಹಭಾಗಿತ್ವವು ಬಲವಾಗಿ ಬೆಳೆದಿದೆ. ಪ್ರಪಂಚದ ಉಳಿದ ಭಾಗಗಳಿಗೆ ನಮ್ಮ ನೆಟ್‌ವರ್ಕ್ ವಿಸ್ತರಣೆ ಮಾಡಲಾಗುತ್ತದೆ," ಎಂದು ತಿಳಿಸಿದ್ದಾರೆ.

ನೆಟ್‌ಫ್ಲಿಕ್ಸ್ ಇಂಡಿಯಾ ಯೋಜನೆ ವಿವರಗಳು

ನೆಟ್‌ಫ್ಲಿಕ್ಸ್ ಇಂಡಿಯಾ ವಿವಿಧ ಪ್ರಕಾರಗಳು ಮತ್ತು ನೂತನವಾದ ಚಲನಚಿತ್ರಗಳು ಮತ್ತು ಸೀರಿಸ್‌ಗಳ ವಿಭಿನ್ನ ಮತ್ತು ವೈವಿಧ್ಯಮಯ ಪ್ಲಾಟ್‌ಫಾರ್ಮ್ ಅನ್ನು ನಿರ್ಮಿಸಿದೆ. ಇತ್ತೀಚಿನ ವರ್ಷಗಳಲ್ಲಿ, ನೆಟ್‌ಫ್ಲಿಕ್ಸ್‌ನಲ್ಲಿ ಹಲವಾರು ಸ್ಥಳೀಯವಾಗಿ ಹಿಟ್‌ ಆದ ಸೀರಿಸ್‌ಗಳಿದೆ. ದೆಹಲಿ ಕ್ರೈಮ್, ರಾಣಾ ನಾಯ್ಡು, ಕ್ಲಾಸ್, ಕೊಹ್ರಾ, ಡಾರ್ಲಿಂಗ್ಸ್, ಆರ್‌ಆರ್‌ಆರ್‌, ಗಂಗೂಬಾಯಿ ಕಥಿವಾಡಿ, ಮೋನಿಕಾ ಓ ಮೈ ಡಾರ್ಲಿಂಗ್, ಶೆಹಜಾದಾ, ಲಸ್ಟ್ ಸ್ಟೋರೀಸ್ ಮತ್ತು ಇನ್ನೂ ಅನೇಕ ಜನಪ್ರಿಯ ಸೀರಿಸ್, ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಹಿಟ್ ಆಗಿದೆ.

"ಇತ್ತೀಚಿನ ವರ್ಷಗಳಲ್ಲಿ, ಹಲವಾರು ಯಶಸ್ವಿ ಸ್ಥಳೀಯ ಸೀರಿಸ್, ಸಾಕ್ಷ್ಯಚಿತ್ರಗಳು ಮತ್ತು ಚಲನಚಿತ್ರಗಳನ್ನು ಪ್ರಾರಂಭಿಸಿದ್ದೇವೆ. ಇದನ್ನು ಭಾರತದಾದ್ಯಂತ ಪ್ರೇಕ್ಷಕರು ನೆಚ್ಚಿದ್ದಾರೆ. ನಮ್ಮಲ್ಲಿ ನೋಡಲೇಬೇಕಾದ ಸಿನಿಮಾ, ಸೀರಿಸ್‌ಗಳ ಸಂಗ್ರಹವು ಬೆಳೆಯುತ್ತಿದೆ," ಎಂದು ನೆಟ್‌ಫ್ಲಿಕ್ಸ್‌ನ ಎಪಿಎಸಿ ಪಾರ್ಟ್‌ನರ್‌ಶಿಪ್‌ನ ಉಪಾಧ್ಯಕ್ಷ ಟೋನಿ ಝಮೆಕೋವ್ಸ್ಕಿ ಹೇಳಿದ್ದಾರೆ.

"ಜಿಯೋ ಜೊತೆಗಿನ ನಮ್ಮ ಹೊಸ ಪ್ರಿಪೇಯ್ಡ್ ಬಂಡಲ್ ಪಾರ್ಟ್‌ನರ್‌ಶಿಪ್ ಹೆಚ್ಚಿನ ಗ್ರಾಹಕರಿಗೆ ನಮ್ಮಲ್ಲಿನ ಉತ್ತಮ ಸಿರೀಸ್‌ಗಳನ್ನು ನೋಡಲು ಸಹಾಯವಾಗಲಿದೆ. ಹಾಗೆಯೇ ಪ್ರಪಂಚದಾದ್ಯಂತ ನಡೆಯುವ ಕೆಲವು ನಂಬಲು ಸಾಧ್ಯವಾಗದ ಸಿನಿಮಾಗಳನ್ನು ಕೂಡಾ ನೋಡಬಹುದು," ಎಂದು ಕೂಡಾ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ನಾವು ಭಾರತೀಯ ಹಿಟ್ ಸಿನಿಮಾ, ಸೀರಿಸ್‌ಗಳ ಜೊತೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಜಾಗತಿಕವಾಗಿ ಹಿಟ್ ಆದ ಮನಿ ಹೀಸ್ಟ್, ಸ್ಕ್ವಿಡ್ ಗೇಮ್, ನೆವರ್ ಹಾವ್ ಐ ಎವರ್, ಸ್ಟ್ರೇಜರ್ ಥಿಂಗ್ಸ್, ವಡ್‌ನೆಸ್‌ಡೇಯಂತಹ ಸೀರಿಸ್‌ಗಳನ್ನು ನೋಡಬಹುದು. ಹಲವಾರು ಚಲನಚಿತ್ರಗಳನ್ನು ಕೂಡಾ ನೋಡಬಹುದು. ಈ ವರ್ಷದ ಆರಂಭದಲ್ಲಿ, ನೆಟ್‌ಫ್ಲಿಕ್ಸ್ ಬೀಸ್ಟ್, ಗಾಡ್‌ಫಾದರ್, ಧಮಾಕಾ, ಲವ್ ಟುಡೇ, ಮೇಜರ್, ದಸರಾ ಮತ್ತು ವಿರೂಪಾಕ್ಷಂ ಸೇರಿದಂತೆ ಹಲವಾರು ಸಿನಿಮಾಗಳನ್ನು ಬಿಡುಗಡೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+