ನೀವು ಕೂಡಾ ಉದ್ಯೋಗವನ್ನು ಹುಡುಕುತ್ತಿದ್ದೀರಾ?. ಹಾಗಿದ್ದರೆ ನಿಮಗೆ ಇಲ್ಲಿದೆ ಸಿಹಿಸುದ್ದಿ. ಬಳ್ಳಾರಿಯಲ್ಲಿ ಉದ್ಯೋಗವಕಾಶವೊಂದಿದ್ದು, ಮಾಸಿಕ ವೇತನ, ಅರ್ಹತೆ ಇತರೆ ವಿವರವನ್ನು ನಾವಿಲ್ಲಿ ನೀಡಿದ್ದೇವೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಛೇರಿ ಬಳ್ಳಾರಿ ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಜವಾನ ಹುದ್ದೆ ಖಾಲಿಯಿದೆ. ಈ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 2024 ರ ಜನವರಿ 4 ಆಗಿದೆ.

ಅಧಿಸೂಚನೆ ಏನು ಹೇಳುತ್ತದೆ?
ಅಧಿಸೂಚನೆ ಪ್ರಕಾರ ಹೈದರಾಬಾದ್- ಕರ್ನಾಟಕ ಸ್ಥಳೀಯ ವೃಂದದಲ್ಲಿ 29 ಜವಾನ ಹುದ್ದೆ ಖಾಲಿಯಿದೆ. ಈ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ 4/1/2024ರ ರಾತ್ರಿ 11.59 ರವರೆಗೆ ಮಾತ್ರ ಅರ್ಜಿ ಸಲ್ಲಿಸುವ ಅವಕಾಶವಿದೆ. ಪೂರ್ಣ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸಲು ಕಡೆಯ ದಿನಾಂಕ 6/1/2024 ಆಗಿದೆ. ಅಂದರೆ ಜನವರಿ 6 ಶುಲ್ಕ ಪಾವತಿಗೆ ಕೊನೆಯ ದಿನಾಂಕವಾಗಿದೆ.
BESCOM Recruitment: ಬೆಸ್ಕಾಂನಲ್ಲಿ 400 ಹುದ್ದೆ ಖಾಲಿ, ಬೆಂಗಳೂರಿನಲ್ಲೇ ಕೆಲಸ, ಅರ್ಹತೆ ತಿಳಿಯಿರಿ
ಇನ್ನು ಅರ್ಜಿಯಲ್ಲಿ ಅಭ್ಯರ್ಥಿಗಳು ತಮ್ಮಲ್ಲಿ ಪ್ರಸ್ತುತ ಇರುವ ದೂರವಾಣಿ ಸಂಖ್ಯೆ ಹಾಗೂ ಇ- ಮೇಲ್ ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕು. ಆನ್‌ಲೈನ್ ಹೊರತುಪಡಿಸಿ ಖುದ್ದಾಗಿ/ ಅಂಚೆ ಮೂಲಕ/ ಇನ್ಯಾವುದೇ ರೀತಿಯಲ್ಲಿ ಅರ್ಜಿಯನ್ನು ಸಲ್ಲಿಸುವ ಅವಕಾಶವಿಲ್ಲ. ಸಲ್ಲಿಸಿದರೆ ಅದು ಪರಿಗಣಿಸಲಾಗದು.
ವೇತನ, ಅರ್ಹತೆ ವಿವರ ಇಲ್ಲಿದೆ
ನೀವು ಈ ಹುದ್ದೆಗೆ ಆಯ್ಕೆಯಾದರೆ ಮಾಸಿಕವಾಗಿ 17,000-28,950 ರೂಪಾಯಿ ವೇತನವನ್ನು ಪಡೆಯಬಹುದು. ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಮುಖ್ಯವಾಗಿ ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು.
ಕನ್ನಡ ಓದಲು ಮತ್ತು ಬರೆಯಲು ಬರುತ್ತದೆಯೇ ಎಂದು ತಿಳಿಯಲು ಪ್ರತ್ಯೇಕ ಪರೀಕ್ಷೆ ಕೂಡಾ ನಡೆಸಲಾಗುತ್ತದೆ.ಎಸ್‌ಎಸ್‌ಎಲ್‌ಸಿ ಅಂಕಗಳು ಶ್ರೇಣಿಯಲ್ಲಿದ್ದರೆ (ಗ್ರೇಡ್) ಅದನ್ನು ಅಂಕಗಳಾಗಿ ಪರಿವರ್ತಿಸಿ ಗರಿಷ್ಠ ಅಂಕಗಳು ಮತ್ತು ಒಟ್ಟು ಪಡೆದ ಅಂಕಗಳನ್ನು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ನಮೂದಿಸಬೇಕು. ತಪ್ಪಿದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕಾರ ಮಾಡಲಾಗುತ್ತದೆ.
ಸಂದರ್ಶನವಿದೆ ತಿಳಿಯಿರಿ
ಅಭ್ಯರ್ಥಿಗಳನ್ನು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಡೆದ ಶೇಕಡಾವಾರು ಅಂಕಗಳ ಆಧಾರದ ಮೇಲೆ 1 ಹುದ್ದೆಗೆ 10 ಅಭ್ಯರ್ಥಿಗಳಂತೆ ಸಂದರ್ಶನ ಮಾಡಲಾಗುತ್ತದೆ. ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಕನ್ನಡ ಓದಲು ಹಾಗೂ ಬರೆಯಲು ಬರುವುದೇ ಎಂಬ ಬಗ್ಗೆ ಪರೀಕ್ಷೆ ನಡೆಸಿ, ಅದರಲ್ಲಿ ಅನುತ್ತೀರ್ಣರಾದಲ್ಲಿ ಆಯ್ಕೆ ಮಾಡಲಾಗುವುದಿಲ್ಲ.
ವಯೋಮಿತಿ, ಇತರೆ ಅರ್ಹತೆ
ಅಭ್ಯರ್ಥಿಯು ಕನಿಷ್ಟ 18 ವರ್ಷ ವಯಸ್ಸಿವರಾಗಿರಬೇಕು. ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗಕ್ಕೆ 35, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 40 ವರ್ಷ, ಪ್ರವರ್ಗ 2ಎ/ 2ಬಿ/ 3ಎ/ 3ಬಿ 38 ವರ್ಷಗಳು ಆಗಿದೆ.
ಎಷ್ಟು ಶುಲ್ಕ ಪಾವತಿಸಬೇಕು?
ಅರ್ಜಿ ಸಲ್ಲಿಸಲು ಬಯಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿಗೆ ಸೇರಿದ ಅಭ್ಯರ್ಥಿಗಳು 200 ರೂಪಾಯಿ ಶುಲ್ಕವನ್ನು ಪಾವತಿ ಮಾಡಬೇಕಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಸರಿಯಾದ ಮಾಹಿತಿ ಅಪ್‌ಲೋಡ್ ಮಾಡದ, ಅಪೂರ್ಣ ಮಾಹಿತಿ ಇರುವ ಅರ್ಜಿಗಳನ್ನು ತಿರಸ್ಕಾರ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಎಸ್‌ಎಂಎಸ್ ಮತ್ತು ಇ-ಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ.
ಅರ್ಹರು, ಆಸಕ್ತರು ಅರ್ಜಿಗಳನ್ನು ಕಡ್ಡಾಯವಾಗಿ ಬಳ್ಳಾರಿ ಜಿಲ್ಲಾ ನ್ಯಾಯಾಲಯದ http://ballari.dcourts.gov.in/notice-category/recruitments/
ವೆಬ್‌ಸೈಟ್‌ನಲ್ಲಿ ನೀಡಲಾದ ಲಿಂಕ್ ಮೂಲಕ ಸಲ್ಲಿಸಬೇಕು.


Click it and Unblock the Notifications