ಮಂಗಳೂರು ಮೂಲದ 'ಎ' ವರ್ಗದ ವಾಣಿಜ್ಯ ಬ್ಯಾಂಕ್ ಆದ ಕರ್ಣಾಟಕ ಬ್ಯಾಂಕ್ ಹೊಸ ಮೂರು ವೇತನ ಯೋಜನೆಗಳನ್ನು ಆರಂಭ ಮಾಡಿದೆ. ಬ್ಯಾಂಕ್ ಹೊಸ ಕಾರ್ಪೊರೇಟ್ ವೇತನ ಖಾತೆ ಯೋಜನೆಗಳನ್ನು ಪ್ರಾರಂಭಿಸಿದೆ. ಈ ಮೂರು ಹೊಸ ಯೋಜನೆಗಳ ಬಗ್ಗೆ ವಿವರ ನೀಡಿದ್ದೇವೆ.
ಕಾರ್ಪೊರೇಟ್ ಸಂಬಳ ವರ್ಗದ ಅಡಿಯಲ್ಲಿ ಬ್ಯಾಂಕ್ ಮೂರು ರೀತಿಯ ಉಳಿತಾಯ ಖಾತೆಗಳನ್ನು ಆರಂಭ ಮಾಡುವ ಬಗ್ಗೆ ಘೋಷಣೆ ಮಾಡಿದೆ. ಅವುಗಳೆಂದರೆ ಕೆಬಿಎಲ್ ಸಾಲ್ ಅಲ್ಟಿಮೇಟ್, ಕೆಬಿಎಲ್ ಸಾಲ್ ಡಿಲೈಟ್ ಮತ್ತು ಕೆಬಿಎಲ್ ಸಾಲ್ ಪ್ರೈಡ್ ಆಗಿದೆ.

ಕಾರ್ಪೊರೇಟ್ ವರ್ಗದ ಅಡಿಯಲ್ಲಿ ಸಂಬಳ ಪಡೆಯುವ ಉದ್ಯೋಗಿಗಳ ಆರ್ಥಿಕ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಪೂರೈಕೆ ಮಾಡುವಂತಹ ಯೋಜನೆಯನ್ನು ಕರ್ನಾಟಕ ಬ್ಯಾಂಕ್ ಆರಂಭ ಮಾಡಿದೆ. ಯೋಜನೆ ಬಗ್ಗೆ ಎಂಡಿ, ಸಿಇಒ ಶ್ರೀಕೃಷ್ಟಣ್ ಮಾಹಿತಿ ನೀಡಿದ್ದಾರೆ.
"ಇದು 'ಭವಿಷ್ಯದ ಬ್ಯಾಂಕ್' ಆಗುವ ನಮ್ಮ ದೃಷ್ಟಿಗೆ ಅನುಗುಣವಾಗಿ ಆರ್ಥಿಕ ಮತ್ತು ಜೀವನಶೈಲಿಯ ಅಗತ್ಯಗಳಿಗೆ ಸಂಬಂಧಿಸಿದ ಉತ್ತಮ ಯೋಜನೆಯಾಗಿದೆ. ಬಳಕೆದಾರ ಸ್ನೇಹಿ ಡಿಜಿಟಲ್ ಪ್ರಕ್ರಿಯೆಯಿಂದ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು," ಎಂದು ಕರ್ನಾಟಕ ಬ್ಯಾಂಕ್‌ನ ಶ್ರೀಕೃಷ್ಟಣ್ ಹೇಳಿದ್ದಾರೆ.
"ಈ ಹೊಸ ಯೋಜನೆಯು ವೇತನ ಪಡೆಯುವ ವರ್ಗಕ್ಕಾಗಿ ಪ್ರಯೋಜನಗಳು ಮತ್ತು ಹಲವಾರು ಫೀಚರ್‌ಗಳನ್ನು ನೀಡುತ್ತದೆ. ಅದು ಸಂಬಳ ಪಡೆಯುವ ಗ್ರಾಹಕರಿಗೆ ತಮ್ಮ ಹಣಕಾಸುಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಅವರ ಹಣಕಾಸಿನ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ," ಎಂದು ತಿಳಿಸಿದರು.
ನಿಯಂತ್ರಕ ಫೈಲಿಂಗ್ ಪ್ರಕಾರ, ಕೆಬಿಎಲ್ ಕಾರ್ಪೊರೇಟ್ ಸಂಬಳ ಯೋಜನೆಗಳೊಂದಿಗೆ, ಖಾತೆದಾರರು 50 ಲಕ್ಷ ರೂಪಾಯಿಗಳ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ. ಪ್ರೀಮಿಯಂ ಡೆಬಿಟ್ ಕಾರ್ಡ್ ಗ್ರಾಹಕರಿಗೆ, ಅಂತರಾಷ್ಟ್ರೀಯ ಮತ್ತು ದೇಶೀಯ ವಿಮಾನ ನಿಲ್ದಾಣದ ಲಾಂಜ್‌ಗಳಿಗೆ ಪ್ರವೇಶವನ್ನು ಪಡೆಯಬಹುದು.
ಇದಲ್ಲದೆ, ಸಂಬಳ ಪಡೆಯುವ ವೃತ್ತಿಪರರಿಗೆ ಬ್ಯಾಂಕ್‌ನ ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆಗಳು ಗೃಹ, ವೈಯಕ್ತಿಕ ಮತ್ತು ವಾಹನ ಸಾಲಗಳ ಮೇಲಿನ ಶುಲ್ಕದಲ್ಲಿ ರಿಯಾಯಿತಿ ನೀಡುತ್ತದೆ. 60,000 ರೂಪಾಯಿವರೆಗೆ ಆಸ್ಪತ್ರೆ ನಗದು ಪ್ರಯೋಜನಗಳು ನೀಡುತ್ತದೆ. 2 ಲಕ್ಷ ರೂಪಾಯಿವರೆ ಆಭರಣ ವಿಮೆಯಂತಹ ಫೀಚರ್ ಅನ್ನು ಸಹ ಒಳಗೊಂಡಿದೆ.
ಬುಧವಾರ ವಹಿವಾಟಿನ ಅಂತ್ಯದಲ್ಲಿ ಕರ್ನಾಟಕ ಬ್ಯಾಂಕ್ ಷೇರುಗಳು ಸುಮಾರು ಶೇಕಡ 2.01 ರಷ್ಟು ಇಳಿಕೆಯಾಗಿದ್ದು, 244.20 ರೂಪಾಯಿಗೆ ತಲುಪಿದೆ. ಇನ್ನು ಇಂದು ಈ ಸಮಯಕ್ಕೆ ಸ್ಟಾಕ್ ಸುಮಾರು ಶೇಕಡ 0.041 ರಷ್ಟು ಏರಿಕೆಯಾಗಿ, 244.40 ರೂಪಾಯಿ ಆಗಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications