ಬೆಂಗಳೂರು: ಈ ದುಬಾರಿ ದುನಿಯಾದಲ್ಲಿ ಎಲ್ಲವೂ ದುಬಾರಿಯಾಗಿಬಿಟ್ಟಿದೆ. ಅತ್ತ ಯಾವುದೂ ಖರೀದಿ ಮಾಡೋದಾದ್ರೂ, ಹಿಂದೆ ಮುಂದೆ ನೋಡುವಂತಾಗಿದೆ. ಇದೀಗ ಕರ್ನಾಟಕ (Karnataka) ಜನರಿಗೆ ಶಾಕಿಂಗ್ ಸಂಗತಿಯೊಂದಿದೆ. ರಾಜ್ಯದಾದ್ಯಂತ ಮನೆ, ಸೈಟ್, ಜಮೀನು, ಇತರ ಸ್ಥಿರಾಸ್ತಿಗಳನ್ನು ಖರೀದಿ ಅಥವಾ ಮಾರಾಟ ಏಪ್ರಿಲ್ 1 ರಿಂದ ಹೆಚ್ಚು ದುಬಾರಿಯಾಗುವ ಸಾಧ್ಯತೆ ಇದೆ. ಈಗಾಗಲೇ ಸರ್ಕಾರ ಗೈಡನ್ಸ್ ವ್ಯಾಲ್ಯೂ ಪರಿಷ್ಕರಣೆ ಮಾಡಲಿದೆ ಎಂಬ ಸುದ್ದಿಗಳು ವೈರಲ್ ಆಗುತ್ತಿದೆ.

ಏನಿದು ಗೈಡೆನ್ಸ್ ವ್ಯಾಲ್ಯೂ?
ಕರ್ನಾಟಕದಲ್ಲಿ ಗೈಡೆನ್ಸ್ ವ್ಯಾಲ್ಯೂ ಎಂದರೆ ಸರ್ಕಾರವೇ ನಿಗದಿ ಪಡಸುವ ಆಸ್ತಿಯ ಕನಿಷ್ಠ ಮೌಲ್ಯ. ಇದನ್ನು ಮಾರ್ಗಸೂಚಿ ಮೌಲ್ಯ, ಗೈಡ್‌ಲೈನ್ ವ್ಯಾಲ್ಯೂ, ಸರ್ಕಲ್ ರೇಟ್ ಎಂದೂ ಕರೆಯುತ್ತಾರೆ. ಪ್ರತೀ ವರ್ಷ ಈ ವ್ಯಾಲ್ಯೂ ಅನ್ನು ಸರ್ಕಾರ ಪರಿಷ್ಕರಣೆ ಮಾಡುತ್ತದೆ. ಇದು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿಯಂತಹ ಜಿಲ್ಲೆಗಳಲ್ಲಿ ಒಂದು ಚದರ ಅಡಿ ಅಥವಾ ಎಕರೆಗನುಗುಣವಾಗಿ ಸರ್ಕಾರ ನಿಗದಿ ಪಡಿಸುವ ಕನಿಷ್ಠ ಬೆಲೆಯಾಗಿದೆ. ಈ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಖರೀದಿ ಮಾಡಿದ್ರೆ, ಸ್ಟ್ಯಾಂಪ್ ಡ್ಯೂಟಿ, ರಿಜಿಸ್ಟ್ರೇಷನ್ ಶುಲ್ಕ ಲೆಕ್ಕಾಚಾರಕ್ಕೆ ಗೈಡೆನ್ಸ್ ವ್ಯಾಲ್ಯೂ ಬೇಕಾಗುತ್ತದೆ.
ಏರಿಕೆಯಾಗುತ್ತಾ ಗೈಡೆನ್ಸ್ ವ್ಯಾಲ್ಯೂ?
ಕಳೆದ ಬಾರಿ 2023 ರಲ್ಲಿ ಪರಿಷ್ಕರಣೆ ನಡೆಸಲಾಗಿತ್ತು. ಇದೀಗ ಎರಡು ವರ್ಷಗಳ ನಂತರ ಸರ್ಕಾರ ಪರಿಷ್ಕರಣೆಗೆ ಮುಂದಾಗಿದ್ದು. ರಾಜ್ಯಾದ್ಯಂತ ಈಗಾಗಲೇ ಸರಾಸರಿ 12% ರಿಂದ 20% ವರೆಗೆ ಏರಿಕೆಯಾಗಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿದೆ. ಆದ್ರೆ ಕೆಲವು ವರದಿಗಳ ಪ್ರಕಾರ 12% ರಿಂದ 15% ವರೆಗೆ ಏರಿಕೆಯಾಗಬಹುದು ಎಂದು ಹೇಳಲಾಗಿದೆ.
ಸಾರ್ವಜನಿಕರ ಮೇಲೆ ಪರಿಣಾಮ:
ಇನ್ನು ಗೈಡೆನ್ಸ್ ವ್ಯಾಲ್ಯೂ ಖರೀದಿ ಮಾಡುವ ಭೂಮಿಯ ಮೇಳಿನ ನಿಗದಿತ ಮೌಲ್ಯವಾಗಿದೆ. ಆದ್ದರಿಂದ ಖರೀದಿದಾರರು ನೀಡಬೇಕಾದ ಸ್ಟ್ಯಾಂಪ್ ಡ್ಯೂಟಿ ಈ ಗೈಡೆನ್ಸ್ ವ್ಯಾಲ್ಯೂ ಲೆಕ್ಕ ಮಾಡಲಾಗುತ್ತದೆ. ಆದ್ದರಿಂದ ಗೈಡೆನ್ಸ್ ವ್ಯಾಲ್ಯೂ ಹೆಚ್ಚಾದರೆ, ಖರೀದಿದಾರರು ಸ್ಟ್ಯಾಂಪ್ ಡ್ಯೂಟಿ ಮತ್ತು ರಿಜಿಸ್ಟ್ರೀಷನ್ ಶುಲ್ಕ ಸಹ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ. ಈ ಎಲ್ಲಾ ಏರಿಕೆ ಹಿನ್ನೆಲೆ ಇನ್ಮೇಲೆ ಮನೆ-ಜಾಗ ಖರೀದಿಸಲು ಹಣ ದುಬಾರಿಯಾಗಲಿದೆ.
ದುಬಾರಿಯಾಗಲು ಕಾರಣವೇನು?
ಈ ಗೈಡೆನ್ಸ್ ವ್ಯಾಲ್ಯೂ ಸರ್ಕಾರಕ್ಕೆ ನೀಡುವ ಸ್ಟ್ಯಾಂಪ್ ಡ್ಯೂಟಿ ಮತ್ತು ರಿಜಿಸ್ಟ್ರೇಷನ್ ಶುಲ್ಕ ಲೆಕ್ಕಾಚಾರಕ್ಕೆ ಆಧಾರವಾಗಿರುತ್ತದೆ. ಉದಾಹರಣೆಗೆ ಒಂದು ಆಸ್ತಿಯ ಗೈಡೆನ್ಸ್ ವ್ಯಾಲ್ಯೂ 1 ಕೋಟಿಯಿದ್ದರೆ, ಸ್ಟ್ಯಾಂಪ್ ಡ್ಯೂಟಿ ಸುಮಾರು 5 ರಿಂದ 6 ಲಕ್ಷ ಇರಲಿದೆ. ಒಂದು ವೇಳೆ 15% ಗೈಡೆನ್ಸ್ ವ್ಯಾಲ್ಯೂ ಏರಿಕೆಯಾದರೆ, ಮೌಲ್ಯ 1.15 ಕೋಟಿ ಏರಿಕೆಯಾಗುತ್ತದೆ. ಅದೇ ರೀತಿ ಸ್ಟ್ಯಾಂಪ್ ಡ್ಯೂಟಿ ಕೂಡಾ ಹೆಚ್ಚಳವಾಗಲಿದೆ.
ಇನ್ನೂ ಈ ಪರಿಷ್ಕರಣೆ ಪ್ರಸ್ತಾಪ ಹಂತದಲ್ಲಿದ್ದು, ಅಂತಿಮ ನಿರ್ಧಾರ ಇನ್ನೂ ಕೈಗೊಂಡಿಲ್ಲ, ಆದ್ರೆ ಆದಾಯ ಇಲಾಖೆ ಎಲ್ಲಾ ಪ್ರದೇಶಗಳ ಮೌಲ್ಯಗಳನ್ನು ಪರಿಶೀಲಿಸುವ ಕೆಲಸ ಆರಂಭಿಸಿದೆ. ಒಂದು ವೇಳೆ ನಿರ್ಧಾರ ಅಂತಿಮವಾದ್ರೆ. ಏಪ್ರಿಲ್ 1, 2026 ರಿಂದಲೇ ಜಾರಿಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಅಲ್ಲದೇ ಕರ್ನಾಟಕ ಬಜೆಟ್‌ನಲ್ಲಿ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.


Click it and Unblock the Notifications