ಪ್ರತಿಯೊಬ್ಬರ ಜೀವನದಲ್ಲಿ ಸ್ವಂತ ಮನೆಯನ್ನು ಖರೀದಿಸುವುದು ಒಂದು ಮಹತ್ವದ ಮೈಲುಗಲ್ಲು ಆಗಿದ್ದು, ಅದು ಆರ್ಥಿಕ ಮತ್ತು ಭಾವನಾತ್ಮಕ ತೂಕವನ್ನು ಹೊಂದಿರುವ ನಿರ್ಧಾರವಾಗಿರುತ್ತದೆ. ಸ್ವಂತ ಮನೆಯನ್ನು ಹೊಂದುವುದರಿಂದ ಅನೇಕರಿಗೆ ಜೀವನದಲ್ಲಿ ಸುರಕ್ಷತೆಯ ಭಾವವನ್ನು ನೀಡುತ್ತದೆ. ವಸತಿ ಬೆಲೆಗಳು ಸ್ಥಿರವಾಗಿ ಏರುತ್ತಿರುವಾಗ ನಿಮ್ಮ ಕನಸಿನ ಮನೆಯನ್ನು ಸಾಧ್ಯವಾಗುವಷ್ಟು ಬೇಗ ನನಸಾಗಿಸಲು ಇರುವ ಅವಕಾಶಗಳನ್ನು ಬಳಸಿಕೊಳ್ಳುವುದು ಬುದ್ದಿವಂತ ನಿರ್ಧಾರವಾಗಿರುತ್ತದೆ.
ಮನೆ ಖರೀದಸಲು ಮುಂದಾದಾಗ ಅದರ ಬೆಲೆಯು ನಿರೀಕ್ಷೆಗಿಂತ ಜಾಸ್ತಿ ಇದ್ದಾಗ ಹೆಚ್ಚಿನ ಜನರು ಸಾಲದ ಮೊರೆ ಹೋಗುತ್ತಾರೆ. ಒಂದುವೇಳೆ ನೀವು ಸ್ವಂತ ಮನೆಯನ್ನು ಖರೀದಿಸಲು ಸಿದ್ಧತೆ ನಡೆಸುತ್ತಿದ್ದರೆ, ವಿವಿಧ ಬ್ಯಾಂಕ್‌ಗಳು ಒದಗಿಸುವ ಸಾಲದ ಕೊಡುಗೆಗಳನ್ನು ಪರಿಶೀಲನೆ ಮಾಡುತ್ತಿರುವುದು ಉತ್ತಮ.

ಇಲ್ಲಿ ಪ್ರಮುಖ ಐದು ಬ್ಯಾಂಕ್‌ಗಳ ಸಾಲದ ಬಗ್ಗೆ ಮಾಹಿತಿ ನೀಡಲಾಗಿದೆ. ಇವುಗಳು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಸಾಲವನ್ನು ನೀಡುತ್ತಿವೆ. ಗೃಹ ಸಾಲವನ್ನು ಪಡೆದ ಬಳಿಕವೂ ಡೌನ್ ಪೇಮೆಂಟ್ ಮತ್ತು ನೋಂದಣಿ ಶುಲ್ಕದಂಥಹ ವೆಚ್ಚಗಳನ್ನು ಸರಿದೂಗಿಸಲು ಹೆಚ್ಚುವರಿ ಮೊತ್ತದ ಅಗತ್ಯವಿರುತ್ತದೆ ಎಂಬುದನ್ನು ಗಮನಿಸಬೇಕು. ಪ್ರತಿಯೊಬ್ಬರು ಕೂಡ ಮನೆಯನ್ನು ಖರೀದಿಸುವ ಮೊದಲು ಅದಕ್ಕೆ ಬೇಕಾಗುವ ಹಣಕಾಸಿನ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ.
ಗೃಹ ಸಾಲದ ಮೇಲೆ ಕಡಿಮೆ ಬಡ್ಡಿದರ ವಿಧಿಸುವ ಬ್ಯಾಂಕ್‌ಗಳಿವು
ಎಚ್‌ಡಿಎಫ್‌ಸಿ ಬ್ಯಾಂಕ್: ಖಾಸಗಿ ವಲಯದ ಬ್ಯಾಂಕ್‌ಗಳ ಪೈಕಿ ಎಚ್‌ಡಿಎಫ್‌ಸಿ ಬ್ಯಾಂಕ್ ಕೆಲವು ಸ್ಪರ್ಧಾತ್ಮಕ ಗೃಹ ಸಾಲದ ಬಡ್ಡಿ ದರಗಳನ್ನು ನೀಡುತ್ತಿವೆ. ಇಲ್ಲಿ ಬಡ್ಡಿ ದರಗಳು ಶೇಕಡ 8.45 ರಿಂದ ಪ್ರಾರಂಭವಾಗಿ ಶೇಕಡ 9.85 ವರೆಗೆ ಇರುತ್ತದೆ.
ಇಂಡಸ್ ಇಂಡ್ ಬ್ಯಾಂಕ್: ಇಂಡಸ್ ಇಂಡ್ ಬ್ಯಾಂಕ್ ಕೂಡ ಶೇಕಡ 8.5 ರಿಂದ ಶೇಕಡ 9.75 ವರೆಗಿನ ಗೃಹ ಸಾಲದ ಬಡ್ಡಿ ದರಗಳಲ್ಲಿ ಸಾಲವನ್ನು ಒದಗಿಸುತ್ತದೆ.
ಇಂಡಿಯನ್ ಬ್ಯಾಂಕ್: ಪ್ರತಿಷ್ಠಿತ ಇಂಡಿಯನ್ ಬ್ಯಾಂಕ್ ಗೃಹ ಸಾಲಗಳ ಮೇಲೆ ಶೇಕಡ 8.5 ಆರಂಭಿಕ ಬಡ್ಡಿ ದರವನ್ನು ನೀಡುತ್ತಿದ್ದು, ಗರಿಷ್ಠ ಬಡ್ಡಿ ದರ ಶೇಕಡ 9.9 ರಷ್ಟು ವಿಧಿಸುತ್ತಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB): ಎರಡನೇ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ PNB ಗೃಹ ಸಾಲಗಳನ್ನು ಶೇಕಡ 8.6 ಬಡ್ಡಿ ದರದೊಂದಿಗೆ ಆರಂಭಿಸಿ ಗರಿಷ್ಠ ಬಡ್ಡಿ ಶೇಕಡ 9.45 ರಷ್ಟು ದರವನ್ನು ವಿಧಿಸುತ್ತಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರ: ಬ್ಯಾಂಕ್ ಆಫ್ ಮಹಾರಾಷ್ಟ್ರ ಕೂಡ ಶೇಕಡ 8.6 ರಿಂದ ಶೇಕಡ 10.3 ವರೆಗಿನ ಬಡ್ಡಿ ದರಗಳಲ್ಲಿ ಸಾಲವನ್ನು ಒದಗಿಸುತ್ತದೆ.
ಆದರೆ ಬ್ಯಾಂಕ್‌ಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಬೇಕಾದರೆ ನಿಮ್ಮ ಕ್ರೆಡಿಟ್ ಸ್ಕೋರ್ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ನೀವು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಬ್ಯಾಂಕುಗಳು ನಿಮಗೆ ಅತ್ಯಂತ ಕೈಗೆಟುಕುವ ದರದಲ್ಲಿ ಸಾಲ ನೀಡುವ ಸಾಧ್ಯತೆಯಿರುತ್ತದೆ.
ಹೀಗಾಗಿ, ಗೃಹ ಸಾಲ ಪಡೆಯುವುದಕ್ಕೂ ಮೊದಲು ನಿಮ್ಮ ಕ್ರೆಡಿಟ್ ಸ್ಕೋರ್ ಎಷ್ಟಿದೆ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು. ಆ ಮೂಲಕ ಹಣಕಾಸಿನ ಸಾಮರ್ಥ್ಯಕ್ಕೆ ಹೊಂದಿಕೊಂಡಂತೆ ದೀರ್ಘಾವಧಿಯ ಹೋಮ್ ಲೋನ್ ಅನ್ನು ಆಯ್ಕೆ ಮಾಡುವುದು ಉತ್ತಮ. ಇದು ನಿಮ್ಮ ಸ್ವಂತ ಕನಸಿನ ಮನೆಯನ್ನು ನನಸುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.


Click it and Unblock the Notifications