ಎಸ್ಬಿಐನಿಂದ ಚಿನ್ನದ ಮೇಲಿನ ಸಾಲ, ಬಡ್ಡಿದರ, ಆಫರ್ ಏನಿದೆ?
ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕಿಂಗ್ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ತನ್ನ ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ. ಗೃಹಸಾಲದ ಬಡ್ಡಿದರ ಇಳಿಕೆ ಮಾಡಿದ್ದ ಎಸ್ಬಿಐ ಈಗ ಚಿನ್ನದ ಮೇಲಿನ ಸಾಲವನ್ನು ಅದೇ ದರದಲ್ಲಿ ನೀಡಲು ಮುಂದಾಗಿದ್ದು, ಕೆಲವು ಆಫರ್ ಕೂಡಾ ಸೇರಿಸಿದೆ.
18 ವರ್ಷ ಮೇಲ್ಪಟ್ಟವರು, ಆದಾಯ ಹಿನ್ನೆಲೆ ತೋರಿಸಿ ಯಾರೂ ಬೇಕಾದರೂ ಚಿನ್ನದ ಸಾಲ ಪಡೆಯಲು ಅರ್ಹರಾಗಿದ್ದಾರೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ. ಚಿನ್ನದ ಆಭರಣ, ನಗ, ನಾಣ್ಯಗಳನ್ನು ನೀಡಿದ ಸಾಲ ಪಡೆದುಕೊಳ್ಳಬಹುದು. ಚಿನ್ನದ ಮೇಲಿನ ಸಾಲದ ಮೇಲೆ ಶೇ 7.5ರಷ್ಟು ಬಡ್ಡಿದರ ವಿಧಿಸಲಾಗುತ್ತಿದೆ.
ಯೋನೋ ಅಪ್ಲಿಕೇಷನ್ ಮೂಲಕ ಸಾಲ ಪಡೆಯಲು ಅರ್ಜಿ ಹಾಕಿದರೆ, ಯಾವುದೇ ರೀತಿ ಪ್ರೊಸೆಸಿಂಗ್ ಶುಲ್ಕ ಕೂಡಾ ಇರುವುದಿಲ್ಲ. ವೈಯಕ್ತಿಕವಾಗಿ ಸಾಲ ಪಡೆಯಬಹುದು ಅಥವಾ ಜಂಟಿಯಾಗಿ ಕೂಡಾ ಅರ್ಜಿ ಹಾಕಬಹುದು. ಚಿನ್ನದ ಸಾಲ ಪಡೆಯಲು ಬಯಸುವ ಬ್ಯಾಂಕ್ ಉದ್ಯೋಗಿಗಳು ಹಾಗೂ ಪಿಂಚಣಿದಾರರು ಯಾವುದೇ ರೀತಿ ಆದಾಯ ಪ್ರಮಾಣ ಪತ್ರ ಸಲ್ಲಿಸುವ ಅಗತ್ಯವಿಲ್ಲ ಎಂದು ಎಸ್ಬಿಐ ಹೇಳಿದೆ.

ಎಸ್ಬಿಐ ಉತ್ತಮ ಆಯ್ಕೆ ಏಕೆ?
ನಿಮ್ಮ ಬಳಿ ಚಿನ್ನ ಇದ್ದು, ಅದನ್ನು ಅಡಮಾನ ಮಾಡಿ ಸಾಲ ಪಡೆಯುವಂತಿದ್ದರೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಎಸ್ಬಿಐ ಮುಂತಾದ ಬ್ಯಾಂಕ್ ಗಳೇ ಅತ್ಯುತ್ತಮ. ಬಡ್ಡಿ ದರ ಕಡಿಮೆ. ಜತೆಗೆ ಬೇಗ ವಿತರಣೆಯೂ ಆಗುತ್ತದೆ. ಅಷ್ಟೇ ಅಲ್ಲ, ನಿಮ್ಮ ಹತ್ತಿರ ಹಣ ಬಂದ ತಕ್ಷಣ ಕಟ್ಟಿ, ತೀರಿಸಬಹುದು. ಬೇರೆ ಯಾವುದೇ ಷರತ್ತುಗಳು ಇರುವುದಿಲ್ಲ.
ಚಿನ್ನದ ಮೇಲೆ ಸಾಲ ಪಡೆಯುವುದಕ್ಕೆ ಬಡ್ಡಿ ದರ ಬಹಳ ಕಡಿಮೆ. ಇನ್ನು ನಿಮ್ಮ ಬಳಿ ಇರುವ ಚಿನ್ನದ ಮೌಲ್ಯದ ಶೇಕಡಾ 90ರ ತನಕ(ಆಫರ್ ಮೇಲೆ ಅವಲಂಬಿತ) ಸಾಲ ಸಿಗುತ್ತದೆ. ಕೆಲವು ಬ್ಯಾಂಕ್ ಗಳು ಶೇ 7.5 ರಿಂದ 8.5 ರ ತನಕ ಬಡ್ಡಿ ನೀಡಲಿವೆ.

ಸಾಲ ಪಡೆಯಲು ಅರ್ಹತೆ
* 18 ವರ್ಷ ಮೇಲ್ಪಟ್ಟವರು, ಆದಾಯ ಹಿನ್ನೆಲೆ ತೋರಿಸಿ ಯಾರೂ ಬೇಕಾದರೂ ಚಿನ್ನದ ಸಾಲ ಪಡೆಯಲು ಅರ್ಹರಾಗಿದ್ದಾರೆ.
* ಚಿನ್ನಾಭರಣ, ಬ್ಯಾಂಕ್ ನೀಡುವ ಚಿನ್ನದ ನಾಣ್ಯಗಳನ್ನು ನೀಡಿ ಸಾಲ ಪಡೆದುಕೊಳ್ಳಬಹುದು
* ವೈಯಕ್ತಿಕವಾಗಿ ಸಾಲ ಪಡೆಯಬಹುದು ಅಥವಾ ಜಂಟಿಯಾಗಿ ಕೂಡಾ ಅರ್ಜಿ ಹಾಕಬಹುದು. ಅರ್ಜಿ ಸಲ್ಲಿಸಿದ ಬಳಿಕ ಆದಾಯ ಪ್ರಮಾಣ ಪತ್ರ ದಾಖಲೆ ಒದಗಿಸಬೇಕು. ಬ್ಯಾಂಕ್ ಉದ್ಯೋಗಿ, ಪಿಂಚಣಿದಾರರಿಗೆ ಆದಾಯ ಪ್ರಮಾಣ ಪತ್ರ ಅಗತ್ಯವಿಲ್ಲ.
ಗರಿಷ್ಠ ಸಾಲದ ಮೊತ್ತ: 50 ಲಕ್ಷ
ಕನಿಷ್ಠ ಸಾಲದ ಮೊತ್ತ : 20, 000 ರು

ಪ್ರೊಸೆಸಿಂಗ್ ದರ, ಮಾರ್ಜಿನ್ ದರ ಎಷ್ಟಿದೆ?
ಕನಿಷ್ಠ ಪ್ರೊಸೆಸಿಂಗ್ ದರ: ಸಾಲದ ಮೊತ್ತದ ಶೇ 0.25% + ಜಿಎಸ್ಟಿ ಕನಿಷ್ಠ 250 ರು + ಇತರೆ ತೆರಿಗೆ ಹಾಕಲಾಗುತ್ತದೆ. ಆದರೆ, ಯೋನೋ ಅಪ್ಲಿಕೇಷನ್ ಮೂಲಕ ವ್ಯವಹರಿಸಿದರೆ ಯಾವುದೇ ಪ್ರೊಸೆಸಿಂಗ್ ದರ ಇರುವುದಿಲ್ಲ.
ಮಾರ್ಜಿನ್ ದರ:
ಚಿನ್ನದ ಸಾಲ: 25%
ಲಿಕ್ವಿಡ್ ಚಿನ್ನದ ಸಾಲ: 25%
ಬುಲೆಟ್ ರೀಪೇಮೆಂಟ್ ಚಿನ್ನದ ಸಾಲ: 35%
ರೀಪೇಮೆಂಟ್ ಅವಧಿ:
ಚಿನ್ನದ ಸಾಲ: 36 ತಿಂಗಳು
ಲಿಕ್ವಿಡ್ ಚಿನ್ನದ ಸಾಲ: 36 ತಿಂಗಳು
ಬುಲೆಟ್ ರೀಪೇಮೆಂಟ್ ಚಿನ್ನದ ಸಾಲ: 12 ತಿಂಗಳು

ಸಾಲ ಪಡೆಯಲು ಬೇಕಾದ ಅಗತ್ಯ ದಾಖಲೆಗಳು
ಸಾಲ ಪಡೆಯಲು ಬೇಕಾದ ಅಗತ್ಯ ದಾಖಲೆಗಳು:
* ಚಿನ್ನದ ಮೇಲೆ ಸಾಲ ಪಡೆಯಲು ಬಯಸುವವರು ಎರಡು ಇತ್ತೀಚಿನ ಭಾವಚಿತ್ರಗಳನ್ನು ಒದಗಿಸಬೇಕು.
* ಗುರುತಿನ ದೃಢೀಕರಣದ ಜತೆಗೆ ವಿಳಾಸದ ದೃಢೀಕರಣ
* ಅನಕ್ಷರಸ್ಥರಾದರೆ ಸಾಕ್ಷಿದಾರರ ಪತ್ರ
* ಡಿಪಿ ನೋಟ್ ಹಾಗೂ ಡಿಪಿ ನೋಟ್ (ಸ್ವೀಕೃತಿ ಪತ್ರಕ್ಕಾಗಿ)
* ಚಿನ್ನಾಭರಣ, ಸ್ವೀಕೃತಿ ಪತ್ರ
ಸಾಲ ಪಡೆಯಲು ಸುಲಭವಿಧಾನ: ಎಸ್ಬಿಐ ಚಿನ್ನದ ಮೇಲಿನ ಸಾಲ ಪಡೆಯಲು 7208933143ಕ್ಕೆ ಮಿಸ್ ಕಾಲ್ ಕೊಟ್ಟರೆ ಸಾಕು ಅಥವಾ SMS GOLD ಎಂದು ಟೈಪಿಸಿ 7208933145ಕ್ಕೆ ಎಸ್ಎಂಎಸ್ ಕಳಿಸಿದರೆ ಪೂರ್ತಿ ಪ್ರಕ್ರಿಯೆಯ ಮಾಹಿತಿ ತಿಳಿಯುತ್ತದೆ.