ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಕೋಟಕ್ ಮಹೀಂದ್ರಾ ಬ್ಯಾಂಕ್ ಸಾಲದ ಬಡ್ಡಿದರವನ್ನು ಏರಿಕೆ ಮಾಡಿದೆ. ಕಳೆದ ಕೆಲವು ದಿನಗಳ ಹಿಂದೆ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಬಡ್ಡಿದರವನ್ನು ಹೆಚ್ಚಳ ಮಾಡಿದ ಕೋಟಕ್ ಮಹೀಂದ್ರಾ ಬ್ಯಾಂಕ್ ಈಗ ಸಾಲದ ಬಡ್ಡಿದರವನ್ನು ಹೆಚ್ಚಿಸಿದೆ. ಈಗಾಗಲೇ ರೆಪೋ ದರ ಏರಿಕೆಯಿಂದಾಗಿ ಪ್ರಮುಖ ಬ್ಯಾಂಕ್‌ಗಳಲ್ಲಿ ಬಡ್ಡಿದರ ಹೆಚ್ಚಾಗಿದೆ.
ಕೋಟಕ್ ಮಹೀಂದ್ರಾ ಬ್ಯಾಂಕ್ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಅನ್ನು ಪ್ರಮುಖ ಸಾಲಗಳಿಗೆ ಏರಿಸುವ ನಿರ್ಧಾರವನ್ನು ಮಾಡಿದೆ. ಅದರಿಂದಾಗಿ ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಸಾಲವನ್ನು ಪಡೆಯಲು ಬಯಸುವವರು ಅಧಿಕ ಬಡ್ಡಿದರವನ್ನು ಪಾವತಿ ಮಾಡಬೇಕಾಗುತ್ತದೆ. ಸಾಲದ ಇಎಂಐ ಅಧಿಕವಾಗಲಿದೆ.

ಕೋಟಕ್ ಮಹೀಂದ್ರಾ ಬ್ಯಾಂಕ್ ಸಾಲದ ಬಡ್ಡಿದರವನ್ನು ಏರಿಕೆ ಮಾಡಿದ ಬಳಿಕ ಶೇಕಡ 0.10ರಷ್ಟು ಹೆಚ್ಚಳ ಬಡ್ಡಿದರವನ್ನು ಪಾವತಿ ಮಾಡಬೇಕಾಗುತ್ತದೆ. ನೀವು ಈ ಬ್ಯಾಂಕ್‌ನ ನೂತನ ಸಾಲದ ಬಡ್ಡಿದರವನ್ನು ತಿಳಿಯಬೇಕಾದರೆ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿದರೆ ಸಂಫೂರ್ಣ ಮಾಹಿತಿ ಲಭ್ಯವಾಗುತ್ತದೆ. ಬೇರೆ ಬೇರೆ ಅವಧಿಯ ಸಾಲದ ಬಡ್ಡದರವು ಪ್ರಸ್ತುತ ಶೇಕಡ 8.35ರಿಂದ 9.35ರ ನಡುವೆ ಇದೆ.
ಈ ನೂತನ ಬಡ್ಡಿದರವು ಮೇ 16ರಿಂದಲೇ ಜಾರಿಗೆ ಬರುತ್ತದೆ. ಇದು ಪ್ರಮುಖವಾಗಿ ಸಾಲವನ್ನು ಪಡೆದವರ ಮೇಲೆ ಪ್ರಭಾವ ಉಂಟು ಮಾಡುತ್ತದೆ. ಸಾಮಾನ್ಯವಾಗಿ ಬ್ಯಾಂಕುಗಳು ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಆಧಾರದಲ್ಲಿ ಸಾಲದ ಬಡ್ಡಿದರವನ್ನು ನಿರ್ಧಾರ ಮಾಡುತ್ತದೆ. ಆದ್ದರಿಂದಾಗಿ ಎಂಸಿಎಲ್‌ಆರ್ ಏರಿಳಿತ ಸಾಲದ ಬಡ್ಡಿದರ ಮೇಲೆ ಪರಿಣಾಮ ಉಂಟು ಮಾಡುತ್ತದೆ.
ಹಲವಾರು ಹಣಕಾಸು ಸಂಸ್ಥೆ, ಬ್ಯಾಂಕ್‌ಗಳಲ್ಲಿ ಬಡ್ಡಿದರ ಪರಿಷ್ಕರಣೆ
ಕೋಟಕ್ ಮಹೀಂದ್ರಾ ಬ್ಯಾಂಕ್ ಮಾತ್ರವಲ್ಲ ಹಲವಾರು ಬ್ಯಾಂಕ್‌ಗಳು ಸಾಲದ ಹಾಗೂ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಹಲವಾರು ಇತರ ಬ್ಯಾಂಕುಗಳು ತಮ್ಮ ಸಾಲದ ದರಗಳಲ್ಲಿ ಏರಿಕೆ ಮಾಡಿದೆ. ಪ್ರಮುಖವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಹೆಚ್ಚಿಸಿದ ಬಳಿಕ ಸಾಲದ ಬಡ್ಡಿದರವನ್ನು ಬ್ಯಾಂಕ್‌ಗಳು ಹೆಚ್ಚಿಸಿದೆ.
ಉದಾಹರಣೆಗೆ, ಸಾರ್ವಜನಿಕ ವಲಯದ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾ ಫೆಬ್ರವರಿ ತಿಂಗಳಲ್ಲಿ 5 ಬೇಸಿಸ್ ಪಾಯಿಂಟ್‌ಗಳ (bps) ಅಥವಾ ಶೇಕಡ 0.05ರಷ್ಟು ಸಾಲದ ದರವನ್ನು ಹೆಚ್ಚಳವನ್ನು ಮಾಡಿದೆ. ಅದೇ ರೀತಿ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ತನ್ನ ಎಂಸಿಎಲ್‌ಆರ್ ಆಧಾರಿತ ಸಾಲದ ಬಡ್ಡಿದರವನ್ನು ಶೇಕಡ 0.15 ರಷ್ಟು ಹೆಚ್ಚಳ ಮಾಡಿದೆ.
ಇನ್ನು ಸೌತ್ ಇಂಡಿಯನ್ ಬ್ಯಾಂಕ್‌ನ ಸಾಲದ ದರಗಳಲ್ಲಿ 5 ರಿಂದ 10 ಬೇಸಿಸ್ ಪಾಯಿಂಟ್‌ಗಳವರೆಗೆ ಹೆಚ್ಚಳ ಮಾಡಲಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಈ ಸಾಲದ ಬಡ್ಡಿದರ ಹೆಚ್ಚಳ ಮಾಡಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮೇ 2022 ರಿಂದ ರೆಪೋ ದರವನ್ನು ಹೆಚ್ಚಳ ಮಾಡಲು ಆರಂಭಿಸಿದೆ. ಫೆಬ್ರವರಿವರೆಗೆ ಒಟ್ಟಾಗಿ ಆರು ಬಾರಿ ರೆಪೋ ದರ ಹೆಚ್ಚಿಸಲಾಗಿದೆ.
ಈವರೆಗೆ ಆರ್‌ಬಿಐ 250 ಬೇಸಿಸ್ ಪಾಯಿಂಟ್ ದರ ಏರಿಸಿದೆ. ಪ್ರಸ್ತುತ ಆರ್‌ಬಿಐನ ರೆಪೋ ದರವು ಶೇಕಡ 6.50 ಆಗಿದೆ. ಈ ದರ ಏರಿಕೆಯಾಗುತ್ತಿದ್ದಂತೆ ಬ್ಯಾಂಕ್‌ಗಳಲ್ಲಿ ಸಾಲದ ಬಡ್ಡಿದರವನ್ನು ಕೂಡಾ ಏರಿಕೆ ಮಾಡಲಾಗಿದೆ. ಈ ಹಿಂದೆ ಏಪ್ರಿಲ್‌ನಲ್ಲಿ ನಡೆದ ಎಂಪಿಸಿ ಸಭೆಯಲ್ಲಿ ದರ ಏರಿಕೆಯನ್ನು ಮಾಡಲಾಗಿಲ್ಲ. ಇನ್ನು ಮುಂದಿನ ಎಂಪಿಸಿ ಸಭೆಯು ಜೂನ್ 6 ರಿಂದ ಜೂನ್ 8 ರವರೆಗೆ ನಡೆಯಲಿದೆ.
ಜೂನ್ 8 ರಂದು ಆರ್‌ಬಿಐ ವಿತ್ತೀಯ ನೀತಿಯ ಘೋಷಣೆಯನ್ನು ಮಾಡಲಿದೆ. ಗಮನಾರ್ಹವಾಗಿ, ಹಣದುಬ್ಬರ ದರಗಳಲ್ಲಿನ ಇತ್ತೀಚಿನ ಇಳಿಕೆಯಿಂದಾಗಿ, ಆರ್‌ಬಿಐ ದರ ಏರಿಕೆಯಾನ್ನು ಮಾಡದು ಎಂಬ ನಿರೀಕ್ಷೆಯಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್‌ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್‌ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications