ಈಗ ಬ್ಯಾಂಕ್‌ಗಳಿಗೆ ಹೋಗಿ ನಮ್ಮ ಬ್ಯಾಂಕಿಂಗ್ ಕಾರ್ಯವನ್ನು ಮಾಡುವ ಸಂದರ್ಭಗಳು ಅತೀ ಕಡಿಮೆ. ನಮಗೆ ಹಣ ವರ್ಗಾವಣೆ ಮಾಡಲು ಇರಲಿ ಅಥವಾ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ಚೆಕ್ ಮಾಡಲು ಆಗಿರಲಿ ನಾವು ಆನ್‌ಲೈನ್ ಬ್ಯಾಂಕಿಂಗ್ ಸೇವೆಯನ್ನು ಪಡೆಯುತ್ತೇವೆ. ಇಂತಹ ಗ್ರಾಹಕರಿಗೆ ಇಲ್ಲೊಂದು ಪ್ರಮುಖ ಸುದ್ದಿಯಿದೆ.
ಹೌದು, ಬ್ಯಾಂಕ್ ಗ್ರಾಹಕರೇ ಇಲ್ಲಿ ಗಮನಿಸಿ. ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಪ್ರಮುಖವಾಗಿ ಮಾಹಿತಿಯನ್ನು ನೀಡಿದೆ. ಈ ಎರಡು ಬ್ಯಾಂಕುಗಳು ಕುಡಾ ಜೂನ್ ತಿಂಗಳಿನಲ್ಲಿ ನಿಗದಿತ ದಿನಾಂಕದಂದು ಬ್ಯಾಂಕಿಂಗ್ ಸೇವೆಯನ್ನು ಹೊಂದಿರುವುದಿಲ್ಲ ಎಂದು ತನ್ನ ಗ್ರಾಹಕರಿಗೆ ಈ ಮೂಲಕ ಬ್ಯಾಂಕ್ ಮಾಹಿತಿ ನೀಡಿದೆ.

ಮಾಹಿತಿ ಪ್ರಕಾರ ಈ ವ್ಯತ್ಯಯವು ಕೆಲವು ಗಂಟೆಗಳ ಕಾಲ ಮಾತ್ರ ಇರಲಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರು ಜೂನ್ 10 ಮತ್ತು ಜೂನ್ 18ರಂದು ರಾತ್ರಿ 6 ಗಂಟೆಯಿಂದ ಮುಂಜಾನೆ 6 ಗಂಟೆಯವರೆಗೆ ಬ್ಯಾಂಕ್ ಖಾತೆಯಲ್ಲಿ ಬ್ಯಾಲೆನ್ಸ್ ಚೆಕ್ ಮಾಡಲು, ಹಣ ವರ್ಗಾವಣೆ ಮಾಡಲು, ಇತರೆ ಬ್ಯಾಂಕ್‌ನ ಆನ್‌ಲೈನ್ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ.
ಇನ್ನೊಂದೆಡೆ ಕೋಟಕ್ ಮಹೀಂದ್ರಾ ಬ್ಯಾಂಕ್ ಗ್ರಾಹಕರು ನಿಗದಿತ ದಿನಾಂಕದಂದು ತಮ್ಮ ಡೆಬಿಟ್ ಕಾರ್ಡ್ ಸೇವೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಜೂನ್ 10ರಂದು ಕೆಲವು ಗಂಟೆಗಳ ಕಾಲ ಈ ವ್ಯತ್ಯಯ ಉಂಟಾಗಲಿದೆ. ಈ ಸೇವೆಯಲ್ಲಿನ ವ್ಯತ್ಯಯದ ಬಗ್ಗೆ ಎರಡು ಬ್ಯಾಂಕ್‌ಗಳು ಏನು ತಿಳಿಸಿದೆ ಎಂದು ತಿಳಿಯಿರಿ ಮುಂದೆ ಓದಿ...
ಎಚ್‌ಡಿಎಫ್‌ಸಿ ಬ್ಯಾಂಕ್
ಎಲ್ಲ ಗ್ರಾಹಕರಿಗೆ ಇಮೇಲ್ ಮೂಲಕ ಎಚ್‌ಡಿಎಫ್‌ಸಿ ಬ್ಯಾಂಕ್ ಮಾಹಿತಿಯನ್ನು ನೀಡಿದೆ. "ನಿಮಗೆ ಅತ್ಯುತ್ತಮ ಬ್ಯಾಂಕಿಂಗ್ ಅನುಭವವನ್ನು ನೀಡುವ ನಮ್ಮ ನಿರಂತರ ಪ್ರಯತ್ನದ ಭಾಗವಾಗಿ ನಾವು ಅಗತ್ಯ ಸಿಸ್ಟಮ್ ಅಪ್‌ಡೇಟ್ ಮತ್ತು ನಿರ್ವಹಣೆಯನ್ನು ನಡೆಸುತ್ತಿದ್ದೇವೆ. ನಾವು ಈ ಅಪ್‌ಡೇಟ್ ಅನ್ನು ಮಾಡುವಾಗ ಕೆಲವು ಅವಧಿಗಳು ನಮ್ಮ ಕೆಲವು ಸೇವೆಗಳು ಲಭ್ಯವಿರುವುದಿಲ್ಲ," ಎಂದು ತಿಳಿಸಿದೆ. ಜೂನ್ 4ರಂದು ಕೂಡಾ ಬ್ಯಾಂಕಿಂಗ್ ಸೇವೆ ವ್ಯತ್ಯಯದ ಬಗ್ಗೆ ಬ್ಯಾಂಕ್ ತಿಳಿಸಿತ್ತು.
ಕೋಟಕ್ ಮಹೀಂದ್ರಾ ಬ್ಯಾಂಕ್
ಕೋಟಕ್ ಮಹೀಂದ್ರಾ ಬ್ಯಾಂಕ್ ತನ್ನ ಡೆಬಿಟ್ ಕಾರ್ಡ್, ಸ್ಪೆಂಡ್ಜ್ ಕಾರ್ಡ್ ಮತ್ತು ಗಿಫ್ಟ್ ಕಾರ್ಡ್ ಸೇವೆಗಳು ಜೂನ್ 10 ರಂದು ಕೆಲವು ಗಂಟೆಗಳವರೆಗೆ ಗ್ರಾಹಕರಿಗೆ ಲಭ್ಯವಿರುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಈ ಹಿಂದೆ, ಜೂನ್ 3 ರಂದು ಕೆಲವು ಗಂಟೆಗಳ ಕಾಲ ಬ್ಯಾಂಕ್‌ನ ಸೇವೆಗಳು ಲಭ್ಯವಿರಲಿಲ್ಲ.
ಜೂನ್ ತಿಂಗಳ ಬ್ಯಾಂಕ್ ರಜಾ ಪಟ್ಟಿ:
* ಜೂನ್ 4, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ಜೂನ್ 10, 2023: ಎರಡನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ರಜೆ
* ಜೂನ್ 11, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
* ಜೂನ್ 15, 2023: ರಾಜ ಸಂಕ್ರಾಂತಿ ಕಾರಣದಿಂದಾಗಿ ಮಿಜೋರಾಂ ಹಾಗೂ ಒಡಿಶಾದಲ್ಲಿ ಬ್ಯಾಂಕ್ ಬಂದ್ ಆಗಿರಲಿದೆ.
* ಜೂನ್ 18, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್
* ಜೂನ್ 20, 2023: ರಥ ಯಾತ್ರೆ ಕಾರಣದಿಂದಾಗಿ ಒಡಿಶಾದಲ್ಲಿ ಬ್ಯಾಂಕ್ ಬಂದ್ ಆಗಿರಲಿದೆ.
* ಜೂನ್ 24, 2023: ನಾಲ್ಕನೇ ಶನಿವಾರ, ದೇಶದಾದ್ಯಂತ ಬ್ಯಾಂಕ್ ಬಂದ್
* ಜೂನ್ 25, 2023: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ಬಂದ್
* ಜೂನ್ 26, 2023: ಖರ್ಚಿ ಪೂಜಾ ದಿನ ತ್ರಿಪುರಾದಲ್ಲಿ ಬ್ಯಾಂಕ್ ಬಂದ್ ಆಗಿರಲಿದೆ.
* ಜೂನ್ 28, 2023: ಈದ್-ಉಲ್-ಅದಾ ಕಾರಣದಿಂದಾಗಿ ಕೇರಳ, ಮಹಾರಾಷ್ಟ್ರ, ಜಮ್ಮು- ಕಾಶ್ಮೀರದಲ್ಲಿ ಬ್ಯಾಂಕ್ ಮುಚ್ಚಿರುತ್ತದೆ.
* ಜೂನ್ 29, 2023: ಈದ್-ಉಲ್-ಅದಾ ಹಬ್ಬದ ಕಾರಣ ದೇಶದ ಹಲವಾರು ರಾಜ್ಯಗಳಲ್ಲಿ ಬ್ಯಾಂಕ್ ಬಂದ್ ಆಗಿರುತ್ತದೆ.
* ಜೂನ್ 30, 2023: ರಿಮಾ ಈದ್-ಉಲ್-ಅದಾ ಕಾರಣದಿಂದಾಗಿ ಮಿಜೋರಾಂ, ಒಡಿಶಾದಲ್ಲಿ ಬ್ಯಾಂಕ್ ಬಂದ್ ಆಗಿರುತ್ತದೆ.


Click it and Unblock the Notifications