ಲಡ್ಕಿ ಬಹಿನ್ ಯೋಜನೆ ಅಥವಾ ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್ ಯೋಜನಾ (Mukhyamantri Majhi Bahin Yojana) ಎಂಬುದು ಮಹಾರಾಷ್ಟ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 2024 ರಲ್ಲಿ ಜಾರಿಗೆ ತರಲಾದ ಕಲ್ಯಾಣ ಯೋಜನೆಯಾಗಿದೆ. ಇದರ ಮುಖ್ಯ ಉದ್ದೇಶವೇ ಆರ್ಥಿಕವಾಗಿ ದುರ್ಬಲರಾಗಿರುವ ಮಹಿಳೆಯರನ್ನು (Women) ಸಬಲರನ್ನಾಗಿ ಮಾಡುವುದು, ಆರೋಗ್ಯ ಮತ್ತು ಪೌಷ್ಠಿಕತೆ ಸುಧಾರಿಸುವುದಾಗಿದೆ.

ಇದೀಗ ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷೆಯ ಲಡ್ಕಿ ಬಹಿನ್ ಯೋಜನೆಗೆ ಇ-ಕೆವೈಸಿ (E-KYC) ಪ್ರಕ್ರಿಯೆ ಪೂರ್ಣಗೊಳಿಸುವುದನ್ನು ಸರ್ಕಾರ ಕಡ್ಡಾಯ ಮಾಡಿದೆ. ಅಲ್ಲದೇ ಇದಕ್ಕೆ ಡೆಡ್‌ಲೈನ್ ಕೂಡಾ ನೀಡಲಾಗಿದ್ದು, ಹತ್ತಿರ ಬರುತ್ತಿದೆ. ಇ-ಕೆವೈಸಿ ಮಾಡಿಸದ ಫಲಾನುಭವಿಗಳಿಗೆ ಯೋಜನೆಯ ಮುಂದಿನ ಕಂತಿನ ಹಣ ಜಮಾ ಆಗುವುದಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಇನ್ನು ಡಿಸೆಂಬರ್ 31, 2025 ರವರೆಗೆ ವಿಸ್ತರಿಸಲಾಗಿರುವ ಈ ಗಡುವಿನೊಳಗೆ ಎಲ್ಲಾ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿಯನ್ನು ಮಾಡಲೇಬೇಕು. ಇಲ್ಲದಿದ್ರೆ ಯಾವುದೇ ಸೌಲಭ್ಯಗಳು ನಿಮಗೆ ಸಿಗುತ್ತದೆ.
ಇ-ಕೆವೈಸಿ ಮಾಡದಿದ್ರೆ ಸಿಗಲ್ಲ ಹಣ!
ಲಡ್ಕಿ ಬಹಿನ್ ಫಲಾನುಭವಿಗಳು ಡಿಸೆಂಬರ್ 31, 2025ರೊಳಗೆ ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯ. ಒಂದು ವೇಳೆ ಇದರಿಂದ ವಿಫಲರಾದ್ರೆ, ಯೋಜನೆಯಿಂದ ಸಿಗುತ್ತಿದ್ದ ಕಂತು ಜಮಾ ಆಗುವುದಿಲ್ಲ ಎನ್ನಲಾಗಿದೆ. ಆರಂಭದಲ್ಲಿ ಈ ಯೋಜನೆಗೆ ಇ-ಕೆವೈಸಿ ಲಿಂಕ್ ಮಾಡುವ ಗಡುವನ್ನು ನವೆಂಬರ್ 18 ಕ್ಕೆ ನೀಡಲಾಗಿತ್ತು. ಆದರೆ, ರಾಜ್ಯದಲ್ಲಿನ ಪರಿಸ್ಥಿತಿಯನ್ನು ಪರಿಗಣಿಸಿ ಸರ್ಕಾರ ಅದನ್ನು ಡಿಸೆಂಬರ್ 31, 2025ಕ್ಕೆ ವಿಸ್ತರಿಸಿದೆ.
ಗಡುವು ವಿಸ್ತರಿಸಿದ ಸರ್ಕಾರ!
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅದಿತಿ ಎಸ್. ತತ್ಕರೆ ನವೆಂಬರ್‌ನಲ್ಲಿ ಈ ಬಗ್ಗೆ ಮಾತನಾಡಿ, "ಲಡ್ಕಿ ಬಹಿನ್ ಯೋಜನೆಯ ಇ-ಕೆವೈಸಿ ಗಡುವನ್ನು ಡಿಸೆಂಬರ್ 31, 2025 ರವರೆಗೆ ವಿಸ್ತರಿಸಲಾಗಿದೆ." ಎಂದು ಹೇಳಿದ್ದರು.
ಇ-ಕೆವೈಸಿ ಎಂದರೇನು?
ಲಡ್ಕಿ ಬಹಿನ್ ಯೋಜನೆಯ ಇ-ಕೆವೈಸಿ (E-KYC) ಎಂದರೆ, ಫಲಾನುಭವಿಗಳು ತಮ್ಮ ಆಧಾರ್, ಪ್ಯಾನ್ ಕಾರ್ಡ್‌ನಂತಹ ಕಡ್ಡಾಯ ದಾಖಲೆಗಳನ್ನು ಯೋಜನೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಸಲ್ಲಿಸುವ ಪ್ರಕ್ರಿಯೆ. ಇದು ಫಲಾನುಭವಿಗಳ ಗುರುತನ್ನು ದೃಢೀಕರಿಸಲು, ಗುರುತನ್ನು ಪರಿಶೀಲಿಸಲು ಮತ್ತು ಯೋಜನೆ ದುರ್ಬಳಕೆ ಆಗುತ್ತಿದೆಯೇ, ಇಲ್ಲವೇ ಎಂದು ಪರಿಶೀಲಿಸಲು ಸಹಕಾರಿಯಾಗಲಿದೆ.
ಇ-ಕೆವೈಸಿ ಹೀಗೆ ಪೂರ್ಣಗೊಳಿಸಿ:
ಇ-ಕೆವೈಸಿ ಪೂರ್ಣಗೊಳಿಸಲು, https://ladakibahin.maharashtra.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ. ಹೋಮ್ ಪೇಜ್‌ನಲ್ಲಿ ಲಡ್ಕಿ ಬಹಿನ್ ಯೋಜನೆ ಇ-ಕೆವೈಸಿ' ಆಯ್ಕೆ ಕ್ಲಿಕ್ ಮಾಡಬೇಕು. ನಿಮ್ಮ ಆಧಾರ್ ಸಂಖ್ಯೆ, ಕ್ಯಾಪ್ಚಾ ಕೋಡ್ ಭರ್ತಿ ಮಾಡಬೇಕು. ಬಳಿಕ ಅಗತ್ಯ ಮಾಹಿತಿ ಮತ್ತು ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ. ನಂತರ ಅರ್ಜಿಯನ್ನು ಸಲ್ಲಿಸಿ.
ಏನಿದು ಲಡ್ಕಿ ಬಹಿನ್ ಯೋಜನೆ?
ಮಹಾರಾಷ್ಟ್ರ ಸರ್ಕಾರ ಮಹಿಳೆಯರ ಆರ್ಥಿಕ ಅನುಕೂಲಕ್ಕಾಗಿ ಜಾರಿಗೆ ತಂದ ಯೋಜನೆಯೇ "ಲಡ್ಕಿ ಬಹಿನ್ ಯೋಜನೆ". ಇದು ಅರ್ಹ ಮಹಿಳಾ ಫಲಾನುಭವಿಗಳಿಗೆ ಪ್ರತಿ ತಿಂಗಳು ₹1,500 ರೂ. ಹಣ ನೀಡುತ್ತದೆ. ಈ ಸೌಲಭ್ಯವನ್ನು ನಿರಂತರವಾಗಿ ಪಡೆಯಲು, ನೋಂದಾಯಿತ ಫಲಾನುಭವಿಗಳು ನಿಗದಿತ ಗಡುವಿನೊಳಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅತ್ಯಗತ್ಯ.


Click it and Unblock the Notifications