ಸೂಪರ್ ಯೋಜನೆ! ನೀವು ಈ ಯೋಜನೆಯ ಮೂಲಕ ಹಣ ಸಂಪಾದಿಸುಬಹುದು. ಇದಕ್ಕಾಗಿ ನೀವು 10ನೇ ತರಗತಿ ಪಾಸಾಗಿದ್ದರೆ ಸಾಕು.. ತಿಂಗಳಿಗೆ 7,000 ಗಳಿಸಬಹುದು! ಹೌದು, ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಯೋಜನೆಯ ಮೂಲಕ ಗ್ರಾಮೀಣ ಮಹಿಳೆಯರಿಗೆ ವಿಮೆಯಾಗಿ ಕೆಲಸ ಮಾಡುವಂತಹ ಅವಕಾಶವನ್ನು ಮಾಡಿಕೊಟ್ಟಿದೆ. ಈ ಯೋಜನೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆಯನ್ನು ನೀಡಿದ್ದಾರೆ.ಅದೇ ಎಲ್ಐಸಿ ಬಿಮಾ ಸಖಿ ಯೋಜನೆ.
ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಸಾರ್ವಜನಿಕ ವಲಯದ ಜೀವ ವಿಮಾ ಕಂಪನಿಯಾಗಿದೆ. ಇದು ಎಲ್ಲಾ ವರ್ಗಗಳಿಗೂ ವಿಮಾ ಪಾಲಿಸಿಗಳನ್ನು ನೀಡುವಲ್ಲಿ ಹೆಸರುವಾಸಿಯಾಗಿದೆ.ಈ ವಿಮಾ ಕಂಪನಿಯು ಮಹಿಳೆಯರಿಗಾಗಿ ವಿಶೇಷ ಯೋಜನೆಯನ್ನು ಪ್ರಾರಂಭಿಸಿದೆ.ಈ ಯೋಜನೆ ಎಲ್ಐಸಿ ಬಿಮಾ ಸಖಿ ಯೋಜನೆ. ಈ ಯೋಜನೆಯ ಮೂಲಕ ನೀವು ಹಣ ಗಳಿಕೆ ಮಾಡುಬಹುದು.

ಎಲ್ಐಸಿ ಬಿಮಾ ಸಖಿ ಈ ಯೋಜನೆ ಏನು?
ಎಲ್ಐಸಿ ಬಿಮಾ ಸಖಿ ಮಹಿಳೆಯರಿಗಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಈ ಬಿಮಾ ಸಖಿ ಯೋಜನೆಯಲ್ಲಿ ಕೆಲಸ ಮಾಡುವವರನ್ನು ಏಜೆಂಟ್‌ಗಳು, ಬಿಮಾ ಸಖೀಸ್ ಎಂದು ಕರೆಯಲಾಗುತ್ತದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಗೆ ಚಾಲನೆಯನ್ನು ನೀಡಿದ್ದರು.
ಎಲ್‌ಐಸಿಯ ಬಿಮಾ ಸಖಿ (ಎಂಸಿಎ ಯೋಜನೆ) ಮಹಿಳೆಯರಿಗಾಗಿ ಪ್ರತ್ಯೇಕವಾಗಿ ಸ್ಟೈಪೆಂಡಿಯರಿ ಯೋಜನೆಯಾಗಿದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ಈ ಮಹಿಳೆಯರು ಎಲ್ಐಸಿ ಏಜೆಂಟ್ ಆಗಲು ಮತ್ತು ಆರ್ಥಿಕವಾಗಿ ಸ್ವತಂತ್ರರಾಗಲು ತರಬೇತಿ ನೀಡಲಾಗುವುದು. ಬಿಮಾ ಸಖಿ ಯೋಜನೆಯು ಭಾರತದ ಹಿಂದುಳಿದ ಪ್ರದೇಶಗಳಲ್ಲಿ ವಿಮಾ ಪ್ರವೇಶವನ್ನು ಸುಧಾರಿಸುತ್ತದೆ ಎಂದು ಎಲ್ಐಸಿ ಹೇಳಿದೆ.
ಎಲ್ಐಸಿ ಬಿಮಾ ಸಖಿ ಯೋಜನೆಯ ಅರ್ಹತೆಗಳೇನು..?
ಈ ಯೋಜನೆಗೆ ವಯಸ್ಸಿನ ಮಿತಿ 18 ಮತ್ತು 50 ವರ್ಷಗಳು ಇರಬೇಕು.ಕನಿಷ್ಠ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
ಪದವಿ ಪೂರ್ಣಗೊಳಿಸಿದ ಬಿಮಾ ಸಖಿಗಳು ಎಲ್ಐಸಿ ಏಜೆಂಟ್‌ಗಳಾಗಿ ಕೆಲಸ ಮಾಡುವ ಅವಕಾಶವನ್ನು ಪಡೆಯುತ್ತಾರೆ ಮತ್ತು ಕಂಪನಿಯೊಳಗೆ ಅಭಿವೃದ್ಧಿ ಅಧಿಕಾರಿಯ ಪಾತ್ರಕ್ಕೂ ಅರ್ಹರಾಗಬಹುದು.
ಗಮನಿಸಬೇಕಾದ ಅಂಶವೆಂದರೆ, ಅಸ್ತಿತ್ವದಲ್ಲಿರುವ ಏಜೆಂಟ್ MCA ನೇಮಕಾತಿಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಅಲ್ಲದೆ, ಅಸ್ತಿತ್ವದಲ್ಲಿರುವ ಏಜೆಂಟ್‌ಗಳ ಸಂಬಂಧಿಕರು ಅಥವಾ ಉದ್ಯೋಗಿಗಳು MCA ಗಳಾಗಿ ನೇಮಕಾತಿ ಮಾಡಿಕೊಳ್ಳಲು ಅರ್ಹರಾಗಿರುವುದಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ..?
- ಬಿಮಾ ಸಖಿ ಅಪ್ಲಿಕೇಶನ್ ಪೋರ್ಟಲ್‌ಗೆ ಭೇಟಿ ನೀಡಿ
- 'ಬಿಮಾ ಸಖಿ' ವಿಭಾಗವನ್ನು ಆಯ್ಕೆಮಾಡಿ
- ಅರ್ಜಿ ಫಾರ್ಮ್‌ನಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ
- ಅರ್ಜಿ ಸಲ್ಲಿಸಿ
- LIC ಯಿಂದ ಮುಂದಿನ ರಿಪ್ಲೈಗಾಗಿ ಕಾಯಿರಿ.
ಈ ಯೋಜನೆಯಿಂದ ಸಿಗುವ ಆದಾಯವೆಷ್ಟು..?
ಈ ಯೋಜನೆಯಲ್ಲಿ ಮೊದಲ ವರ್ಷದಲ್ಲಿ ಭಾಗವಹಿಸುವವರಿಗೆ ತಿಂಗಳಿಗೆ 7,000ರೂಪಾಯಿಗಳು,ಎರಡನೇ ವರ್ಷದಲ್ಲಿ ಮೊತ್ತವು ತಿಂಗಳಿಗೆ 6,000 ರೂಪಾಯಿ ಕಡಿಮೆಯಾಗುತ್ತದೆ. ಮೂರನೇ ವರ್ಷದ ವೇಳೆಗೆ,ಮಹಿಳೆಯರು ಮಾಸಿಕ 5,000 ರೂಪಾಯಿಗಳನ್ನುಗಳಿಸುತ್ತಾರೆ. ಇದರ ಜೊತೆಗೆ 2,100 ರೂಪಾಯಿಗಳ ಮೊತ್ತವನ್ನು ತಮ್ಮ ವಿಮಾ ಮಾರಾಟ ಗುರಿಗಳನ್ನು ಸಾಧಿಸುವ ಮಹಿಳೆಯರು ಕಮಿಷನ್ ಆಧಾರಿತ ಪ್ರತಿಫಲಗಳನ್ನು ಸಹ ಗಳಿಸುತ್ತಾರೆ.
ಬಿಮಾ ಸಖಿ ಯೋಜನೆ ಪ್ರಯೋಜನಗಳು..?
ಬಿಮಾ ಸಖಿ ಯೋಜನೆಯನ್ನು ಮಹಿಳೆಯರಿಗಾಗಿ ಇರುವಂತಹ ಯೋಜನೆಯಾಗಿದೆ.ಇದರಿಂದಾಗಿ ಅವರಿಗೆ ಆರ್ಥಿಕ ಸ್ವಾವಲಂಬನೆಯಾಗಿ ಬದುಕಲು ಉದ್ಯೋಗಾವಕಾಶ ಸಿಗುತ್ತದೆ.
ಆರ್ಥಿಕ ಸ್ವಾವಲಂಬನೆ: ಯಾರ ಬೆಂಬಲವು ಇಲ್ಲದೇ ಆರ್ಥಿಕವಾಗಿ ಮುಂದೆ ಬರಲು ಸಹಾಯ ಮಾಡುತ್ತದೆ. ಮಹಿಳೆಯರು ತಮ್ಮ ಸ್ವಂತ ಆದಾಯವನ್ನು ಸಂಪಾದಿಸಲು ಅವಕಾಶ.
ಉದ್ಯೋಗಾವಕಾಶ: ಬಿಮಾ ಸಖಿ ಯೋಜನೆಯು ಗ್ರಾಮೀಣ ಮಹಿಳೆಯರು ವಿಮಾ ಏಜೆಂಟ್‌ಗಳಾಗಿ ಕೆಲಸ ಮಾಡುವಾಗ ಅವರಿಗೆ ಆರ್ಥಿಕ ಬೆಂಬಲವನ್ನು ಒದಗಿಸಲು ಈ ಯೋಜನೆಯನ್ನು ಅಭಿವೃದ್ದಿಪಡಿಸಾಗಿದೆ.ಈ ಯೋಜನೆಯು ಸ್ಥಿರವಾದ ಆದಾಯದ ಮೂಲವನ್ನು ಖಾತ್ರಿ ಪಡಿಸುವ, ಕಮಿಷನ್ ಆಧಾರಿತ ಪ್ರೋತ್ಸಾಹದ ಜೊತೆಗೆ ಸ್ಥಿರ ಮಾಸಿಕ ಆದಾಯವನ್ನು ಭರವಸೆ ನೀಡುತ್ತದೆ. ತರಬೇತಿಯ ನಂತರ ಎಲ್‌ಐಸಿ ಏಜೆಂಟ್ ಆಗಿ ಕೆಲಸ ಮಾಡಲು ಅವಕಾಶವನ್ನು ಸಹ ನೀಡುತ್ತದೆ. ಡೆವಲಪ್‌ಮೆಂಟ್ ಆಫೀಸರ್ ಆಗಿ ಮುಂದಿನ ಹಂತಗಳಲ್ಲಿ ಸೇರುವ ಅವಕಾಶ ಸಹ ಇದೆ.
ಉಚಿತ ತರಬೇತಿ: ಬಿಮಾ ಸಖಿ ಯೋಜನೆಯ ಮೂಲಕ ವಿಮಾ ಬಗ್ಗೆಉಚಿತ ತರಬೇತಿಯನ್ನು ಸಹ ನೀಡಲಾಗುತ್ತದೆ. ಇದರಿಂದ ಗ್ರಾಹಕರಿಗೆ ವಿಮೆಯ ಮಹತ್ವ ತಿಳಿಸಲು ಬೇಕಾದ ಶೈಕ್ಷಣಿಕ ವಿಷಯಗಳನ್ನು ಅವರಿಗೆ ಈ ತರಬೇತಿಯ ಮೂಲಕ ತಿಳಿಸಲಾಗುತ್ತದೆ. ಮಾರಾಟದ ತಂತ್ರಗಳು, ಸಂವಹನ ಕೌಶಲ್ಯಗಳು, ಆರ್ಥಿಕ ನಿಲುವುಗಳ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ.
ಸಮಾಜದಲ್ಲಿ ಸ್ಥಾನಮಾನ: ಮಹಿಳೆಯರಿಗೆ ಸಮಾಜದಲ್ಲಿ ಸ್ಥಾನಮಾನ ಸಿಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ವಿಮಾ ಜಾಗೃತಿ ಹೆಚ್ಚಳಕ್ಕೆ ಸಹಾಯವನ್ನುಈ ಯೋಜನೆ ಮಾಡುತ್ತದೆ,
ಗ್ರಾಮೀಣ ಮಹಿಳೆಯರಿಗೆ ಆದ್ಯತೆ: ಗ್ರಾಮೀಣ ಪ್ರದೇಶದ ಮಹಿಳೆಯರ ಆತ್ಮಸ್ಥೈರ್ಯ ಹೆಚ್ಚಿಸಲು ಈ ಯೋಜನೆ ಮುಖ್ಯ ಸಾಧನವಾಗಿ ಕೆಲಸ ಮಾಡುತ್ತದೆ.
More From GoodReturns

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ



Click it and Unblock the Notifications